Breaking News

Uncategorized

ಬಜೆಟ್‍ಗೆ ತಯಾರಿ, ಅಧಿಕಾರಿಗಳ ಜೊತೆ ಸಿಎಂ ಚರ್ಚೆ

ಬೆಂಗಳೂರು,ಜ.1- ಕಳೆದ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳ ಅನುಷ್ಠಾನ, ಮುಂಬರುವ ಬಜೆಟ್‍ನಲ್ಲಿ ಹೊಸ ಯೋಜನೆಗಳ ಘೋಷಣೆ, ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿ ಮತ್ತಿತರ ವಿಷಯಗಳ ಕುರಿತು ಸಿಎಂ ಯಡಿಯೂರಪ್ಪ ಅವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಗರದ ಹೊರವಲಯದ ಖಾಸಗಿ ರೆಸಾರ್ಟ್‍ನಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು. ಈ …

Read More »

ಸಾಮಾಜಿಕ ಜಾಲತಾಣದಲ್ಲಿ ನಾಡಧ್ವಜ ಅಭಿಯಾನಕ್ಕೆ ಭರ್ಜರಿ ಬೆಂಬಲ.!

ಬೆಳಗಾವಿ(ಡಿಸೆಂಬರ್​. ಮಹಾನಗರ ಪಾಲಿಕೆ ಮುಂದೆ ಕನ್ನಡ ಬಾವುಟ ಹಾರಾಟ ವಿಚಾರ ಈಗ ದೇಶ್ಯಾದ್ಯಂತ ಚರ್ಚೆ ಗೆ ಕಾರಣವಾಗಿದೆ. ಕನ್ನಡದ ಕಟ್ಟಾಳುಗಳು ದಶಕಗಳ ಕನ್ನಡಿಗರ ಕನಸನ್ನು ಸಾಕಾರಗೊಳಿಸಿದ್ದಾರೆ. ಹೀಗಿರುವಾಗ ನಾಡದ್ರೋಹಿಗಳು ಬೆಳಗಾವಿ ಪಾಲಿಕೆ ಮುಂದಿನ ಹಳದಿ ಕೆಂಪು ಧ್ವಜ ತೆರವು ಗೊಳಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು‌. ಎಂಇಎಸ್ ಪುಂಡರು ಒನ್ ನೇಷನ್ಸ್ ಒನ್ ಫ್ಲ್ಯಾಗ್ ಅಭಿಯಾನಕ್ಕೆ ಟ್ವಿಟರ್ ಅಭಿಯಾನಕ್ಕೆ ಈಗ ಕನ್ನಡಿಗರು ಗುದ್ದು ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಅಭಿಯಾನಕ್ಕೆ …

Read More »

2021ನೇ ಇಸವಿಯ ಬ್ಯಾಂಕ್ ಗಳ ರಜಾ ದಿನದ ಪಟ್ಟಿ ಬಿಡುಗಡೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) 2021ನೇ ಇಸವಿಯ ಬ್ಯಾಂಕ್ ಗಳ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ ಗಳಿಗೆ ಭಾನುವಾರ ಹಾಗೂ ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ ರಜಾ ಇರುತ್ತದೆ. ಹೊಸ ವರ್ಷದ ಪ್ರಯುಕ್ತ ಜನವರಿ 1, 2021ರಂದು ಚೆನ್ನೈ, ಐಜ್ವಾಲ್, ಗ್ಯಾಂಗ್ಟಕ್, ಇಂಫಾಲ್ ಮತ್ತು ಶಿಲ್ಲಾಂಗ್ ನಲ್ಲಿ ಬ್ಯಾಂಕ್ ಗಳಿಗೆ ರಜಾ ಇದೆ. ಉಳಿದ ಪ್ರಮುಖ ನಗರಗಳಲ್ಲಿ …

Read More »

ದೇಶಾದ್ಯಂತ ಕೋವಿಡ್-19 ಸೋಂಕಿನ ಚೇತರಿಕೆ ಪ್ರಮಾಣ ಶೇಕಡ 98.83ಕ್ಕೆ ಏರಿದೆ.

ನವದೆಹಲಿ: ದೇಶಾದ್ಯಂತ ಕೋವಿಡ್-19 ಸೋಂಕಿನ ಚೇತರಿಕೆ ಪ್ರಮಾಣ ಶೇಕಡ 98.83ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 23 ಸಾವಿರಕ್ಕಿಂತ ಅಧಿಕ ಸೋಂಕಿತರು ಗುಣಮುಖರಾಗಿ, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ದೇಶದಲ್ಲಿ ಈವರೆಗೆ ಗುಣಮುಖರಾದವರ ಸಂಖ್ಯೆ 98 ಲಕ್ಷದ 83 ಸಾವಿರಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 23,181 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯೊಂಡಿದ್ದು, ಇದರೊಂದಿಗೆ ದೇಶಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷದ …

Read More »

ಹೊಸ ವರ್ಷದ ಆರಂಭದ ದಿನವಾದ ಇಂದಿನಿಂದ ಕರ್ನಾಟಕದಲ್ಲಿ SSLC ಹಾಗೂ Second PUC ತರಗತಿಗಳು ಆರಂಭವಾಗಲಿವೆ

ಬೆಂಗಳೂರು (ಜ. 1): ಹೊಸ ವರ್ಷದ ಆರಂಭದ ದಿನವಾದ ಇಂದಿನಿಂದ ಕರ್ನಾಟಕದಲ್ಲಿ SSLC ಹಾಗೂ Second PUC ತರಗತಿಗಳು ಆರಂಭವಾಗಲಿವೆ. ಸಕಲ‌ ಸಿದ್ಧತೆಗಳೊಂದಿಗೆ ವಿಧ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಶಿಕ್ಷಣ ಸಂಸ್ಥೆಗಳು ಸಜ್ಜಾಗಿವೆ. ಇಂದು ಬೆಳಗ್ಗೆ 10 ಗಂಟೆಯಿಂದ ತರಗತಿಗಳು ಆರಂಭವಾಗಲಿವೆ. ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆಯಲಿವೆ. ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಖಾಸಗಿ ಸಂಸ್ಥೆ ಹಾಗೂ ಅನುದಾನ ರಹಿತ ಸಂಸ್ಥೆಗಳಿಗೆ ಎಸ್ಒಪಿ ಕೊಟ್ಟು ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಲಾಗಿದೆ. …

Read More »

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ

ಗೋಕಾಕ: ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 1 ರಿಂದ 5ರವರೆಗೆ ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 1 ರಂದು ಮಧ್ಯಾಹ್ನ 2.30 ಗಂಟೆಗೆ ಗುವಾಹಟಿಯಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಅಲ್ಲಿಂದ ರಸ್ತೆ ಮೂಲಕ ಗೋಕಾಕ ಆಗಮಿಸಿ ವಾಸ್ತವ್ಯ ಮಾಡುವರು. ದಿ. 2 ರಂದು ಮುಂಜಾನೆ 11.15 ಗಂಟೆಗೆ ತಾಲೂಕಿನ ಕೊಣ್ಣೂರ ಪುರಸಭೆ ವ್ಯಾಪ್ತಿಯಲ್ಲಿ …

Read More »

ಭಾರತದಲ್ಲಿ ತಯಾರಾದ ಲಸಿಕೆಗಳನ್ನು ಜನರಿಗೆ ನೀಡಲಾಗುವುದು

ಅಹ್ಮದಾಬಾದ್: 2021ನೇ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಜನರು ಕೊರೋನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ, ಕಾಳಜಿಯನ್ನು ಮರೆಯದೆ ಶಿಷ್ಠಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಕೊರೋನಾ ಲಸಿಕೆ ಬಂದ ನಂತರವೂ ಇದನ್ನು ಮುಂದುವರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕಿವಿಮಾತು ಹೇಳಿದ್ದಾರೆ. ರಾಜ್ ಕೋಟ್ ನಲ್ಲಿ ಏಮ್ಸ್ ಸಂಸ್ಥೆ ನಿರ್ಮಾಣಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಹೊಸ ಕೊರೋನಾ ಕೇಸುಗಳು ದೇಶದಲ್ಲಿ …

Read More »

ಮೃತ ಕುಟುಂಬಸ್ಥರಿಗೆ ಧನ ಸಹಾಯ ಮಾಡಿ ಮಾನವಿಯತೆ ಮೆರೆದ ಶಾಸಕ ಸತೀಶ ಜಾರಕಿಹೊಳಿ

    ಎರಡು ತಿಂಗಳ‌ ಹಿಂದೆ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಹೊಲದಲ್ಲಿ ಸೊಯಾಬಿನ್ ರಾಶಿ ಮಾಡುವಾಗ ಮಶಿನಿನಲ್ಲಿ ಸೀರೆ ಸಿಲುಕಿ ಮರಣ ಹೊಂದಿದ್ದ ಪಾಶ್ಚಾಪುರದಲ್ಲಿರುವ ಮೃತ ಯಮನವ್ವ ದುಂಡಪ್ಪ ಉಪ್ಪಾರ ಇವರ ಮನೆಗೆ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೊಳಿಯವರ ಪುತ್ರ ರಾಹುಲ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯವರು ಮೃತ ಕುಟುಂಬದ ಸದಸ್ಯರಿಗೆ ಧನ ಸಹಾಯ ಮಾಡಿದರು. ಸಂದರ್ಭದಲ್ಲಿ ಸ್ಥಳಿಯ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಗಣಿ ದರ್ಗಾ ಮಾತನಾಡಿ ಇವತ್ತಿನ …

Read More »

ಈ ಬಾರಿ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ.

ಬೆಂಗಳೂರು(ಡಿ.31): ಪ್ರತಿ ಬಾರಿ ನ್ಯೂ ಇಯರ್ ಬಂತು ಅಂದ್ರೆ, ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಜಗಮಗಿಸುತ್ತಿದ್ದವು. ನೋಡುಗರ ಕಣ್ಣಿಗೆ ಅದೇ ಹಬ್ಬದಂತೆ ಇರ್ತಿತ್ತು. ಆದ್ರೆ ಈ ಬಾರಿ ಹೊಸ ವರ್ಷಕ್ಕೆ ಬ್ರಿಗೇಡ್ ರಸ್ತೆ ಬಿಕೋ ಎನ್ನುತ್ತಿದೆ. ಪ್ರತಿವರ್ಷ ಹೊಸ ವರ್ಷಾಚರಣೆ ವೇಳೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದ ಬ್ರಿಗೇಡ್ ರಸ್ತೆಯಲ್ಲಿ ಈ ಬಾರಿ ನೀರವ ಮೌನ ಹಾಗೂ ಬಿಕೋ ಎನ್ನುವಂತ …

Read More »

ದೆಹಲಿಯಲ್ಲಿ ರಾತ್ರಿ ಕಫ್ರ್ಯೂ

ನವದೆಹಲಿ, ಡಿ.31-ರೂಪಾಂತರ ವೈರಸ್ ಕಾರಣ ದೆಹಲಿ ಸರ್ಕಾರ ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆ ತನಕ ನಗರಾದ್ಯಂತ ಕಫ್ರ್ಯೂ ವಿಧಿಸಿದೆ. ಹೊಸ ವರ್ಷ ಆಚರಣೆಗಾಗಿ ನಡೆಸುವ ದೊಡ್ಡ ಗುಂಪು ಗಳನ್ನು ತಪ್ಪಿಸುವ ಸಲುವಾಗಿ ಡಿ.31 ರಾತ್ರಿಯಿಂದ ಜ.1 ವರೆಗೆ ಕಫ್ರ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದೆ. ಬ್ರಿಟನ್ ಯಿಂದ ಬಂದಿರುವ ರೂಪಾಂತರ ಕೊರೊನಾ ವೈರಾಣು ಪರಿಣಾಮ ಮತ್ತು ಅದರ ಹರಡುವಿಕೆಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ …

Read More »