Breaking News

Uncategorized

ಪ್ರಿಯಾಂಕ್‌ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿ, ಪೋಸ್ಟರ್‌ ಅಭಿಯಾನ.

ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆಗೆ ಕಾರಣರಾದ ಪ್ರಿಯಾಂಕ್‌ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿ ಇಂದು ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಪೋಸ್ಟರ್‌ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಶ್ರೀ ಸಿ. ಟಿ. ರವಿ, ಪ್ರಮುಖರಾದ ಶ್ರೀ ಜಗದೀಶ್‌ ಹಿರೇಮನಿ, ಶ್ರೀ ಉಮೇಶ್‌ ಶೆಟ್ಟಿ, ಮಾಧ್ಯಮ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಶ್ರೀ ಕರುಣಾಕರ ಖಾಸಲೆ, ಸಹ ಸಂಚಾಲಕರಾದ ಶ್ರೀ ಪ್ರಶಾಂತ್‌ ಕೆಡೆಂಜಿ …

Read More »

ಸಿ. ಟಿ. ರವಿ ಬಂಧನ ಪ್ರಕರಣದಲ್ಲಿ ಸತ್ಯಶೋಧನೆ ನಡೆಸುವಂತೆ, ಥಾವರ್ಚಂದ್ ಗೆಹ್ಲೋಟ್ಗೆ ದೂರು; ಛಲವಾದಿ ನಾರಾಯಣ ಸ್ವಾಮಿ

ಪರಿಷತ್‌ ಸದಸ್ಯರಾದ ಶ್ರೀ ಸಿ. ಟಿ. ರವಿ ಬಂಧನ ಪ್ರಕರಣದಲ್ಲಿ ಸತ್ಯಶೋಧನೆ ನಡೆಸುವಂತೆ, ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್‌ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ನಿರ್ದೇಶನದಂತೆ ಸಂವಿಧಾನ ಮತ್ತು ಕಾನೂನು ಉಲ್ಲಂಘನೆ ಮಾಡಿ ಪೊಲೀಸ್‌ ಇಲಾಖೆ ಮೂಲಕ ಅಧಿಕಾರದ ದುರ್ಬಳಕೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳುವಂತೆ ಇಂದು ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದ ಬಿಜೆಪಿ ನಿಯೋಗವು ಗೌರವಾನ್ವಿತ ರಾಜ್ಯಪಾಲರಾದ …

Read More »

ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವ ಎಕ್ಸ್‌ಪ್ರೆಸ್; ಮೈಸೂರು TO ಬಾಗಲಕೋಟೆ ಸಂಚಾರ.

ಬಸವ ಎಕ್ಸ್‌ಪ್ರೆಸ್, ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಪಶ್ಚಿಮ ರೈಲ್ವೇ ಜೋನ್ ಗೆ ಸೇರಿದ ಒಂದು ಎಕ್ಸ್‌ಪ್ರೆಸ್ ರೈಲು. ಈ ರೈಲು #Mysore Junction (MYS) ಮತ್ತು #Bagalkot (BGK) ನಡುವಿನ ದಿನನಿತ್ಯದ ಸೇವೆಯಾಗಿದೆ. ರೈಲಿನ ಸಂಖ್ಯೆ 17307/17308. ನಿರ್ಧಿಷ್ಟ ವಿವರಗಳು ರೈಲು ಸಂಖ್ಯೆಗಳು: 17307 (ಮೈಸೂರಿನ – ಬಾಗಲಕೋಟೆ) / 17308 (ಬಾಗಲಕೋಟೆ – ಮೈಸೂರಿನ) ಸೇವೆಯ ಪ್ರಕಾರ: ಎಕ್ಸ್‌ಪ್ರೆಸ್ ಪ್ರಥಮ ಸೇವೆ: 14 ನವೆಂಬರ್ 2002 ಪ್ರಸ್ತುತ ಕಾರ್ಯ …

Read More »

ವಿಜಯಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ: ಬಿಕೋ ಎನ್ನುತ್ತಿರುವ ನಗರ

  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆ‌ರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಅಹಿಂದ, ದಲಿತ, ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಕರೆ ನೀಡಿರುವ ವಿಜಯಪುರ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್‌ ಹಿನ್ನೆಲೆಯಲ್ಲಿ ವಿಜಯಪುರ ನಗರ ವ್ಯಾಪ್ತಿಯ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ನಗರ ಸಾರಿಗೆ ಬಸ್‌ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಅಂಗಡಿ, ಮಳಿಗೆಗಳು, ಮಾಲ್‌ಗಳು ಬಾಗಿಲು ತೆರೆದಿಲ್ಲ. ಜನರು ಅಗತ್ಯ ಕೆಲಸಕ್ಕಾಗಿ …

Read More »

ಗೃಹಿಣಿ ಆತ್ಮಹತ್ಯೆಗೆ ಶರಣು, ಪತಿ ವಿರುದ್ಧ ಕೊಲೆ ಆರೋಪ

ಬೆಳಗಾವಿ: ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಮತ್ತು ಅವರ ಮನೆಯವರ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಈ ಕಿರುಕುಳಕ್ಕೆ ಬೇಸತ್ತು ತಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ. ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಶನಿವಾರ ನಡೆದಿದೆ. ಸಾಂಬ್ರಾ ಗ್ರಾಮದ ಸವಿತಾ ಮಾರುತಿ ಜೋಗಾನಿ(32) ಮೃತ ಮಹಿಳೆ. ಶನಿವಾರ ಮಧ್ಯಾಹ್ನ 12.30ಕ್ಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ ಸಾಂಬ್ರಾದ ಮಾರುತಿ ಜೋಗಾನಿ ಜೊತೆಗೆ ರಾಕಸಕೊಪ್ಪ …

Read More »

ರೈತ ಉತ್ಪಾದಕ ಸಂಸ್ಥೆಯಿಂದ ಮಿಶ್ರ ಬೇಸಾಯವಾದ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಹಾಗೂ ಹಸು ಸಾಕಾಣಿಕೆಯ ಕುರಿತು ತರಬೇತಿ

ಹಾವೇರಿ : ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆಗಳ ಪ್ರಕರಣಗಳು ಅಧಿಕವಾಗುತ್ತಿವೆ. ಸರಿಯಾದ ಬೆಲೆ, ಸರಿಯಾದ ಇಳುವರಿ, ಸಮರ್ಪಕ ಗೊಬ್ಬರ, ಬಿತ್ತನೆ ಬೀಜ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅತಿಯಾದ ಮಳೆ, ಬರ ಸೇರಿದಂತೆ ಪ್ರಕೃತಿಯ ಹಲವು ವಿಕೋಪಗಳಿಂದ ಸಹ ರೈತರು ಸಾಲದ ಸುಳಿಗೆ ಸಿಲುಕಿ ನಲುಗುತ್ತಿದ್ದಾರೆ. ಆದರೆ ರೈತರು ಪರ್ಯಾಯ ಕೃಷಿಯಾದ ಮಿಶ್ರ ಬೇಸಾಯದ ಮೂಲಕ ಈ ರೀತಿಯ ಸಂಕಷ್ಟಗಳಿಂದ ಪಾರಾಗಬಹುದು ಎನ್ನುತ್ತಿದೆ ಹಾವೇರಿಯ ಗ್ರೀನ್​ಚಿಕ್​ ರೈತರ ಉತ್ಪಾದಕರ ಕಂಪನಿ. ಈ …

Read More »

ವೀರಶೈವ ಧರ್ಮದ ಮೂಲ ಸಿದ್ಧಾಂತ ಅರಿತರೆ ಧರ್ಮದಲ್ಲಿ ಸವಾಲುಗಳನ್ನು ಎದುರಿಸಬಹುದು: ರಂಭಾಪುರಿ ಶ್ರೀ

ತುಮಕೂರು: ಜಗದ್ಗುರು ಶ್ರೀ ರೇಣುಕಾಚಾರ್ಯರು ನಡೆಸಿಕೊಂಡು ಬಂದ ವೀರಶೈವ ಪರಂಪರೆಯಲ್ಲಿ ವೀರಶೈವ ಧರ್ಮದ ಮೂಲ ಸಿದ್ಧಾಂತವನ್ನು ಬಹಳಷ್ಟು ಜನ ತಿಳಿದುಕೊಂಡಿಲ್ಲ. ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನವೂ ಮಾಡುತ್ತಿಲ್ಲ. ಹೀಗಾಗಿ ಧರ್ಮದಲ್ಲಿ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಕಾಣುವಂತಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ತುಮಕೂರು ನಗರದಲ್ಲಿ ನಾಲ್ಕು ದಿನಗಳ ಕಾಲ ನಡೆದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ …

Read More »

ಹುಬ್ಬಳ್ಳಿ ಸಿಲಿಂಡರ್​ ಸ್ಫೋಟ: ಘಟನೆಯಿಂದ ಮನನೊಂದು ದೇಗುಲ ನೆಲಸಮಕ್ಕೆ ನಿರ್ಧಾರ

ಹುಬ್ಬಳ್ಳಿ, ಡಿಸೆಂಬರ್​ 29: ನಗರದ ಅಯ್ಯಪ್ಪ (Ayyappa) ಮಾಲಾಧಾರಿಗಳ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಒಂಬತ್ತು ಜನರ ಪೈಕಿ ಒಬ್ಬೊಬ್ಬರೆ ಪ್ರಾಣ ಬಿಡುತ್ತಿದ್ದಾರೆ. ಹೀಗಾಗಿ ಸದ್ಯ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಈ ಮಧ್ಯೆ 22 ವರ್ಷದ ಹಿಂದೆ ನಿರ್ಮಿಸಿದ್ದ ಅಯ್ಯಪ್ಪ ಸನ್ನಿಧಿ ನೆಲಸಮಕ್ಕೆ ನಿರ್ಧಾರ ಮಾಡಲಾಗಿದೆ. ನಗರದ ಅಚ್ಚವ್ವನ ಕಾಲೋನಿಯಲ್ಲಿ 22 ವರ್ಷದ ಹಿಂದೆ ಅಯ್ಯಪ್ಪ ಸನ್ನಿಧಿ ನಿರ್ಮಿಸಲಾಗಿತ್ತು. ಗಜಾನನ ಜಿತೂರಿ ಸ್ವಾಮೀಜಿ ಅವರು ಈ ಸನ್ನಿಧಿ ನಿರ್ಮಿಸಿದ್ದರು. ಇದೀಗ ಘಟನೆಯಿಂದ …

Read More »

ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕಾರಣ: ಆರ್.ಅಶೋಕ

ಬೆಂಗಳೂರು: “ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕಾರಣ. ಊರಿಗೆಲ್ಲಾ ಉಪದೇಶ ಮಾಡುವ ಪ್ರಿಯಾಂಕ್ ಖರ್ಗೆ ಮೊದಲು ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶನ ಮಾಡಲಿ” ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಖರ್ಗೆ ಕುಟುಂಬಕ್ಕೆ ಅಂಬೇಡ್ಕರ್ ಸಂವಿಧಾನ ಅನ್ವಯ ಆಗುವುದಿಲ್ಲವೇ?. ಪ್ರಿಯಾಂಕ್ ಖರ್ಗೆ ಕಲಬುರಗಿ ನಿಜಾಮನೂ ಅಲ್ಲ, ಅವರ ಅನುಯಾಯಿಗಳು ರಜಾಕಾರರೂ ಅಲ್ಲ. ಗುತ್ತಿಗೆದಾರ ಸಚಿನ್ …

Read More »

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾರೂ ಸಹ ದುರ್ವರ್ತನೆ ಮಾಡುವಂತಿಲ್ಲ;D.C.M.

ಬೆಂಗಳೂರು: ”ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾರೂ ಸಹ ದುರ್ವರ್ತನೆ ಮಾಡುವಂತಿಲ್ಲ. ಕಾನೂನು ಉಲ್ಲಂಘನೆ ಮಾಡುವಂತಿಲ್ಲ. ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದನ್ನು ಮನವಿ ಎಂದಾದರೂ ಪರಿಗಣಿಸಿ, ಇಲ್ಲವೇ ಎಚ್ಚರಿಕೆ ಎಂದಾದರೂ ಪರಿಗಣಿಸಿ” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್​ ಸಂದೇಶ ರವಾನಿಸಿದರು. ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ …

Read More »