ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಹಿಂದೆ ಒಂದು ಕಾರ್ಯಕ್ರಮದಲ್ಲಿ ನೀಡಿದ ಪ್ರವಚನದಲ್ಲಿ ಮನಸ್ಸನ್ನು ಹ, ಒಂದು ಉತ್ತಮ ಜೀವನ ನಡೆಸಲು ಮನಸ್ಸು ಯಾವುದಕ್ಕೆ ಸೋಲಬಾರದು ಎಂಬುದರ ಕುರಿತು ಜೀವನಕ್ಕೆ ಒಂದು ಸಂದೇಶವನ್ನು ನೀಡಿದ್ದಾರೆ. ಈ ಜಗದಲ್ಲಿ ನಾವೆಲ್ಲರೂ ಸೋಲುವವರಾಗಿಬಿಟ್ಟಿದ್ದೀವಿ. ಈಗ ಎಲ್ಲೆಡೆ ಲಂಚ, ದುಡಿದಾಗ ಲಕ್ಷ ರೂಪಾಯಿ ಬರುತ್ತದೆ, ಅದು ಮಹತ್ವದ್ದಲ್ಲ. ಆದರೆ 10ರೂ.ಗೆ ಕೈ ಒಡ್ಡುತ್ತೀವಲ್ಲ ಏನಿದು? ಸೋಲು, ಎಲ್ಲಾ ಇದ್ದು ಮನಸ್ಸು ಅಲ್ಲಿ ಸೋಲುತ್ತದೆ. ಇದೇ ಜೀವನದ ವೈಶಿಷ್ಟ್ಯ. …
Read More »ನೀಲಿ ಡ್ರಮ್ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ಪೋಸ್ಟ್ ಮಾರ್ಟಮ್ ವರದಿಯಲ್ಲಿ ಏನಿದೆ?
ಯಶವಂತಪುರ ರೈಲ್ವೇ ನಿಲ್ದಾಣದ ನೀಲಿ ಡ್ರಮ್ ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ – ವೇಲ್ ನಿಂದ ಕುತ್ತಿಗೆ ಬಿಗಿದು ಮಹಿಳೆ ಕೊಲೆ – ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ. ನೀಲಿ ಡ್ರಮ್ ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ವೇಲ್ ನಿಂದ ಮಹಿಳೆ ಕುತ್ತಿಗೆ ಬಿಗಿದು ಕೊಲೆ ಬೆಂಗಳೂರು: ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ನೀಲಿ ಡ್ರಮ್ ನಲ್ಲಿ ಅಪರಿಚಿತ ಮಹಿಳೆ ಶವ ದೊರೆತ ಪ್ರಕರಣ ಸಂಬಂಧ ತನಿಖೆ …
Read More »2D ಮೀಸಲಾತಿ ತಿರಸ್ಕಾರ: ಸಿಎಂ ಬೊಮ್ಮಾಯಿಗೆ 24 ಗಂಟೆಗಳ ಅಂತಿಮ ಗಡುವು ನೀಡಿದ ಯತ್ನಾಳ್
ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರ ನೀಡಿರುವ 2D ಮೀಸಲಾತಿಯನ್ನು ತಿರಸ್ಕರಿಸಿರುವ ಪಂಚಮಸಾಲಿ ಸಮುದಾಯದ ನಾಯಕರು ತಮಗೆ 2A ಮೀಸಲಾತಿಯೇ ಬೇಕು ಎಂದು ಮತ್ತೊಮ್ಮೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಗುರುವಾರ ನಡೆದ ಸಮುದಾಯದ ನಾಯಕರ ಮಹತ್ವದ ಸಭೆ ನಡೆಸಿ ಚರ್ಚಿಸಿದರು. 2ಅ ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿದ ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್, ತಮ್ಮ ಸರ್ಕಾರದ ವಿರುದ್ಧವೇ ಕಿಡಿಕಾರಿದ್ದಾರೆ. ‘ಬಸವರಾಜ ಬೊಮ್ಮಾಯಿಯವರು ಸಿಎಂ ಆದಾಗಿನಿಂದ ಈವರೆಗೂ ಹಾದಿ ತಪ್ಪಿಸುವ …
Read More »*ಭಟ್ಕಳ ಪೊಲೀಸ್ ಠಾಣೆಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಬಂಧನ*
ಭಟ್ಕಳ: ಭಟ್ಕಳ ಪೊಲೀಸ್ ಠಾಣೆಗೆ ಬಾಂಬ್ ಹಾಕುವುದಾಗಿ ಪತ್ರ ಬರೆದು ಬೆದರಿಕೆ ಹಾಕಿದ್ದ ಆರೋಪಿ ಹನುಮಂತಪ್ಪ ಎಂಬಾತನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಹನುಮಂತಪ್ಪ ಠಾಣೆಯಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಪತ್ರದ ಮೂಲಕ ಬೆದರಿಕೆ ಹಾಕಿದ್ದ. ತನ್ನ ಹೆಸರು ಹಾಗೂ ವಿಳಾಸವನ್ನು ಬರೆಯದೆ ಪೋಸ್ಟ್ ಕಾರ್ಡ್ ನ ಮುಖಪುಟದಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರ ಚಿಹ್ನೆ, ಅದರ ಕೆಳಗೆ 786 ಮತ್ತು ಉರ್ದು ಅಕ್ಷರಗಳನ್ನು ಬರೆದು ಅದರ ಕೆಳಗೆ ಭಟ್ಕಳ …
Read More »ಬಸ್ಸಿಗೆ ಬೆಂಕಿ, ಚಾಲಕನ ಸಮಯಪ್ರಜ್ಞೆ ತಪ್ಪಿದ ಅನಾಹುತ…!!
ಬೆಳಗಾವಿ – ಸಂಕೇಶ್ವರ ಹತ್ತಿರದ ಟೋಲ್ ಬಳಿ ಬಸ್ಸಿಗೆ – ಬೆಂಕಿ ತಗಲಿ ಬಸ್ಸು ಬೆಂಕಿಗಾಹುತಿಯಾದರೂ ಸಹ ಚಾಲಕ ಮತ್ತು ನಿರ್ವಾಕನ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ. ಇಂದು ಸಮಾರು ನಾಲ್ಕು ಗಂಟೆಗೆ ಸಾತಾರಾದಿಂದ ಬೆಳಗಾವಿಗೆ ಬರುತ್ತಿದ್ದ ಬಸ್ಸಿಗೆ ಹತ್ತರಕಿ ಟೋಲ್ ಬಳಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿದೆ,ಇದನ್ನು ಗಮನಿಸಿದ ಬಸ್ ಚಾಲಕ ತಕ್ಷಣ ಬಸ್ಸು ನಿಲ್ಲಿಸಿ, ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಭಾರೀ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾನೆ. ಬಸ್ ಚಾಲಕ ಮತ್ತು …
Read More »ಹೊಸ ವರ್ಷಕ್ಕೆ ಬಂತು ಮಾತೃ ಭೂಮಿ ಫೌಂಡೇಶನ್, ಲಖನ ಜಾರಕಿಹೊಳಿ ಅವರ್ ಸಹಕಾರ ದೊಂದಿಗೆ ಸಮಾಜ ಸೇವೆಗೆ ಸಿದ್ಧ್
ಗೋಕಾಕ : ಗೋಕಾಕ ನಗರದ ಯುವಕರ ತಂಡ ಸಮಾಜ ಸೇವೆ, ಯುವಕರ ಹಲವಾರು ಕಾರ್ಯಕ್ಕೆ ಪ್ರೋತ್ಸಾಹ. ದಿನ ದಲಿತರ, ಬಡ ಬಂದುಗಳ ಸೇವೆಯನ್ನು ಮಾಡುತ್ತೇವೆ ಎಂದು ಲಖನ ಜಾರಕಿಹೊಳಿ ಅವರ ಸಹಕಾರದೊಂದಿಗೆ ಒಂದು ಯುವಕರ ತಂಡ ಹೊಸ ವರ್ಷಕ್ಕೆ ಈ ಒಂದು ಫೌಂಡೇಶನ್ ಅನ್ನು ಪ್ರಾರಂಭ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಲಖನ ಜಾರಕಿಹೊಳಿ ಅವರು ಹಾಗೂ ಯುವನಾಯಕ ಪತ್ರ ಕರ್ತರ ಸಂಘದ ಗೌರವಾಧ್ಯಕ್ಷ ರಾದ ಶ್ರೀ ಸರ್ವೋತ್ತಮ ಭೀಮಶಿ …
Read More »ವರಿಷ್ಠರ ಸಮ್ಮತಿ ದೊರೆಯದ ಕಾರಣ ಮತ್ತೆ ಸಂಪುಟ ವಿಸ್ತರಣೆ ಠುಸ್ ಆಗಿದೆ? ಸಿ.ಎಂ ಬೊಮ್ಮಾಯಿ
ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಿರೀಕ್ಷೆ ಹೊತ್ತು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಎರಡೂವರೆ ಗಂಟೆಗಳ ಕಾಲ ಸಭೆ ನಡೆಸಿದರು. ಆದರೆ ವರಿಷ್ಠರ ಸಮ್ಮತಿ ದೊರೆಯದ ಕಾರಣ, ಸಂಪುಟ ವಿಸ್ತರಣೆ ಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್, ಕರ್ನಾಟಕ ಉಸ್ತುವಾರಿ ಅರುಣ್ …
Read More »ಅಂಬೇಡ್ಕರ್ ಅವರನ್ನು ಅರಿಯುವ ಕೆಲಸವಾಗಲಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಉಳ್ಳಾಲ: ವಿದೇಶದಲ್ಲಿ ಅತ್ಯುನ್ನತ ಶಿಕ್ಷಣ ಪಡೆದ ಬಳಿಕ ಅತ್ಯುನ್ನತ ಸ್ಥಾನ ಅಲಂಕರಿಸುವ ಅವಕಾಶವಿದ್ದರೂ ಡಾ| ಬಿ.ಆರ್. ಆಂಬೇಡ್ಕರ್ ಅವರು ತನ್ನ ಮತ್ತು ತನ್ನ ಪರಿವಾರದ ಸುಖಜೀವನವನ್ನು ನಿರ್ಲಕ್ಷಿಸಿ ಸಮಾಜದ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಮಾನತೆ, ಸಾಮರಸ್ಯ ತರಲು ಪ್ರಯತ್ನಿಸಿದವರು. ಚಿಂತನೆ ಅವರು ರಚಿಸಿದ ಸಂವಿಧಾನದಲ್ಲೂ ಪ್ರತಿಫಲಿಸುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಅವುಗಳ ಜಾರಿ ಅಗತ್ಯವಾಗಿದ್ದು, ಅಂಬೇಡ್ಕರ್ ಅವರನ್ನು ಅರಿಯುವ ಕೆಲಸವಾಗಲಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು. ಸಂವಿಧಾನ …
Read More »ಪತ್ನಿ ಮೃತ ದೇಹವನ್ನು ಮೂಟೆಯಲ್ಲಿ ಸಾಗಿಸಿದ ಪತಿ..!
ಶವ ಸಂಸ್ಕಾರ ನೆರವೇರಿಸಲು ಹಣವಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೃತ ದೇಹವನ್ನು ಪ್ಲಾಸ್ಟಿಕ್ ಮೂಟೆಯಲ್ಲಿ ಹಾಕಿಕೊಂಡು ಹೆಗಲ ಮೇಲೆ ಸಾಗಿಸುತ್ತಿದ್ದ ಆಘಾತಕಾರಿ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಘಟನೆಯ ವಿವರ: ರವಿ ಹಾಗೂ ಕಾಳಮ್ಮ ಎಂಬ ದಂಪತಿ ಪ್ಲಾಸ್ಟಿಕ್ ಆಯುವ ಕೆಲಸ ಮಾಡುತ್ತಿದ್ದು, ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಪಾಳು ಬಿದ್ದಿರುವ ಮನೆಯಲ್ಲಿ ವಾಸವಾಗಿದ್ದರು. ಇಬ್ಬರೂ ವಿಪರೀತ ಮದ್ಯ ವ್ಯಸನಿಗಳಾಗಿದ್ದು, ಇದರ …
Read More »ಜನಸಂಕಲ್ಪ ಯಾತ್ರೆ | ಇಂದು ಕುಣಿಗಲ್‌ನಲ್ಲಿ ಸಮಾವೇಶ, ಸಿಎಂ ಭಾಗಿ
ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 156 ಕ್ಷೇತ್ರಗಳಲ್ಲಿ ರಾಜ್ಯ ಬಿಜೆಪಿ ನಡೆಸುತ್ತಿರುವ ಜನಸಂಕಲ್ಪ ಸಮಾವೇಶ ತುಮಕೂರು ಕ್ಷೇತ್ರದಲ್ಲಿ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಇದರಲ್ಲಿ ಭಾಗವಹಿಸಲಿದ್ದಾರೆ. ಬೃಹತ್ ಸಮಾವೇಶದ ಮೂಲಕ ಮತ ಕ್ರೋಡೀಕರಣಕ್ಕೆ ಬಿಜೆಪಿ ಪ್ಲಾನ್ ಮಾಡಿದ್ದು, ಸೋತ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಲು ಲೆಕ್ಕಾಚಾರ ಹಾಕಿದೆ. ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆ ಬಳಿಕ ಕುಣಿಗಲ್‌ನಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ಇದಾಗಿದೆ. ಇಂದು …
Read More »