Breaking News

Uncategorized

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ; ಪ್ರಹ್ಲಾದ ಜೋಶಿ

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ. ಇದಕ್ಕೆ ಮೈಸೂರ ಘಟನೆ ದೊಡ್ಡ ಉದಾಹರಣೆ. ಮೈಸೂರ ಗಲಭೆ ಪೂರ್ವ ತಯಾರಿ ಇರದೆ ಆಗಲು ಸಾಧ್ಯ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದಕ್ಕೆ ಇಷ್ಟು ದೊಡ್ಡ ಗಲಾಟೆ ಅಂದ್ರೆ ಹೇಗೆ. ನನಗೆ ಈ ವಿಷಯದ ಸಂಪೂರ್ಣವಾಗಿ ಮಾಹಿತಿ ಇಲ್ಲ. ಆದ್ರೆ ಗಲಭೆಗೆ ಎಲ್ಲ ತಯಾರಿ …

Read More »

ಖಾಸಗಿ ಶಾಲೆಯಲ್ಲಿ 61 ಲಕ್ಷ ರೂ. ಅವ್ಯವಹಾರದ ಆರೋಪದ ಕಿತ್ತಾಟ ನಕಲಿ ಸಹಿ ಮಾಡಿ ಲೆಕ್ಕ ಕೇಳಲು ಹೋದವರನ್ನೇ ಮನೆಗೆ ಕಳುಹಿಸಿದ್ರು..!

ಗೋಕಾಕ : ಶಾಲೆಯ ಚೆರಮನ್ನರು ಜೊತೆ ಶಾಲಾ ಕಾರ್ಯದರ್ಶಿ ಮತ್ತು ಪ್ರಿನ್ಸಿಪಾಲ ಸೇರಿಕೊಂಡು ಅಂದಾಜು 61 ಲಕ್ಷರೂ ಹಣದ ಅವ್ಯವಹಾರ ಮಾಡಿದ್ದಾರೆ ಎನ್ನಲಾದ ಆರೋಪವೊಂದು ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಕೇಳಿ ಬಂದಿದೆ. ಹೌದು ಪಾಮಲದಿನ್ನಿಯಲ್ಲಿ ಇರುವ ಶ್ರೀ ಬೀರಸಿದ್ದೇಶ್ವರ ಕನ್ನಡ ಮಾದ್ಯಮ ಆದರ್ಶ ಹಿರಿಯ ಪ್ರಾಥಮಿಕ‌ ಶಾಲೆ ಪಾಮಲದಿನ್ನಿ, 1996 ನೆ ಇಸವಿಯಲ್ಲಿ ಪ್ರಾರಂಬಿಸಿದ್ದು ಅಂದಿನಿಂದ ಇಲ್ಲಿಯವರೆಗೆ ಶಾಲೆಗೆ ಬರುವ ಪೀ,ಖರ್ಚಿನ ಬಗ್ಗೆ ಲೆಕ್ಕಪತ್ರವನ್ನು ಕೆಲವು ಸದಸ್ಯರಿಗೆ ಅದ್ಯಕ್ಷರು,ಕಾರ್ಯದರ್ಶಿ …

Read More »

ಮಕ್ಕಳ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಶಾಸಕಾಂಗಕ್ಕೆ ಸೂಚನೆ.

ಬೆಂಗಳೂರು: 1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜನನ ನೋಂದಣಿಯಲ್ಲಿ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಶಾಸಕಾಂಗಕ್ಕೆ ಸೂಚಿಸಿದೆ. ತಂದೆ ತಾಯಿಯ ಗುರುತು ಧೃಡಪಟ್ಟ ನಂತರ ಹೆಸರು ಬದಲಾವಣೆ ಮಾಡಬಹುದಾಗಿದೆ. ಆದರೆ ಹೊಸ ಹೆಸರಿನೊಂದಿಗೆ, ಹಳೆಯ ಹೆಸರೂ ದಾಖಲೆಯಲ್ಲಿರಬೇಕು. ಇದರಿಂದ ದುರುದ್ದೇಶದ ಹೆಸರು ಬದಲಾವಣೆ ತಪ್ಪಿಸಬಹುದಾಗಿದೆ ಎಂದು ತಿಳಿಸಿದೆ. ನ್ಯಾ.ಎನ್.ಎಸ್.ಸಂಜಯ್ ಗೌಡ ಅವರಿದ್ದ ಹೈಕೋರ್ಟ್ ಪೀಠ  ಆದೇಶ ಹೊರಡಿಸಿದೆ. ಅದ್ರಿತ್ ಭಟ್ ಹೆಸರನ್ನು …

Read More »

ಭಾರತೀಯ ಪಾರಂಪರಿಕ ಜ್ಞಾನದ ಜೊತೆಗೆ ವಿಜ್ಞಾನ ಸಮನ್ವಯಗೊಳ್ಳಲಿ : ಪ್ರೊ. ವೆಂಕಪ್ಪಯ್ಯ ದೇಸಾಯಿ

ಹಳೆಯ ಬೇರನ್ನು ಹೊಂದಿರುವ ವಿಶಾಲವಾದ ಮರದ ಚಿಗುರು ಸೊಗಸಾಗಿರುವಂತೆ ಭಾರತೀಯ ಪುರಾತನ ಜ್ಞಾನ ಪರಂಪರೆಯೊಂದಿಗೆ ಆಧುನಿಕ ವಿಜ್ಞಾನ ಸಮನ್ವಯಗೊಂಡರೆ ಮಾಲಿನ್ಯ ರಹಿತ ಹಾಗು ಸುಸ್ಥಿರ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವಾಗುತ್ತದೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ ಅಭಿಮತ ವ್ಯಕ್ತಪಡಿಸಿದರು. ಅವರು ಇಂದು ನಾಗನೂರು ರುದ್ರಾಕ್ಷಿ ಮಠ, ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಟ್ರಾನ್ಸ್ ಡಿಸಿಪ್ಲೆನೆರಿ ಲರ್ನಿಂಗ್ ಸಲ್ಯೂಷನ್ ಇವರ ಸಹಯೋಗದೊಂದಿಗೆ ಹಮ್ಮಿಕೊಂಡ ಸ್ಟೀಮ್ ಹೆಚ್ ತರಬೇತಿ …

Read More »

ಪುಲ್ವಾಮಾದಲ್ಲಿ ಹುತಾತ್ಮ ಯೋಧರ ಬಲಿದಾನ ಎಂದಿಗೂ ಅಮರ; ಸಿ.ಎ.ಪಿ.ಎಫ್ ಡೆಪ್ಯೂಟಿ ಕಮಾಂಡೆಂಟ್ ಮನೀಷ್ ಕುಮಾರ್

ಬೆಳಗಾವಿ: ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರು ಎಂದಿಗೂ ಅಮರ. ಅವರ ಕುಟುಂಬಸ್ಥರೊಂದಿಗೆ ತಾವು ಸದಾ ಜೊತೆಯಾಗಿದ್ದೇವೆ ಎಂದು ಸಿ.ಎ.ಪಿ.ಎಫ್ ಡೆಪ್ಯೂಟಿ ಕಮಾಂಡೆಂಟ್ ಮನೀಷ್ ಕುಮಾರ್ ತಿಳಿಸಿದರು. ಇಂದು ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಎಕ್ಸ್ ಸಿ.ಎ.ಪಿ.ಎಫ್ ವೆಲಫರ ಅಸೋಸಿಯೇಷನನ ವತಿಯಿಂದ ಬೆಳಗಾವಿಯಲ್ಲಿ ಪುಲ್ವಾಮಾ ಘಟನೆಯಲ್ಲಿ ಹುತಾತ್ಮರಾರ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಜಿ ಸೈನಿಕರ ಸಂಘಟನೆಯ ಅಧ್ಯಕ್ಷರಾದ ಡಾ. ರವಿ ಪಾಟೀಲ್, ಸಾಮಾಜೀಕ ಕಾರ್ಯಕರ್ತ ಸುಭಾಷ್ ಪಾಟೀಲ್, ಮುರುಘೇಂದ್ರಗೌಡ …

Read More »

ಶಬ್-ಎ-ಬರಾತ್, ಇಸ್ಲಾಂ ಧರ್ಮದ ಪ್ರಮುಖ ಹಬ್ಬ ಇಂದು ಅಥವಾ ನಾಳೆ..?

ಶಬ್-ಎ-ಬರಾತ್, ಇಸ್ಲಾಂ ಧರ್ಮದ ಪ್ರಮುಖ ಹಬ್ಬವಾಗಿದ್ದು, ಕ್ಷಮೆಯ ರಾತ್ರಿಯೆಂದು ಪರಿಗಣಿಸಲಾಗುತ್ತದೆ. 2025ರ ಶಬ್-ಎ-ಬರಾತ್ ಫೆಬ್ರವರಿ 13ರಂದು ಆಚರಿಸಲಾಗುತ್ತದೆ. ಈ ರಾತ್ರಿಯಲ್ಲಿ ಮುಸ್ಲಿಮರು ಪ್ರಾರ್ಥನೆ, ಧ್ಯಾನ ಮತ್ತು ಪವಿತ್ರ ಗ್ರಂಥ ಪಠಣದಲ್ಲಿ ತೊಡಗುತ್ತಾರೆ. ಅಲ್ಲಾಹನ ಕ್ಷಮೆ ಮತ್ತು ಆಶೀರ್ವಾದಕ್ಕಾಗಿ ಪ್ರಾರ್ಥಿಸುವುದು ಈ ದಿನದ ಮುಖ್ಯ ಅಂಶವಾಗಿದೆ. ಕೆಲವರು ಉಪವಾಸವನ್ನೂ ಆಚರಿಸುತ್ತಾರೆ. ರಂಜಾನ್ ತಿಂಗಳಂತೆ, ಶಬ್-ಎ-ಬರಾತ್ ಅನ್ನು ಇಸ್ಲಾಂನ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ, ಇದು ಮುಸ್ಲಿಂ ಸಮುದಾಯದ ಜನರಿಗೆ ವಿಶೇಷ ಮಹತ್ವದ್ದಾಗಿದೆ. ಈ …

Read More »

ಕರ್ನಾಟಕದಲ್ಲಿಯೂ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಉದಯಗಿರಿಯಲ್ಲಿ ಯಾರೇ ತಪ್ಪು ಮಾಡಿದರೂ ಕ್ರಮ; ಡಿಸಿಎಂ ಡಿ.ಕೆ.ಶಿವಕುಮಾರ.

ಮೈಸೂರ:ಕರ್ನಾಟಕವು ಕೂಡ ಪುಣ್ಯ ಜಲಗಳಿರುವ ಭೂಮಿಯಾಗಿದ್ದು, ಇಲ್ಲಿಯೂ ಕೂಡ ಗಂಗಾ ಆರತಿಯಲ್ಲಿ ಕಾವೇರಿ ಆರತಿಯನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ. ಮೈಸೂರಿನಲ್ಲಿ ಕುಂಭಮೇಳದ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾವೇರಿ, ಕಪೀಲಾ ಮತ್ತು ಸ್ಫಟೀಕಾ ಪವಿತ್ರವಾದ ಸಂಗಮ. ತಲಕಾಡಿನ ನಮ್ಮ ಪೂರ್ವಜರ ಪರಂಪರೆಯನ್ನು ಮಠಾಧೀಶರು ಬೆಳೆಸಿಕೊಂಡು ಬಂದಿದ್ದಾರೆ. ಕುಂಭಮೇಳದ ನೀರು ಪವಿತ್ರವಾಗಿದೆ. ಇದನ್ನು ಉಳಿಸಿಬೆಳೆಸಬೇಕು. ನಮ್ಮ ನಾಡಿಯಲ್ಲಿಯೂ ಇಂತಹ ಪವಿತ್ರ ಸ್ಥಳವಿರುವುದು ನಮ್ಮ ಭಾಗ್ಯ. ಈಗಾಗಲೇ ಗಂಗಾ …

Read More »

ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಸುಳಿವು ನೀಡಿದ ಖರ್ಗೆ.

ಮಾಧ್ಯಮಗಳ ಊಹಾಪೋಹದಿಂದ ಸರ್ಕಾರಕ್ಕೆ ಡಿಸ್ಟರ್ಬ್ ಎಂದ ಎಐಸಿಸಿ ಅಧ್ಯಕ್ಷರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ರಾಜ್ಯ ಕಾಂಗ್ರೆಸ್ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಅಧ್ಯಕ್ಷ ಸ್ಥಾನದಲ್ಲಿ ಕೂರಲು ಕಾಂಗ್ರೆಸ್ನಲ್ಲೇ ಸದ್ದಿಲ್ಲದೆ ಪೈಪೋಟಿ ಶುರುವಾಗಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಸುಳಿವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೀಡಿದ್ದಾರೆ. ಅಲ್ಲದೇ ಮಾಧ್ಯಮಗಳ ಊಹಾಪೋಹಗಳಿಂದ ಸರ್ಕಾರಕ್ಕೆ ಡಿಸ್ಟರ್ಬ್ ಆಗುತ್ತಿದೆ ಎಂದಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಒಡಿಶಾದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಿ …

Read More »

ಧಾರವಾಡದ ಹಿರಿಯ ಪತ್ರಿಕಾ ಫೋಟೋಗ್ರಾಫರ್ ಆರ್ ಕೆ ( ರಾಮಚಂದ್ರ ಕುಲಕರ್ಣಿ) ಇನ್ನಿಲ್ಲ

ಧಾರವಾಡ: ಆರ್ ಕೆ ಖ್ಯಾತಿಯ ಹಿರಿಯ ಪತ್ರಿಕಾ ಪೋಟೋಗ್ರಾಫರಾಗಿ ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಿದ್ದ ರಾಮಚಂದ್ರ ಕುಲಕರ್ಣಿ ಇಂದು ಬೆಳಗಿನ‌ ಜಾವ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.‌ ಇಂದು 12 ಗಂಟೆಗೆ ಯಾಲಕ್ಕಿ‌ಶೆಟ್ಟರ್ ಕಾಲನಿಂಯಿಂದ ಅಂತಿ‌ಮ ಯಾತ್ರೆ ನಡೆಯಲಿದೆ. ಆರೋಗ್ಯ ಸಮಸ್ಯೆಯಿಂದ ಇತ್ತೀಚೆಗೆ ಅಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದರು. ‌ಆದರೆ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ ನಿಧನರಾಗಿದ್ದಾರೆ. ಅಪಾರ‌ ಸ್ನೇಹ ಬಳಗವನ್ನು ಹೊಂದಿದ್ದ ರಾಮಚಂದ್ರ ಕುಲಕರ್ಣಿ ಅವರ ನಿಧನ ಎಲ್ಲರಿಗೂ ನೋವುಂಟು …

Read More »

ಖಾನಾಪೂರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬೈಲೂರಕರ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ.

ಖಾನಾಪೂರ: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವ ಮೀನಾಕ್ಷಿ ಪ್ರಕಾಶ್ ಬೈಲೂರಕರ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಸಹಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಸತ್ಕರಿಸಿ ಆರ್ಶಿವಾದ ಪಡೆದುಕೊಂಡು ಅಭಿವೃದ್ಧಿಗೆ ಸಹಕರಿಸಲು ಕೋರಿದರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಕಾಶ್ ಬೈಲೂರಕರ, ಅಪ್ಪಯ್ಯ ಕೊಡೋಳ್ಳಿ,ಮಜಹರ್ ಖಾನಾಪೂರಿ, ರಫೀಕ್ ವಾರಿಮನಿ ಸೇರಿದಂತೆ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

Read More »