Breaking News

ಸಿನೆಮಾ

ರಾಜ್‌ಕುಮಾರ್ ಪ್ರತಿಷ್ಠಾನದಲ್ಲಿನ ಡಾ|| ರಾಜ್‌ಕುಮಾರ್ ಸಮಾಧಿ ಸಮೀಪ ನೆರವೇರಿಸಲು ಸರಕಾರಿ ಒಪ್ಪಿಗೆ

ಬೆಂಗಳೂರು – ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ||ರಾಜ್‌ಕುಮಾರ್ ಪ್ರತಿಷ್ಠಾನದಲ್ಲಿನ ಡಾ|| ರಾಜ್‌ಕುಮಾರ್ ಸಮಾಧಿ ಸಮೀಪ ನೆರವೇರಿಸಲು ಸರಕಾರಿ ಒಪ್ಪಿಗೆ ನೀಡಿದೆ.  ಕನ್ನಡ ಚಿತ್ರರಂಗದ ನಾಯಕನಟ  ಪುನೀತ್ ರಾಜ್‌ಕುಮಾರ್  ಶುಕ್ರವಾರ ಅಪರಾಹ್ನ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ||ರಾಜ್‌ಕುಮಾರ್ ಪ್ರತಿಷ್ಠಾನದಲ್ಲಿನ ಡಾ|| ರಾಜ್‌ಕುಮಾರ್ ಸಮಾಧಿ ಸಮೀಪ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಸೂಚಿಸಿರುತ್ತಾರೆ. ಆದ …

Read More »

ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ರಿಷಬ್‌ ಶೆಟ್ಟಿ

ಬೆಂಗಳೂರು: ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಹೀಗೆಂದು ಸಿನಿಮಾ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ. ಭಾಷಾ ಸೂಕ್ಷ್ಮ ಪ್ರದೇಶವಾಗಿರುವ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕೋವಿಡ್‌ ನಿಯಮಗಳಿಗೆ ಒಳಪಟ್ಟು ಆಚರಣೆ ಮಾಡಬೇಕಾಗಿ ಇತ್ತೀಚಿನ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯೋತ್ಸವದ ಅದ್ಧೂರಿ ಆಚರಣೆಗೆ ಅವಕಾಶ ಕೋರಿ ಈಗಾಗಲೇ ಕನ್ನಡ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿವೆ. ಹೀಗಿರುವಾಗಲೇ ಟ್ವೀಟ್‌ ಮಾಡಿ ಅಭಿಪ್ರಾಯ ಹಂಚಿಕೊಂಡಿರುವ ನಟ, ನಿರ್ದೇಶಕ ರಿಷಬ್‌ ಶೆಟ್ಟಿ, ಕನ್ನಡ …

Read More »

ಚುನಾವಣೆಯಲ್ಲಿ ನಾನು ಕಣಕ್ಕಿಳಿಯುತ್ತೇನೆ ಎಂದ ವಾಟಾಳ್ ನಾಗರಾಜ್

ಮೈಸೂರು: ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದು ಕನ್ನಡಪರ ಹೋರಾಟಗಾರ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು. ಮುಂಬರುವ ಪರಿಷತ್ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದರು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ಆಯ್ಕೆಯಾಗಲು ನಡೆಯುವ ಚುನಾವಣೆಯಲ್ಲಿ ನಾನು ಕಣಕ್ಕಿಳಿಯುತ್ತೇನೆ. ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳೇ ಮತದಾರರಾಗಿರುತ್ತಾರೆ. ಎರಡು ಮತ ಚಲಾವಣೆಗೆ ಅವಕಾಶವಿದೆ. ನನಗೊಂದು ಮತ ಕೊಡಿ ಉಳಿದೊಂದು …

Read More »

ಕೊಟ್ಟಿಗೊಬ್ಬ 3ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಗಂಭೀರ ಆರೋಪ

ಆಯುಧಪೂಜೆ ದಿನವಾದ ಅಕ್ಟೋಬರ್ 14 ರಂದು ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೆಲವು ವಿತರಕರು ಸಂಚು ಮಾಡಿದ್ದರಿಂದ ವಿತರಣೆ ಒಂದು ದಿನ ವಿಳಂಬವಾಗಿದೆ. ಸಂಚು ಮಾಡಿದ ವಿತರಕರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ. ಆದರೆ, ಸೂರಪ್ಪ ಬಾಬು ಅವರ ವಿರುದ್ಧವೇ ವಿತರಕ ಖಾಜಾಪೀರ್ ಗಂಭೀರ ಆರೋಪ ಮಾಡಿದ್ದಾರೆ. ನೀಡಿದ ಹಣವನ್ನು ವಾಪಸ್ ಕೊಡದೆ ಸೂರಪ್ಪಬಾಬು ಕೊಲೆ ಬೆದರಿಕೆ ಹಾಕಿರುವುದಾಗಿ ಚಿತ್ರದುರ್ಗದ ಸಿನಿಮಾ …

Read More »

ಕೆಪಿಸಿಸಿಯಿಂದ ಆರು ವರ್ಷಗಳ ಕಾಲ ಉಚ್ಛಾಟಿತ ಆಗಿರುವ ಎಂ.ಎ. ಸಲೀಂ ಡಿ.ಕೆ. ಶಿವಕುಮಾರ್ ಅವರಿಗೆ ಕೈಮುಗಿದು ಕ್ಷಮೆ ಕೋರಿದ್ದಾರೆ.

ಕೆಪಿಸಿಸಿಯಿಂದ ಆರು ವರ್ಷಗಳ ಕಾಲ ಉಚ್ಛಾಟಿತ ಆಗಿರುವ ಎಂ.ಎ. ಸಲೀಂ ಡಿ.ಕೆ. ಶಿವಕುಮಾರ್ ಅವರಿಗೆ ಕೈಮುಗಿದು ಕ್ಷಮೆ ಕೋರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಕುರಿತು ಲಘುವಾಗಿ ಮತ್ತ ಬೇಜವಾಬ್ದಾರಿಯಿಂದ ಮಾತನಾಡಿದ ಕಾರಣ ಸಲೀಂ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿ ಪಕ್ಷದ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಡಾ.ಕೆ. ರೆಹಮಾನ್ ಖಾನ್ ಬುಧವಾರ ಆದೇಶ ಹೊರಡಿಸಿದ್ದರು. ಎಂ.ಎ. ಸಲೀಂ ಕೆಪಿಸಿಸಿ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು. “ಡಿ.ಕೆ. …

Read More »

‘ಸಲಗ’ ಚಿತ್ರದ ಫಸ್ಟ್​ ಹಾಫ್​ ರಿಪೋರ್ಟ್​

ಭಾರಿ ನಿರೀಕ್ಷೆ ಮೂಡಿಸಿದ್ದ ‘ಸಲಗ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್​ ಅವರ ನಟನೆ ಮತ್ತು ನಿರ್ದೇಶನ ಹೇಗಿದೆ? ಮಧ್ಯಂತರದವರೆಗೆ ಈ ಸಿನಿಮಾದಲ್ಲಿ ಏನುಂಟು ಏನಿಲ್ಲ ಅಂತ ತಿಳಿಯಲು ಈ ರಿಪೋರ್ಟ್​ ಓದಿ. ರಾಜ್ಯಾದ್ಯಂತ ‘ಸಲಗ’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ನಟ ದುನಿಯಾ ವಿಜಯ್​ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವುದರಿಂದ ಅಭಿಮಾನಿಗಳು ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದು …

Read More »

ಇಂದು ರಿಲೀಸ್ ಆಗಲೇ ಇಲ್ಲ ಕೋಟಿಗೊಬ್ಬ : ಸುದೀಪ್ ಸರ್ ಗೆ ಸತ್ಯ ಗೊತ್ತಿದೆ ಎಂದ ಸೂರಪ್ಪ ಬಾಬು

ಬೆಂಗಳೂರು: ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗದ ಕಾರಣ ಅಭಿಮಾನಿಗಳಲ್ಲಿ ನಟ ಕಿಚ್ಚಾ ಸುದೀಪ್ ಕ್ಷಮೆ ಕೇಳಿದ್ದಾರೆ. ಟ್ವಿಟ್ಟರ್ ನಲ್ಲಿ ಕ್ಷಮೆಯಾಚಿಸಿರುವ ಸುದೀಪ್, ಈಗಾಗಲೇ ಥಿಯೇಟರ್​ಗಳ ಬಳಿ ಆಗಮಿಸಿರುವ ಎಲ್ಲ ಅಭಿಮಾನಿಗಳಿಗೂ ಶೋ ತಡವಾದ ಬಗ್ಗೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ಥಿಯೇಟರ್ ನಲ್ಲಿ ಸಿನಿಮಾ ಇದೆ.. ಆದರೆ ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ತೋರಿಸಲು ಆಗುತ್ತಿಲ್ಲ ಎಂದಿದ್ದಾರೆ.       ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ ಸುದೀಪ್ ಸದ್ಯ …

Read More »

ಸಲ್ಮಾನ್ ಖಾನ್ ನಿರ್ಮಿಸಿ ನಟಿಸುತ್ತಿರುವ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ

ಕೆಜಿಎಫ್ ಚಾಪ್ಟರ್ 1 ಚಿತ್ರದೊಂದಿಗೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ರವಿ ಬಸ್ರೂರ್‌ಗೆ ಬಾಲಿವುಡ್‌ನಿಂದ ಹೆಚ್ಚು ಆಫರ್ ಬರ್ತಿದೆ. ಒಂದರ ಹಿಂದೆ ಮತ್ತೊಂದು ಎನ್ನುವಂತೆ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡ್ತಿದ್ದಾರೆ ಬಸ್ರೂರ್. ಇದೀಗ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರ್ಮಿಸಿ ನಟಿಸುತ್ತಿರುವ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನಿರ್ದೇಶಿಸುತ್ತಿದ್ದಾರೆ. ಈ ಕುರಿತು ಸ್ವತಃ ರವಿ ಬಸ್ರೂರ್ ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ”ಭಾರತದ ಬಾಯಿಜಾನ್ ಸಲ್ಮಾನ್ ಖಾನ್ ಜೊತೆ …

Read More »

ಶಾರುಖ್ ಖಾನ್ ಪುತ್ರನಿಗೆ ಸಿಗದ ಜಾಮೀನು

ಮುಂಬೈ: ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾದ ಪ್ರಕರಣದಡಿ ಬಂಧಿತರಾಗಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಮತ್ತೆ ಎನ್.ಸಿ.ಬಿ. ಕಸ್ಟಡಿಗೆ ನೀಡಲಾಗಿದೆ. ಇಂದು ವಿಚಾರಣೆ ನಡೆಸಿದ ಮುಂಬೈನ ಕಿಲ್ಲಾ ಕೋರ್ಟ್ ಅಕ್ಟೋಬರ್ 7 ರವರೆಗೆ NCB ಕಸ್ಟಡಿಗೆ ನೀಡಿ ಆದೇಶ ನೀಡಿದೆ. ಮುಂಬೈ ಗೋವಾ ನಡುವೆ ಸಮುದ್ರದ ಐಷಾರಾಮಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಶನಿವಾರ ರಾತ್ರಿ ಎನ್.ಸಿ.ಬಿ. ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಆರ್ಯನ್ …

Read More »

ರಾನು ಮಂಡಲ್​ ಕಂಠದಲ್ಲಿ ‘ಮನಿಕೆ ಮಗೆ ಹಿತೆ’; ಕಿರಿಕಿರಿ ತಾಳಲಾಗದೇ ಕಮೆಂಟ್​ ಮಾಡುತ್ತಿರುವ ನೆಟ್ಟಿಗರು

ಯೂಟ್ಯೂಬ್​, ಇನ್​ಸ್ಟಾಗ್ರಾಮ್​ ಮತ್ತು ಇತರೆ ಸೋಶಿಯಲ್​ ಮೀಡಿಯಾದಲ್ಲಿ ‘ಮನಿಕೆ ಮಗೆ ಹಿತೆ’ (Manike Mage Hithe) ಹಾಡನ್ನು ಕೇಳದವರೇ ಇಲ್ಲ. ಅಷ್ಟರಮಟ್ಟಿಗೆ ಈ ಗೀತೆ ಫೇಮಸ್​ ಆಗಿದೆ. ಶ್ರೀಲಂಕಾದ ಗಾಯಕಿ ಯೊಹಾನಿ ಕಂಠದಲ್ಲಿ ಮೂಡಿಬಂದಿರುವ ಈ ಹಾಡು 135 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಇದರದ್ದೇ ಹಾವಳಿ. ಜನ ಸಾಮಾನ್ಯರು ಮಾತ್ರವಲ್ಲದೇ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ‘ಮನಿಕೆ ಮಗೆ ಹಿತೆ’ ಹಾಡಿಗೆ ಮರುಳಾಗಿದ್ದಾರೆ. ಆದರೆ ಅದೇ …

Read More »