Breaking News

Uncategorized

LPG ಸಿಲಿಂಡರ್ ಪಡೆಯಲು ಸರ್ಕಾರ ನೀಡುತ್ತೆ 1600 ರೂಪಾಯಿ

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಒಂದು ಕೋಟಿ ಹೊಸ ಸಿಲಿಂಡರ್ ಸಂಪರ್ಕ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಉಜ್ವಲಾ ಯೋಜನೆಯಡಿ ಅನಿಲ ಸಂಪರ್ಕ ನೀಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸಿಲಿಂಡರ್ ಸಂಪರ್ಕ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಪಿಎಂ ಉಜ್ವಾಲಾ ಯೋಜನೆಯಡಿ ಬಡ ಕುಟುಂಬಗಳಿಗೆ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ಇದರಲ್ಲಿ 1600 ರೂಪಾಯಿಗಳನ್ನು ಸರ್ಕಾರ ನೀಡುತ್ತಿದೆ. ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು ಖರೀದಿಸಲು …

Read More »

ಗಣಿಗಾರಿಕೆಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಸುಲಭ ಹಾಗೂ ಸರಳ ಅನುಮೋದನೆ:

ಬೆಂಗಳೂರು- ಗಣಿಗಾರಿಕೆಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಸುಲಭವಾಗಿ ಹಾಗೂ ಸರಳವಾಗಿ ಅನುಮೋದನೆ ನೀಡಲು ಸಾಧ್ಯವಾಗುವಂತಹ ‘ಏಕಗವಾಕ್ಷಿ ‘ಪದ್ದತಿಯನ್ನು ಅಳವಡಿಸಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರೇಶ್ ನಿರಾಣಿ ಅವರು ತೀರ್ಮಾನಿಸಿದ್ದಾರೆ.ಆ ಮೂಲಕ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ದಿಮೆದಾರರಿಗೆ ಸುಲಭವಾಗಿ ಹಾಗೂ ಸುಲಲಿತವಾಗಿ ವ್ಯಾಪಾರ, ವಹಿವಾಟು ನಡೆಸಲು ಅನುಕೂಲವಾಗುವಂತೆ ಈ ಪದ್ದತಿಯನ್ನು ಜಾರಿ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಇತ್ತೀಚಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ …

Read More »

ಪರಿಷತ್‍ನ ಸಭಾಪತಿ ಚುನಾವಣೆಗೆ ಹೊರಟ್ಟಿ- ನಜೀರ್ ಅಹಮ್ಮದ್ ನಾಮಪತ್ರ ಸಲ್ಲಿಕೆ

ಬೆಂಗಳೂರು,ಫೆ.8- ನಾಳೆ ನಡೆಯಲಿರುವ ವಿಧಾನಪರಿಷತ್‍ನ ಸಭಾಪತಿ ಚುನಾವಣೆಗೆ ಮಾಜಿ ಸಚಿವರಾದ ಬಸವರಾಜ್ ಹೊರಟ್ಟಿ ಹಾಗೂ ನಜೀರ್ ಅಹಮ್ಮದ್ ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಹಾಗೂ ಕಾಂಗ್ರೆಸ್‍ನಿಂದ ನಜೀರ್ ಅಹಮ್ಮದ್ ನಾಮಪತ್ರ ಸಲ್ಲಿಸಿದ್ದು, ಚುನಾವಣೆ ನಾಳೆ ನಡೆಯಲಿದೆ. ಪರಿಷತ್‍ನ ಸಭಾಪತಿಯಾಗಿದ್ದ ಪ್ರತಾಪ್‍ಚಂದ್ರ ಶೆಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ.ಈಗಿನ ಪರಿಷತ್ ಬಲಾಬಲದ ಪ್ರಕಾರ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ …

Read More »

“ದೇವೇಗೌಡರಿಗೆ ನಾನು ಅಭಾರಿಯಾಗಿದ್ದೇನೆ” : ರಾಜ್ಯಸಭೆಯಲ್ಲಿ ಮೋದಿ ಭಾಷಣದ ಹೈಲೈಟ್ಸ್

ನವದೆಹಲಿ, ಫೆ.8 (ರಾಜ್ಯಸಭೆ)- ಕೃಷಿ ಕಾಯ್ದೆಯ ಬಗ್ಗೆ ಕೆಲವರು ರಾಜಕೀಯ ಮಾಡಿ ದೇಶದ ಜನರ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಬದಲಾವಣೆ ಅಗತ್ಯವಾಗಿದ್ದು , ಅನ್ನದಾತರಿಗೆ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಅಭಯ ನೀಡಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಮಾಡಿದ ವಂದನಾರ್ಪಣೆ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ …

Read More »

ಚಹಾ, ಯೋಗದ ಮೇಲೂ ಸಂಚು: ನರೇಂದ್ರ ಮೋದಿ ಟೀಕೆ

ಸೋನಿತ್‌ಪುರ : ಭಾರತದ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಹೊಂಚು ಹಾಕುತ್ತಿರುವ ಜಾಗತಿಕ ಸಂಚುಕೋರರು ನಮ್ಮ ಚಹಾ, ಯೋಗವನ್ನೂ ಬಿಟ್ಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ. ಈ ಮೂಲಕ ಸ್ವೀಡಿಶ್‌ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್‌ ಟ್ವೀಟ್‌ ಮಾಡಿದ್ದ ವಿವಾದಿತ ಟೂಲ್‌ಕಿಟ್‌ ಬಗ್ಗೆ ಪ್ರಧಾನಿ ಇದೇ ಮೊದಲ ಬಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸ್ಸಾಂನ ಸೋನಿತ್‌ಪುರದಲ್ಲಿ ಮಾತನಾಡಿ, ವಿವಾದಿತ ಟೂಲ್‌ಕಿಟ್‌ನಲ್ಲಿ ನಮ್ಮ ಚಹಾ, ಯೋಗಾ ವಿರುದ್ಧವೂ ಅಪಪ್ರಚಾರ ಮಾಡುವ ಸಂಚಿತ್ತು ಎನ್ನುವುದನ್ನು …

Read More »

ಚಿನ್ನಮ್ಮನ ಬೆಂಗಳೂರು ವಾಸ ಅಂತ್ಯ: ತಮಿಳುನಾಡಿನತ್ತ ಹೊರಟ ವಿ.ಕೆ. ಶಶಿಕಲಾ

ಬೆಂಗಳೂರು: ಜೈಲು ವಾಸ ಮುಗಿಸಿರುವ ತಮಿಳರ ಚಿನ್ನಮ್ಮ, ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ.ಕೆ. ಶಶಿಕಲಾ ಇಂದು ತಮಿಳುನಾಡಿಗೆ ಹೊರಟಿದ್ದಾರೆ. ಇದರೊಂದಿಗೆ ಚಿನ್ನಮ್ಮನ ಕೆಲವು ವರ್ಷಗಳ ಬೆಂಗಳೂರು ವಾಸ ಇಂದಿಗೆ ಅಂತ್ಯವಾಗಿದೆ. ಕಳೆದೊಂದು ವಾರದಿಂದ ನಗರದ ಪ್ರೆಸ್ಟಿಜ್ ಗಾಲ್ಫ್ ಶೈರ್ ಕ್ಲಬ್ ನಲ್ಲಿ ಕಾಲ ಕಳೆದಿದ್ದ ಶಶಿಕಲಾ ಇಂದು ಬೆಳಗ್ಗೆ ತಮಿಳುನಾಡಿನತ್ತ ಹೊರಟಿದ್ದಾರೆ. ಅತ್ತಿಬೆಲೆ, ಹೊಸೂರು ಮಾರ್ಗವಾಗಿ ಶಶಿಕಲಾ ತಮಿಳುನಾಡಿಗೆ ಹೋಗಲಿದ್ದಾರೆ. ಮಾರ್ಗಮಧ್ಯೆ ಸಾವಿರಾರು ಮಂದಿ ಬೆಂಬಲಿಗರು ಸೇರಿದ್ದು, ಶಶಿಕಲಾ ಅವರನ್ನು …

Read More »

ಖಾತೆ ಬಗ್ಗೆ ಅಸಮಾಧಾನ ಹೊರಹಾಕಿದ ಅರವಿಂದ ಲಿಂಬಾವಳಿ

ಚಾಮರಾಜನಗರ (ಫೆ.07)  ಸಚಿವ ಸಂಪುಟ ವಿಸ್ತರಣೆ ನಂತರ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಲ್ಲವು ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗಗೊಂಡಿದೆ. ಅರಣ್ಯ ಖಾತೆ ನೀಡಿರುವುದಕ್ಕೆ ಸಚಿವ ಅರವಿಂದ ಲಿಂಬಾವಳಿ ಪರೋಕ್ಷವಾಗಿ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.  ಚಾಮರಾಜನಗರದಲ್ಲಿ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ನನಗೆ ಎರಡು ಖಾತೆ ಕೊಟ್ಟಿದ್ದಾರೆ. ರಾತ್ರಿ ಹೊತ್ತು ಕಾಡಿನಲ್ಲಿ ಇರಬೇಕು, ಹಗಲು ವೇಳೆ ನಾಡಿಗೆ ಬರಬೇಕು, ಕಾಡು ನಾಡು ಎರಡನ್ನೂ …

Read More »

ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಕಂಬಳ

ಕೋವಿಡ್ ನಿಯಮಗಳ ನಡುವೆ ಕರಾವಳಿಯಲ್ಲಿ ಕಂಬಳ ಕ್ರೀಡೆ ಅದ್ಧೂರಿಯಾಗಿ ನಡೆಯುತ್ತಿದೆ. ಮಂಗಳೂರು ನಗರ ಹೊರವಲಯದ ಐಕಳದಲ್ಲಿ ಎರಡನೇ ಕಂಬಳ ಕ್ರೀಡೆ ಭಾರೀ ವಿಜೃಂಭಣೆಯಿಂದ ಜರುಗಿದೆ. ಈ ಕಂಬಳ ಕೂಟ ಐತಿಹಾಸಿಕ ದಾಖಲೆಯ ಜೊತೆ ಭಾವನಾತ್ಮಕ ಸನ್ನಿವೇಶಕ್ಕೂ ಸಾಕ್ಷಿಯಾಗಿದೆ. ಹೌದು..ಮಂಗಳೂರು ಹೊರವಲಯದ ಐಕಳ ಎಂಬಲ್ಲಿ ನಡೆದ ಕಂಬಳ ಎರಡು ಘಟನೆಗಳಿಗೆ ಸಾಕ್ಷಿಯಾಯಿತು. ಒಂದು 100 ಮೀ ದೂರವನ್ನು 9.15 ಸೆಕೆಂಡಲ್ಲಿ ಬೈಂದೂರಿನ ವಿಶ್ವನಾಥ್ ಕೋಣಗಳನ್ನು ಓಡಿಸಿ ನೂತನ ದಾಖಲೆ ಮಾಡಿದ್ರೆ, ಇನ್ನೊಂದು …

Read More »

ಪ್ರಧಾನ ಮಂತ್ರಿ ಗಳಿಗೆ ರೈತರ ಬಗ್ಗೆ ಗೌರವ್ ಇದೆಯಾ …?H.D.K.

ರಾಮನಗರ  :  ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಉದ್ಘಾಟನಾ ಸಮಾರಂಭದಲ್ಲಿಯೂ ಭಾಗವಹಿಸಿದ್ದರು‌. ಈ  ಸಂದರ್ಭದಲ್ಲಿ ಮಾತನಾಡಿದ ಹೆಚ್ಡಿಕೆ ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ರಾಜಕೀಯ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುತ್ತಿದ್ದೇನೆ, ಧಾರ್ಮಿಕ ಗುರುಗಳೇ ಸಮಾಜದ ಪರವಾಗಿ ಹೋರಾಟಕ್ಕಿಳಿದಿದ್ದಾರೆ. ಹಾಗಾಗಿ ಇದು ದಾರಿತಪ್ಪುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕು‌.ಧಾರ್ಮಿಕ ಗುರುಗಳ ಭಾವನೆಗೂ ಸರ್ಕಾರ ಗೌರವ ಕೊಡಬೇಕು ಆ ನಿಟ್ಟಿನಲ್ಲಿ ಸರ್ಕಾರ ಸೂಕ್ತ …

Read More »

ಅಯೋಧ್ಯೆ ಆಯ್ತು, ಕಾಶಿ, ಮಥುರಾಗಳಲ್ಲಿನ್ನು ಮಂದಿರ ನಿರ್ಮಾಣ ಬಾಕಿ ಇದೆ; ಬಸನಗೌಡ ಯತ್ನಾಳ್

ವಿಜಯಪುರ (ಫೆ. 7): ರಾಮ ಮಂದಿರ ನಿರ್ಮಾಣದ ಕನಸು ಇದೀಗ ನನಸಾಗುತ್ತಿದೆ.  ಇನ್ನು ಕಾಶಿ ಮತ್ತು ಮಥುರಾಗಳಲ್ಲಿ ಮಂದಿರ ನಿರ್ಮಾಣ ಬಾಕಿ ಇದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ವಿಜಯಪುರದಲ್ಲಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಚ್ ಪರವಾಗಿ ಆಯೋಜಿಸಲಾಗಿದ್ದ ನಿಧಿ ಸಮರ್ಪಣಾ ಮಹಾ ಅಭಿಯಾನದ ಸಭೆಯಲ್ಲಿ ಅವರು ರಾಮ ಮಂದಿರ ನಿರ್ಮಾಣಕ್ಕೆ ರೂ. 5 ಲಕ್ಷ ದೇಣಿಗೆ ನೀಡಿ ಮಾತನಾಡಿದರು. ಎಲ್ಲವೂ …

Read More »