Breaking News

Uncategorized

ಫ್ರೀಡಂ ಪಾರ್ಕ್‌ನಲ್ಲಿ ಕಬ್ಬು ಬೆಳೆಗಾರ ಪ್ರತಿಭಟನೆ: ಇಟ್ಟಿಗೆ ಹೊತ್ತು ಆಕ್ರೋಶ

ಬೆಂಗಳೂರು: ಕಬ್ಬಿಗೆ ‘ನ್ಯಾಯ ಸಮ್ಮತ ಹಾಗೂ ಪ್ರೋತ್ಸಾಹದಾಯಕ ದರ’ (ಎಫ್‌ಆರ್‌ಪಿ) ನಿಗದಿಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಬುಧವಾರ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.   ಅರೆಬೆತ್ತಲೆಯಾಗಿ ತಲೆಯ ಮೇಲೆ ಸಿಮೆಂಟ್‌ ಇಟ್ಟಿಗೆ ಹೊತ್ತು ಪ್ರತಿಭಟಿಸಿದರು. ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಗುರುವಾರ ಸಂಜೆಯೊಳಗೆ ಕಬ್ಬು ಬೆಳೆಗಾರರ ಬೇಡಿಕೆ …

Read More »

ಗಡಿ ವಿವಾದ: ರಾಜಕೀಯ ಮಾತುಕತೆ ಸಾಧ್ಯವಿಲ್ಲ- H.K.ಪಾಟೀಲ

ಗದಗ: ‘ಗಡಿ ವಿಷಯವಾಗಿ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆದಿದೆ. ಅಲ್ಲಿನ ಕೆಲವು ರಾಜಕಾರಣಿಗಳು ಈ ವಿಷಯವನ್ನು ಅನವಶ್ಯಕವಾಗಿ ಎತ್ತಿದ್ದಾರೆ. ಯಥಾ ಸ್ಥಿತಿ ಕಾಯ್ದುಕೊಳ್ಳುವುದು ಇಲ್ಲವೇ ಮಹಾಜನ ವರದಿ ಜಾರಿಗೆ ಆಗ್ರಹಿಸಬೇಕು ಎಂಬುದು ರಾಜ್ಯದ ನಿಲುವಾಗಿದೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ.ಪಾಟೀಲ ಒತ್ತಾಯಿಸಿದರು.   ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಈಗಾಗಲೇ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಈ ಕುರಿತು ಸರ್ನಾನುಮತದ ನಿರ್ಣಯ ಮಾಡಿದ್ದೇವೆ. ಯಾವುದೇ …

Read More »

ಗೋಕರ್ಣಕ್ಕೆ ವಿದೇಶಿ ಪ್ರವಾಸಿಗರ ಆಗಮನ: ಕೋವಿಡ್‌ ಕಾರಣದಿಂದ ಮಂಕಾಗಿದ್ದ ಟೂರಿಸಂ

ಗೋಕರ್ಣ: ‍ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಗೋಕರ್ಣಕ್ಕೆ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಆರಂಭಿಸಿದ್ದಾರೆ. ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ನೆಲಕಚ್ಚಿದ್ದ ಪ್ರವಾಸೋದ್ಯಮವು, ವಿದೇಶಿಗರ ಬರುವಿಕೆಯಿಂದ ಹೊಸ ಹುರುಪು ಹುಟ್ಟಿಸಿದೆ.   ಶಿವನ ನಾಡಿಗೆ ವಿದೇಶಿಗರು ಮನಸೋತಿದ್ದಾರೆ. ಇಲ್ಲಿಯ ಪ್ರಾಕೃತಿಕ ಸೌಂದರ್ಯ, ಸಂಪ್ರದಾಯಬದ್ಧ ಆಚರಣೆಗಳು ಪ್ರತಿ ವರ್ಷವೂ ಬರುವಂತೆ ಪೇರೇಪಿಸುತ್ತಿದೆ. ಓಂ ಬೀಚ್, ಕುಡ್ಲೆ ಬೀಚ್ ಹಾಗೂ ಮೇನ್ ಬೀಚ್‌ಗಳಲ್ಲಿ ವಿದೇಶಿಗರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಬ್ರಿಟನ್, ಫ್ರಾನ್ಸ್, ಇಟಲಿ, …

Read More »

ಚುನಾವಣೆ ಬರುತ್ತಿದ್ದಂತೆ ಕಾಂಗ್ರೆಸ್ ಟೂಲ್‌ಕಿಟ್ ಸುದ್ದಿಗಳು ಆರಂಭವಾಗಿವೆ: ಬಿಜೆಪಿ

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನ ಟೂಲ್‌ಕಿಟ್ ಸುದ್ದಿಗಳು ಆರಂಭವಾಗಿವೆ. ಅದರಲ್ಲಿ ಒಂದು ‘ಪ್ರತ್ಯೇಕ ಮುಸ್ಲಿಂ ಕಾಲೇಜು’ ಸುದ್ದಿ ಎಂದು ಬಿಜೆಪಿ ಆರೋಪಿಸಿದೆ. ಮುಸ್ಲಿಂ ಕಾಲೇಜು ಸ್ಥಾಪನೆ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ‘ಸರ್ಕಾರದಿಂದ ಈ ಬಗ್ಗೆ ಯಾವುದೇ ಪ್ರಸ್ತಾಪವೂ ಇಲ್ಲ, ಕಾಂಗ್ರೆಸ್‌ಗೆ ಕೆಲಸವೂ ಇಲ್ಲ’ ಎಂದು ಕಿಡಿಕಾರಿದೆ.   ಪ್ರತ್ಯೇಕ ಕಾಲೇಜು ತೆರೆಯುವ ಬಗ್ಗೆ ಚರ್ಚೆಯಾಗಿಲ್ಲ: ಸಿಎಂ ಬೊಮ್ಮಾಯಿ ವಕ್ಫ್ ಮಂಡಳಿ ಅಧ್ಯಕ್ಷರು ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕವಾಗಿ ಕಾಲೇಜು ತೆರೆಯಲಿದ್ದು, …

Read More »

ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಗೆ ಥಳಿತ: ಪೊಲೀಸರಿಂದ ರಾಜ್ಯ ದ್ರೋಹ -ಎಚ್‌ಡಿಕೆ

ಬೆಂಗಳೂರು: ಬೆಳಗಾವಿಯ ಗೋಗಟೆ ಕಾಲೇಜಿನಲ್ಲಿ ಬುಧವಾರ ನಡೆದ ಕಾಲೇಜು ಹಬ್ಬದಲ್ಲಿ ಕನ್ನಡ ಧ್ವಜ ಹಿಡಿದು ಕುಣಿದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿರುವುದನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖಂಡಿಸಿದ್ದಾರೆ. ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ನಡೆದಿರುವ ಹಲ್ಲೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ದೂರು ಕೊಡಲು ಹೋದ ಆ ವಿದ್ಯಾರ್ಥಿ ಮೇಲೆ ಪೊಲೀಸರು …

Read More »

ಟಿಳಕವಾಡಿಯ ರೈಲ್ವೆ ಮೂರನೇ ಗೇಟ ಮೇಲ್ಸೇತುವೆಯಲ್ಲಿ ,ಕಾರು- ಬೈಕುಗಳ ಮಧ್ಯೆ ಡಿಕ್ಕಿ: ಮೂವರಿಗೆ ಗಾಯ

ಬೆಳಗಾವಿ: ಇಲ್ಲಿನ ಟಿಳಕವಾಡಿಯ ರೈಲ್ವೆ ಮೂರನೇ ಗೇಟಿನ ರಸ್ತೆ ಮೇಲ್ಸೇತುವೆಯಲ್ಲಿ ಗುರುವಾರ ಕಾರ್ ಹಾಗೂ ಎರಡು ಬೈಕುಗಳ ಮಧ್ಯೆ ಮುಖಿಮುಖಿ ಡಿಕ್ಕಿ ಸಂಭವಿಸಿ ಮೂವರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ಕಡೆಯಿಂದ ಗೋವಾ ಕಡೆಗೆ ಹೊರಟಿದ್ದ ಕಾರ್ ಎದುರಿನಿಂದ ಬರುತ್ತಿದ್ದ ಎರಡು ಬೈಕುಗಳಿಗೆ ಗುದ್ದಿತು. ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಪುಟಿದು, ರಸ್ತೆ ತಡೆಯ ಮೇಲಿಂದ ಹಾರಿ 15 ಅಡಿ ಅಂತರದಿಂದ ಕೆಳಗೆ ಬಿದ್ದರು. ಕಾರ್ ಕೂಡ ರಸ್ತೆ …

Read More »

ಕೌಟುಂಬಿಕ ಕಲಹ: ಸತಿ-ಪತಿಯನ್ನು ಒಂದು ಮಾಡಿದ ಚಿಕ್ಕೋಡಿ ನ್ಯಾಯಾಲಯ

ಚಿಕ್ಕೋಡಿ:ಪತ್ನಿ-ಪತಿ ನಡುವೆ ಕೌಟುಂಬಿಕ ಕಲಹದ ಹಿನ್ನಲೇಯಲ್ಲಿ ಸತಿ ಪತಿಗಳನ್ನು ಒಂದು ಮಾಡಿದ ನ್ಯಾಯಾಲಯ. ಚಿಕ್ಕೋಡಿ ಹಿರಿಯ ದಿವಾಣಿ ನ್ಯಾಯಾಲಯವು ನ್ಯಾಯವಾದಿಗಳ ಸಮ್ಮುಖದಲ್ಲಿ ಕಳೆದ ಮೂರು ವರ್ಷಗಳಿಂದ ಬೇರೆ ಬೇರೆಯಾಗಿದ್ದ ಪತಿ-ಪತ್ನಿಯನ್ನು ನ್ಯಾಯಾಲಯದಲ್ಲಿ ಸಂಧಾನ ಮಾಡುವ ಮೂಲಕ ಇಬ್ಬರನ್ನು ಒಂದು ಮಾಡಿದೆ.   ಪಟ್ಟಣ ರಾಮನಗರದ‌ ನಿವಾಸಿಗಳಾದ ಸತೀಶ ಕೋಮಾರಿ ಹಾಗೂ ಪಾರ್ವತಿ ಸತೀಶ ಕೋಮಾರಿ ಅವರು ಕಳೆದ ಮೂರು ವರ್ಷಗಳಿಂದ ಕೌಟುಂಬಿಕ ಕಲಹದ‌ ಹಿನ್ನಲೆಯಲ್ಲಿ ದೂರಾಗಿದ್ದರು.ಈ ಕುರಿತು ಪತ್ನಿ ಪಾರ್ವತಿ …

Read More »

H.D.K.ಸಿಎಂ ಆಗ್ತಾರೆ: C.M. ಇಬ್ರಾಹಿಂ

: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಶಕ್ತಿ ಏನೆಂದು ತಿಳಿಯುತ್ತದೆ. ಎಚ್‌.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದರಲ್ಲಿ ಯಾವ ಸಂಶಯವೂ ಬೇಡ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.   ಅವರು ಮಂಗಳವಾರ ಪಟ್ಟಣದ ಲೋಕಮಾನ್ಯ ಸಭಾಂಗಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅತ್ಯಲ್ಪ ಅವಧಿಗೆ ಜೆಡಿಎಸ್‌ ಸರ್ಕಾರವಿದ್ದಾಗ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಪ್ರತಿ ಪಂಚಾಯತ್‌ ವ್ಯಾಪ್ತಿಯಲ್ಲಿ ಇಂಟರ್‌ ನ್ಯಾಶನಲ್‌ ಮಟ್ಟದ ಶಾಲೆ ಆರಂಭಿಸುವ ಯೋಜನೆ ಇದೆ. …

Read More »

ಇಡೀ ರಾಜ್ಯಾದ್ಯಂತ 60 ರೌಡಿಗಳು ಬಿಜೆಪಿ ಸೇರುತ್ತಿದ್ದಾರಂತೆ : ಕಾಂಗ್ರೆಸ್ ಆರೋಪ

ಬೆಂಗಳೂರು : ಇಡೀ ರಾಜ್ಯಾದ್ಯಂತ 60 ರೌಡಿಗಳು ಬಿಜೆಪಿ ಸೇರುತ್ತಿದ್ದಾರಂತೆ, ಈ ಬಗ್ಗೆ ಬಿಜೆಪಿಯಲ್ಲಿ ಚರ್ಚೆಯೂ ಆಗಿದೆಯಂತೆ ಎಂದು ಕಾಂಗ್ರೆಸ್ ಗುರುವಾರ ಗಂಭೀರ ಆರೋಪ ಮಾಡಿ ಭಾರಿ ಆರೋಪಗಳನ್ನು ಮಾಡಿ ಸಮರ ಸಾರಿದೆ. ಕೆಪಿಸಿಸಿ‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಹಾಗೂ ರಮೇಶ್ ಬಾಬು ಗಂಭೀರ ಆರೋಪ ಮಾಡಿದ್ದಾರೆ.   ರಾಜ್ಯದಲ್ಲಿ 47 ಜನ ಬಿಜೆಪಿ ಎಂಎಲ್‌ಎ ಗಳ ಮೇಲೆ ಕ್ರಿಮಿನಲ್ ಕೇಸ್ ಗಳಿವೆ, ಮೂರು ಜನ …

Read More »

ಯುವಕನನ್ನು ವಂಚಿಸಿದ್ದ ಹಾಸನದ ಫೇಸ್‌ಬುಕ್‌ ಗೆಳತಿ ಬಂಧನ

ವಿಜಯಪುರ: ಫೇಸ್‌ಬುಕ್‌ನಲ್ಲಿ ಪರಿಚಿತಳಾಗಿ, ಮದುವೆ ಆಗುವುದಾಗಿ ನಂಬಿಸಿ ವಿಜಯಪುರ ಜಿಲ್ಲೆಯ ಯುವಕನಿಂದ ಆನಲೈನ್ ಮೂಲಕ 39 ಲಕ್ಷ ರೂ. ವಂಚಿಸಿದ್ದ ಹಾಸನ ಜಿಲ್ಲೆಯ ಗೃಹಿಣಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿ ಮೂಲದ ಕೆ.ಆರ್. ಮಂಜುಳಾ ಸ್ವಾಮಿ ಬಂಧಿತ ಗೃಹಿಣಿ. ವಂಚನೆ ಕೃತ್ಯದಲ್ಲಿ ಪತ್ನಿಯೊಂದಿಗೆ ಸಹಕರಿಸಿದ್ದ ಪತಿ ಸ್ವಾಮಿ ಬಸವರಾಜ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ. ಗೃಹಿಣಿಯಿಂದ ವಂಚನೆಗೀಡಾದ ಯುವಕ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು …

Read More »