ಗೋಕಾಕ : ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಸ್ಪಂಧಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ , ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಸರ್ಕಾರದ ವಿರುದ್ಧ ಗುಡುಗಿದರು. ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಧಿವೇಶನ ನಡೆಸುವ ಇಚ್ಛಾಶಕ್ತಿ ಇಲ್ಲ. ಆದ ಕಾರಣ ಅಧಿವೇಶನ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದ ಜನರ ಸಮಸ್ಯೆಗಳನ್ನು ಬಗೆ ಹರಿಸುವ ಮೂಲಕ, …
Read More »ಯುವಕ ಮಂಡಳಗಳಿಗೆ ಕ್ರೀಡಾ ಸಾಮಗ್ರಿ ವಿತರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ
ಗೋಕಾಕ : ಯಮಕನಮರಡಿ ಕ್ಷೇತ್ರದ ವಿವಿಧ ಗ್ರಾಮಗಳ ಯುವಕ ಮಂಡಳಗಳಿಗೆ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ನೀಡಿದ ಕ್ರೀಡಾ ಸಾಮಗ್ರಿಗಳನ್ನು ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಇಂದು ವಿತರಿಸಿದರು. ಹುಕ್ಕೇರಿ ತಾಲ್ಲೂಕಿನ ಬಗರನಾಳ ಗ್ರಾಮದ ಗಜಾನನ ಯುವ ಮಂಡಳ, ಶಹಾಬಂದರದ ಮೆಹಬೂಬ ಸುಬಾನಿ ಯುವಕ ಮಂಡಳ, ಬೆಳಗಾವಿ ತಾಲ್ಲೂಕಿನ ಮುಚ್ಚಂಡಿ ಗ್ರಾಮದ ಅಮರಜ್ಯೋತಿ ಯುವಕ ಮಂಡಳಕ್ಕೆ ಕ್ರೀಡಾ ಸಾಮಗ್ರಿಗಳನ್ನು …
Read More »50ಕ್ರೀಡಾ ಪಟುಗಳಿಗೆ 22 ಸರಕಾರಿ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳ ಕಿಟ್ ಗಳನ್ನು ಅಮರನಾಥ ಜಾರಕಿಹೊಳಿ ವಿತರಿಸಿದರು.
ಗೋಕಾಕ: ನಗರದ ಶಾಸಕರ ಕಾರ್ಯಲಯದ ಆವರಣದಲ್ಲಿ ಇಂದು ( ಸೋಮವಾರ) ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯಿಂದ SCP /TSP ಯೋಜನೆ ಅಡಿಯಲ್ಲಿ ರಾಜ್ಯ ವಲಯ ಕ್ರೀಡಾ ತರಬೇತಿಯಲ್ಲಿ ಭಾಗವಹಿಸಿದ 50ಕ್ರೀಡಾ ಪಟುಗಳಿಗೆ ಹಾಗೂ ಗೋಕಾಕ ಮತಕ್ಷೇತ್ರದ 22 ಸರಕಾರಿ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳ ಕಿಟ್ ಗಳನ್ನು ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಟಿ , ಆರ್ ಕಾಗಲ …
Read More »ಬೆಳಗಾವಿ ಉಪಚುನಾವಣೆಗೆ 13.54 ಕೋಟಿ ರು. ಖರ್ಚು
ಬೆಳಗಾವಿ (ಜು.05): ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸರ್ಕಾರದಿಂದ 13.54 ಕೋಟಿ ರು. ಖರ್ಚು ಆಗಿರುವುದು ಮಾಹಿತಿ ಹಕ್ಕಿನಿಂದ ಬಹಿರಂಗಗೊಂಡಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರು ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಅಧಿಕಾರಿಗಳು ನೀರಿನಂತೆ ಪೋಲು ಮಾಡಿದ್ದಾರೆ ಎಂದು ಆರೋಪಿಸಿದರು. ಯಾವುದೇ ಜನಪ್ರತಿನಿಧಿ ಅವಧಿಗೆ ಮುನ್ನ ಪಕ್ಷಾಂತರ ಮಾಡುವ, ರಾಜೀನಾಮೆ ನೀಡಿದ ಮೇಲೆ …
Read More »ಬೆಳಗಾವಿ : ದಾಂಪತ್ಯ ಜೀವಕ್ಕೆ ಕಾಲಿಟ್ಟ ಅಂಧ ಜೋಡಿ
ಬೆಳಗಾವಿ : ದೇವರ ಶಾಪಕ್ಕೆ ಗುರಿಯಾಗಿ ಹುಟ್ಟಿನಿಂದ ಅಂಧತ್ವದಲ್ಲೇ ಬದುಕು ಕಳೆಯುತ್ತಿದ್ದ ಅಂಧರಿಬ್ಬರು ಕೊರೊನಾ ನಿಯಮಾವಳಿಯಂತೆ ಸರಳ ಮದುವೆ ಮಾಡಿಕೊಂಡರು. ಇಲ್ಲಿನ ಹನುಮಾನ ನಗರದ ಭಕ್ತಿವಾಸ ಸಾಂಸ್ಕೃತಿಕ ಭವನದ ಕಾರ್ಯಾಲಯದಲ್ಲಿ ಉಷಾ ತಾಯಿ ಪೋತದಾರ್ ಫೌಂಡೇಶನ್‍ನ ಆಶ್ರಯದಲ್ಲಿ ಬೆಳಗಾವಿಯ ದೀಪಾ ಹಾಗೂ ಬೆಂಗಳೂರಿನ ರವಿ ಅಂಧ ಜೋಡಿಯ ಮಂಗಲ ಕಾರ್ಯ ನೆರವೇರಿತು. ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಬೆಳಗಾವಿಯ ಉಷಾ ಪೋತದಾರ್ ಫೌಂಡೇಶನ್ ಮುಖ್ಯಸ್ಥರು ಅಂಧ ಜೋಡಿಯ ಮದುವೆ …
Read More »ಚಾಂಪಿಯನ್ ಟಗರಿಗೆ ಬಂಗಾರದ ಬೆಲೆ; ಎಂಟು ಲಕ್ಷ ಕೊಡುತ್ತೇವೆ ಎಂದರೂ ಮಾರದ ಟಗರು ಮಾಲೀಕ
ಬಾಗಲಕೋಟೆ: ಒಂದು ಟಗರಿಗೆ ಅಬ್ಬಬ್ಬಾ ಎಂದರೆ ಎಷ್ಟು ಬೆಲೆ ಇರಬಹುದು. ಇಪ್ಪತ್ತು ಸಾವಿರ ಹೆಚ್ಚೆಂದರೆ ಐವತ್ತು ಇನ್ನು ಹೆಚ್ಚೆಂದರೆ ಒಂದು ಲಕ್ಷ. ಆದರೆ ಬಾಗಲಕೋಟೆಯ ಟಗರನ್ನು ಬರೊಬ್ಬರಿ ಎಂಟು ಲಕ್ಷಕ್ಕೆ ಖರೀದಿಗೆ ಕೇಳಿದ್ದಾರೆ. ಆದರೆ ಗಮನಿಸಬೇಕಾದ ಅಂಶ ಎಂದರೆ ಎಂಟು ಲಕ್ಷ ಕೊಡುವುದಕ್ಕೆ ಬಂದರೂ ಈ ಟಗರಿನ ಯಜಮಾನ ಮಾತ್ರ ಟಗರನ್ನು ಮಾರಾಟ ಮಾಡುವುದಕ್ಕೆ ತಯಾರಿಲ್ಲ. ಅಷ್ಟಕ್ಕೂ ಈ ಟಗರಿಗೆ ಇಷ್ಟೊಂದು ಬೆಲೆ ಬರುವುದಕ್ಕೆ ಕಾರಣ ಏನು? ಈ ಟಗರಲ್ಲಿ …
Read More »50 ಲಕ್ಷ ರೂ. ವೆಚ್ಚದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಯಾದವಾಡ ಹಾಗೂ ಸುತ್ತಲಿನ ಗ್ರಾಮಗಳ ರೋಗಿಗಳ ಅನುಕೂಲಕ್ಕೋಸ್ಕರ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿಯನ್ನು ಒಂದು ವಾರದೊಳಗೆ ಆರಂಭಿಸಲಾಗುವುದು. ಇದಕ್ಕಾಗಿ 50 ಲಕ್ಷ ರೂ.ಗಳನ್ನು ನೀಡುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ತಾಲೂಕಿನ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಿವಾರದಂದು ಭೇಟಿ ನೀಡಿ ಆಸ್ಪತ್ರೆಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ …
Read More »ಸರ್ಕಾರಿ ಹೊಸ ಮಾಧ್ಯಮಿಕ ಶಾಲೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಕೆ ಎಂ ಎಫ್ ನಿರ್ದೇಶಕರು ಅಮರನಾಥ ಜಾರಕಿಹೊಳಿ….
ಗೋಕಾಕ ಜು 4 : ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದ ಇಲ್ಲಿನ ಸರಕಾರಿ ಹೊಸ ಮಾಧ್ಯಮಿಕ ಶಾಲೆಗೆ ಆರ್ ಐ ಡಿ ಎಫ್ ಯೋಜನೆಯಡಿ 62.80 ಲಕ್ಷ ರೂ, ನ್ಯಾಯಾಂಗ ಇಲಾಖೆ ವತಿಯಿಂದ 15 ಲಕ್ಷ ರೂ ಹಾಗೂ ಕೆ ಆರ್ ಡಿ ಸಿ ಯೋಜನೆಯಡಿ 30 ಲಕ್ಷ ರೂ ಒಟ್ಟು ರೂ 1.7 ಕೋಟಿ ವೆಚ್ಚದಲ್ಲಿ ಮಂಜೂರಾದ 7 ಶಾಲಾ ಕೊಠಡಿ, 6 ಶೌಚಾಲಯಗಳಿಗೆ ಹಾಗೂ ಲೋಕೋಪಯೋಗಿ …
Read More »ಧಾರವಾಡದಲ್ಲಿ ರಕ್ತದ ಕೊರತೆ- ಗರ್ಭಿಣಿಯರಿಗೂ ಸಿಗುತ್ತಿಲ್ಲ ಬ್ಲಡ್
ಧಾರವಾಡ: ಜಿಲ್ಲೆಯಲ್ಲಿ ಯಾವುದೇ ಬ್ಲಡ್ ಬ್ಯಾಂಕ್ ಗೆ ಹೋಗಿ ಕೇಳಿದರೂ ‘ನೋ ಸ್ಟಾಕ್’ ಉತ್ತರ ಸಿಗುತ್ತಿದ್ದು, ಬಹುತೇಕ ಬ್ಲಡ್ ಬ್ಯಾಂಕ್ ಗಳು ದಾನಿಗಳಿಲ್ಲದೆ ಬಿಕೋ ಎನ್ನುತ್ತಿವೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಭರದಲ್ಲಿ ಯುವ ಜನತೆ ರಕ್ತ ದಾನ ಮಾಡುತ್ತಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನ್ ಹಾಕುವುದಕ್ಕೆ ಶುರು ಮಾಡಿದ ಬಳಿಕ ಜಿಲ್ಲೆಯಲ್ಲಿ ತೀರಾ ರಕ್ತದ ಕೊರತೆ ಉದ್ಭವಿಸಿದೆಯಂತೆ. ಮುಖ್ಯವಾಗಿ ರಕ್ತದಾನ ಮಾಡುವವರು ಇದೇ ವಯೋಮಾನದವರಾಗಿರುವ ಕಾರಣ ಈಗ ಲಸಿಕೆಯೇ …
Read More »ಪುಲ್ವಾಮಾ ಹುತಾತ್ಮನ ಅಂತ್ಯಕ್ರಿಯೆ- ಮಣ್ಣಲ್ಲಿ ಮಣ್ಣಾದ ಉಕ್ಕಲಿ ಗ್ರಾಮದ ವೀರ ಪುತ್ರ
ವಿಜಯಪುರ: ಪುಲ್ವಾಮಾದಲ್ಲಿ ಎರಡು ದಿನಗಳ ಹಿಂದೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರನ್ನು ಹೊಡೆದುರುಳಿಸುತ್ತಲೇ ಹುತಾತ್ಮನಾದ ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶೀರಾಯ ಬೊಮ್ಮನಹಳ್ಳಿ(35) ಅವರ ಅಂತ್ಯಕ್ರಿಯೆಯನ್ನು ಇಂದು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಉಕ್ಕಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಾರ್ವಜನಿಕರ ದರ್ಶನ ಅಂತ್ಯದ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ದರ್ಶನದ ಬಳಿಕ ಉಕ್ಕಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಸರ್ಕಾರಿ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಗಾಳಿಯಲ್ಲಿ …
Read More »