Breaking News

Uncategorized

ವೇತನ ಸಹಿತ ರಜಾ ದಿನ ಏರಿಕೆ, ಸ್ವಾಗತಾರ್ಹ ಹೆಜ್ಜೆ

ಕಾರ್ಮಿಕರ ವೇತನ ಸಹಿತ ರಜೆ ದಿನಗಳನ್ನು 30-45 ದಿನಗಳಿಗೆ ಹೆಚ್ಚಿಸಲು ಹಾಗೂ ಬಳಕೆಯಾಗದ ವೇತನಸಹಿತ ರಜೆ ದಿನಗಳನ್ನು ಮುಂದಿನ ವರ್ಷಕ್ಕೆ ವಿಸ್ತರಿಸಲು ಅವಕಾಶ ಕಲ್ಪಿಸುವಂಥ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ತಿದ್ದುಪಡಿ ಮಸೂದೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಅನ್ಯ ರಾಜ್ಯಗಳಲ್ಲಿ ಕಾರ್ಮಿಕರ ರಜೆ ದಿನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯದ ಉದ್ಯೋಗ ವರ್ಗಕ್ಕೂ ಅನುಕೂಲ ಕಲ್ಪಿಸುವುದು ಇದರ ಉದ್ದೇಶ, ಖಾಸಗಿ ಕಂಪೆನಿಗಳ ಮಾಲಕರೊಂದಿಗೂ ಈ ವಿಚಾರದಲ್ಲಿ ಚರ್ಚಿಸಿ ತೀರ್ಮಾನಕ್ಕೆ …

Read More »

ಚಿನ್ನದ ಬೆಲೆಯಲ್ಲಿ ಇಳಿಕೆ

2021ರ ಬಜೆಟ್ ನ ನಂತರ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಚಿನ್ನದ ಮೇಲಿನ ಕಸ್ಟಮ್ ಸುಂಕವನ್ನು ಕಡಿತಗೊಳಿಸುವ ಘೋಷಣೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಂದೂ ಇಳಿದಿದ್ದು, 322 ರೂಪಾಯಿಗೆ ತಲುಪಿದೆ. ಗುರುವಾರ ಚಿನ್ನದ ಬೆಲೆ 10 ಗ್ರಾಂಗೆ 47,457 ರೂಪಾಯಿಯಾಗಿತ್ತು. ಇಂದು 322 ರೂಪಾಯಿ ಇಳಿಕೆಯೊಂದಿಗೆ ಬಂಗಾರದ ಬೆಲೆ 47,137 ರೂಪಾಯಿಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 1,825 ಡಾಲರ್ …

Read More »

ಚನ್ನಮ್ಮ ನಗರ ಶಾಲೆಯಲ್ಲಿ ಚನ್ನಮ್ಮ ನಗರ ಶಾಲೆಯಲ್ಲಿ

ಬೆಳಗಾವಿ :  ನಿವೃತ್ತರಾದ ಶಿಕ್ಷಕ ವಸಂತ ಕಟ್ಟಿಯವರ ಬೀಳ್ಕೊಡುಗೆ ಹಾಗೂ ಸತ್ಕಾರ ಸಮಾರಂಭವನ್ನು ರಾಣಿ ಚೆನ್ನಮ್ಮ ನಗರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಟಿಳಕವಾಡಿ ಕ್ಲಸ್ಟರ್ ವತಿಯಿಂದ  ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿತೈಷಿ ಹಾಗೂ ಮಾಜಿ ನಗರಸೇವಕಿ ಶೀಲಾ ದೇಶಪಾಂಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಈ ಶಾಲೆಯಿಂದ ಇಬ್ಬರು ಶಿಕ್ಷಕರು ನಿವೃತ್ತಿ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲೇ ಕಟ್ಟಿ ಗುರುಗಳು ನಿವೃತ್ತರಾಗಿದ್ದಾರೆ. …

Read More »

ಉಪ ರಿಜಿಸ್ಟ್ರಾರ್ ಗೆ 70 ಲಕ್ಷ ರೂಪಾಯಿ ವಂಚನೆ ಮಾಡಿ ಪರಾರಿ

ಬೆಂಗಳೂರು: ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡ ದಂಪತಿ, ಸಚಿವರ ಬಳಿ ಹೇಳಿ ಕೆಲಸ ಕೊಡಿಸುವುದಾಗಿ ನಂಬಿಸಿ ರಾಜೀವ್ ಗಾಂಧಿ ಆರೋಗ್ಯ ವಿವಿ ಉಪ ರಿಜಿಸ್ಟ್ರಾರ್ ಗೆ 70 ಲಕ್ಷ ರೂಪಾಯಿ ವಂಚನೆ ಮಾಡಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಂಜುನಾಥ್ ಹಾಗೂ ಲಕ್ಷ್ಮಿಪ್ರಿಯಾ ದಂಪತಿ ವಂಚನೆ ಮಾಡಿರುವ ಆರೋಪಿಗಳು. ವಂಚನೆಗೊಳಗಾದ ಡಾ.ಪ್ರಭಾ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಂಜುನಾಥ್ ಹಾಗೂ ಲಕ್ಷ್ಮಿಪ್ರಿಯಾ ತಾವು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರು …

Read More »

5 ರೂ. ನೋಟು ಸ್ವೀಕರಿಸಲು ನಿರಕರಿಸಿದ ಕಂಡಕ್ಟರ್ ಗೆ ಒಂದು ಸಾವಿರ ರೂ. ದಂಡ

ಅರಸಿಕೆರೆ – ಪ್ರಯಾಣಿಕರೊಬ್ಬರಿಂದ 5 ರೂ. ನೋಟು ಸ್ವೀಕರಿಸಲು ನಿರಕರಿಸಿದ ಕಂಡಕ್ಟರ್ ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಒಂದು ಸಾವಿರ ರೂ. ದಂಡ ವಿಧಿಸಿದೆ. ಸೋಮಶೇಖರ ಎನ್ನುವವರು ಅರಸಿಕೆರೆಯಿಂದ ತಿಪಟೂರಿಗೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. 35 rs. ಟಿಕೆಟ್ ಗೆ 10 ರೂ.ಗಳ 3 ನೋಟು ಮತ್ತು 5 ರೂ.ಗಳಒಂದು ನೋಟನ್ನು ಅವರು ನೀಡಿದರು. ಆದರೆ 5 ರೂ. ನೋಟನ್ನು ನಿರಾಕರಿಸಿದ ಕಂಡಕ್ಟರ್ ಗಲಾಟೆ …

Read More »

ವಿದೇಶಿಯರ ಅಪಪ್ರಚಾರ ವಿರುದ್ಧ ಸಿಡಿದೆದ್ದ ಬಾಲಿವುಡ್, ಕ್ರೀಡಾ ತಾರೆಯರು

ನವದೆಹಲಿ: ಭಾರತದ ಆಂತರಿಕ ವಿಷಯಗಳ ಕುರಿತು ವಿದೇಶಿಯರ ಅಪಪ್ರಚಾರದ ವಿರುದ್ಧ ಬಾಲಿವುಡ್ ಹಾಗೂ ಕ್ರೀಡಾ ತಾರೆಗಳು ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಸಂಬಂಧ ಅಂತರರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಸೇರಿದಂತೆ ಅನೇಕ ವಿದೇಶಿ ಗಣ್ಯ ವ್ಯಕ್ತಿಗಳು ಪ್ರತಿಕ್ರಿಯಿಸಿದ್ದರು. ಭಾರತದ ವಿಷಯಗಳ ಬಗ್ಗೆ ವಿದೇಶಿಯರು ಮಾತನಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತೀಯ ಸೆಲೆಬ್ರಿಟಿಗಳು, ದೇಶದ ಆಂತರಿಕ ವಿಷಯಗಳಲ್ಲಿ ವಿದೇಶಿಯರು ಅಪಪ್ರಚಾರ ನಡೆಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. …

Read More »

ಗ್ಯಾಸ್ ಟ್ಯಾಂಕರ್ – ಕಂಟೈನರ್ ನಡುವೆ ಢಿಕ್ಕಿ ರಸ್ತೆ ಸಂಚಾರ ಅಸ್ತವ್ಯಸ್ತ

ಬಂಟ್ವಾಳ, ಫೆ.03. ಗ್ಯಾಸ್ ಟ್ಯಾಂಕರ್ ಹಾಗೂ ಕಂಟೈನರ್ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರದಲ್ಲಿ ಅಡಚಣೆಯುಂಟಾದ ಘಟನೆ ಮಂಗಳೂರು – ಬೆಂಗಳೂರು ರಾಷ್ಟೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಬುಧವಾರ ರಾತ್ರಿ ನಡೆದಿದೆ. ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಹಾಗೂ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಕಂಟೈನರ್ ಲಾರಿ ನಡುವೆ ಕಲ್ಲಡ್ಕ ಎಂಬಲ್ಲಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡೂ ಲಾರಿಗಳ ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ …

Read More »

ಏ.1ರಿಂದ ಸೀಮೆಎಣ್ಣೆ ಸಬ್ಸಿಡಿ ರದ್ದು..! ಕೇಂದ್ರ ಸರ್ಕಾರದ ಆದೇಶ..!

ಫೆಬ್ರುವರಿ 1ರಂದು ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್ ದಾಖಲೆಗಳ ಪ್ರಕಾರ, ಏಪ್ರಿಲ್ನಿಂದ ಪ್ರಾರಂಭವಾಗುವ ಹಣಕಾಸು ರ‍್ಷದಲ್ಲಿ ಸೀಮೆಎಣ್ಣೆಗೆ ಸಬ್ಸಿಡಿ ಪಾವತಿಸಲು ಅವಕಾಶ ನೀಡೋದಿಲ್ಲ ಎಂದಿದೆ. ಅದ್ರಂತೆ, ಮರ‍್ಚ್ 31ಕ್ಕೆ ಮುಕ್ತಾಯವಾಗಲಿರುವ ಪ್ರಸಕ್ತ ಹಣಕಾಸು ರ‍್ಷದಲ್ಲಿ ಸೀಮೆಎಣ್ಣೆ ಸಬ್ಸಿಡಿ 2,677.32 ಕೋಟಿ ರೂಪಾಯಿ ಆಗಿತ್ತು. ಹಿಂದಿನ ಹಣಕಾಸು ರ‍್ಷದಲ್ಲಿ ರೂ4,058 ಕೋಟಿ ಆಗಿತ್ತು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ರ‍್ಕಾರ ಸೀಮೆಎಣ್ಣೆ ದರವನ್ನ ಏರಿಕೆ ಮಾಡಿರೋದ್ರ ಜೊತೆಗೆ ಇದ್ರ ಮೇಲೆ ಸಿಗ್ತಿದ್ದ ಸಬ್ಸಿಡಿಯನ್ನೂ …

Read More »

Ration Rice ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸ್ತಿದ್ದ ಪಡಿತರ ಅಕ್ಕಿ ಜಪ್ತಿ.. ಲಾರಿ ಚಾಲಕ ಅರೆಸ್ಟ್

ವಿಜಯಪುರ: ಬಸವನಬಾಗೇವಾಡಿ ತಹಶೀಲ್ದಾರ್‌ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಾಗಿಸ್ತಿದ್ದ 589 ಮೂಟೆ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಸುಮಾರು ₹7.99 ಲಕ್ಷ ಮೌಲ್ಯದ ಪಡಿತರ ಅಕ್ಕಿ ಜಪ್ತಿಯಾಗಿದೆ. ಬಾಗಲಕೋಟೆಯಿಂದ ವಿಜಯಪುರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ನಂಬರ್ KA29 B 8299 ನೋಂದಣಿ ಹೊಂದಿರುವ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಒಟ್ಟು 589 ಮೂಟೆ ಪಡಿತರ ಅಕ್ಕಿಯನ್ನು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ …

Read More »

ಗರ್ಭಿಣಿಯರು, ಬಾಣಂತಿಯರಿಗೆ ‘ಸಿಹಿ ಸುದ್ದಿ’ ನೀಡಿದ ಸಚಿವೆ ಶಶಿಕಲಾ ಜೊಲ್ಲೆ..!

ಬೆಂಗಳೂರು: ಗರ್ಭಿಣಿಯರು ಬಾಣಂತಿಯರಿಗೆ ಮನೆ ಬಾಗಿಲಿಗೆ ಪೌಷ್ಟಿಕಾಂಶವುಳ್ಳ ಆಹಾರ ಪೂರೈಕೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ(Shashikala Jolle), ಗರ್ಭಿಣಿಯರು ಮತ್ತು ಬಾಣಂತಿಯರ ಮನೆಬಾಗಿಲಿಗೆ ಪೌಷ್ಟಿಕಾಂಶ ಆಹಾರ ಪೂರೈಕೆ ಬಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಶಾಸಕ ಸಂಜೀವ್ ಮಠಂದೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ತರ ಕನ್ನಡ, …

Read More »