Breaking News

Uncategorized

B.S.N.L. ನೊಂದಿಗೆ ಒಟಿಟಿ ಸಹಭಾಗಿತ್ವ

ಬೆಂಗಳೂರು,ಫೆ.5- ಪ್ರಮುಖ ಜಾಗತಿಕ ಒಟಿಟಿ ಪ್ಲಾಟ್‍ಫಾರ್ಮ್ ಯುಪ್.ಟಿವಿ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‍ಎನ್‍ಎಲ್) ನೊಂದಿಗೆ ಸಹಭಾಗಿತ್ವ ಹೊಂದಿದೆ. ಪರಿಣಾಮ ಹೊಸ-ಯುಗದ ಟೆಕ್-ಶಕ್ತಗೊಂಡ ಏಕ ಚಂದಾದಾರಿಕೆ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‍ಫಾರ್ಮ್ ಯುಪ್ಟಿವಿ ಸ್ಕೋಪ್ ಸೇವೆಯನ್ನು ಪ್ರಾರಂಭಿಸಿದೆ. ಟ್ರಿಪಲ್ ಪ್ಲೇ ಕೊಡುಗೆಯಾಗಿ ಬ್ರಾಡ್‍ಬ್ಯಾಂಡ್ ಚಂದಾದಾರರಿಗೆ ಕಟ್ಟುಗಳ ಒಟಿಟಿ ಸೇವೆಗಳನ್ನು ನೀಡಲು ಈ ಹಿಂದೆ ಬಿಎಸ್‍ಎನ್‍ಎಲ್‍ನೊಂದಿಗೆ ಎಂಒಯುಗೆ ಸಹಿ ಹಾಕಿದ್ದ ಯುಪ್.ಟಿವಿ ಈಗ ಬಿಎಸ್‍ಎನ್‍ಎಲ್ ಬ್ರಾಡ್‍ಬ್ಯಾಂಡ್ ಬಳಕೆದಾರರಿಗಾಗಿ ಬಲವಾದ ವೀಡಿಯೊ ಸೇವೆಗಳನ್ನು ಪ್ರಾರಂಭಿಸುತ್ತಿದೆ.ಅಂತಹ …

Read More »

ಫೆ. 9ಕ್ಕೆ ಪರಿಷತ್‌ ಸಭಾಪತಿ ಚುನಾವಣೆ :

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಚುನಾವಣೆಗೆ ಫೆ. 9ರಂದು ದಿನಾಂಕ ನಿಗದಿಯಾಗಿದೆ. ಬಿಜೆಪಿ -ಜೆಡಿಎಸ್‌ ಬೆಂಬಲದೊಂದಿಗೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ಸಭಾಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಪರಿಷತ್‌ ಕಲಾಪವನ್ನು ಫೆ. 10ರ ವರೆಗೆ ಮುಂದುವರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ತೀರ್ಮಾನಿಸಲಾಯಿತು. ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರ ರಾಜೀನಾಮೆ ಪತ್ರ ಅಂಗೀಕರಿಸಿ ಪರಿಷತ್‌ ಕಲಾಪ ಮುಂದುವರಿಕೆ ಮತ್ತು ಸಭಾಪತಿ ಚುನಾವಣೆ ನಿಗದಿಗೆ ರಾಜ್ಯಪಾಲರು ಅನುಮತಿ ನೀಡಿದರು.

Read More »

ಸೋಮವಾರ ಬೆಳಗಾವಿ ಜಿಲ್ಲೆಯ ಖಾನಾಪುರಕ್ಕೆ ಶಿಕ್ಷಣ ಸಚಿವ ಸುರೇಶ ಕುಮಾರ ಭೇಟಿ

ಬೆಂಗಳೂರು – ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಸೋಮವಾರ ಬೆಳಗಾವಿ ಜಿಲ್ಲೆಯ ಖಾನಾಪುರಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ 6.30ಕ್ಕೆ ದಾವಣಗೆರೆಯಿಂದ ರಸ್ತೆ ಮಾರ್ಗವಾಗಿ ಹೊರಟು 9.30ಕ್ಕೆ ಖಾನಾಪುರಕ್ಕೆ ಆಗಮಿಸುವರು. ನಂತರ ಖಾನಾಪುರ ತಾಲೂಕಿನಲ್ಲಿ ಆಯ್ದ ಸರಕಾರಿ ಶಾಲೆಗಳಿಗೆ ಭೇಟಿ ನೀಡುವರು. 10.30ಕ್ಕೆ ಜಾಂಬೋಟಿಯಲ್ಲಿ ವಿಶ್ವಭಾರತಿ ಸಂಸ್ಥೆಯ ವತಿಯಿಂದ ಪುನರುತ್ಥಾನಗೊಂಡ ಶಾಲಾ ಕಟ್ಟಡವನ್ನು ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ. 12.30ಕ್ಕೆ ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಕುರಿತಂತೆ ಪ್ರಗತಿ …

Read More »

ಮುಂದಿನ ವರ್ಷದಿಂದ ರಾಜ್ಯದ ಎಲ್ಲ ಇಲಾಖೆಗಳಿಗೆ ಸಮವಸ್ತ್ರಗಳನ್ನು ಜವಳಿ ಇಲಾಖೆಯ ನಿಗಮ ಗಳಿಂದಲೇ ಪೂರೈಕೆ

ಬೆಂಗಳೂರು: ‘ಮುಂದಿನ ವರ್ಷದಿಂದ ರಾಜ್ಯದ ಎಲ್ಲ ಇಲಾಖೆಗಳಿಗೆ ಸಮವಸ್ತ್ರಗಳನ್ನು ಜವಳಿ ಇಲಾಖೆಯ ನಿಗಮ ಗಳಿಂದಲೇ ಪೂರೈಕೆ ಮಾಡಲಾಗುವುದು. ಹೊರ ರಾಜ್ಯಗಳಿಂದ ಬಟ್ಟೆ ಆಮದು ಮಾಡುವುದನ್ನು ನಿಲ್ಲಿಸಿ ಸ್ಥಳೀಯ ನೇಕಾರರಿಗೆ ಆದ್ಯತೆ ನೀಡಲಾಗುವುದು’ ಎಂದು ಕೈಮಗ್ಗ ಹಾಗೂ ಜವಳಿ ಸಚಿವ ಶ್ರೀಮಂತ ಪಾಟೀಲ ಭರವಸೆ ನೀಡಿದರು. ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ವರ್ಷದಿಂದ ಸಮವಸ್ತ್ರಕ್ಕೆ ರಾಜ್ಯದ ನೇಕಾರರ ಬಟ್ಟೆಯನ್ನೇ ಪೂರೈಕೆ ಮಾಡಲು …

Read More »

86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ: ಅರವಿಂದ ಲಿಂಬಾವಳಿ

ಬೆಂಗಳೂರು: ಫೆಬ್ರವರಿ ತಿಂಗಳ ಕೊನೆಯಲ್ಲಿ ಹಾವೇರಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ಕನ್ನಡ ಹಬ್ಬದ ಸಿದ್ಧತೆ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ, ಹೆಚ್ಚಿನ ಸಂಖ್ಯೆಯ ಜನರು ಸೇರುವುದರಿಂದ, ಕೋವಿಡ್ ನಿಯಮ ಪಾಲನೆ ಕಷ್ಟವಾಗಲಿದೆ. ಫೆಬ್ರವರಿ ಅಂತ್ಯದಲ್ಲಿ ಕೋವಿಡ್ ಹೊಸ ನಿಯಮಾವಳಿ ಜಾರಿಗೆ ಬಂದ ಬಳಿಕ ಮಾರ್ಚ್ 9ಕ್ಕೆ ಮತ್ತೊಂದು ಸಭೆ ನಡೆಸಿ, ಸಮ್ಮೇಳನ ದಿನಾಂಕ …

Read More »

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ: B,S,Y,- ಯತ್ನಾಳ ಜಟಾಪಟಿ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ‘ಪ್ರವರ್ಗ 2 ಎ’ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ಸದಸ್ಯ ಬಸನಗೌಡ ಯತ್ನಾಳ ನಡುವಿನ ಜಟಾಪಟಿಗೆ ವಿಧಾನಸಭೆ ಶುಕ್ರವಾರ ಸಾಕ್ಷಿಯಾಯಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಉತ್ತರ ನೀಡಿ ಕೂತರು. ಈ ವೇಳೆ ಬಸನಗೌಡ ಯತ್ನಾಳ, ‘ಪಂಚಮಸಾಲಿ ಹಾಗೂ ಹಾಲುಮತ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಮೂರು ಪಕ್ಷಗಳ ಸದಸ್ಯರು ಸದನದಲ್ಲಿ ಧರಣಿ ನಡೆಸಿದ್ದೇವೆ. ಆದರೆ, …

Read More »

ಫೆಬ್ರುವರಿ 6 ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ* 6 ನೇ ತಾರೀಕು 12ಗಂಟೆಯಿಂದ 2ಗಂಟೆ ವರೆಗೆ *

ದೆಹಲಿ ಸಂಯುಕ್ತ ಕಿಸಾನ ಮೋರ್ಚ ಸಂದೇಶ ಆತ್ಮೀಯ ರೈತ ಮುಖಂಡರೇ, ರೈತ, ದಲಿತ,ಕಾರ್ಮಿಕ, ಐಕ್ಯ ಹೋರಾಟದ ಸಂದೇಶ* ರಾಜ್ಯ ಜಿಲ್ಲಾ, ತಾಲೂಕು, ಗ್ರಾಮ ಘಟಕ ಪದಾಧಿಕಾರಿಗಳೇ* , ದಿಲ್ಲಿಯಲ್ಲಿ ರೈತರ ಹೋರಾಟ ಬೆಂಬಲಿಸಿ, ರೈತರ ಬೇಡಿಕೆಗಳನ್ನು ಈಡೇರಿಸಲು ಮತ್ತು ಹೋರಾಟ ನಿರತ ರೈತರ ಮೇಲಿನ ದೌರ್ಜನ್ಯ ಖಂಡಿಸುತ್ತಾ ದೆಹಲಿಯ ಸಂಯುಕ್ತ ಕಿಸಾನ ಮೋರ್ಚಾ ಕರೆ ಮೇರೆಗೆ ದಿನಾಂಕ ಪೆಬ್ರುವರಿ 6, ರಂದು 12 ಗಂಟೆಯಿಂದ 2ಗಂಟೆ ತನಕ ಬೆಳಗಾವಿಯ ಹಿರೇಬಾಗೇವಾಡಿ …

Read More »

ಐಎಂಎ ಹಗರಣದ ಮನ್ಸೂರ್ ಖಾನ್ ಗೆ ಜಾಮೀನು

ಬೆಂಗಳೂರು: ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿದೆ. ಮನ್ಸೂರ್ ಖಾನ್ ಜುಲೈ19,2019ರಿಂದ ಜೈಲಿನಲ್ಲಿದ್ದಾನೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಹೈಕೋರ್ಟ್ ಆತನಿಗೆ ಜಾಮೀನು ಮಂಜೂರು ಮಾಡಿದೆ. ಫೆ. 12ರಂದು ಜಾಮೀನಿನ ಮೇಲೆ ಬಿಡುಗಡೆ ಆಗಬಹುದಾಗಿದೆ. ಫೆ.12ಕ್ಕೆ ಮೊದಲು ಸಿಬಿಐ ತಂಡವು ತನ್ನ ಎಲ್ಲಾ ತನಿಖೆಗಳನ್ನು ಪೂರೈಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

Read More »

ಎಲ್ಲಾ ಧರ್ಮಗಳ ವಿವಾಹಗಳ ನೋಂದಣಿ ಕಡ್ಡಾಯ

ಬೆಂಗಳೂರು, ಫೆ.5- ಬಾಲ್ಯ ವಿವಾಹ, ಬಲವಂತದ ಮದುವೆಗಳನ್ನು ತಪ್ಪಿಸಲು ಪ್ರತಿಯೊಂದು ಮದುವೆಯನ್ನು ಕಡ್ಡಾಯವಾಗಿ ನೋಂದಣಿ ಮಾಡುವ ಬೇಡಿಕೆಯ ಬಗ್ಗೆ ಪರಿಶೀಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು. ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‍ನ ಶಾಸಕ ಕೆ.ಎ.ತಿಪ್ಪೇಸ್ವಾಮಿ ಅವರು, ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮಗಳಲ್ಲಿರುವ ವಿವಾಹ ಕಾಯ್ದೆಯನ್ನು ತಿದ್ದುಪಡಿ ಮಾಡಿ ಪ್ರತಿಯೊಂದು ಮದುವೆಯನ್ನು ನೋಂದಣಿ ಮಾಡಿಸಬೇಕು. ಆಗ ಬಾಲ್ಯವಿವಾಹ ಮತ್ತು ಬಲವಂತದ ಮದುವೆಗಳು …

Read More »

ವಕಿಲರನ್ನು ಅವಾಚ್ಯ ಶಬ್ಧಗಳೀಂದ ನಿಂದಿಸಿದ್ದ ಸಿಪಿಐ ವಕೀಲರ ಸಂಘದ ಮುಖಂಡರು ಪ್ರತಿಭಟನೆ

ಬೆಳಗಾವಿ: ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದ ವಕೀಲರನ್ನು ಸಿಪಿಐ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದನ್ನು ಖಂಡಿಸಿ ಬೆಳಗಾವಿ ವಕೀಲರ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು. ಕೋರ್ಟ್ ಬಳಿ ಬ್ಯಾರಿಕೇಡ್ ಗಳನ್ನು ಹಾಕಿ, ರಸ್ತೆ ತಡೆ ನಡೆಸಿ ಸಿಪಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಕ್ಷಿದಾರರೊಬ್ಬರ ಪರ ದೂರು ದಾಖಲಿಸಲೆಂದು ಠಾಣೆಗೆ ಹೋಗಿದ್ದ ವಕೀಲ ಚೇತನ ಈರಣ್ಣ ಗೆ ಸಿಪಿಐ …

Read More »