Breaking News

new delhi

ಬೆಂಗಳೂರಿನ ಗಾಳಿಯಲ್ಲಿ ಹೆಚ್ಚುತ್ತಿರುವ ವಿಷಕಾರಿ ಭಾರಲೋಹ : ತಜ್ಞರಿಂದ ಎಚ್ಚರಿಕೆ

ಬೆಂಗಳೂರು  : ಯೋಜಿತವಲ್ಲದ ನಗರೀಕರಣ, ಹೆಚ್ಚುತ್ತಿರುವ ಇಂಧನಗಳ ಬಳಕೆ, ಕೈಗಾರಿಕೆಗಳಿಂದ ಹೊರಸೂಸುವ ವಿಷಾನಿಲಗಳು ನಗರದಲ್ಲಿ ವಾಯು ಮಾಲಿನ್ಯಕಾರಕಗಳ ಪ್ರಮಾಣವನ್ನು ಹೆಚ್ಚಿಸಿದೆ. ಇದರ ಜೊತೆಗೆ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಭಾರಲೋಹಗಳ ಪ್ರಮಾಣವೂ ನಗರದ ಗಾಳಿಯಲ್ಲಿ ಹೆಚ್ಚುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಇಂಟರ್‍ನ್ಯಾಷನಲ್ ಜರ್ನಲ್ ಆಫ್ ಪ್ಯೂರ್ ಆಂಡ್ ಅಪ್ಲೈಡ್ ರೀಸರ್ಚ್ (ಐಜೆಪಿಎಆರ್) ತನ್ನ ಅಧ್ಯಯನದಲ್ಲಿ ವರದಿಯಲ್ಲಿ ನಗರದ ಪಕ್ಷಿಗಳ ಗರಿಗಳಲ್ಲಿ ಭಾರಲೋಹಗಳನ್ನು ಪತ್ತೆಯಾಗಿರುವುದಾಗಿ ತಿಳಿಸಿದೆ. ಪ್ರಾಣಿಗಳು ಹಾಗೂ ಮನುಷ್ಯರ ಕೂದಲಿನಲ್ಲೂ ಈ ಭಾರ …

Read More »

ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಗೆಜೆಟ್​ ನೋಟಿಫಿಕೇಶನ್​ ಹೊರಡಿಸಲ ಕ್ರಮ: ರಮೇಶ್ ಜಾರಕಿಹೊಳಿ‌

ಬೆಳಗಾವಿ: ಬೆಳಗಾವಿಯ ಪೀರನವಾಡಿಯಲ್ಲಿ ಸ್ಥಾಪಿಸಲಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಕುರಿತು ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು‌ ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ (Ramesh jarakiholi) ಹೇಳಿದರು. ಬೆಳಗಾವಿ ಸಮೀಪದ ಪೀರನವಾಡಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ‌ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ‌, ಸಂಗೊಳ್ಳಿ ರಾಯಣ್ಣ ಪ್ರತಿಮೆ (Sangolli Rayanna statue) ವಿವಾದ ನಿನ್ನೆಯೇ ಸುಖಾಂತ್ಯವಾಗಿರುವುದು ಒಳ್ಳೆಯ ಬೆಳವಣಿಗೆ. ಸಂಗೊಳ್ಳಿ ರಾಯಣ್ಣ ಮತ್ತು‌ ಛತ್ರಪತಿ ಶಿವಾಜಿ ಇಬ್ಬರೂ ದೇಶದ …

Read More »

ಕರುಣಾಜನಕ ಕತೆ.. ಕೊರೊನಾ Bad Timeನಲ್ಲಿ ಮಾರಾಟವಾಗಿದ್ದ ಮಗು ತಾಯಿ ಮಡಿಲಿಗೆ!

ಮನೆ ಬಾಡಿಗೆ ಕಟ್ಟಲು ಸಹ ಹಣವಿಲ್ಲದೆ 3 ವರ್ಷದ ಹೆಣ್ಣು ಮಗುವನ್ನ 11,000 ರುಪಾಯಿಗೆ ಷರತ್ತುಬದ್ದ ಮಾರಾಟ ಮಾಡಲಾಗಿತ್ತು. ಷರತ್ತಿನ ಪ್ರಕಾರ ಮಗುವನ್ನ ತಾಯಿಗೆ ನೋಡಲು ಬಿಡದಿದ್ದಕ್ಕೆ ಠಾಣೆ ಮೆಟ್ಟಿಲೇರಿದ ನೊಂದ ಮಾತೃ ಹೃದಯ.. ಮುಂದೆ ಓದಿ. ನೆಲಮಂಗಲ: ಕೊರೋನಾ ಎಂಬ ಮಹಾಮಾರಿ ಜನರ ಆರ್ಥಿಕ ಪರಿಸ್ಥಿತಿಯನ್ನ ನೆಲ ಕಚ್ಚಿಸಿದ್ದು, ಲಕ್ಷಾಂತರ ಜನ ಬೆಂಗಳೂರಿನಲ್ಲಿ ಮನೆ ಬಾಡಿಗೆ ಸಹ ಕಟ್ಟಲಾಗದೆ ಬೆಂಗಳೂರು ತೊರೆದು ಹಳ್ಳಿಗಳ್ಳತ್ತ ಗಂಟು ಮೂಟೆ ಕಟ್ಟಿಕೊಂಡು ಹೊರಟೇ …

Read More »

ಪಠ್ಯದಲ್ಲಿಲ್ಲದ ಪ್ರಶ್ನೆ ಇದ್ದರೆ ಕೃಪಾಂಕ; ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಡಿಸಿಎಂ ಆಭಯ

ಬೆಂಗಳೂರು: ಎಂಜಿನಿಯರಿಂಗ್‌ ಪರೀಕ್ಷೆಯಲ್ಲಿ ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾದ ವಿಷಯ ಸರಕಾರದ ಗಮನಕ್ಕೆ ಬಂದಿದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೆ ಹಿತಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ತಿಳಿಸಿದರು. ಬೆಂಗಳೂರಿನಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಉಪ ಕುಲಪತಿ ಪ್ರೊ. ಕರಿಸಿದ್ದಪ್ಪ ಅವರೊಂದಿಗೆ …

Read More »

ನೂತನ ಶಿಕ್ಷಣ ನೀತಿ ಜಾರಿ; ರಾಜ್ಯಪಾಲರ ಜತೆ ಡಿಸಿಎಂ ಮಹತ್ವದ ಚರ್ಚೆ

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯಪಾಲ ವಜೂಭಾಯಿ ವಾಲ ಅವರ ಜತೆ ಮಹತ್ವದ ಮಾತುಕತೆ ನಡೆಸಿದರು. ಶುಕ್ರವಾರ ಬೆಂಗಳೂರಿನಲ್ಲಿ ರಾಜಭವನಕ್ಕೆ ಭೇಟಿ ನೀಡಿದ ಡಿಸಿಎಂ, ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಈವರೆಗೆ ಸರಕಾರ ಕೈಗೊಂಡಿರುವ ಕ್ರಮಗಳು, ಕಾರ್ಯಪಡೆ ರಚನೆ, ಆ ಕಾರ್ಯಪಡೆ ಜತೆ ನಡೆಸಿರುವ ಸಭೆಗಳು, ವಿಚಾರ ವಿನಿಮಯ ಇತ್ಯಾದಿ …

Read More »

ಅಗ್ನಿಶಾಮಕ-ಪಾರುಗಾಣಿಕ ತರಬೇತಿ.

ಬೆಂಗಳೂರು,: ಕರ್ನಾಟಕ ಅಗ್ನಿಶಾಮಕ ತುರ್ತು ಸೇವೆಗಳ ಸಹಯೋಗದಲ್ಲಿ ವೈಟ್‍ಫೀಲ್ಡ್‍ನಲ್ಲಿರುವ ಅಲೋಫ್ಟ್ ಹೋಟೆಲ್‍ನಲ್ಲಿ ಅಗ್ನಿಶಾಮಕ ತರಬೇತಿ ಮತ್ತು ಪಾರುಗಾಣಿಕಾ ತರಬೇತಿ ನಡೆಸಲಾಯಿತು. ಜಿಲ್ಲಾ ಅಗ್ನಿಶಾಮಕ ಅಕಾರಿ ಸಿದ್ದಣ್ಣ, ರೇವಪುಟ್ಟಿ, ಅಗ್ನಿಶಾಮಕ ಸಿಬ್ಬಂದಿ ಕಾಶಿನಾಥ್ ಅಲಗೆವಿ, ಬಾಬು ಸಮನೆ ಅವರ ನೇತೃತ್ವದಲ್ಲಿ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ತರಬೇತಿಯಲ್ಲಿ ಜನರನ್ನು ಎತ್ತರದ ಕ್ಕಡದಿಂದ ರಕ್ಷಿಸುವುದು ಹೇಗೆ, ಎಲ್‍ಪಿಜಿ ಗ್ಯಾಸ್ ಸಿಲಿಂಡರ್‍ಗಳ ಸುರಕ್ಷಿತ ಬಳಕೆ, ಅಗ್ನಿಶಾಮಕ ಸಾಧನಗಳ ಬಲಕೆ, ಅಗ್ನಿಶಾಮಕ ರೀಲ್‍ಗಳ ಬಳಕೆ, ರಕ್ಷಣಾ ಕಾರ್ಯಾಚರಣೆ …

Read More »

ಹೊಸ ಶಿಕ್ಷಣ ನೀತಿ ದೂರದೃಷ್ಟಿ ಹೊಂದಿದೆ: ಡಿಸಿಎಂ ಗೋವಿಂದ ಕಾರಜೋಳ ಅಭಿಮತ

ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನರೇಂದ್ರ ಮೋದಿಯವರು ಅಪಾರ ದೂರದೃಷ್ಟಿಯನ್ನು ಇಟ್ಟುಕೊಂಡು ರಚಿಸಿರುವುದು ಭಾರತ ದೇಶದ ಶಿಕ್ಷಣ ವಲಯದಲ್ಲಿ ಇತಿಹಾಸ ಸೃಷ್ಟಿಸಿದೆ ಎಂದು ಡಿಸಿಎಂ  ಗೋವಿಂದ ಕಾರಜೋಳ ಹೇಳಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ 5ನೇ ದಿನದ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಒಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು  ಅಪಾರ ದೂರದೃಷ್ಟಿಯನ್ನು ಇಟ್ಟುಕೊಂಡು ರಚಿಸಿದ್ದಾರೆ. ಇದು ಭಾರತ ದೇಶದ …

Read More »

ತೀವ್ರ ವಿವಾದ ಸೃಷ್ಠಿಸಿದ್ದ ಪೀರನವಾಡಿಯ ಸಂಗೋಳ್ಳಿ ರಾಯಣ್ಣನ ಪುತ್ಥಳಿ ಪ್ರತಿಷ್ಠಾಪನಾ ಸ್ಥಳಕ್ಕೆ ಭೇಟಿ ನೀಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ.

ಬೆಳಗಾವಿ:ತೀವ್ರ ವಿವಾದ ಸೃಷ್ಠಿಸಿದ್ದ ಪೀರನವಾಡಿಯ ಸಂಗೋಳ್ಳಿ ರಾಯಣ್ಣನ ಪುತ್ಥಳಿ ಪ್ರತಿಷ್ಠಾಪನಾ ಸ್ಥಳಕ್ಕೆ ಭೇಟಿ ನೀಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಚಿವರಾದ ಕೆ‌.ಎಸ್.ಈಶ್ವರಪ್ಪ ಅವರು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದ್ರು. ನಿನ್ನೆಯಷ್ಟೇ ಪೀರನವಾಡಿಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ನೂತನವಾಗಿ ಸ್ಥಾಪಿಸಲಾಗಿರುವ ನೂತನ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಚಿವದ್ವಯರು ಪೀರನವಾಡಿ …

Read More »

ಗೃಹ ಸಚಿವರ ಜತೆ ಪ್ರಕರಣ ವಾಪಸ್ ಪಡೆಯುವಂತೆ ಚರ್ಚೆ ನಡೆಸಿದದ್ದೇನೆ: ಸಚಿವ ಈಶ್ವರಪ್ಪ..!

ಬೆಳಗಾವಿ: ನಗರದಲ್ಲಿ ರಾಯಣ್ಣ ಪುತ್ಥಳಿ ಗಲಾಟೆಗೆ ಸಂಬಂಧಿಸಿದಂತೆ 3 ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ವಾಪಸ್ ಪಡೆಯುವ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚೆ ನಡೆಸಿದ್ದೇನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಇಷ್ಟು ಸುಲಭವಾಗಿ ಮೂರ್ತಿ ವಿವಾದ ಇತ್ಯರ್ಥ ಆಗುತ್ತದೆ ಅಂತಾ ನನಗೆ ಗೊತ್ತಿರಲಿಲ್ಲ. ಶಿವಾಜಿ, ರಾಯಣ್ಣ ಮೂರ್ತಿ ವಿವಾದ ಇತ್ಯರ್ಥವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಇಬ್ಬರ ಹೋರಾಟ ಸ್ಮರಣೀಯವಾಗಿದೆ. ಕೆಲ ಸಂಕುಚಿತ ಭಾವನೆ ಬೇರೆ ಬೇರೆ …

Read More »

ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಪ್ರಕರಣ ಸೌಹಾರ್ದತೆಯಿಂದ ಇತ್ಯರ್ಥವಾಗಿದೆ.

ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಪ್ರಕರಣ ಸೌಹಾರ್ದತೆಯಿಂದ ಇತ್ಯರ್ಥವಾಗಿದೆ. ಇಬ್ಬರು ಮಹಾನ್ ನಾಯಕರಿಗೆ ಅಗೌರವ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ನಿನ್ನೆಯ ಮೂರ್ತಿ ಪ್ರತಿಷ್ಠಾಪನೆ ‌ಹಾಗೂ ಲಾಠಿ ಚಾರ್ಜ್ ಕುರಿತು ದಾಖಲಾಗಿರುವ ಪ್ರಕರಣಗಳನ್ನ ವಾಪಸ್ ಪಡೆಯುವ ಕುರಿತು ಸಿಎಂ ಜತೆಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು‌ ಎಂದ್ರು. ಕನ್ನಡ ಪರ ಹೋರಾಟಗಾರರ ಮೇಲೆ ಕೇಸ್ ವಿಚಾರ ಹಿಂಪಡೆಯಬೇಕೆಂಬ ಒತ್ತಡಗಳ …

Read More »