Breaking News

new delhi

ದೂರವಾಣಿ ಮೂಲಕ ವೈದ್ಯಾಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಸರ್ಕಾರೇತರ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳ ಕೊರೋನಾ ಕಾಳಜಿ ಕೇಂದ್ರಗಳಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ

ಗೋಕಾಕ: ಕೊರೋನಾ ಸೋಂಕಿತರ ಸುರಕ್ಷತೆಗಾಗಿ ಹೆಚ್ಚಿನ ಕಾಳಜಿ ಮಾಡಿ. ಕರ್ತವ್ಯದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ಬಡ ರೋಗಿಗಳಿಗೆ ನ್ಯಾಯ ದೊರಕಿಸುವ ಕೆಲಸ ಮಾಡಿ. ಗೋಕಾಕ-ಮೂಡಲಗಿ ತಾಲೂಕುಗಳ ಸೋಂಕಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಅವರುಗಳನ್ನು ಗುಣಮುಖರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವೈದ್ಯಾಧಿಕಾರಿಗಳಿಗೆ ಹೇಳಿದರು. ಸೋಮವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿಗೃಹದಲ್ಲಿ ನಡೆದ ಗೋಕಾಕ ಮತ್ತು ಮೂಡಲಗಿ ತಾಲೂಕಗಳ ಪಿಎಚ್‍ಸಿ …

Read More »

ಅಕ್ಟೋಬರ್‌ನಲ್ಲಿ ಥಿಯೇಟರ್ ಓಪನ್ ಆಗುತ್ತಾ?

ನವದೆಹಲಿ: ಕೊರೊನಾ ವಿಜೃಂಭಣೆ ನಡುವೆಯೂ ಹಳಿ ತಪ್ಪಿರುವ ಆರ್ಥಿಕ ಸ್ಥಿತಿ ಸರಿ ದಾರಿಗೆ ತರಲು ಕೇಂದ್ರ ಸರ್ಕಾರ, ಅನ್‍ಲಾಕ್ ರೂಪದಲ್ಲಿ ಪ್ರತಿ ತಿಂಗಳು ಶ್ರಮಿಸುತ್ತಿದೆ. ಈಗಾಗಲೇ ಜನಜೀವನ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಅಕ್ಟೋಬರ್ 1ರಿಂದ ಅನ್‍ಲಾಕ್-05 ಜಾರಿ ಆಗಲಿದೆ. ಅನ್‍ಲಾಕ್-5 ಜಾರಿ ಸಂಬಂಧ ಕೇಂದ್ರ ಗೃಹ ಮಂತ್ರಾಲಯ ಮಾರ್ಗಸೂಚಿ ಪ್ರಕಟಿಸಲಿದೆ. ಸಿನಿಮಾ ಹಾಲ್, ಈಜುಕೊಳ, ಎಂಟರ್ ಟೈನ್ಮೆಂಟ್ ಪಾರ್ಕ್, ಪ್ರಾಥಮಿಕ ಶಾಲೆ ತೆರೆಯಲು ಅನುಮತಿ ನೀಡುತ್ತಾ? ಅಥವಾ ದಸರಾ-ದೀಪಾವಳಿ ಸನಿಹದಲ್ಲಿರುವ …

Read More »

ದೆಹಲಿಯ ಯೂತ್​​ ಕಾಂಗ್ರೆಸ್​​ ಕಾರ್ಯಕರ್ತರು ಇಂಡಿಯಾ ಗೇಟ್​​ ಬಳಿ ನಡು ರಸ್ತೆಯಲ್ಲೇ ಟ್ರಾಕ್ಟರ್​ಗೆ ಬೆಂಕಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿಯ ಯೂತ್​​ ಕಾಂಗ್ರೆಸ್​​ ಕಾರ್ಯಕರ್ತರು ಇಂಡಿಯಾ ಗೇಟ್​​ ಬಳಿ ನಡು ರಸ್ತೆಯಲ್ಲೇ ಟ್ರಾಕ್ಟರ್​ಗೆ ಬೆಂಕಿ ಹಚ್ಚಿದ್ದಾರೆ.ಈ ಬಗ್ಗೆ ದೆಹಲಿಯ ಡಿಸಿಪಿ ಮಾಹಿತಿ ನೀಡಿದ್ದು, ಸುಮಾರು 15 ರಿಂದ 20 ಜನ ಗುಂಪಾಗಿ ಬಂದು ಟ್ರಾಕ್ಟ್​​​ರ್​ಗೆ ಬೆಂಕಿಯಿಟ್ಟಿದ್ದಾರೆ. ಸದ್ಯ ಹೊತ್ತಿಯುರಿಯುತ್ತಿದ್ದ ಬೆಂಕಿಯನ್ನು ಆರಿಸಲಾಗಿದ್ದು, ನಡುರಸ್ತೆಯಿಂದ ಟ್ರ್ಯಾಕ್ಟರ್​ ತೆಗೆಯಲಾಗಿದೆ.ಈ ಬಗ್ಗೆ ದೆಹಲಿಯ ಡಿಸಿಪಿ ಮಾಹಿತಿ ನೀಡಿದ್ದು, ಸುಮಾರು 15 ರಿಂದ 20 ಜನ …

Read More »

ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸಬ್​ಇನ್​ಸ್ಪೆಕ್ಟರ್ ಒಬ್ಬ ಆಕೆಯ ಮೇಲೆ ಗುಂಡುಹಾರಿಸಿ ಕಾರಿನಿಂದ ತಳ್ಳಿರುವ ಭಯಾನಕ ಘಟನೆ

ನವದೆಹಲಿ: ಮದುವೆಯಾದರೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸಬ್​ಇನ್​ಸ್ಪೆಕ್ಟರ್ ಒಬ್ಬ ಆಕೆಯ ಮೇಲೆ ಗುಂಡುಹಾರಿಸಿ ಕಾರಿನಿಂದ ತಳ್ಳಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ. ಅದೇ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿರುವ ಇನ್ನೊಬ್ಬ ಪೊಲೀಸ್ ಅಧಿಕಾರಿ ಆ ಮಹಿಳೆಯ ಜೀವ ಉಳಿಸಿದ್ದಾರೆ. ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಮಹಿಳೆಯನ್ನು ಆ ಪೊಲೀಸ್ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಇಂಥ ಕುಕೃತ್ಯ ಎಸಗಿದ ಸಬ್​ಇನ್​ಸ್ಪೆಕ್ಟರ್ ಹೆಸರು ಸಂದೀಪ್ ದಹಿಯ. ನವದೆಹಲಿಯ ಅಲೀಪುರದ ನಿವಾಸಿಯಾಗಿರುವ ಈತ ವಿವಾಹಿತ. ಈತ ಹಾಗೂ …

Read More »

ಮಾಜಿ ಕೇಂದ್ರ ಸಚಿವ ಜಸ್ವಂತ್‌ ಸಿಂಗ್‌ ವಿಧಿವಶರಾಗಿದ್ದಾರೆ.

ನವದೆಹಲಿ : ಮಾಜಿ ಕೇಂದ್ರ ಸಚಿವ ಜಸ್ವಂತ್‌ ಸಿಂಗ್‌ ವಿಧಿವಶರಾಗಿದ್ದಾರೆ. 82 ವರ್ಷದ ಜಸ್ವಂತ್‌ ಸಿಂಗ್‌ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದ ಜಸ್ವಂತ್‌ ಸಿಂಗ್‌ ಬಳಿಕ ರಾಜಕೀಯಕ್ಕೆ ಪ್ರವೇಶಿಸಿ ಸಂಸತ್‌ ಗೆ ಆಯ್ಕೆಯಾಗಿದ್ದರು. ಅಟಲ್‌ ಬಿಹಾರಿ ವಾಜಪೇಯಿ ಸಚಿವ ಸಂಪುಟದಲ್ಲಿ ಹಲವಾರು ಪ್ರಮುಖ ಖಾತೆಗಳನ್ನು ಜಸ್ವಂತ್‌ ಸಿಂಗ್‌ ನಿಭಾಯಿಸಿದ್ದರು.‌ ಜಸ್ವಂತ್‌ ಸಿಂಗ್‌ …

Read More »

ಬೆಳಗಾವಿ: ಆರ್‌ಸಿಯು ಪರೀಕ್ಷೆ ಮುಂದಕ್ಕೆ

ಬೆಳಗಾವಿ: ‘ರೈತ ಸಂಘಟನೆಗಳಿಂದ ಸೆ. 28ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವುದರಿಂದ ಅಂದು ನಿಗದಿಯಾಗಿದ್ದ ಎಲ್ಲ ವಿಷಯಗಳ ಪರೀಕ್ಷೆಯನ್ನು ಸೆ. 29ಕ್ಕೆ ಮುಂದೂಡಲಾಗಿದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

Read More »

ಬೆಳಗಾವಿ: ಗರ್ಭಿಣಿ ಸೇರಿ ಇಬ್ಬರ ಬರ್ಬರ ಕೊಲೆ

ಬೆಳಗಾವಿ: ತಾಲ್ಲೂಕಿನ ಮಚ್ಚೆ ಗ್ರಾಮದ ಲಕ್ಷ್ಮಿ ನಗರದ ಹೊರವಲಯದಲ್ಲಿ ಶನಿವಾರ ಸಂಜೆ ಐದು ತಿಂಗಳ ಗರ್ಭಿಣಿ ಹಾಗೂ ಮತ್ತೊಬ್ಬ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅದೇ ಗ್ರಾಮದವರಾದ ರೋಹಿಣಿ ಗಂಗಪ್ಪ ಹುಲಿಮನಿ (22) ಹಾಗೂ ರಾಜಶ್ರೀ ರವಿ ಬನ್ನೂರ (21) ಕೊಲೆಯಾದವರು. ‘ಅವರು ವಾಯುವಿಹಾರಕ್ಕೆಂದು ಬ್ರಹ್ಮದೇವರ ದೇವಸ್ಥಾನದ ಕಡೆಗೆ ಹೋಗಿದ್ದಾಗ ಘಟನೆ ನಡೆದಿದೆ. ದ್ವಿಚಕ್ರವಾಹನದಲ್ಲಿ ಬಂದಿದ್ದವರು ಮಹಿಳೆಯರ ಕಣ್ಣಿಗೆ ಖಾರದ ಪುಡಿ ಎರಚಿ, ನಂತರ ಕತ್ತಿಗೆ ಕೊಯ್ದು ಹಾಗೂ ಬೆನ್ನಿಗೆ ಇರಿದು …

Read More »

ರಾಜ್ಯ ಸರ್ಕಾರದಿಂದ ಅನುದಾನ ರಹಿತ ಶಿಕ್ಷಕರಿಗೆ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ಕೊರೊನಾದಿಂದ ಸಂಕಷ್ಟದಲ್ಲಿರುವ ಅನುದಾನ ರಹಿತ ಶಿಕ್ಷಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಅನುದಾನ ರಹಿತ ಶಿಕ್ಷಕರಿಗೆ ಶೀಘ್ರವೇ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದಾರೆ. ಕರ್ನಾಟಕ ಧನವಿನಿಯೋಗ ವಿಧೇಯಕ 2020 ಮಂಡಿಸಿದ ಬಳಕ ಜೆಡಿಎಸ್ ನ ಬಸವರಾಜ ಹೊರಟ್ಟಿ, ಕೊರೊನಾ ಸಂಕಷ್ಟದಲ್ಲಿ ಸರ್ಕಾರ ಎಲ್ಲಾ ವರ್ಗದ ಜನರಿಗೂ ನೆರವು ಘೋಷಿಸಿದೆ. ಆದರೆ, ಅನುದಾನ ರಹಿತ ಶಿಕ್ಷಕರಿಗೆ ಸಹಾಯಧನ ನೀಡಿಲ್ಲ. ಹೀಗಾಗಿ ಅನುದಾನ …

Read More »

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (27-09-2020-ಭಾನುವಾರ)

ನಿತ್ಯ ನೀತಿ: ಹಿಂ ಸೆ ಮತ್ತು ದ್ವೇಷದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಅಹಿಂಸೆ ಮತ್ತು ಪ್ರೀತಿಯಿಂದಲೋಕವನ್ನೇ ಜಯಿಸಬಹುದು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ # ಪಂಚಾಂಗ :ಭಾನುವಾರ, 27.09.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.12 ಚಂದ್ರ ಉದಯ ಬೆ.03.37 / ಚಂದ್ರ ಅಸ್ತ ರಾ.03.11 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ(ರಾ.07.47) ನಕ್ಷತ್ರ: …

Read More »

ಇನ್ನೂ 20 ವರ್ಷ ಕಾಂಗ್ರೆಸ್‍ನ್ನು ವಿಪಕ್ಷ ಸ್ಥಾನದಲ್ಲೇ ಕೂರಿಸುತ್ತೇನೆ : ಬಿಎಸ್ವೈ ಚಾಲೆಂಜ್

ಬೆಂಗಳೂರು,  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 145ರಿಂದ 150 ಸ್ಥಾನ ಗೆದ್ದು ಇನ್ನೂ 20 ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಕೂರುವಂತೆ ಮಾಡುವುದು ನನ್ನ ಗುರಿ. ಅದನ್ನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದರು. ಕಾಂಗ್ರೆಸ್ ವಿಧಾನಸಭೆಯಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಬಿಡಿಎ ವಸತಿ ಯೋಜನೆಯಲ್ಲಿ ನೀವು ಮಾಡಿರುವ ಆರೋಪ ಕುರಿತು ನೀವು ಸಿಬಿಐಗಾದರೂ ಹೋಗಿ, ಹೈಕೋರ್ಟ್‍ಗಾದರೂ ಹೋಗಿ, ಲೋಕಾಯುಕ್ತಕ್ಕಾದರೂ ಹೋಗಿ, …

Read More »