Breaking News

new delhi

ದ್ರೋಣ ಪ್ರತಾಪ್ ಈಗ ಪೊಲೀಸ್ ರ ವಶಕ್ಕೆ

ಬೆಂಗಳೂರು: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಡ್ರೋನ್ ಪ್ರತಾಪ್‍ನನ್ನು ಬಿಬಿಎಂಪಿ ಅಧಿಕಾರಿಗಳು ಮತ್ತು ತಲಘಟ್ಟಪುರ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಡ್ರೋನ್ ಪ್ರತಾಪ್ ತಲೆಮರೆಸಿಕೊಂಡಿದ್ದ. ಅಧಿಕಾರಿಗಳು ಅವನ ಹುಡುಕಾಟದಲ್ಲಿ ತೊಡಗಿದ್ದರು. ಇದೀಗ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರತಾಪ್‍ನನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಕೆಂಗೇರಿ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ …

Read More »

ರಾತ್ರೋ ರಾತ್ರಿ ಸುರಿದ ಮಳೆಯಿಂದ ತುಂಬಿದ ರೈತರ ಕೆರೆ

ತುಮಕೂರು: ಭಾನುವಾರ ರಾತ್ರಿ ಮಧುಗಿರಿ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ಮಾವಿನ ಕೃಷಿಕ ಅಂಜಿನಪ್ಪ ಅವರ ಭವಿಷ್ಯವೇ ಬದಲಾಯಿತು. 1 ಕೋಟಿ ಲೀಟರ್ ಸಾಮರ್ಥ್ಯದ ಅವರ ಬೃಹತ್ ಕೃಷಿ ಕೊಳವು ತುಂಬಿದೆ, , ಬೆಂಗಳೂರು ಗ್ರಾಮೀಣ ಜಿಲ್ಲೆಯ ದೇವನಹಳ್ಳಿ ಮೂಲದ ಬಿ.ಇ (ಸಿವಿಲ್) ಎಂಜಿನೀಯರ್ ಅಂಜಿನಪ್ಪ ಹಲವು ವರ್ಷಗಳ ಹಿಂದೆ ಕೆರೆ ನಿರ್ಮಿಸಿದ್ದರು. ಅವರು ಕೊರೆಸಿದ್ದ ಮೂರು ಬೋರ್ ವೆಲ್ ಗಳ ನೀರು ಬತ್ತಿ ಹೋದ ಹಿನ್ನೆಲೆಯಲ್ಲಿ ತಮ್ಮ 40 ಎಕರೆ …

Read More »

ರಾಜ್ಯದಲ್ಲಿ ಒಂದೇ ದಿನ 61 ಜನರ ಬಲಿ.

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಮಂಗಳವಾರ ಒಂದೇ ದಿನ ಬರೋಬ್ಬರಿ 61 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1464ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 22 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 61 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ತಿಳಿಸಿದ್ದಾರೆ. ಇಂದು ಬೆಂಗಳೂರು ನಗರವೊಂದರಲ್ಲೆ ಅತಿ …

Read More »

ಹರ್ಭಜನ್ ಸಿಂಗ್ ಅವರು ಕರುನಾಡಿನ ಹೆಮ್ಮೆಯ ಮಹಿಳೆ ಸಾಲುಮರದ ತಿಮ್ಮಕ್ಕರನ್ನು ನೆನೆದು ಟ್ವೀಟ್ ಮಾಡಿದ್ದಾರೆ.

ನವದೆಹಲಿ: ಭಾರತದ ಕ್ರಿಕೆಟರ್ ಮತ್ತು ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕರುನಾಡಿನ ಹೆಮ್ಮೆಯ ಮಹಿಳೆ ಸಾಲುಮರದ ತಿಮ್ಮಕ್ಕರನ್ನು ನೆನೆದು ಟ್ವೀಟ್ ಮಾಡಿದ್ದಾರೆ. ಭಜ್ಜಿ ಕೊರೊನಾ ಲಾಕ್‍ಡೌನ್‍ನಿಂದ ಕ್ರಿಕೆಟ್‍ನಿಂದ ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಈ ವೇಳೆ ಸದಾ ಸಾಮಾಜಿಕ ಜಾಲತಣದಲ್ಲಿ ಸಕ್ರಿಯವಾಗಿರುವ ಹರ್ಭಜನ್ ಅವರು, ತಮ್ಮ ಟ್ವಿಟ್ಟರ್ ನಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಕರ್ನಾಟಕದ ವೃಕ್ಷಮಾತೆ ಪದ್ಮಶ್ರೀ ಪ್ರಶಸ್ತಿ ವಿಜೇತೆ ಸಾಲುಮರದ ತಿಮ್ಮಕ್ಕ ಅವರಿಗೆ ಧನ್ಯವಾದ ಎಂದು ಹೇಳಿ …

Read More »

ಕೊರೋನಾ ಭಯವಿಲ್ಲದೆ ಬೆಳ್ಳಂಬೆಳಗ್ಗೆ ಮಾಂಸ ಖರೀದಿಗೆ ಮುಗಿಬಿದ್ದ ಜನ..!

ಬೆಂಗಳೂರು, : ನಾಳೆ ಸೋಮವಾರ… ಮಂಗಳವಾರ ಶ್ರಾವಣ ಪ್ರಾರಂಭ… ನಾನ್‍ವೆಚ್ ತಿನ್ನಂಗಿಲ್ಲ… ಏನೇ ಆದ್ರೂ ಇವತ್ತು ತಿನ್ನಲೇಬೇಕು… ಕೊರೊನಾ ಒಂದು ಕಡೆ ಇರಲಿ ಎಂಬಂತೆ ನಾನ್‍ವೆಜ್ ಪ್ರಿಯರು ಇಂದು ಬೆಳ್ಳಂಬೆಳಗ್ಗೆ ಮಾಂಸ ಖರೀದಿಗಾಗಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ನಗರದಲ್ಲಿ ಕಂಡುಬಂದವು. ಮಹಾಮಾರಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದ್ದರೂ ಸಹ ನಾನ್‍ವೆಜ್ ಪ್ರಿಯರು ಬೆಳ್ಳಂಬೆಳಗ್ಗೆ ಚಿಕನ್, ಮಟನ್ ಹಾಗೂ ಫಿಷ್ ಖರೀದಿಸಲು ಅಂಗಡಿಗಳ ಮುಂದೆ ಸಾಲು ಸಾಲಾಗಿ ನಿಂತಿದ್ದರು. …

Read More »

ದೂರವಾಣಿ ಕದ್ದಾಲಿಕೆ ಆರೋಪ: ರಾಜಸ್ಥಾನ ಸರ್ಕಾರದ ವಿವರಣೆ ಕೇಳಿದ ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ: ರಾಜಸ್ಥಾನದ ರಾಜಕೀಯದ ಅನಿಶ್ಚಿತತೆ ಮುಂದುವರಿದಿದೆ. ಬಿಜೆಪಿ ನಾಯಕರ ದೂರವಾಣಿ ಸಂಭಾಷಣೆಗಳನ್ನು ರಾಜ್ಯ ಸರ್ಕಾರ ಕದ್ದಾಲಿಕೆ ಮಾಡಿದೆ ಎಂಬ ಆರೋಪ ತೀವ್ರವಾಗುತ್ತಿದ್ದು, ಈ ಬಗ್ಗೆ ರಾಜಸ್ಥಾನ ಸರ್ಕಾರದ ಬಳಿ ಕೇಂದ್ರ ಗೃಹ ಸಚಿವಾಲಯ ವರದಿ ಕೇಳಿದೆ. ರಾಜಸ್ಥಾನದ ಗೆಹ್ಲೋಟ್ ಸರಕಾರವನ್ನು ಉರುಳಿಸಲು ಬಿಜೆಪಿ ಆಮಿಷವೊಡ್ಡಿದೆ ಎಂಬ ಮಾತುಗಳಿಗೆ ಆಧಾರ ಒದಗಿಸುವಂತಹ ಸಂಭಾಷಣೆಗಳುಳ್ಳ ಆಡಿಯೋ ಕ್ಲಿಪ್ ನ್ನು ಕಾಂಗ್ರೆಸ್ ಬಹಿರಂಗಪಡಿಸಿದ್ದು, ಎರಡು ಎಫ್ ಐಆರ್ ಕೂಡಾ ದಾಖಲಾಗಿದೆ. ಈ ಕುರಿತು ಕೂಡಾ …

Read More »

ನಿರ್ಲಕ್ಷಿಸಿದರೆ ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ : ರಾಹುಲ್ ಎಚ್ಚರಿಕೆ

ನವದೆಹಲಿ,ಜು.17- ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲಿ ಆಗಷ್ಟ್ 10 ರ ವೇಳೆಗೆ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಎಡವಿರುವುದರಿಂದ ಈಗಾಗಲೆ ದೇಶದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ಧೋರಣೆ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ 20 ಲಕ್ಷಕ್ಕೂ ಹೆಚ್ಚು ಜನರಿಗೆ …

Read More »

ಸಚಿವ ರಮೇಶ್ ಜಾರಕಿಹೊಳಿ‌ ಅವರು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ

ಹೊಸದಿಲ್ಲಿ: ಮೇಕೆದಾಟು ಸಮಾನಾಂತರ ಅಣೆಕಟ್ಟು ಕಟ್ಟುವ ಕರ್ನಾಟಕ ಸರ್ಕಾರದ ಮನವಿಯನ್ನು ಕೂಡಲೇ ಪುರಸ್ಕರಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದರು. ಕೇಂದ್ರದ ಸಚಿವರಾದ ಪ್ರಲ್ಹಾದ್ ಜೋಶಿ ಸುರೇಶ್ ಅಂಗಡಿ ಅವರೊಂದಿಗೆ ದೆಹಲಿಯ ಜಲಶಕ್ತಿ ಸಚಿವಾಲಯದ ಕಚೇರಿಯಲ್ಲಿ ನಡೆದ ಈ ಭೇಟಿಯ ಸಮಯದಲ್ಲಿ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಒದಗಿಸಲು ಅನುಕೂಲವಾಗುವಂತೆ 4.75 TMC ನೀರನ್ನು ಸದ್ಬಳಕೆ ಮಾಡಿಕೊಳ್ಳುವ …

Read More »

ದೇಶದಲ್ಲಿ ಇನ್ನೂ 3 ತಿಂಗಳು ಕೊರೊನಾ ಆರ್ಭಟ………

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹಳ್ಳಿಯಿಂದ ದಿಲ್ಲಿಗೆ ವ್ಯಾಪಿಸಿಕೊಂಡಿದೆ. ಪ್ರತಿನಿತ್ಯ 25 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು ಮುಂದಿನ ಮೂರು ತಿಂಗಳು ಕೊರೊನಾ ಆರ್ಭಟಿಸಲಿದಯಂತೆ. ಈ ಆತಂಕ ನಡುವೆ ತಜ್ಞರು ಅಕ್ಟೋಬರ್ ಮಧ್ಯ ಭಾಗದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಬಹುದು ಎಂದು ಹೇಳಿದ್ದಾರೆ. ಇಡೀ ವಿಶ್ವವನ್ನೇ ಇನ್ನಿಲ್ಲದಂತೆ ಕಾಡ್ತಿರುವ ಕೊರೊನಾ ದಿನೇ ದಿನೇ ತನ್ನ ಕಬಂಧಬಾಹುವಿನ ಉದ್ದಗಲವನ್ನು ಹೆಚ್ಚಿಸುತ್ತಿದೆ. ಈ ಕೊರೊನಾ ನಿಯಂತ್ರಣ ಮಾಡಲು ಪ್ರತಿದಿನ ಹತ್ತು ಹಲವು ಸಂಶೋಧನೆಗಳು ನಡೆಯುತ್ತಲೇ …

Read More »

ಫೇಸ್ಬುಕ್, ಇನ್‍ಸ್ಟಾಗ್ರಾಮ್ ಸೇರಿ 89 ಆ್ಯಪ್ ಡಿಲೀಟ್ ಮಾಡುವಂತೆ ಸೈನಿಕರಿಗೆ ಸೂಚನೆ

ನವದೆಹಲಿ: ವಿದೇಶಿ ಆ್ಯಪ್ ಬ್ಯಾನ್ ಮಾಡುವ ಕುರಿತು ಕೇಂದ್ರ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, 59 ಚೀನಿ ಆ್ಯಪ್‍ಗಳನ್ನು ದೇಶಾದ್ಯಂತ ಬ್ಯಾನ್ ಮಾಡಿದ ಬಳಿಕ ಇದೀಗ ಸೇನೆಗೆ ವಿಶೇಷ ಸೂಚನೆಯೊಂದನ್ನು ನೀಡಲಾಗಿದೆ. ಕೇಂದ್ರ ಸರ್ಕಾರ ಆ್ಯಪ್ ನಿಷೇಧ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಈಗಾಗಲೇ ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಲಾಗಿದೆ. ಇದೀಗ ಸೇನೆಗೆ 89 ಆ್ಯಪ್‍ಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ. ಭಾರತೀಯ ಸೇನೆ ಈ ಕುರಿತು ಯೋಧರಿಗೆ ಸೂಚನೆ ನೀಡಿದ್ದು, …

Read More »