Breaking News

Uncategorized

ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ: ಐವಿ ಗ್ಲುಕೋಸ್​ನಲ್ಲಿ ಆಘಾತಕಾರಿ ಅಂಶ ಪತ್ತೆ

ಬಳ್ಳಾರಿ, (ಡಿಸೆಂಬರ್ 03): ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಐವಿ ಫ್ಲೂಯಿಡ್ ವರದಿಯಲ್ಲಿ ಶಾಕಿಂಗ್ ನ್ಯೂಸ್ ಬಹಿರಂಗವಾಗಿದೆ. 92 ಐವಿ ಫ್ಲೂಯಿಡ್​​ ಸ್ಯಾಂಪಲ್ಸ್​ಗಳ ವರದಿ ಬಂದಿದ್ದು, ಅದರಲ್ಲಿ ಫಂಗಸ್ ಸೇರಿದ್ದಂತೆ ಬ್ಯಾಕ್ಟೀರಿಯಾ ಅಂಶ ಕಂಡುಬಂದಿದೆ. ರಾಜ್ಯದ ಐವಿ ಫ್ಲೂಯಿಡ್ ರಿಪೋರ್ಟ್​ನಲ್ಲಿ ಅಸುರಕ್ಷಿತ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಅವರು ಈ ಬಗ್ಗೆ ಸಂಪೂರ್ಣ ವಿವರಣೆ ಕೇಳಿ ಕೇಂದ್ರದ ಡ್ರಗ್ …

Read More »

ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ನಿವೃತ್ತ ಶಿಕ್ಷಕನ ಹತ್ಯೆ

ಬೆಂಗಳೂರು, (ಡಿಸೆಂಬರ್ 03): ಸುದೀರ್ಘ ಸೇವೆಯ ಬಳಿಕ ನಿವೃತ್ತಿಯಾಗಿದ್ದ ಶಿಕ್ಷಕರೊಬ್ಬರು ಕನಸಿನ ಮನೆ ಕಟ್ಟಲು ಹಣ ಡ್ರಾ ಮಾಡಿಕೊಂಡು ಬರುವಾಗ ಅವರನ್ನು ದುಷ್ಕರ್ಮಿಗಳು ಹೊಡೆದು ಹತ್ಯೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿ ನಿವೃತ್ತ ಶಿಕ್ಷಕ ಹನುಮಂತರಾಯಪ್ಪ ಅವರನ್ನು ಹೊಡೆದು ಕೊಲೆ ಮಾಡಿ ಅವರ ಬಳಿ ಇದ್ದ ಮೂರು ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದಾರೆ. ಹನುಮಂತರಾಯಪ್ಪ ಅವರು ವೃತ್ತಿಯಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯಿಂದ ಬಂದಿದ್ದ ಹಣವನ್ನು …

Read More »

ಎಟಿಎಂ ನಿಂದ ಹಣ ಕದ್ದ ವ್ಯಕ್ತಿಯನ್ನು ಬಂಧಿಸಿದ ಮಾರ್ಕೆಟ್ ಠಾಣೆ ಪೊಲೀಸರು

ಬೆಳಗಾವಿ : ಎಟಿಎಂ ನಿಂದ ಹಣ ಕದ್ದ ವ್ಯಕ್ತಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ: 30/11/2024 ರಂದು ಬೆಳಗಾವಿ ನಗರದ ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಬೆಳಗಾವಿ ಅಂಜುಮನ್ ಬಿಲ್ಡಿಂಗ್‌ ನಲ್ಲಿ ಬರುವ ಹೆಚ್.ಡಿ.ಎಫ್.ಸಿ, ಬ್ಯಾಂಕ ಎ.ಟಿ.ಎಮ್ ನಿಂದ 8,65.500 ರೂ. ವನ್ನು “ಎಸ್.ಐ.ಎಸ್” ಪ್ರೋಸಿಗರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್” ಕಂಪನಿಯಲ್ಲಿ ಕೆಲಸ ಮಾಡುವ ಕೆಲಸಗಾರನಾದ ಕೃಷ್ಣಾ ಸುರೇಶ ದೇಸಾಯಿ, (ವಯಸ್ಸು: 23 ವರ್ಷ, ಸಾ: ಮನೆ ನಂ: 429, …

Read More »

ಅಥಣಿ ಹಾಗೂ ಕಾಗವಾಡ ತಾಲೂಕಿನಾದ್ಯಂತ ರೈತ ಕುಟುಂಬದ 1660 ಎಕರೆ ರೈತರ ಜಮೀನು ವಕ್ಪ್ ಆಸ್ತಿ ಎಂದು ಕಬಳಿಕೆಯಾಗಿದೆ,

ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ತಾಲೂಕಿನಾದ್ಯಂತ ರೈತ ಕುಟುಂಬದ 1660 ಎಕರೆ ರೈತರ ಜಮೀನು ವಕ್ಪ್ ಆಸ್ತಿ ಎಂದು ಕಬಳಿಕೆಯಾಗಿದೆ, ಸರಕಾರದ ಹುಡುಗಾಟಕ್ಕೆ ರೈತರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಜನಪ್ರತಿನಿಧಿಗಳು ಮೌನವಾಗಿರುವುದು ವಿಷಾಧನೀಯ, ಸಂತ್ರಸ್ತ ರೈತರ ಪರವಾಗಿ ಅವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿರಂತರ ಎಂದು ನ್ಯಾಯವಾದಿ ಸಂಪತಕುಮಾರ ಶೆಟ್ಟಿ ಅವರು ಹೇಳಿದರು. ಅವರು ಪಟ್ಟಣದಲ್ಲಿ ರೈತ ಸಂಘ, ಮಾಜಿ ಸೈನಿಕರ ಸಂಘ ಹಾಗೂ …

Read More »

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ತುಮಕೂರು ಹೊರವಲಯದ ಸೋರೆಕುಂಟೆ ಬಳಿಯ ಪಿ.ಗೊಲ್ಲಹಳ್ಳಿಗೆ ಆಗಮಿಸಿ‌ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ನೆರವೇರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ತುಮಕೂರು ಹೊರವಲಯದ ಸೋರೆಕುಂಟೆ ಬಳಿಯ ಪಿ.ಗೊಲ್ಲಹಳ್ಳಿಗೆ ಆಗಮಿಸಿ‌ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ನೆರವೇರಿಸಿದರು. ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್​ನಲ್ಲಿ ಆಗಮಿಸದೇ ಬೆಂಗಳೂರಿನಿಂದ ರಸ್ತೆ ಮೂಲಕ ಆಗಮಿಸಿ ಸ್ಟೇಡಿಯಂಗೆ ಶಂಕುಸ್ಥಾಪನೆ ನೆರವೇರಿಸಿದರು. ಶಂಕುಸ್ಥಾಪನೆ ನಂತರ ಗುದ್ದಲಿ ಪೂಜೆ ಕೂಡ ನೆರವೇರಿಸಿದರು. ಆನಂತರ ಕ್ರಿಕೆಟ್ ಪಿಚ್​ನಲ್ಲಿ ಸಾಂಕೇತಿಕವಾಗಿ ಬ್ಯಾಟಿಂಗ್‌ ಆಡಿದರು. ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ, ಮೈಸೂರಿನಲ್ಲಿಯೂ ಕ್ರಿಕೆಟ್‌ ಸ್ಟೇಡಿಂಗ್‌ ನಿಮಾಣಕ್ಕೆ …

Read More »

ಗುಂಡಿ ಮುಕ್ತ‌ ರಸ್ತೆ‌ ಸೇರಿ ಹಾಗೂ ಆರ್‌ಟಿ‌ಓ ಕಚೇರಿಯಲ್ಲಿನ ಭ್ರಷ್ಟಾಚಾರ ವಿರುದ್ಧ ಅಟೋ ಚಾಲಕರ ಆಕ್ರೋಶ…ಡಿಸಿ ಕಚೇರಿ ಮುಂಭಾಗ ಪ್ರೊಟೆಸ್ಟ್ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ

ಗುಂಡಿ ಮುಕ್ತ‌ ರಸ್ತೆ‌ ಸೇರಿ ಹಾಗೂ ಆರ್‌ಟಿ‌ಓ ಕಚೇರಿಯಲ್ಲಿನ ಭ್ರಷ್ಟಾಚಾರ ವಿರುದ್ಧ ಅಟೋ ಚಾಲಕರ ಆಕ್ರೋಶ…ಡಿಸಿ ಕಚೇರಿ ಮುಂಭಾಗ ಪ್ರೊಟೆಸ್ಟ್ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ   ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿನ ರಸ್ತೆ ಗುಂಡಿಗಳ ಮುಚ್ಚಲು ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ನಡೆ ಖಂಡಿಸಿ ಹಾಗೂ ಧಾರವಾಡ ಆರ್ ಟಿ ಓ ಕಚೇರಿಯಲ್ಲಿ ಎಜೆಂಟರ್ ಮೂಲಕ ಭ್ರಷ್ಟಾಚಾರ ಮಾಡುತ್ತಿರುವ ಅಧಿಕಾರಿಗಳ ಕಾರ್ಯವೈಖರಿ ವಿರೋಧಿಸಿ, ಧಾರವಾಡದಲ್ಲಿಂದು ಅಟೋ ಚಾಲಕರು ಕಮ್ ಮಾಲೀಕರು ಪ್ರತಿಭಟನೆ …

Read More »

ಸರ್ಕಾರಿ ವಿಶೇಷ ದತ್ತು ಸ್ವೀಕಾರ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ಪರಿಶೀಲಿಸಿದ .D.C.

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಜಿಲ್ಲೆಯ ರಾಮತೀರ್ಥ ನಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸ್ವೀಕಾರ ಕೇಂದ್ರಕ್ಕೆ ಶನಿವಾರ (ನ.30) ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ಪರಿಶೀಲಿಸಿದರು. ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಮಕ್ಕಳಿಗೆ ಆಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ನಿರ್ವಹಿಸುವಂತೆ ದತ್ತು ಸ್ವೀಕಾರ ಕೇಂದ್ರದ ಮುಖ್ಯಸ್ಥರಿಗೆ ಹಾಗೂ ಮಕ್ಕಳ ಆರೋಗ್ಯ ಮತ್ತು ಕಾಳಜಿಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಿದರು.ಈ ವೇಳೆ ಮಾನ್ಯ ಜಿಲ್ಲಾಧಿಕಾರಿಗಳು …

Read More »

ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವೈದ್ಯರು, ಓರ್ವ ವಕೀಲ ಸೇರಿ ಮೂವರು ಸ್ಥಳದಲ್ಲೇ ಸಾವ

ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವೈದ್ಯರು, ಓರ್ವ ವಕೀಲ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರದ ವಿಡಪನಕಲ್ ಬಳಿ ನಡೆದಿದೆ. ಬಳ್ಲಾರಿ ಬಿಮ್ಸ್ ಆಸ್ಪತ್ರೆಯ ಡಾ. ಗೋವಿಂದರಾಜಲು, ಡಾ.ಯೋಗೇಶ್ ಹಾಗೂ ವಕೀಲ ವೆಂಕಟನಾಯ್ಡು ಮೃತ ದುರ್ದೈವಿಗಳು. ಘಟನೆಯಲ್ಲಿ ಮತ್ತೋರ್ವ ವೈದ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯ ಅಮರೇಗೌಡ ಪಾಟೀಲ್ ಸ್ಥಿತಿ ಗಂಭೀರವಾಗಿದೆ. ವಿದೇಶಿ ಪ್ರವಾಸಕ್ಕೆ ತೆರಳಿದ್ದ ಸ್ನೇಹಿತರು ಬಳ್ಳಾರಿಗೆ ವಾಪಾಸ್ ಆಗುತ್ತಿದ್ದಾಗ …

Read More »

ಉಡುಪಿ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ವರಾಹಿ ನದಿಯಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣ

ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಸಲುವಾಗಿ ಮುಂಬರುವ ಅಧಿವೇಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಜಿಲ್ಲೆಯ ಶಾಸಕರೊಳಗೊಂಡ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಉಡುಪಿ ಜಿಲ್ಲಾ ಪಂಚಾಯತ್ ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯ ಸಮಸ್ಯೆಗಳಿಗೆ ಸೂಕ್ತ …

Read More »

150 ಅಡಿಗೂ ಅಧಿಕ ಆಳದ ಕಂದಕ್ಕೆ ಉರುಳಿದ ಬಸ್

ಪಶ್ಚಿಮ ಬಂಗಾಳ-ಸಿಕ್ಕಿಂ ಗಡಿ ಪ್ರದೇಶದ ತೀಸ್ತಾ ನದಿ ತೀರದಲ್ಲಿ ಈ ಬಸ್ 150 ಅಡಿಗೂ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ  ಕನಿಷ್ಠ 6 ಮಂದಿ ಮೃತಪಟ್ಟು 15 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.  ಪೊಲೀಸರು ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರಕ್ಕೆಳೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿರುವುದಾಗಿ ಕಲಿಂಪಾಗ್ ಜಿಲ್ಲೆಯ ಎಸ್‌ಪಿ ಶ್ರೀಹರಿ ಪಾಂಡೆ …

Read More »