Breaking News

new delhi

ಬಿಜೆಪಿ ಅಧಿಕೃತ ಸಭೆಯಲ್ಲ. ಈ ಸಭೆಗೆ ಹೆಚ್ಚಿನ ಮಹತ್ವ ಬೇಡ : ಶಾಸಕ ಬಾಲಚಂದ್ರ ಜಾರಕಿಹೊಳಿ

  ಬೆಳಗಾವಿ : ಬೆಳಗಾವಿಯಲ್ಲಿ ಶನಿವಾರ ಜಿಲ್ಲೆಯ ಕೆಲವು ಬಿಜೆಪಿ ಮುಖಂಡರು ಸಭೆ ಸೇರಿರುವ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ಸಭೆಯಲ್ಲಿ ಯಾರನ್ನೂ ಹೊರಗಿಟ್ಟು ಸಭೆ ನಡೆಸಿದ್ದಾರೆ ಎಂಬುದನ್ನು ಕೂಡ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ಈ ಬಗ್ಗೆ ಭಾನುವಾರದಂದು ಹೇಳಿಕೆ ನೀಡಿರುವ ಅವರು, ಉದ್ಧೇಶಪೂರ್ವಕವಾಗಿ ಯಾರನ್ನೂ ಹೊರಗಿಟ್ಟು ಸಭೆಯನ್ನು ನಡೆಸುವ ಅವಶ್ಯಕತೆ ಇರಲಿಲ್ಲ. ಅಲ್ಲದೇ ಇದು ಬಿಜೆಪಿಯ …

Read More »

ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಲಾಭ ಪಡೆಯರಿ: ಯುವ ನಾಯಕ ರಾಹುಲ್‌ ಜಾರಕಿಹೊಳಿ

ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಲಾಭ ಪಡೆಯರಿ: ಯುವ ನಾಯಕ ರಾಹುಲ್‌ ಜಾರಕಿಹೊಳಿ   ಬೆಳಗಾವಿ: ಕರೋನಾ ಸೋಂಕಿನ ಭೀತಿ ಹೆಚ್ಚಳ ಕಾರಣ ಗ್ರಾಮೀಣ ಜನತೆಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವೈದ್ಯಕೀಯ ತಪಾಸಣಾ ಶಿಬಿರದ ಲಾಭ ಪಡೆಯಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.   ಯಮಕನಮರಡಿ ಮತಕ್ಷೇತ್ರದ ಕಡೋಲಿ ಗ್ರಾಮದಲ್ಲಿ ಟೀಮ್‌ ರಾಹುಲ್‌ ಸತೀಶ್‌ ಜಾರಕಿಹೊಳಿ ವತಿಯಿಂದ ಭಾನುವಾರ …

Read More »

ಗಂಗಾ ರಾಮ್ ಲಕ್ಷ್ಮಣ ಕಾಂಬಳೆ ರೈತನ ಹೊಲಕ್ಕೆ ಶಾಟ್ ಸರ್ಕಿಟನಿಂದ ಬೆಂಕಿ

ವರ್ಷಗಟ್ಟಲೆ ಬಿಸಿಲು ಚಳಿ ಮಳೆಯೆನ್ನದೆ ಕಷ್ಟಪಟ್ಟು ದುಡಿಯುವ ರೈತರ ಗೋಳು ಕೇಳುವವರಾರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಶಿರಗಾಂವ ಎಂಬ ಗ್ರಾಮದಲ್ಲಿ ಗಂಗಾ ರಾಮ್ ಲಕ್ಷ್ಮಣ್ ಕಾಂಬಳೆ ಎಂಬ ಬಡ ರೈತನ ಹೊಲದಲ್ಲಿ ನಿನ್ನೆ ಮಧ್ಯಾಹ್ನ ಏಕಾಏಕಿ ವಿದ್ಯುತ್ ತಂತಿಗಳ ನಡುವೆ ಘರ್ಷಣೆ ಉಂಟಾಗಿ ಕಬ್ಬಿನ ಹೊಲಕ್ಕೆ ಬೆಂಕಿ ಹತ್ತಿ ಸುಮಾರು ಎರಡೂವರೆ ಎಕರೆ ಕಬ್ಬು ಸುಟ್ಟು ಕರಕಲಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದಾರೆ.ಆದರೆ …

Read More »

ಯುವಕರ ಪಾಲಿನ ಸ್ಪೂರ್ತಿ ಚಿಲುಮೆ ಸುಭಾಷ್ ಚಂದ್ರ ಬೋಸ್: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ

    ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು, ಇಲ್ಲಿನ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್‌ ಅವರ 125 ನೇ ಜಯಂತಿಯನ್ನು ಆಚರಿಸಿದರು, ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಅರ್ಪಿಸಿದರು. ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದರು.   ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಸ್ವಾತಂತ್ರ್ಯ ಸೇನಾನಿ ನೇತಾಜಿ …

Read More »

ಕೊರೊನಾ ಕೇಸ್​​ ಹೆಚ್ಚಳ; ಇಂದು ತಮಿಳುನಾಡು ಸಂಪೂರ್ಣ ಲಾಕ್‌ಡೌನ್

ಚೆನ್ನೈ: ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್​ಡೌನ್ ಮಾಡಿ ಸಿಎಂ ಎಂ.ಕೆ. ಸ್ಟಾಲಿನ್ ಆದೇಶ ಹೊರಡಿಸಿದ್ದಾರೆ. ಜನವರಿ 16ರಂದು ವಿಧಿಸಿದ್ದ ಲಾಕ್‌ಡೌನ್ ನಿಯಮಗಳೇ ಇಂದೂ ಅನ್ವಯಿಸುತ್ತವೆ ಎಂದು ಸಿಎಂ ತಿಳಿಸಿದ್ದಾರೆ. ಇನ್ನು, ಸೋಂಕಿನ ಪ್ರಕರಣಗಳು ಹರಡುವುದನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸುವಂತೆ ಮುಖ್ಯಮಂತ್ರಿ ಸ್ಟಾಲಿನ್ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಮೊಬೈಲ್​ ಆ್ಯಪ್​ ಆಧಾರಿತ ಆಟೋ, ಟ್ಯಾಕ್ಸಿಗಳು ಮತ್ತು ಇತರ ವಾಹನಗಳು …

Read More »

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ಅಪರೂಪದ ಮದುವೆ; ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಜೋಡಿಯಾದ 85 ವರ್ಷದ ವರ 65 ವರ್ಷದ ವಧು

ಮೈಸೂರು: ಓದಿಗೆ ಜ್ಞಾನಾರ್ಜನೆಗೆ ವಯಸ್ಸಿಲ್ಲ ಅನ್ನೋ ಮಾತನ್ನು ನೀವು ಕೇಳಿರುತ್ತೀರಾ. ಆದರೆ ಇದೀಗ ಮದುವೆಗೂ ವಯಸ್ಸಿಲ್ಲ ಅನ್ನುವ ಮಾತನ್ನು ಮೈಸೂರಿನ ಹಿರಿಯ ಜೀವಗಳು ನಿಜ ಮಾಡಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿ ಹಸೆಮಣೆ ಏರಿ‌ ಅಚ್ಚರಿ ಮೂಡಿಸಿದ್ದಾರೆ. ಸ್ವಂತ ಮಕ್ಕಳು‌ ಮೊಮ್ಮಕ್ಕಳು ಮುಂದೆ ನಿಂತು ಹಿರಿಯ ಜೀವಗಳಿಗೆ ಮದುವೆ ಮಾಡಿಸಿರೋದು ವಿಶೇಷ. 85 ವರ್ಷದ ವರ 65 ವರ್ಷದ ವಧು ಇಂತಹ ಅಪರೂಪದ ಮದುವೆಗೆ ಸಾಕ್ಷಿಯಾಗಿರುವುದು‌ ಸಾಂಸ್ಕೃತಿಕ ನಗರಿ ಮೈಸೂರು. ಮೈಸೂರಿನ ಉದಯಗಿರಿಯ …

Read More »

ಇಂದು ಪ್ರಧಾನಿ ಮೋದಿಯಿಂದ ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಹೊಲೋಗ್ರಾಮ್​ ಪ್ರತಿಮೆ ಅನಾವರಣ

ಗಣರಾಜ್ಯೋತ್ಸವ ಆಚರಣೆ ದೇಶದಲ್ಲಿ ಇಂದಿನಿಂದಲೇ ಪ್ರಾರಂಭವಾಗಲಿದೆ. ಇಂದು ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಜನ್ಮದಿನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ನೇತಾಜಿಯವರ ಹೊಲೋಗ್ರಾಮ್​ ಪ್ರತಿಮೆ (ಲೇಸರ್ ಅಥವಾ ಅಂಥ ಇತರ ಬೆಳಕಿನ ಕಿರಣಗಳ ಟಚ್​ ಕೊಡಲಾದ  ಮೂರು ಆಯಾಮದ ಪ್ರತಿಮೆ). ದೇಶದಲ್ಲಿ ಸಾಮಾನ್ಯವಾಗಿ ಜನವರಿ 24ರಿಂದ ಗಣರಾಜ್ಯೋತ್ಸವ ದಿನಾಚರಣೆ ಶುರುವಾಗುತ್ತಿತ್ತು. ಆದರೆ ಈ ಬಾರಿ ನೇತಾಜಿ ಸುಭಾಷ್​ ಚಂದ್ರ ಬೋಸ್​ ಜನ್ಮದಿನದಿಂದಲೇ ಗಣರಾಜ್ಯೋತ್ಸವ ಸಂಭ್ರಮವೂ ಶುರುವಾಗಲಿದೆ ಎಂದು …

Read More »

ಹೆಚ್​​​ಡಿಡಿಗೆ ಕೊರೊನಾ ಪಾಸಿಟಿವ್​​ -ಮಣಿಪಾಲ್ ಆಸ್ಪತ್ರೆಯಿಂದ ಹೆಲ್ತ್​​ ಬುಲೆಟಿನ್ ಬಿಡುಗಡೆ

ಬೆಂಗಳೂರು: ಜೆಡಿಎಸ್​​ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಚಿಕಿತ್ಸೆಗಾಗಿ ಹೆಚ್​ಡಿಡಿ ಅವರನ್ನು ಮಣಿಪಾಲ್​​ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮಾಜಿ ಪ್ರಧಾನಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಹೆಲ್ತ್​​ ಬುಲೆಟಿನ್​​​ನಲ್ಲಿ ಮಾಹಿತಿ ನೀಡಿದೆ. ಮಣಿಪಾಲ್ ಆಸ್ಪತ್ರೆ ನೀಡಿರುವ ಅಧಿಕೃತ ಮಾಹಿತಿಯ ಅನ್ವಯ, ನಿನ್ನೆ ಅಂದರೆ ಜನವರಿ 21ರಂದು ಮಾಜಿ ಪ್ರಧಾನಿ ದೇವೇಗೌಡರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ದೇವೇಗೌಡರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ದೇವೇಗೌಡರು ಆಸ್ಪತ್ರೆ …

Read More »

ತಿರುಪತಿಯಿಂದ ವಾಪಸ್ ಆಗ್ತಿದ್ದಾಗ ಭೀಕರ ಕಾರು ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು

ಕೋಲಾರ: ಇಂದು ಬೆಳಗಿನ ಜಾವ ಕೋಲಾರದಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ಡ್ರೈವರ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಕೋಲಾರ ತಾಲೂಕಿನ ನೆರ್ನಹಳ್ಳಿ ಬಳಿ ದುರ್ಘಟನೆ ನಡೆದಿದೆ. ಬೆಂಗಳೂರು ಕೋಣನಕುಂಟೆ ಮೂಲದ ದೀಪಕ್ ಹಾಗೂ ಗಿರಿಜಮ್ಮ ಮೃತ ದುರ್ದೈವಿಗಳು. ಹರೀಶ್ ಹಾಗೂ ಸಾವಿತ್ರಿ ಎಂಬುವವರಿಗೆ ಗಾಯವಾಗಿದೆ. ತಿರುಪತಿಗೆ ಹೋಗಿ ವಾಪಸ್ಸಾಗುವಾಗ ಅಪಘಾತ ಸಂಭವಿಸಿದೆ.

Read More »

‘JDSನ ಓಡಿಸಿ’ ಎಂದ ಸಿದ್ದರಾಮಯ್ಯ.. ‘ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ’ ಅಂತ HDK ಗರಂ

ಬೆಂಗಳೂರು: ಬಿಜೆಪಿಯ ಭ್ರಷ್ಟಾಚಾರಕ್ಕೆ ಜೆಡಿಎಸ್​ ಪಕ್ಷ ಬಾಲಂಗೋಚಿಯಾಗಿದೆ. ಆದ್ದರಿಂದ ತುಮಕೂರಿನಿಂದ ಜೆಡಿಎಸ್​​ ಪಕ್ಷವನ್ನು ಓಡಿಸಿ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಅಲ್ಲದೇ ತುಮಕೂರಿನಿಂದ ಜೆಡಿಎಸ್​​​ ಅನ್ನು ಓಡಿಸಿ ಅನ್ನೋದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ? ಎಂದು ಪ್ರಶ್ನಿಸಿದ್ದಾರೆ.   ಸಿದ್ದರಾಮಯ್ಯ ಅವರ ಹೇಳಿಕೆ ಕುರಿತಂತೆ ಸರಣಿ ಟ್ವೀಟ್​ ಮಾಡಿರುವ ಕುಮಾರಸ್ವಾಮಿ ಅವರು, …

Read More »