ಬೆಳಗಾವಿ: ಗೋಟೂರ ಗ್ರಾಮ ಪಂಚಾಯತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಶಕ್ಷರಾಗಿ ಅಶೋಕ ಗಂಗನ್ನವರ ಹಾಗೂ ಉಪಾಧ್ಶಕ್ಷರಾಗಿ ಲತಾ ನಿಂಗನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕ ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಇವರನ್ನು ಆಯ್ಕೆ ಮಾಡಲಾಗಿದೆ. ಮುಖಂಡರಾದ ಬಸು ಜತ್ತಿ, ಪ್ರಕಾಶ ಬಸ್ಸಾಪುರಿ, ಪಪ್ಪುಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ನಿಂಗನಗೌಡ ಪಾಟೀಲ, ರವಿಂದ್ರ ಮಾಸೇವಾಡಿ, ಗುರುನಾಥ ಶಿಂದೆ, ಹನುಮಂತ ಶೇಖನವರ, ರಾಜು ನಾಯಿಕ, ಸುಭಾಸ ಘಸ್ತಿ, …
Read More »ರೈತರ ಪ್ರತಿಭಟನೆ ನಡೆಯುತ್ತಿರುವ ಸಿಂಘು ಗಡಿಗೆ ಶಿವಸೇನಾ ಸಂಸದ ಸಂಜಯ್ ರಾವತ್
ನವದೆಹಲಿ: ಕಳೆದ ನವೆಂಬರ್ ನಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಗಳ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಾ ಸ್ಥಳಗಳಲ್ಲಿ ಒಂದಾದ ದೆಹಲಿ ಮತ್ತು ಹರಿಯಾಣ ನಡುವಿನ ಸಿಂಘು ಗಡಿಗೆ ಶಿವಸೇನೆ ಸಂಸದ ಸಂಜಯ್ ರಾವುತ್ ಮಂಗಳವಾರ ಭೇಟಿ ನೀಡಲಿದ್ದಾರೆ. 60 ದಿನಗಳಿಂದ ರೈತರ ಪ್ರತಿಭಟನೆ ಕೇಂದ್ರವಾಗಿರುವ ಪ್ರತಿಭಟನಾ ಸ್ಥಳಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಸಲಹೆ ಮೇರೆಗೆ ಭೇಟಿ ನೀಡಲು ರಾವತ್ ನಿರ್ಧರಿಸಿದ್ದಾರೆ. …
Read More »ಹಿಮಪಾತದಿಂದ ರಸ್ತೆ ಬಂದ್; ಸೇನಾ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ನವದೆಹಲಿ: ಆಸ್ಪತ್ರೆಗೆ ತೆರಳುವಾಗಲೇ ಭಾರಿ ಹಿಮಪಾತವಾದ್ದರಿಂದ, ಮಹಿಳೆಯೊಬ್ಬರು ಭಾರತೀಯ ಸೇನೆಯ ಆಂಬ್ಯುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಕುಪ್ವಾರದ ನರಿಕೂಟ್ ನಲ್ಲಿ ಭಾರಿ ಹಿಮಪಾತವಾಗುತ್ತಿದ್ದರಿಂದ ಆಶಾ ಕಾರ್ಯಕರ್ತೆಯೊಬ್ಬರು ಸೇನಾ ಆಯಂಬುಲೆನ್ಸ್ ಗೆ ಕರೆ ಮಾಡಿ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವಂತೆ ಕೋರಿಕೊಂಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಸೇನಾ ಆಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಹೋಗುವಾಗ ಗರ್ಭಿಣಿ ಮಹಿಳೆಯ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ …
Read More »ನರೇಂದ್ರ ಮೋದಿ ಸರಕಾರ ಬಡವರ ವಿರೋಧಿ ಸರಕಾರ ಎನ್ನುವುದನ್ನು ಈ ಬಜೆಟ್ ಮತ್ತೊಮ್ಮೆ ಸಾಬೀತು: ಲಕ್ಷ್ಮಿ ಹೆಬ್ಬಾಳಕರ್
ಬೆಳಗಾವಿ – ಕೇಂದ್ರ ಸರಕಾರ ಸೋಮವಾರ ಮಂಡಿಸಿರುವ ಬಜೆಟ್ ಬಡವರ ಬೆನ್ನಿಗೆ ಚಿನ್ನದ ಚೂರಿ ಹಾಕಿದಂತಿದೆ ಎಂದು ಶಾಸಕಿ, ಕೆಪಿಸಿಸಿ ವಕ್ತಾರೆ ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ. ಬಡವರು ಬಳಸುವ ಬಹುತೇಕ ಉತ್ಪನ್ನಗಳ ಮೇಲೆ ಸೆಸ್ ವಿಧಿಸಲಾಗಿದೆ. ಕೊರೋನಾದಿಂದ ಕಂಗೆಟ್ಟಿರುವ ರೈತರು, ಜನಸಾಮಾನ್ಯರಿಗೆ ವಿಶೇಷ ಪ್ಯಾಕೇಜ್ ಏನನ್ನಾದರೂ ಘೋಷಿಸಬಹುದು. ಮುಳುಗಿರುವ ಬಡವರನ್ನು ಮೇಲೆತ್ತುವ ಯೋಜನೆ ಜಾರಿಗೊಳಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈ ಹಿಂದೆ ಘೋಷಿಸಿದ್ದ 20 ಲಕ್ಷ ರೂ. ಕೃಷಿ …
Read More »ಆರ್ಥಿಕತೆಗೆ ಚೈತನ್ಯ ತುಂಬುವ ಬಜೆಟ್ : ಬಾಲಚಂದ್ರ ಜಾರಕಿಹೊಳಿ
ಗೋಕಾಕ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದು, ಸಮಾಜದ ಪ್ರತಿಯೊಬ್ಬರಿಗೂ ಈ ಬಜೆಟ್ ಸಹಕಾರಿಯಾಗಿದೆ ಎಂದು ಶ್ಲಾಘಿಸಿದ್ದಾರೆ. ಕೃಷಿ ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಎಲ್ಲ ನಾಗರೀಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಜನಪರ ಹಾಗೂ ರೈತಪರ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಥಿಕತೆಗೆ ಚೈತನ್ಯ ತುಂಬಲು ಇನ್ನೂ ಎರಡು ಆತ್ಮನಿರ್ಭರ ಪ್ಯಾಕೇಜ್ ಘೋಷಿಸಲಾಗಿದೆ. …
Read More »“ಆತ್ಮ ಬರ್ಬಾದ್” ಬಜೆಟ್ ಘೋಷಿಸಿದ್ದಾರೆ ನಿರ್ಮಲಾ : ಸಿದ್ದರಾಮಯ್ಯ
ಬೆಂಗಳೂರು : ನಾನು ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ನಿರ್ಮಲಾ ಅವರು “ಆತ್ಮ ಬರ್ಬಾದ್” ಬಜೆಟ್ ಕೊಟ್ಟಿದ್ದಾರೆ ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಬಟೆಜ್ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ ಅದನ್ನು ಚೇತರಿಕೆ ಹಾದಿಗೆ ತರುತ್ತಾರೆ ಎಂಬ ನಿರೀಕ್ಷೆ ಇತ್ತು ಅದು ಹುಸಿಯಾಗಿದೆ. ಬಹಳ ಜನರು ಕೊರೊನಾ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡಿದ್ದರು. …
Read More »ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 684 ಮದ್ಯದ ಬಾಟಲ ವಶಕ್ಕೆ
ಬೆಳಗಾವಿ: ಬಸ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 684 ಮದ್ಯದ ಬಾಟಲುಗಳನ್ನು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಟ ಬಳಿ ನಡೆದಿದೆ. ಬೆಳಗಾವಿ ಉಪ ವಿಭಾಗ ಹಾಗೂ ತನಿಖಾ ಠಾಣೆಯ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಿಳಿ ಬಣ್ಣದ ಅಶೋಕಾ ಲೈಲ್ಯಾಂಡ್ ಕಂಪನಿಯ ಎಸಿ ಬಸ್ ನಿಲ್ಲಿಸಿ ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ. ಪ್ರಕರಣ …
Read More »ಕಿಚ್ಚಾ ಸುದೀಪ ಅಭಿನಯದ ಕನ್ನಡ ಚಲನಚಿತ್ರ “ವಿಕ್ರಾಂತ ರೋಣಾ” ದ ಶಿರ್ಷೀಕೆ ದುಬೈನ ಬುರ್ಜ ಖಲಿಫಾದ ಮೇಲೆ ಬಿಡುಗಡೆ
ಗೋಕಾಕ: ಕಿಚ್ಚಾ ಸುದೀಪ ಅಭಿನಯದ ಕನ್ನಡ ಚಲನಚಿತ್ರ “ವಿಕ್ರಾಂತ ರೋಣಾ” ದ ಶಿರ್ಷೀಕೆ ಹಾಗೂ ಲಾಂಛನವನ್ನು ಜನೆವರಿ 31ರಂದು ದುಬೈನ ಬುರ್ಜ ಖಲಿಫಾದ ಮೇಲೆ ಬಿಡುಗಡೆ ಮಾಡುವ ಮೂಲಕ ವಿಶ್ವದಾಖಲೆ ಮಾಡಲಿದೆ. ಎರಡು ಸಾವಿರ ಅಡಿ ಎತ್ತರದ ನಟ ಕಿಚ್ಚಾ ಸುದೀಪ ಅವರ ಕಟೌಟನ್ನು ಈ ಕಟ್ಟಡದಲ್ಲಿ ಹಾಕುವ ಮೂಲಕ ಚಲನಚಿತ್ರ ರಂಗದಲ್ಲಿಯೇ ಅತೀ ಎತ್ತರದ ಕಟೌಟನಲ್ಲಿ ರಾರಾಜಿಸುವ ಕೀರ್ತಿಗೆ ಸುದೀಪ ಪಾತ್ರರಾಗುತ್ತಿದ್ದಾರೆ. ಈ ದೃಶ್ಯವನ್ನು ಭಾರತದಲ್ಲಿ ಜನೇವರಿ 31ರ …
Read More »ದೆಹಲಿ ಗಡಿಯಲ್ಲಿ ಇಂಟರ್‌ನೆಟ್ ಸೇವೆ ಬಂದ್
ನವದೆಹಲಿ/ ಬೆಂಗಳೂರು: ದೆಹಲಿ ಗಡಿಗಳಲ್ಲಿ ಹೈಡ್ರಾಮಾ ಮುಂದುವರಿದಿದೆ. ಮೊನ್ನೆ ಘಾಜಿಪುರ ಗಡಿಯಲ್ಲಿ ಕರೆಂಟ್, ನೀರು ಕಡಿತಗೊಳಿಸಿದ್ದ ಸರ್ಕಾರ ಈಗ ರೈತರು ಪ್ರತಿಭಟನೆ ನಡೆಸುತ್ತಿರುವ ಎಲ್ಲ ಗಡಿಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಇದ್ದಕ್ಕಿದ್ದಂತೆ ಬಂದ್ ಮಾಡಿದೆ. ಸಿಂಘು, ಟಿಕ್ರಿ, ಗಾಜಿಪುರ್ ಗಡಿಯಲ್ಲಿ ಜ.31ರ ರಾತ್ರಿ 11 ಗಂಟೆಯವರೆಗೆ ತಾತ್ಕಾಲಿಕವಾಗಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ನಡೆಯುತ್ತಿರುವ ರೈತರ ಪ್ರತಿಭಟನೆಯ ಮಧ್ಯೆ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ …
Read More »ಮಹಿಳೆಯರ ಭಾವನೆಗೆ ಧಕ್ಕೆ – ಮಿಂತ್ರಾದಿಂದ ಲೋಗೋ ಬದಲಾವಣೆ
ಮುಂಬೈ: ಬಟ್ಟೆಗಳನ್ನು ಮಾರಾಟ ಮಾಡುತ್ತಿರುವ ಖ್ಯಾತ ಆನ್‌ಲೈನ್ ಶಾಪಿಂಗ್ ತಾಣ ಮಿಂತ್ರಾ ಮಹಿಳೆಯೊಬ್ಬರ ದೂರಿನ ಹಿನ್ನೆಲೆಯಲ್ಲಿ ತನ್ನ ಲೋಗೋವನ್ನು ಬದಲಾಯಿಸಿದೆ. ಸರ್ಕಾರೇತರ ಸಂಸ್ಥೆ ಅವೆಸ್ಟಾ ಫೌಂಡೇಶನಿನ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ನಾಜ್ ಪಟೇಲ್ ಎಂಬುವವರು ಕಳೆದ ಡಿಸೆಂಬರ್ನಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಲೋಗೋ ಬದಲಾವಣೆ ಮಾಡದೇ ಇದ್ದರೆ ಮುಂಬೈ ಮೂಲದ ಕಂಪನಿ ವಿರುದ್ಧ ಕಾನೂನು ಸಮರ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಮಿಂತ್ರಾ ಲೋಗೋ ಬೆತ್ತಲೆ …
Read More »
Laxmi News 24×7