ಹೊಸಪೇಟೆ : ದಕ್ಷಿಣಕಾಶಿ ಖ್ಯಾತಿಯ ಹಂಪಿಯ ತುಂಗಭದ್ರಾ ನದಿಯಲ್ಲಿ ಬೃಹತ್ ಮೊಸಳೆಯೊಂದು ಬುಧವಾರ ಪ್ರತ್ಯಕ್ಷವಾಗಿದೆ. ಐತಿಹಾಸಿಕ ವಿರೂಪಾಕ್ಷ ದೇವಾಲಯದ ಬಳಿ ಹಾದು ಹೋಗಿರುವ ತುಂಗಭದ್ರಾ ನದಿಯ ಸ್ನಾನಘಟ್ಟದ ಸಮೀಪದ ನದಿ ನಡುವಿನ ಬಂಡೆಗಲ್ಲಿನ ಮೇಲೆ ಮೊಸಳೆ ಪ್ರತ್ಯಕ್ಷವಾಗಿದೆ. ಸುಮಾರು ಅರ್ಧ ತಾಸಿಗೂ ಆಧಿಕ ಕಾಲ ಮೊಸಳೆ ಬಂಡೆ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಸ್ಥಿತಿಯಲ್ಲಿ ಕಂಡು ಬಂದಿತು. ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಮೊಸಳೆ …
Read More »ಗೃಹ ಖಾತೆಯ ಕಿರಿಕಿರಿ ನನಗೆ ಮಾತ್ರ ಗೊತ್ತಿದೆ. ಸರಿಯಾಗಿ ನಿದ್ರೆ ಮಾಡಲೂ ಆಗದ ಸ್ಥಿತಿ ನನ್ನದು: ಅರಗ ಜ್ಞಾನೇಂದ್ರ
ಶಿವಮೊಗ್ಗ: ಗೃಹ ಖಾತೆಯ ಕಿರಿಕಿರಿ ನನಗೆ ಮಾತ್ರ ಗೊತ್ತಿದೆ. ಸರಿಯಾಗಿ ನಿದ್ರೆ ಮಾಡಲೂ ಆಗದ ಸ್ಥಿತಿ ನನ್ನದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅಳಲು ತೋಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮೊದಲು ಆರಾಮವಾಗಿದ್ದೆ. ಈಗ ಗೃಹ ಸಚಿವ ಸ್ಥಾನ ಅಲಂಕರಿಸಿದ ಮೇಲೆ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ರಾತ್ರಿಯೆಲ್ಲ ಪೊಲೀಸರು ಮಾಹಿತಿ ನೀಡಲು ಫೋನ್ ಮಾಡುತ್ತಾರೆ. ಹಾಗಂತ ಪಲಾಯನ ಮಾಡುವುದಿಲ್ಲ. ಕೊಟ್ಟ ಕುದುರೆಯನ್ನು ಇಳಿದರೆ ಶೂರನಾಗುವುದಿಲ್ಲ ಎಂಬ ಕಾರಣಕ್ಕೆ …
Read More »ರಾಜಧಾನಿಯಲ್ಲಿ ಮುಂದಿನ ಆಗಸ್ಟ್ 3೦ ರ ವರೆಗೆ ನೈಟ್ ಕರ್ಫ್ಯೂ ಮುಂದುವರಿಕೆ
ಬೆಂಗಳೂರು: ನಗರದಲ್ಲಿ ಆಗಸ್ಟ್ 30 ರ ವರೆಗೆ ನೈಟ್ ಕರ್ಫ್ಯೂ ವಿಸ್ತರಿಸಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು (ಆಗಸ್ಟ್ 17) ಆದೇಶ ಹೊರಡಿಸಿದ್ದಾರೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾದಂತ ರಾತ್ರಿ ಕರ್ಫ್ಯೂ ನಿರ್ಬಂಧ ವಿಧಿಸಲಾಗಿತ್ತು. ಜೊತೆಗೆ, ಗಡಿಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಹಾಕಲಾಗಿತ್ತು. ನೈಟ್ ಕರ್ಫ್ಯೂ ವಿಧಿಸಿರುವುದರಿಂದ ಮೆಟ್ರೋ ಸಂಚಾರ …
Read More »ಅಪ್ಪನ ಆಸೆ ಬೆನ್ನೆಲುಬಾಗಿ ನಿಂತ ಪುನೀತ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು : ಜೀವನದಲ್ಲಿ ಶಿಕ್ಷಣಕ್ಕಿಂತಲೂ ಜ್ಙಾನ ಮುಖ್ಯ, ಪುನೀತ್ ರಾಜಕುಮಾರ ವಿದ್ಯಾಭ್ಯಾಸ ಕಡಿಮೆ ಇದ್ದರೂ ಅವರ ಜ್ಞಾನ ಸಂಪತ್ತು ಹಿರಿದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಜಕುಮಾರ ಅಕಾಡಮಿಯ ಎಜುಕೇಶನ್ ಆಪ್ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು ಮನುಷ್ಯ ಕೇವಲ ಭೌಧಿಕ ವಿದ್ಯಾಭ್ಯಾಸ ಪಡೆಯುವುದು ಮುಖ್ಯವಲ್ಲ ಅದರ ಜೊತೆಗೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳುವುದು ಅಷ್ಟೇ ಮುಖ್ಯ ಎಂದು ತಿಳಿಸಿದರು. ಪುನೀತ್ ಶಾಲಾಭ್ಯಾಸದಲ್ಲಿ ಕಡಿಮೆ ಕಲೆತರೂ , ಲೋಕಜ್ಞಾನವನ್ನು ಪಡೆದುಕೊಂಡಿದ್ದಾರೆ. …
Read More »ಆಫ್ಘಾನ್ನಿಂದ ತಾಯ್ನಾಡಿಗೆ 120 ಮಂದಿ ಭಾರತೀಯರು- ರಣಾಂಗಣದಂತಾದ ಅಫ್ಘಾನಿಸ್ತಾನದಿಂದ ರಕ್ಷಣೆಯೇ ರೋಚಕ
ಅಫ್ಘಾನಿಸ್ತಾನವನ್ನ ಇದೀಗ ತಾಲಿಬಾನಿಗಳು ವಶಪಡಿಸಿಕೊಂಡು ತಮ್ಮದೇ ಸರ್ಕಾರ ರಚಿಸಲು ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಮಾನವ ಹಕ್ಕುಗಳಿಗೆ ಮಾರಕವಾದ ಸಿದ್ಧಾಂತಗಳನ್ನ ನಂಬಿರುವ ತಾಲಿಬಾನಿಗಳು ಅಫ್ಘಾನಿಸ್ತಾನದ ಜನರನ್ನ ಹಿಂಸಿಸಲು ಮುಂದಾಗಬಹುದು ಎಂಬ ಆತಂಕ ಜಗತ್ತಿನಾದ್ಯಂತ ಮನೆಮಾಡಿದೆ. ಈ ಮಧ್ಯೆ ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಒಬ್ಬರ ಮಾತುಗಳು ಎಂಥವರ ಹೃದಯವನ್ನೂ ಹಿಂಡುವಂತಿದೆ. : ಸರ್ಕಾರಿ ಅಧಿಕಾರಿಗಳಿಗೆ ‘ಸಾರ್ವತ್ರಿಕ ಕ್ಷಮಾದಾನ’ ಕೋರಿದ ತಾಲಿಬಾನಿಗಳು ತಾಲಿಬಾನಿಗಳು ನನ್ನನ್ನು ಕೊಲ್ತಾರೆ, ನಮ್ಮ ಕುಟುಂಬವನ್ನು ಕೊಲ್ತಾರೆ.. …
Read More »ಷ್ಟ್ರಗೀತೆ ಬಗ್ಗೆ ಕಾಮನ್ ಸೆನ್ಸ್ ಇಲ್ವಾ?’; ಸುದೀಪ್ಗೆ ನೆಟ್ಟಿಗನ ನೇರ ಪ್ರಶ್ನೆ: ತಪ್ಪೊಪ್ಪಿಕೊಂಡ ಕಿಚ್ಚನ ಉತ್ತರ ಸೂಪರ್
ರಾಷ್ಟ್ರಗೀತೆಯನ್ನು 48ರಿಂದ 52 ಸೆಕೆಂಡ್ ಒಳಗೆ ಹಾಡಬೇಕು. ಆದರೆ ಸುದೀಪ್ ಅವರು ಅಂದಾಜು 65 ಸೆಕೆಂಡ್ಗಳಲ್ಲಿ ಹಾಡಿದರು. ಇದನ್ನು ಗಮನಿಸಿದ ನೆಟ್ಟಿಗರೊಬ್ಬರು ಕೊಂಚ ಖಾರವಾಗಿ ಕಮೆಂಟ್ ಮಾಡಿದ್ದಾರೆ. ಆ.15ರಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು (75th Independence Day) ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ (National Anthem) ಹಾಡಿ, ಸಿಹಿ ಹಂಚುವ ಮೂಲಕ ಆಚರಣೆ ಜೋರಾಗಿತ್ತು. ಅನೇಕ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು. ನಟ ಕಿಚ್ಚ ಸುದೀಪ್ (Kichcha …
Read More »ಶಾಲೆ ಆರಂಭಕ್ಕೆ ಹೊಸ ಗೈಡ್ ಲೈನ್ ಪ್ರಕಟ
ಬೆಂಗಳೂರು: ಆಗಸ್ಟ್ 23ರಿಂದ ಶಾಲೆಗಳು ಆರಂಭವಾಗುತ್ತಿದ್ದು, ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಗಸ್ಟ್ 23ರಿಂದ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಲಿದ್ದು ಅರ್ಧ ದಿನ ಮಾತ್ರ ತರಗತಿಗಳು ನಡೆಯಲಿವೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಗೈಡ್ ಲೈನ್ ಪ್ರಮುಖಾಂಶಗಳು: ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10-1:30 ಗಂಟೆಯವರೆಗೆ ತರಗತಿಗಳು ನಡೆಯಲಿವೆ ಶನಿವಾರ ಬೆಳಿಗ್ಗೆ 10ರಿಂದ 12:30ವರೆಗೆ ತರಗತಿಗಳು ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ …
Read More »ಸಚಿವರ ಮೆರವಣಿಗೆ ವೇಳೆ ದುರಂತ; ಪೊಲೀಸ್ ಸಿಬ್ಬಂದಿ ಕಾಲಿನ ಮೇಲೆ ಹರಿದ ಜೀಪ್
ಬೆಂಗಳೂರು: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ಮೆರವಣಿಗೆ ನಡೆಸುವ ವೇಳೆಯಲ್ಲಿ ಅವಘಡವೊಂದು ಸಂಭವಿಸಿದ್ದು, ಪೊಲೀಸ್ ಸಿಬ್ಬಂದಿಯ ಕಾಲಿನ ಮೇಲೆ ಜೀಪ್ ಹರಿದಿದೆ. ಇಂದು ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಲು ದೆಹಲಿಯಿಂದ, ನಗರದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಚಿವರು ಆಗಮಿಸಿದ ವೇಳೆ ಅವರನ್ನು ಮೆರವಣಿಗೆ ಮೂಲಕ ಕರೆತರಲಾಗುತ್ತಿತ್ತು. ಸಾಕಷ್ಟು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಚಿಕ್ಕಜಾಲ ಪೋಲಿಸ್ ಠಾಣೆಯ ಸಿಬ್ಬಂದಿ ಶಿವಕುಮಾರ್ …
Read More »ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ ಸಿಎಂ
ಬೆಂಗಳೂರು: ವಿರೋಧಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ವೇದಿಕೆಯಿಂದಲೇ ಖಡಕ್ ಸಂದೇಶ ರವಾನಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ನನ್ನ ಬಗ್ಗೆ ಅನುಮಾನ, ಟೀಕೆಗಳು ವ್ಯಕ್ತವಾಗುತ್ತಿದೆ. ನನ್ನ ಬಗೆಗಿನ ಟೀಕೆಗಳು ನನಗೆ ಆಶಿರ್ವಾದ, ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಹೊಸ ಚಿಂತನೆ, ಹೊಸ ಹಾದಿ, ಹೊಸ ದಿಕ್ಸೂಚಿಯೊಂದಿಗೆ ನವ ಕರ್ನಾಟಕ ನಿರ್ಮಾಣದ ಸಂಕಲ್ಪ ಮಾಡಿದರು. ನನಗೆ ಕೇವಲ 20 …
Read More »75th Independence Day 2021 Live Updates: ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ
ನವದೆಹಲಿ, ಆಗಸ್ಟ್ 15: ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ದೇಶಪ್ರೇಮಿಗಳು ಸಜ್ಜಾಗಿದ್ದಾರೆ. ಅಮೃತ ಮಹೋತ್ಸವದ ಘಳಿಗೆಯನ್ನು ಇನ್ನಷ್ಟು ಚಂದವಾಗಿಲಸು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ದೇಶಾದ್ಯಂತ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಕೊರೊನಾ ಆತಂಕದಿಂದ ಈ ಸ್ವಾತಂತ್ರ್ಯೋತ್ಸವದ ಉತ್ಸಾಹಕ್ಕೆ ಅಲ್ಪ ಮಟ್ಟಿನ ಉತ್ಸಾಹ ಕಡಿಮೆಯಾಗಿದೆ. 74 ನೇ ಸ್ವಾತಂತ್ರ್ಯ ದಿನವನ್ನು ಕೂಡ ಕೊರೊನಾ ನಿಯಮಗಳನ್ನು ಪಾಲಿಸಿಯೇ ಆಚರಿಸಲಾಗಿತ್ತು. ಧ್ವಜಾರೋಹಣವಾದ ಬಳಿಕ ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನದ ಭಾಷಣ ಬೆಳಗ್ಗೆ 7.30ಕ್ಕೆ …
Read More »