ಚಿಕ್ಕೋಡಿ : ಗಾಳಿ ವಿದ್ಯುತ್ ಉತ್ಪಾದನಾ ಘಟಕದಲ್ಲಿ (ವಿಂಡ ಪಾವರ್) ಶಾರ್ಟ್ ಸರ್ಕಿಟ್ ದಿಂದ ಲಕ್ಷಾಂತರ ರೂ.ಮೌಲ್ಯದ 150 ಎಕರೆ ಪ್ರದೇಶದಲ್ಲಿ ಬೆಳೆದಿರುವ ಹುಲ್ಲು ಗಾವಲು ಸುಟ್ಟು ಕರಕಲಾಗಿದೆ.
ತಾಲ್ಲೂಕಿನ ಜೈನಾಪೂರ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಸಂಭವಿಸಿದೆ. ಬೇಸಿಗೆ ಕಾಲದಲ್ಲಿ ಜೈನಾಪೂರ ಗ್ರಾಮದ ಜಾನುವಾರುಗಳಿಗೆ ಮೇವು ಪೂರೈಕೆ ಮಾಡುತ್ತಿದ್ದ ಬೆಟ್ಟದಲ್ಲಿನ ಹುಲ್ಲು ಸುಟ್ಟು ಕರಕಲಾಗಿದ್ದು, ಜಾನುವಾರುಗಳಿಗೆ ಮೇವು ಇಲ್ಲದೆ ಗ್ರಾಮದ ರೈತರು ಕಂಗಾಲಾಗಿದ್ದಾರೆ.
ರೈತರು ಬೇಸಿಗೆಯಲ್ಲಿ ಅದೇ ಮೇವಿನ ಮೇಲೆ ಅವಲಂಭಿತರಾಗಿದ್ದರು. ಈಗ ಸುಟ್ಟು ಕರಕಲಾಗಿದೆ. ಮುಂದೆ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಸರಕಾರ ಮೇವು ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಎಪಿಎಂಸಿ ಉಪಾಧ್ಯಕ್ಷ ರಾಯಗೌಡ ಕೆಳಗಿನಮನಿ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಠಾಣಾಧಿಕಾರಿ ವಿಜಯಕುಮಾರ ಬಡಿಗೇರ ಸಿಬ್ಬಂದಿಯೊಂದಿಗೆ ದಾವಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.