Breaking News

Uncategorized

ಅಪಾರ್ಟ್ ಮೆಂಟ್ ನಲ್ಲಿ ಜೂಜಾಟ 2 ಲಕ್ಷದ 10 ಸಾವಿರ ರೂಪಾಯಿ ಹಣ ವಶಕ್ಕೆ

ಬೆಂಗಳೂರು: ಅಪಾರ್ಟ್ ಮೆಂಟ್ ಒಂದರಲ್ಲಿ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ. ಕೃಷ್ಣ, ಮಹೇಶ್, ಮಂಜುನಾಥ್, ವಿಶ್ವನಾಥ್, ರಘು, ಪ್ರಸಾದ್, ಲಕ್ಷ್ಮಣ, ಹರೀಶ್ ಬಂಧಿತ ಆರೋಪಿಗಳು. ಅಪಾರ್ಟ್ ಮೆಂಟ್ ನ್ನೇ ತಮ್ಮ ಜೂಜಾಟ ಕೇಂದ್ರವನ್ನಾಗಿ ಆರೋಪಿಗಳು ಮಾಡಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 8 ಜನರನ್ನು ಬಂಧಿಸಿದ್ದು, 2 ಲಕ್ಷ 10 …

Read More »

ಶಿವಸೇನೆ ಪುಂಡರ ವಿರುದ್ಧ ಕಾಕತಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಬೆಳಗಾವಿ: ಮಹಾನಗರ ಪಾಲಿಕೆ ಬಳಿ ಇದ್ದ ಕನ್ನಡ ಧ್ವಜವನ್ನು ತೆರವು ಮಾಡಲು ಮುಂದಾಗಿದ್ದ ಶಿವಸೇನೆ ಪುಂಡರ ವಿರುದ್ಧ ಕಾಕತಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಬೆಳಗಾವಿ ಗಡಿ ಪ್ರವೇಶಿಸಿ ಪಾಲಿಕೆಯ ಬಳಿ ಸ್ಥಾಪಿಸಲಾಗಿದ್ದ ಕನ್ನಡ ಧ್ವಜವನ್ನು ತೆರವು ಮಾಡಲು ಯತ್ನಿಸಿದ್ದ ಶಿವಸೇನೆ ಅಧ್ಯಕ್ಷ ವಿಜಯ ದೇವಣೆ ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕದ ಗಡಿಯೊಳಗೆ ನುಗ್ಗಲು ಯತ್ನಿಸಿದ್ದ ಶಿವಸೇನೆ ಕಾರ್ಯಕರ್ತರನ್ನು ಜ.21ರಂದು ಪೊಲೀಸರು ಶಿನ್ನೊಳ್ಳಿ ಗಡಿಯಲ್ಲಿ ತಡೆದು …

Read More »

ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಆಯ್ಕೆ

ಹಾವೇರಿ: ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಆಯ್ಕೆಯಾಗಿದ್ದಾರೆ. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್ ಮಾಹಿತಿ ನೀಡಿದ್ದು, ಹಾವೇರಿಯ ಗುದ್ದಲ್ಯಪ ಹಳ್ಳಿಕೇರಿ ಕಾಲೇಜಿನ ಪಕ್ಕದಲ್ಲಿರುವ ವಿಶಾಲ ಮೈದಾನದಲ್ಲಿ ಫೆ.26, 27 ಹಾಗೂ 28ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕೋವಿಡ್ ನಿಯಮ ಸಡಿಲಿಸಿ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಮೊದಲ ದಿನವೇ 1 …

Read More »

ಬ್ರೆಜಿಲ್ ತಲುಪಿದ ಭಾರತದ ಕೋವಿಶೀಲ್ಡ್ : ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬ್ರೆಜಿಲ್ ಅಧ್ಯಕ್ಷ

ನವದೆಹಲಿ: ಭಾರತ ವಿವಿಧ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡುತ್ತಿದ್ದು, ಈಗಾಗಲೇ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್​​, ನೇಪಾಳಗೆ ಲಸಿಕೆ ಕಳುಹಿಸಿಕೊಟ್ಟಿರುವ ಭಾರತ ಇದೀಗ ಬ್ರೆಜಿಲ್​ಗೂ ಕೊವಿಶೀಲ್ಡ್​ ವ್ಯಾಕ್ಸಿನ್ ರವಾನೆ ಮಾಡಿದೆ. ಕೊವಿಶೀಲ್ಡ್ ಲಸಿಕೆ ಬ್ರೆಜಿಲ್​ಗೆ ತಲುಪಿದ್ದು, ಅಲ್ಲಿನ ಅಧ್ಯಕ್ಷ ಜೈರ್​ ಎ ಬೋಲ್ಸನಾರೋ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಜಾಗತಿಕ ಸಮಸ್ಯೆ ನಿರಾರಣೆ ಮಾಡಲು ಉತ್ತಮ ಪಾಲುದಾರನಾಗಿರುವ ಭಾರತ ಬ್ರೆಜಿಲ್​ಗೆ ಲಸಿಕೆ ರಫ್ತು ಮಾಡಲು ನಮಗೆ …

Read More »

ಗಾಜಿನ ಮನೆಯಲ್ಲಿ ಕುಳಿತು ಬಿಜೆಪಿ ಬೇರೊಂದು ಪಕ್ಷದತ್ತ ಕಲ್ಲು ಎಸೆಯುವುದು ಬೇಡ – ಸುದರ್ಶನ್

ಕೋಲಾರ ಜ.22 (ಹಿ.ಸ): ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವ ಬದಲು ಅವರ ಪಕ್ಷದ ಆಂತರಿಕ ವಿಷಯಗಳನ್ನು ಸರಿಪಡಿಸಿಕೊಳ್ಳಲು ಗಾಜಿನ ಮನೆಯಲ್ಲಿ ಕುಳಿತು ಇತರರ ಮೇಲೆ ಕಲ್ಲು ಎಸೆದರೆ ಕಲ್ಲು ಎಸೆದವರಿಗೆ ನಷ್ಠ. ಮತ್ತೊಂದು ಪಕ್ಷವನ್ನು ಟೀಕಿಸುವ ಮೊದಲು ಬಿಜೆಪಿ ತನ್ನ ಬಗ್ಗೆ ಗಮನಿಸಲಿ ಎಂದು ವಿಧಾನ ಪರಿಷತ್ ಮಾಜಜಿ ಉಪ ಸಭಾಪತಿ ವಿ.ಆರ್.ಸುದರ್ಶನ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು. ಕೋಲಾರ ತಾಲ್ಲೂಕಿನ ವೇಮಗಲ್‍ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, …

Read More »

ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ: ಉಮೇಶ್ ಕತ್ತಿ

ತುಮಕೂರು: ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ ಎಂದು ನೂತನ ಸಚಿವ ಉಮೇಶ್ ಕತ್ತಿಯವರು ಹೇಳಿಕೊಂಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯಲ್ಲಿ 75 ವರ್ಷದವರೆಗೂ ಮುಖ್ಯಮಂತ್ರಿಯಾಗುವ ಅವಕಾಶ ಇದೆ. ಎಲ್ಲರಿಗೂ ಮುಖ್ಯಮಂತ್ರಿಯಾಗುವ ಆಸೆ ಇರುವ ಹಾಗೆ ನನಗೂ ಇದೆ ಎಂದು ಹೇಳಿದ್ದಾರೆ. ನಾನೂ ಯತ್ನಾಳ್ ಇಬ್ಬರು ಹಿರಿಯರಿದ್ದೀವಿ. ಆದರೆ, ಯತ್ನಾಳ್ ಗಿಂತ ನಾನು ಸೀನಿಯರ್ ಎಂದ ಅವರು ಸದ್ಯ …

Read More »

ಅಪ್ಪ ಕೊಡಿಸಿದ ಸೈಕಲ್‌ನಲ್ಲೇ ಊರು ಸುತ್ತುವ ರವೀಂದ್ರ ಕುಮಾರ್‌ :36 ವರ್ಷಗಳಿಂದ ಸೈಕಲೇ ಆಧಾರ

ಕಾರ್ಕಳ: ಪೋಸ್ಟ್‌ ಮ್ಯಾನ್‌ ಎಂದರೆ ನಡೆದುಕೊಂಡು, ಸೈಕಲ್‌ನಲ್ಲೇ ಹೋಗುತ್ತಿದ್ದ ಕಾಲವಿತ್ತು. ಆದರೆ ಈಗ ಸೈಕಲ್‌ನಲ್ಲಿ ಹೋಗುವವರು ಇಲ್ಲವೇ ಇಲ್ಲ ಎಂದು ಹೇಳಬಹುದು. ಮೋಟಾರು ವಾಹನಗಳ ಭರಾಟೆಯ ಈ ದಿನಗಳಲ್ಲಿ ಅಪ್ಪನ ಮೇಲಿನ ಪ್ರೀತಿಗೆ, ಅವರೇ ತೆಗೆಸಿಕೊಟ್ಟ ಸೈಕಲನ್ನು ಏರಿ ಕಳೆದ 36 ವರ್ಷಗಳಿಂದ ಅಂಚೆ ಬಟೆವಾಡೆ ಮಾಡುವ ಪೋಸ್ಟ್‌ಮ್ಯಾನ್‌ ಒಬ್ಬರು ಬೈಲೂರಿನಲ್ಲಿದ್ದಾರೆ. ನಿಟ್ಟೆ ನಿವಾಸಿ ರವೀಂದ್ರ ಕುಮಾರ್‌ ಅವರು. ಬೈಲೂರಿನ ಅಂಚೆ ಕಚೇರಿಯಲ್ಲಿ ಪೋಸ್ಟ್‌ ಮ್ಯಾನ್‌. ವಯಸ್ಸು 58. 1984ರಲ್ಲಿ …

Read More »

ಎಲ್ಲಾ ಬಗೆಯ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಬಗೆಯ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ನಿರ್ದೇಶಿಸಿದೆ. ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲು ಹೈಕೋರ್ಟ್ ಸೂಚಿಸಿದೆ.ಎಲ್ಲಾ ಬಗೆಯ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಮೂರು ತಿಂಗಳ ಒಳಗೆ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

Read More »

ಪೊಕೊ ಸಿ3 : ಒಂದು ಮಿಲಿಯನ್ ಯೂನಿಟ್‌ಗಳ ಮಾರಾಟ

ಬೆಂಗಳೂರು: ಭಾರತದ 3ನೇ ಅತ್ಯಂತ ದೊಡ್ಡ ಆನ್‌ಲೈನ್ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ಪೊಕೊ, ಪೊಕೊ ಸಿ3 ಯ 1 ಮಿಲಿಯನ್‌ (10 ಲಕ್ಷ) ಗೂ ಅಧಿಕ ಯೂನಿಟ್‌ಗಳು ಮಾರಾಟವಾಗಿವೆ. ಇತ್ತೀಚೆಗೆ ಬಿಡುಗಡೆಯಾದ ಪೊಕೊ ಸಿ3 ರೂ.10000ಕ್ಕಿಂತ ಕಡಿಮೆ ಬೆಲೆಯ ದರಪಟ್ಟಿಯಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. 6.53 ಇಂಚು ಎಚ್.ಡಿ+ಎಲ್‌ಸಿಡಿ ಡಿಸ್ ಪ್ಲೇ, ಹೀಲಿಯೊ ಜಿ35 ಚಿಪ್‌ಸೆಟ್, 5,000 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಮಾಡಲ್‍ ಹಣಕ್ಕೆ ತಕ್ಕ …

Read More »

ವೇದಾವತಿ ಕಣಿವೆ ಮೂಲಕ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಜಲಾಶಯಕ್ಕೆ ನೀರು

ಹಾಸನ: ಮುಂದಿನ ಮಳೆಗಾಲದಲ್ಲಿ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಜಲಾಶಯಕ್ಕೆ ವೇದಾವತಿ ಕಣಿವೆ ಮೂಲಕ ತಾತ್ಕಾಲಿಕವಾಗಿ ನೀರು ಹರಿಸಲಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲೆಯ ಬೇಲೂರು ತಾಲೂಕಿನ ಎತ್ತಿನಹೊಳೆ ಯೋಜನಾ ಕಾಮಗಾರಿಯನ್ನು ಪರಿವೀಕ್ಷಿಸಿದ ಸಚಿವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಎತ್ತಿನಹೊಳೆ ಯೋಜನೆಯ ಹಂತ-1ರ ಕಾಮಗಾರಿಗಳು ಮತ್ತು ಹಂತ-2ರ 33 ಕಿ.ಮೀ.ವರೆಗಿನ ಗುರುತ್ವಾ ಕಾಲುವೆ ಕಾಮಗಾರಿಗಳನ್ನು ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ. ಪ್ರಾಯೋಗಿಕ ನೀರನ್ನು ವೇದಾವತಿ ಕಣಿವೆಯ …

Read More »