ಬೆಂಗಳೂರು – ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಅಂತರ ರಾಜ್ಯ ಜಲವಿವಾದಗಳು, ಸರ್ವೋಚ್ಚ ನ್ಯಾಯಾಲಯದಲ್ಲಿರುವ ದಾವೆಗಳ ಕುರಿತಂತೆ ಉನ್ನತ ಮಟ್ಟದ ಸಭೆ (ಫೆ.26) ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆಯಲಿದೆ. ಈ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಹಿಸಲಿದ್ದು, ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಅಡ್ವೊಕೇಟ್ ಜನರಲ್ ಮತ್ತು …
Read More »ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ.!
ಗೋಕಾಕ್: ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಫೆ.೨೭ ರಿಂದ ಮಾ.೨ ರ ವರಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.೨೭ ರಂದು ೧೦ ಗಂಟೆಗೆ ನಗರದ ಎನ್‌ಇಎಸ್ ಶಾಲಾ ಆವರಣದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು, ಸಂಜೆ ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಫೆ.೨೮ ರಂದು ಗೋಕಾಕ ತಾಲೂಕಿನ ಜಮನಾಳ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದ ಹತ್ತಿರ ಆಣೆಕಟ್ಟು ಸ್ಥಳ …
Read More »ಭಾರತೀಯ ರೈಲ್ವೆಯಿಂದ ಹೊಸ ಸೇವೆ ಆರಂಭ: ಪ್ರಯಾಣಿಕರಿಗೆ ʼಹೈಟೆಕ್ ಅನುಭವʼ ನೀಡಲು ʼವಿಸ್ಟಾಡೋಮ್ ಬೋಗಿʼಗಳ ಪರಿಚಯ
ನವದೆಹಲಿ: ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಪ್ರಯಾಣದ ಅನುಭವವನ್ನ ಸ್ಮರಣೀಯ ಮತ್ತು ಆರಾಮದಾಯಕ ಆಗಿಸೋಕೆ ಕಾಲಕಾಲಕ್ಕೆ ಹೊಸ ಸೌಲಭ್ಯಗಳನ್ನ ತರುತ್ತಿದೆ. ಸಧ್ಯ ರೈಲ್ವೇ ವಿಸ್ಟಾಡೋಮ್ ಬೋಗಿಗಳನ್ನ ಪರಿಚಯಿಸಿದ್ದು, ಇದು ಯುರೋಪಿಯನ್ ಶೈಲಿಯಲ್ಲಿ ತಯಾರಾಗಿದೆ. ಇದರಲ್ಲಿ ಪ್ರಯಾಣಿಕರು ಆರಾಮದಾಯಕವಷ್ಟೇ ಅಲ್ಲ ಹೈಟೆಕ್ ಪ್ರಯಾಣವನ್ನೂ ಆನಂದಿಸ್ಬೋದು. ಹೊಸ ವಿಸ್ಟಾಡೊಮ್ʼನ್ನ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಿರ್ಮಿಸಿದ್ದು, ವಿಸ್ಟಾಡೊಮ್ ಪ್ರವಾಸಿ ತರಬೇತುದಾರರು ಯುರೋಪಿಯನ್ ಶೈಲಿಯ ತರಬೇತುದಾರರಾಗಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ತಾಂತ್ರಿಕವಾಗಿ ಸುಧಾರಿತ ಸೌಲಭ್ಯಗಳನ್ನ …
Read More »ಧಾರವಾಡ; ಮಾಸ್ಕ್ ಹಾಕದಿದ್ದರೆ ಮತ್ತೆ ದಂಡ ಕಟ್ಟಲು ಸಿದ್ಧರಾಗಿ
ಧಾರವಾಡ, ಫೆಬ್ರವರಿ 25: “ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳದಿಂದ ರಸ್ತೆ, ರೈಲು ಮತ್ತು ವಿಮಾನದ ಮೂಲಕ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ವರದಿಯನ್ನು ಹೊಂದಿರಬೇಕೆಂದು” ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಕೊರೊನಾ ನಿಯಂತ್ರಣ, ಮಾಸ್ಕ್ ಧರಿಸದವರಿಂದ ದಂಡ ಸಂಗ್ರಹ ಮತ್ತು ಮದುವೆ, ಸಭೆ, ಸಮಾರಂಭಗಳಿಗೆ ಮಾರ್ಷಲ್‍ಗಳ ನೇಮಕಾತಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಮಹಾರಾಷ್ಟ್ರ ರಾಜ್ಯದಿಂದ ಬಸ್, ರೈಲು, ಲಾರಿ ಮೂಲಕ ಹಾಗೂ …
Read More »ಪರೀಕ್ಷೆ ಇಲ್ಲದೆ 9 ರಿಂದ 11ನೇ ತರಗತಿಯ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಸರ್ಕಾರ!
ಚೆನ್ನೈ : ಕೊರೊನಾ ಮಹಾಮಾರಿಯಿಂದಾಗಿ ಪ್ರಸಕ್ತ ಸಾಲಿನ 9, 10 ಹಾಗೂ ಪ್ರಥಮ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ, ಉತ್ತೀರ್ಣಗೊಳಿಸಿ ತಮಿಳುನಾಡು ಸಿಎಂ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ. ಅಲ್ಲಿನ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಈ ವರ್ಷ ಶೈಕ್ಷಣಿಕ ಕ್ಷೇತ್ರದ ಮೇಲೆ ಮಹಾಮಾರಿ ತನ್ನ ಪರಿಣಾಮ ಬೀರಿದ್ದು, ವಿದ್ಯಾರ್ಥಿಗಳ, ಶಿಕ್ಷಕರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಪಠ್ಯದಲ್ಲಿಯೂ ಕಡಿತಗೊಳಿಸಲಾಗಿದೆ. …
Read More »ಲಾರಿ-ಬಸ್ ಮುಖಾಮುಖಿ ಢಿಕ್ಕಿ: ಬಸ್ ಚಾಲಕ, ನಿರ್ವಾಹಕ ಸೇರಿ 7 ಜನರಿಗೆ ಗಾಯ
ಕಲಬುರಗಿ: ಲಾರಿಯ ಟೈಯರ್ ಸ್ಫೋಟವಾಗಿ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್ ಗೆ ಡಿಕ್ಕಿ ಹೊಡೆದ ಘಟನೆ ಜಿಲ್ಲೆಯ ವಾಡಿ ಸಮೀಪದ ರೇವೂರ್ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕ ಸೇರಿ ಬಸ್ ನಲ್ಲಿದ್ದ ಏಳು ಜನರು ಗಾಯಗೊಂಡಿದ್ದಾರೆ. ನಗರ ಸಾರಿಗೆ ಬಸ್ ಜೇವರ್ಗಿಯಿಂದ ಚಿತ್ತಾಪುರ ಕಡೆಗೆ ಹೊರಟ್ಟಿತ್ತು. 25 ರಿಂದ 30 ಜನ ಬಸ್ ನಲ್ಲಿದ್ದರು ಎನ್ನಲಾಗಿದೆ. ಈ ವೇಳೆ ಎದುರುಗಡೆಯಿಂದ ಲಾರಿಯ ಟೈಯರ್ ಬ್ಲಾಸ್ಟ್ …
Read More »ಭಾರತದಲ್ಲಿ ‘ವಾಟ್ಸ್ ಆಪ್’ ಬ್ಯಾನ್.?
ನವದೆಹಲಿ : ಕೇಂದ್ರ ಸರ್ಕಾರ ಗುರುವಾರ ಎಲ್ಲ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು 2021 ಅನ್ನು ಪ್ರಕಟಿಸಿದ್ದು, ಇದರಲ್ಲಿ ಮಧ್ಯವರ್ತಿ ಮಾರ್ಗದರ್ಶಿ ಸೂತ್ರಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ಯನ್ನು ಒಳಗೊಂಡಿದೆ. ಹೊಸ ನಿಯಮ ಜಾರಿಗೆ ಬರಲು ಸ್ವಲ್ಪ ಸಮಯ ಹಿಡಿಯಲಿದ್ದು, ಸಂದೇಶದ ಮೂಲವನ್ನು ಗುರುತಿಸುವ ದೃಢ ನಿಲುವನ್ನು ಸರ್ಕಾರ ಮುಂದಿಟ್ಟಿದೆ. ಅಂದರೆ ಸಂದೇಶಗಳಿಗೆ ಎಂಡ್ ಟು ಎಂಡ್ ಎನ್ ಕ್ರಿಪ್ಶನ್ ಬಳಸುವ ವಾಟ್ಸಾಪ್, ಸಿಗ್ನಲ್, ಟೆಲಿಗ್ರಾಂ ಮುಂತಾದ …
Read More »ಕೈಯಲ್ಲಿ ತಲ್ವಾರ್ ಹಿಡಿದು ಬರ್ತ್ ಡೇ ಆಚರಣೆ
ಬೆಳಗಾವಿ – ಇಲ್ಲಿಯ ಶಾಲಾ ಆವರಣವೊಂದರಲ್ಲಿ ಬರ್ತ್ ಡೇ ಆಚರಣೆ ನಡೆದಿದ್ದು, ವಿಡೀಯೋ ವೈರಲ್ ಆಗಿದೆ. ವಿಜಯನಗರ (ಹಿಂಡಲಗಾ) ಶಾಲಾ ಆವರಣದಲ್ಲಿ ಬುಧವಾರ ರಾತ್ರಿ ಸ್ಥಳೀಯ ಮುಖಂಡ ಜ್ಯೋತಿಬಾ (ಮುತ್ತುರಾಜ್) ಎನ್ನುವವರ ಬರ್ತ್ ಡೇ ಆಚರಿಸಲಾಗಿದೆ. ಜೆ ಬಾಸ್ ಎಂದೂ, ಜ್ಯೋತಿಬಾ ಅಣ್ಣಾ ಎಂದು ಬ್ಯಾನರ್ ಹಾಕಿಕೊಂಡು ಜೋರಾದು ಸಂಗೀತ, ನೃತ್ಯದೊಂದಿಗೆ ಬರ್ತ್ ಡೇ ಪಾರ್ಟಿ ನಡೆದಿದೆ. ನೂರಾರು ಜನರು ಸೇರಿ ಕುಣಿದು ಕುಪ್ಪಳಿಸಿ ಬರ್ತ್ ಡೇ ಆಚರಿಸಿದ್ದು, ಕೈಯಲ್ಲಿ …
Read More »ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ, ಒಟಿಟಿ ಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳು, ಒಟಿಟಿ ಪ್ಲಾಟ್ ಫಾರ್ಮ್, ಡಿಜಿಟಲ್ ಮಾಧ್ಯಮಗಳಿಗೆ ಗುರುವಾರ ಸರ್ಕಾರ ಹೊಸ ಮಾರ್ಗಸೂಚಿಯೊಂದನ್ನು ಪ್ರಕಟಿಸಿದೆ. ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿಗಳನ್ನು ಹಂಚಿಕೊಂಡರು. ಹೊಸ ಮಾರ್ಗಸೂಚಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಸಮೂಹ ಸಂವಹನ ಮಾಧ್ಯಮಗಳ ವಿಷಯದ ಮೇಲೆ ನಿಗಾ ಇಡುತ್ತವೆ ಎಂದರು. ದೇಶದಲ್ಲಿ ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ಎತ್ತಿ ತೋರಿಸಿದ ಸಚಿವರು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳು …
Read More »ವಿಡಿಯೋ ವೈರಲ್; ಗೋವಾದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ
ಪಣಜಿ, ಫೆಬ್ರವರಿ 25: ಗೋವಾದಲ್ಲಿ ಪದೇ ಪದೇ ಕನ್ನಡಿಗರ ಮೇಲೆ ದಬ್ಬಾಳಿಕೆ ಮುಂದುವರಿಯುತ್ತಲೇ ಇದೆ. ಪ್ರವಾಸಕ್ಕೆಂದು ತೆರಳಿದ್ದ ಕನ್ನಡಿಗರು ಬಯಲಲ್ಲಿ ಅಡುಗೆ ತಯಾರಿಸಿದ್ದಕ್ಕಾಗಿ ಅವರ ಮೇಲೆ ಗೋವಾ ಪುಂಡರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಬಾಗಲಕೋಟೆ ಮೂಲದ ಯುವಕರ ತಂಡ ಗೋವಾಕ್ಕೆ ಪ್ರವಾಸಕ್ಕೆ ತೆರಳಿತ್ತು. ಈ ವೇಳೆ ಒಂದು ಬಯಲಲ್ಲಿ ಚಿಕ್ಕ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಕೆಲ ಗೋವಾದ …
Read More »