Breaking News

Uncategorized

ಮೇಕೆದಾಟು, ಎತ್ತಿನಹೊಳೆ, ಗಟ್ಟಿ ಬಸವಣ್ಣ ಕುಡಿಯುವ ನೀರಿನ ಯೋಜನೆ ಪಡೆದುಕೊಳ್ಳಲು ರಮೇಶ್ ಜಾರಕಿಹೊಳಿ‌ ಸೂಚನೆ‌

ಬೆಂಗಳೂರು : ಮೇಕೆದಾಟು, ಎತ್ತಿನಹೊಳೆ, ಗಟ್ಟಿ ಬಸವಣ್ಣ ಕುಡಿಯುವ ನೀರಿನ ಯೋಜನೆಗಳು ಮತ್ತು ಏತ ನೀರಾವರಿ ಯೋಜನೆಗಳ ಶೀಘ್ರ ಅನುಷ್ಠಾನಕ್ಕಾಗಿ ಬಾಕಿ ಇರುವ ಅರಣ್ಯ ಇಲಾಖೆಯ ಅನುಮೋದನೆಗಳನ್ನು ಕೂಡಲೇ ಪಡೆದುಕೊಳ್ಳಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರು ಸೂಚನೆ‌ ನೀಡಿದ್ದಾರೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅರಣ್ಯ ಇಲಾಖೆಯ ತಿರುವಳಿಗಳನ್ನು ಪಡೆಯುವ ಕುರಿತು ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಮಾತನಾಡಿದ ಸಚಿವರು, ಬಾಕಿ ಇರುವ ಪ್ರಸ್ತಾವನೆಗಳಿಗೆ ಕೂಡಲೇ ಅನುಮೋದನೆ ನೀಡಬೇಕೆಂದು ಅರಣ್ಯ …

Read More »

ಪ್ರೀತಿ ಒಂದೇ ಅವರು ಸಂಪಾದಿಸಿರೋ ಆಸ್ತಿ.:ಸುಮಲತಾ ಅಂಬರೀಶ್

ಬೆಂಗಳೂರು: ಮಂಡ್ಯದ ಜನ ಅಂಬರೀಶ್ ಅವರನ್ನು ವಿಶೇಷವಾಗಿ ದೇವರಂತೆ ಪೂಜಿಸುತ್ತಿದ್ದರು. ಪ್ರೀತಿ ಒಂದೇ ಅವರು ಸಂಪಾದಿಸಿರೋ ಆಸ್ತಿ. ಜನರ ಅವರನ್ನ ಹೃದಯಲ್ಲಿ ಇಟ್ಟುಕೊಂಡು ಪೂಜಿಸ್ತಾ ಇದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಇಂದು ಅಂಬಿ ಎರಡನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರು ಎಲ್ಲರನ್ನೂ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು. ಎಲ್ಲರ ಪ್ರೀತಿ ಗಳಿಸಿ ಆ ಪ್ರೀತಿಯನ್ನ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ. …

Read More »

210 ಗ್ರಾಂನ 3 ಚಿನ್ನದ ಕಿರೀಟ ಗಿಫ್ಟ್ ನೀಡಿದ ಗ್ರಾಮಸ್ಥರು

ವಿಜಯಪುರ: ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಮಾಜಿ ಸಚಿವ ಎಂಬಿ ಪಾಟೀಲ್ ಹಾಗೂ ಶಿವಾನಂದ್ ಪಾಟೀಲ್ ಗೆ ವಿಜಯಪುರದ ಕಾರಜೋಳ ಗ್ರಾಮಸ್ಥರು ಚಿನ್ನದ ಕಿರೀಟಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರಜೋಳದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದ ವೇಳೆ ಈ ಮೂವರಿಗೆ 210 ಗ್ರಾಂ ನ ಮೂರು ಚಿನ್ನದ ಕಿರೀಟಗಳನ್ನು ಗ್ರಾಮಸ್ಥರು ಗಿಫ್ಟ್ ಮಾಡಿದ್ದಾರೆ. ಆದರೆ ಮೂವರು ನಾಯಕರು ಕೂಡ ಚಿನ್ನದ ಕಿರೀಟ ಗಿಫ್ಟ್ ಪಡೆಯಲು ನಿರಾಕರಿಸಿದ್ದಾರೆ.ಒತ್ತಾಯ ಪೂರ್ವಕವಾಗಿ ಗ್ರಾಮಸ್ಥರು ನಾಯಕರಿಗೆ ಕಿರೀಟ ತೊಡಿಸಿದ್ದಾರೆ. …

Read More »

ಬೆಳಗಾವಿಯ ಆರ್ ಟಿ ಓ ಕಚೇರಿ ನಿರ್ಮಿಸಲು 4 ಎಕರೆ ಜಾಗೆ ಮಂಜೂರು

ಬೆಳಗಾವಿ- ಬೆಳಗಾವಿಯ ಆರ್ ಟಿ ಓ ಕಚೇರಿ ನಿರ್ಮಿಸಲು ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಯಮನಾಪೂರ ಗ್ರಾಮದಲ್ಲಿ ನಾಲ್ಕು ಎಕರೆ ಜಾಗೆಯನ್ನು ಮಂಜೂರು ಮಾಡಿಸಲಾಗಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರ್ ಶಾಸಕ ಅನೀಲ ಬೆನಕೆ ತಿಳಿಸಿದ್ದಾರೆ. ಬೆಳಗಾವಿಯ ಆರ್ ಟಿ ಓ ಕಚೇರಿ ಆವರಣದಲ್ಲಿ ಅಂಚೆ ಕಚೇರಿಯ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯಮನಾಪೂರ ಗ್ರಾಮದಲ್ಲಿ ಜಾಗೆ ಮಂಜೂರು ಮಾಡಿಸುವ ಸಂಧರ್ಭದಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದವು,ಎಲ್ಲ ಸಮಸ್ಯೆಗಳನ್ನು ನಿವಾರಿಸಿ ಜಾಗೆ ಮಂಜೂರು …

Read More »

ಪಂಚಾಯಿತಿ ಚುನಾವಣೆಗೆ ಬಿಜೆಪಿಯಿಂದ ಪಂಚಸೂತ್ರ

ಬೆಂಗಳೂರು, ನ.23- ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಪಂಚರತ್ನ, ಪಂಚಸೂತ್ರ ವಿಧಾನದ ಮೂಲಕ ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಇಂದು ನಡೆದ ಸಂಘಟನಾ ಸಭೆ ನಂತರ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆ ಬರುತ್ತಿದೆ. ಕಳೆದ ಬಾರಿ ತಂದಿದ್ದ ಯೋಜನೆಯಿಂದಾಗಿ ಯಶಸ್ವಿಯಾಗಿದ್ದೆವು. ಇದೀಗ ಪಂಚರತ್ನ, ಪಂಚಸೂತ್ರ ವಿಧಾನ ತಂದಿದ್ದೇವೆ. ಒಂದೊಂದು ಸಮುದಾಯವನ್ನೂ ಗುರಿಯಾಗಿಟ್ಟು ಈ ವಿಧಾನ ಅನುಸರಿಸಲಾಗುತ್ತಿದೆ ಎಂದು …

Read More »

ನ.26ರಂದು ಆಟೋ-ಟ್ಯಾಕ್ಸಿ ಚಾಲಕರ ಮುಷ್ಕರ

ಬೆಂಗಳೂರು, ನ.24- ಕೋವಿಡ್ ಸಂಕಷ್ಟದಲ್ಲಿರುವ ಆಟೋ ಮತ್ತು ಟ್ಯಾಕ್ಸಿ ವಾಹನಗಳ ಸಾಲ ಮನ್ನಾ ಮಾಡಬೇಕು. ಚಾಲಕರ ಪುನಶ್ಚೇತನಕ್ಕೆ ಜಾತಿವಾರು ನಿಗಮಗಳಿಂದ ನೇರ ಸಾಲ ಯೋಜನೆಯಡಿ ಸಾಲ ನೀಡುವುದು, ಖಾಸಗಿ ಲೇವಾದೇವಿದಾರರಿಂದಾಗುವ ಕಿರುಕುಳ ತಪ್ಪಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ (ಜೆಸಿಟಿಯು) ನ.26ರಂದು ನಗರದಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಿದೆ. ಈ ಸಂಬಂಧ ಇಂದು ಪತ್ರಿಕಾಗೋಷ್ಠಿ ನಡೆಸಿದ ಜೆಸಿಟಿಯು ಸಂಚಾಲಕ …

Read More »

ರೋಷನ್ ಬೇಗ್ ಬೆನ್ನಲ್ಲೇ ಮತ್ತೊಬ್ಬ ಶಾಸಕರಿಗೆ ನಡುಕ ಶುರು

ಬೆಂಗಳೂರು, ನ.23- ಐಎಂಎ ಹಗರಣಕ್ಕೆ ಸಂಬಂಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಬಂಸಿರುವ ಹಿನ್ನೆಲೆಯಲ್ಲಿ ನಗರದ ಶಾಸಕರೊಬ್ಬರಿಗೆ ನಡುಕ ಉಂಟಾಗಿದೆ. ನಗರದ ಈ ಪ್ರಭಾವಿ ಶಾಸಕರ ಹೆಸರು ಐಎಂಎ ಹಗರಣದಲ್ಲಿ ಕೇಳಿ ಬಂದಿತ್ತು. ಎಸ್‍ಐಟಿ ಈಗಾಗಲೇ ಅವರನ್ನು ವಿಚಾರಣೆಗೊಳಪಡಿಸಿ ಕೆಲವು ಮಾಹಿತಿ ಗಳನ್ನು ಪಡೆದುಕೊಂಡಿದೆ. ಈಗ ತನಿಖೆ ನಡೆಸುತ್ತಿರುವ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಈ ಪ್ರಭಾವಿ ಶಾಸಕರಿಗೆ ಸದ್ಯದಲ್ಲಿಯೇ ನೋಟೀಸ್ ನೀಡಬಹುದು. ವಿಚಾರಣೆ ಸಂದರ್ಭದಲ್ಲಿ ಹಗರಣ ಸಂಬಂಧ …

Read More »

ನಕ್ಸಲ್ ಚಟುವಟಿಕೆ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ – ಐಜಿ ವಿಫುಲ್ ಕುಮಾರ್

ಮಡಿಕೇರಿ: ಕೇರಳ-ಕೊಡಗಿನ ಗಡಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ವಿರುದ್ಧ ಎಎನ್‍ಎಫ್, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಐಜಿ ವಿಫುಲ್ ಕುಮಾರ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾದಕ ವಸ್ತು, ಅಪರಾಧ ತಡೆ ಕುರಿತು ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಜಿಲ್ಲೆಯ ಜನತೆ ಆತ್ಮಶಿಸ್ತಿನಿಂದ ವರ್ತಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು. …

Read More »

ರಾಜಕುಮಾರ ಸಿನಿಮಾ ಮೂಲಕ ಪರಿಚಿತರಾಗಿರುವ ತಮಿಳು ನಟಿ ಪ್ರಿಯಾ ಆನಂದ್ ವಿಭಿನ್ನ ಫೋಟೋ ಶೂಟ್

ಬೆಂಗಳೂರು: ನಟ, ನಟಿಯರಿಗೆ ಫೋಟೋ ಶೂಟ್ ಎಂದರೆ ಹಬ್ಬವಿದ್ದಂತೆ. ಹಲವರು ವಿವಿಧ ರೀತಿಯ, ಇನ್ನೂ ಹಲವರು ಅಚ್ಚರಿ ಪಡುವ ರೀತಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಇದೀಗ ರಾಜಕುಮಾರ ಸಿನಿಮಾ ಮೂಲಕ ಪರಿಚಿತರಾಗಿರುವ ತಮಿಳು ನಟಿ ಪ್ರಿಯಾ ಆನಂದ್ ಫೋಟೋ ತಮ್ಮ ವಿಭಿನ್ನ ಫೋಟೋ ಶೂಟ್ ಮೂಲಕ ಸುದ್ದಿಯಾಗಿದ್ದಾರೆ. https://www.instagram.com/p/CH6_56lJ-an/?utm_source=ig_embed   ರಾಜಕುಮಾರ ಸಿನಿಮಾ ಬಳಿಕ ಜೇಮ್ಸ್ ಸಿನಿಮಾ ಮೂಲಕ ಪುನೀತ್ ರಾಜ್‍ಕುಮಾರ್ ಜೊತೆಗೆ ಪ್ರಿಯಾ ಆನಂದ್ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಜೇಮ್ಸ್ …

Read More »

ಓವೈಸಿಗೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧ:

ಹೈದರಾಬಾದ್: ಅಸಾದುದ್ದಿನ್ ಓವೈಸಿ ಮೊಹಮ್ಮದ್ ಅಲಿ ಜಿನ್ನಾನ ಅವತಾರವಾಗಿದ್ದು, ಅವರ ಪಕ್ಷಕ್ಕೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧವಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಗುಡುಗಿದ್ದಾರೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ್ದ ತೇಜಸ್ವಿ ಸೂರ್ಯ, ಇದೀಗ ಹೈದಾರಾಬಾದ್‍ನಲ್ಲಿ ಅಸಾದುದ್ದಿನ್ ಓವೈಸಿ ವಿರುದ್ಧ ಹರಿಹಾಯ್ದಿದ್ದಾರೆ. ಮುಂದಿನ ತಿಂಗಳು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಇರುವ ಹಿನ್ನೆಲೆ ಬಿಜೆಪಿ ಪರ ತೇಜಸ್ವಿ …

Read More »