ಕನ್ನಡ ಧ್ವಜ ತೆರವಿಗೆ ಜನವರಿ 21ರವರೆಗೆ ಗಡುವು, ಇಲ್ಲವಾದರೆ ಗಲ್ಲಿಗಲ್ಲಿಗಳಲ್ಲಿ ಕೇಸರಿ ಧ್ವಜ ಹಾರಾಟ: ಜಿಲ್ಲಾಧಿಕಾರಿ ಕಚೇರಿ ಮುಂದೆ ನಾಡವಿರೋಧಿಗಳ ಪುಂಡಾಟಿಕೆ ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಹಾರಿಸಲಾದ ಕನ್ನಡ ಧ್ವಜವನ್ನು ಜನವರಿ 20ರೊಳಗೆ ತೆರವುಗೊಳಿಸದಿದ್ದರೆ ಜನವರಿ 21ರಂದು ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ, ಗಲ್ಲಿ ಗಲ್ಲಿಗಳಲ್ಲಿ ಕೇಸರಿ ಧ್ವಜ ಹಾರಿಸಲಾಗುವುದು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಾಡ ವಿರೋಧಿಗಳು ಪ್ರತಿಭಟನೆ …
Read More »ನುಡಿದಂತೆ ನಡೆದ ಸರ್ಕಾರ- ಡಾ.ಸೋನಾಲಿ ಹರ್ಷ
ಬೆಳಗಾವಿ- ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವದು,ಗೋರಕ್ಷಕರ ಬಹುದಿನಗಳ ಕನಸಾಗಿತ್ತು,ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಲಕ್ಷಾಂತರ ಗೋ ರಕ್ಷಕರ ಕನಸು ನನಸು ಮಾಡಿದ್ದು,ಸರ್ಕಾರದ ಕ್ರಮ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಠಿಸಿದೆ ಎಂದು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಹರ್ಷ ವ್ಯೆಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ,ರಾಜ್ಯದಹಿತವನ್ನು ಕಾಪಾಡಿದ್ದು ಅಭಿನಂದಾರ್ಹ ಸಂಗತಿಯಾಗಿದ್ದು,ಸರ್ಕಾರ ರಾಜ್ಯದಲ್ಲಿ ಗೋಹತ್ಯೆ …
Read More »ದೇಶದ ನಾಗರಿಕರು ಭಾವೈಕ್ಯತೆಯಿಂದ ಜೀವಿಸಿದರೆ ಮಾತ್ರ ದೇಶದ ಎಳ್ಗೆ ಸಾದ್ಯ : ವಿವೇಕ ಜತ್ತಿ
ಗೋಕಾಕನ ನಗರದ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೋಳಿಯವರ ಗೋಕಾಕ ಗೃಹ ಕಚೇರಿ ಹಿಲ್ ಗಾರ್ಡನ್ ನಲ್ಲಿ ಗೋಕಾಕ ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಘಟಕದ ವತಿಯಿಂದ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ ಮಾತನಾಡಿ ಕಾಂಗ್ರೆಸ್ ಮಾಡಿದ ಎಪ್ಪತ್ತು ವರ್ಷಗಳ ಸಾಧನೆಯನ್ನು ಬಿಡಿ ಬಿಡಿಯಾಗಿ ಬಿಡಿಸಿ ಹೇಳಿದರು ಹಾಗೂ ಈ ದೇಶದ ಎಲ್ಲಾ ನಾಗರಿಕರು ಭಾವೈಕ್ಯತೆಯಿಂದ ಜೀವಿಸಿದರೆ ಮಾತ್ರ ದೇಶದ ಎಳ್ಗೆ ಸಾದ್ಯ …
Read More »ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಈ ರಾಜ್ಯಗಳಲ್ಲಿ ಕೋಳಿ ಮಾಂಸ ಮಾರಾಟ ನಿಷೇಧ
ನವದೆಹಲಿ: ಕೊರೊನಾ ವೈರಸ್ ನ ನಡುವೆಯೇ ಕೋಳಿ ಜ್ವರ ಇದೀಗ ವ್ಯಾಪಕ ಭಯ ಹುಟ್ಟಿಸಿದೆ. ಹಿಮಾಚಲ ಪ್ರದೇಶದ ಅನೇಕ ಭಾಗದಲ್ಲಿ ಪೌಲ್ಟ್ರಿ ಕೋಳಿ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಹರ್ಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 2 ಲಕ್ಷ ಕೋಳಿ ಮತ್ತು ವಲಸೆ ಹಕ್ಕಿಗಳು ಸಾವನ್ನಪ್ಪಿದ ನಂತರ ಅಧಿಕಾರಿಗಳು ತೀವ್ರ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಂಡಿದ್ದಾರೆ. ಭೋಪಾಲ್ ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ …
Read More »ಗೋಹತ್ಯೆ ನಿಷೇಧ ಕಾಯ್ದೆ: ರಾಜ್ಯ ಸರಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ
ಬೆಂಗಳೂರು. ಸುಗ್ರೀವಾಜ್ಞೆಯ ಪ್ರಕಾರ ರಾಜ್ಯದಲ್ಲಿ ಜಾನುವಾರು ಸಾಗಾಣಿಕೆ, ಹತ್ಯೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ, ಹತ್ಯೆಗಾಗಿ ಜಾನುವಾರು ಮಾರಾಟ, ಖರೀದಿ ಮೇಲೆ ಸಹ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ, ಹತ್ಯೆಗಾಗಿ ಮಾರಾಟ ಮಾಡಿದರೆ ಆ ಜಾನುವಾರುಗಳನ್ನು ಜಪ್ತಿ ಮಾಡಲಾಗುವುದು. ನಿಯಮ ಉಲ್ಲಂಘಿಸಿದರೆ ಮೂರು ವರ್ಷದಿಂದ ಏಳು ವರ್ಷ ಜೈಲು ಶಿಕ್ಷೆ ಸಹ ವಿಧಿಸಲಾಗುವುದು ಎಂದು ಹೇಳಲಾಗಿದೆ. ಅಲ್ಲದೆ 50 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ದಂಡ ಸಹ ವಿಧಿಸಲಾಗುವುದು. ಆದರೆ, ಕೃಷಿ …
Read More »ಪ್ರತಿಭಟನೆ ನಿರತ ರೈತರಿಂದ ಟ್ರ್ಯಾಕ್ಟರ್ ಜಾಥ ನಾಳೆಗೆ ಮುಂದೂಡಿಕೆ
ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ರದ್ಧತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜ.06 ರಂದು ನಿಗದಿಪಡಿಸಿದ್ದ ಟ್ರ್ಯಾಕ್ಟರ್ ಜಾಥವನ್ನು ಜ.07 ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ರೈತರ ಒಕ್ಕೂಟಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಹವಾಮಾನ ವೈಪರಿತ್ಯದ ಕಾರಣದಿಂದಾಗಿ ಟ್ರ್ಯಾಕ್ಟರ್ ಜಾಥಾವನ್ನು ಜ.07 ಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಜ.07 ರಂದು ಟ್ರ್ಯಾಕ್ಟರ್ …
Read More »BIG NEWS: ಜಿಪಂ, ಗ್ರಾಪಂ ಸಾಕು – ತಾಲೂಕು ಪಂಚಾಯಿತಿ ರದ್ದು ಮಾಡಲು ಬೇಡಿಕೆ
ಬೆಂಗಳೂರು: ತಾಲೂಕು ಪಂಚಾಯಿತಿಯನ್ನು ರದ್ದುಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಶಾಸಕರು ನಡೆಸಿದ ಸಭೆಯಲ್ಲಿ ಇಂತಹುದೊಂದು ಪ್ರಸ್ತಾಪ ಕೇಳಿಬಂದಿದ್ದು, ರಾಜ್ಯದಲ್ಲಿ ತಾಲೂಕು ಪಂಚಾಯಿತಿ ವ್ಯವಸ್ಥೆ ರದ್ದುಗೊಳಿಸಲು ಕಾನೂನು ತಿದ್ದುಪಡಿ ತರುವಂತೆ ಸಲಹೆ ನೀಡಲಾಗಿದೆ ಎಂದು ಹೇಳಲಾಗಿದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಹೀಗೆ ಮೂರು ಸ್ತರದ ವ್ಯವಸ್ಥೆಗಳಿದ್ದರೂ ತಾಲೂಕು ಪಂಚಾಯಿತಿಗೆ ಯಾವುದೇ ಅನುದಾನ ಮತ್ತು ನಿರ್ದಿಷ್ಟ ಕೆಲಸ ಇಲ್ಲದಂತಾಗಿದೆ. ಅನಗತ್ಯವಾಗಿರುವ …
Read More »ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆ ಸುಪ್ರೀಂ ಅಸ್ತು
ನವದೆಹಲಿ, ಜ.5- ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‍ವರೆಗೆ 3 ಕಿ.ಮೀ. ವಿಸ್ತಾರವಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆಗೆ ಇದ್ದ ತಡೆಯನ್ನು ಸರ್ವೋಚ್ಛ ನ್ಯಾಯಾಲಯ ತೆರವುಗೊಳಿಸಿದೆ. ಪರಿಸರ ಅನುಮತಿ ಮತ್ತು ಭೂ ಬಳಕೆಯಲ್ಲಿನ ಅಧಿಸೂಚನೆಯನ್ನು ಸುಪ್ರೀಂ ಕೋರ್ಟು ಬಹುಮತದ ತೀರ್ಪಿನ ಮೂಲಕ ವಿಸ್ತಾ ಯೋಜನೆ ಚಾಲನೆಗೊಳ್ಳಲು ದಾರಿ ಮಾಡಿಕೊಟ್ಟಿದೆ. 2019ರ ಸೆಪ್ಟೆಂಬರ್‍ನಲ್ಲಿ ಘೋಷಿಸಲಾದ ಸೆಂಟ್ರಲ್ ವಿಸ್ತಾ ಪುನರುಜ್ಜೀವನ ಯೋಜನೆ 900 ರಿಂದ 1,200 ಸಂಸದರಿಗೆ ಆಸನ ಕಲ್ಪಿಸುವ ಸಾಮಥ್ರ್ಯವನ್ನು …
Read More »ಟೋಲ್ ಪ್ಲಾಜಾಗಳಲ್ಲಿ ಹಗಲು ದರೋಡೆ : ಜನರ ಆಕ್ರೋಶ
ಹಿರಿಯೂರು ,- ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ಟೋಲ್ ಪ್ಲಾಜಗಳಲ್ಲಿ ಖಾಸಗಿ ಕಂಪನಿ ಹೆಸರಿನಲ್ಲಿ ಏಜೆನ್ಸಿಗಳು ವಾಹನಗಳ ಮಾಲೀಕರಿಂದ ಡಬಲ್ ಚಾರ್ಜ್ ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಚಾಲಕರು ಹಾಗೂ ವಾಹನಗಳ ಮಾಲೀಕರು ಆರೋಪಿಸಿದ್ದಾರೆ. ತಾಲೂಕಿನ ಗುಯಿಲಾಳು ಮತ್ತು ಶಿರಾ ತಾಲೂಕಿನ ಕಳ್ಳಂಬೆಳ್ಳ ಸಮೀಪದ ಖಾಸಗಿ ಕಂಪನಿ ನಿರ್ವಹಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಈ ಎರಡು ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಗೆ ಫಾಸ್ಟ್ಯಾಗ್ ಮಾಡಿಸಿಲ್ಲ ಎಂಬ ನೆಪವೊಡ್ಡಿ ಡಬಲ್ ಶುಲ್ಕ …
Read More »ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಇಂಡೋ- ಆಸೀಸ್ `ಸಿಡ್ನಿ’ಟೆಸ್ಟ್
ಸಿಡ್ನಿ, ಜ.5- ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯೆಂದರೆ ಅಲ್ಲಿ ದಾಖಲೆಗಳಿಗೇನೂ ಭರವಿಲ್ಲ, ಈಗ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಪ್ರಮುಖ ದಾಖಲೆಗಳು ಮಾಡಲು ಆಟಗಾರರು ಸಜ್ಜಾಗಿ ದ್ದಾರೆ. ಮೊದಲೆರಡು ಟೆಸ್ಟ್‍ಗಳಿಂದ ತಂಡದಿಂದ ದೂರ ಉಳಿದಿದ್ದ ಸ್ಟಾರ್ ಆಟಗಾರರಾದ ಭಾರತದ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರು ಸಿಡ್ನಿ ಟೆಸ್ಟ್‍ನಲ್ಲಿ ಆಡುವ ಮೂಲಕ ಕೇಂದ್ರಬಿಂದುವಾಗಿದ್ದು ಅವರು ಕೂಡ ದಾಖಲೆ ಬರೆಯಲು ಉತ್ಸುಕದಲ್ಲಿದ್ದಾರೆ. 6 ಸಾವಿರ ಟೆಸ್ಟ್‍ನತ್ತ …
Read More »