ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಹಾಗು ದಸರಾ ರಜೆ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ 2,000ಕ್ಕೂ ಹೆಚ್ಚು ಬಸ್ಗಳ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ಕಲ್ಪಿಸಿದ್ದು, ನಿಗಮದ ಎಲ್ಲಾ ವಿಭಾಗಗಳಲ್ಲಿ ದಸರಾ ವಿಶೇಷ ಕಾರ್ಯಾಚರಣೆಗೆ ವಿಧ್ಯುಕ್ತವಾಗಿ ಬಸ್ಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ದಸರಾ ವಿಶೇಷ ಕಾರ್ಯಾಚರಣೆ ಅಂಗವಾಗಿ ಅಲಂಕೃತ ವಾಹನಗಳಿಗೆ …
Read More »ನ್ಯಾಯಾಲಯದ ಆದೇಶವಿದ್ದರೂ, ಪತಿಯೊಂದಿಗೆ ಬಾರದ ಪತ್ನಿ: ವಿಚ್ಛೇದನಕ್ಕೆ ಆಧಾರ- ಹೈಕೋರ್ಟ್
ಬೆಂಗಳೂರು: ಪತಿಯನ್ನು ಸೇರುವಂತೆ ನ್ಯಾಯಾಲಯದ ಆದೇಶವಿದ್ದರೂ ಸಹ ಪತ್ನಿ ಅದನ್ನು ಪಾಲಿಸದಿರುವುದು ವಿವಾಹ ವಿಚ್ಚೇದನಕ್ಕೆ ಆಧಾರವಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಆರ್.ಕೃಷ್ಣಕುಮಾರ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ್ ಅವರಿದ್ದ ವಿಭಾಗೀಯಪೀಠ ಇತ್ತೀಚೆಗೆ ಈ ಆದೇಶ ನೀಡಿ, ವಿಚ್ಚೇದನ ಮಂಜೂರು ಮಾಡಿತು. ನ್ಯಾಯಾಲಯ ವೈವಾಹಿಕ ಹಕ್ಕು ಪುನರ್‌ಸ್ಥಾಪನೆ ಸಂಬಂಧ ಏಕಪಕ್ಷೀಯ ಆದೇಶ ಹೊರಡಿಸಿ ಪತಿಯನ್ನು ಸೇರುವಂತೆ ಪತ್ನಿಗೆ ಆದೇಶಿಸಿದೆ. ಪತ್ನಿ ಒಂದುವರೆ ವರ್ಷ ಕಳೆದರೂ ಆದೇಶವನ್ನು …
Read More »ಅರ್ಧ ಶತಕೋಟಿ ಕಂಪ್ಯೂಟರ್ಗಳಲ್ಲಿ ಓಡುತ್ತಿದೆ ವಿಂಡೋಸ್ 11 ಓಎಸ್: ನಿರೀಕ್ಷೆ ಮೀರಿದ ಸಾಧನೆ
ನವದೆಹಲಿ: ಮೈಕ್ರೋಸಾಫ್ಟ್ನ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಪ್ರಸ್ತುತ 400 ದಶಲಕ್ಷಕ್ಕೂ ಹೆಚ್ಚು ಇನ್ಸ್ಟಾಲ್ ಆಗಿದ್ದು, 2024 ರ ಆರಂಭದಲ್ಲಿ ಈ ಸಂಖ್ಯೆ 500 ಮಿಲಿಯನ್ ತಲುಪುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ವಿಂಡೋಸ್ 11 ಈಗ ಸುಮಾರು ಅರ್ಧ ಶತಕೋಟಿ ಸಾಧನಗಳಲ್ಲಿ ಸಕ್ರಿಯವಾಗಿದೆ, ಇದು ಕಂಪನಿಯ ನಿರೀಕ್ಷೆಗಳಿಗಿಂತ ಹೆಚ್ಚಾಗಿದೆ ಎಂದು ಮೈಕ್ರೋಸಾಫ್ಟ್ ಆಂತರಿಕ ಡೇಟಾ ಉಲ್ಲೇಖಿಸಿ ವಿಂಡೋಸ್ ಸೆಂಟ್ರಲ್ ವರದಿ ಮಾಡಿದೆ. ವಿಂಡೋಸ್ 10 ಬಿಡುಗಡೆಯಾದ ಒಂದು ವರ್ಷದ ನಂತರ …
Read More »ದೇವೇಗೌಡರ ಪುತ್ರ ವ್ಯಾಮೋಹ ಸಾಬೀತಾಗಿದೆ; ಉಚ್ಚಾಟನೆ ನಿರ್ಧಾರವನ್ನು ಚು.ಆಯೋಗದಲ್ಲಿ ಪ್ರಶ್ನಿಸುವೆ: ಸಿ.ಎಂ.ಇಬ್ರಾಹಿಂ
ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ಪುತ್ರ ವ್ಯಾಮೋಹ ಇರುವುದು ಸಾಬೀತಾಗಿದೆ. ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಕಾದು ನೋಡಿ ಎಂದು ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟಿತರಾದ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಬೆನ್ಸನ್ ಟೌನ್‌ನಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜೆಡಿಎಸ್ ನಾಯಕರಿಗೆ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವ ಅಧಿಕಾರ ಇಲ್ಲ. ಕಾರ್ಯಕಾರಿ ಸಮಿತಿಯ 2/3ನೇ ಸದಸ್ಯರ ಅನುಮತಿ ಪಡೆದು ಮೊದಲು ನನಗೆ ನೊಟೀಸ್ ಕೊಡಬೇಕು. ನಾನು ಚುನಾವಣಾ …
Read More »ಭಾರತ – ಬಾಂಗ್ಲಾ ಮುಖಾಮುಖಿ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ
ಪುಣೆ (ಮಹಾರಾಷ್ಟ್ರ): ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ರೋಹಿತ್ ಶರ್ಮಾ ಪಡೆಯ ಭಾರತಕ್ಕೆ ಕ್ಷೇತ್ರ ರಕ್ಷಣೆಯ ಹೊಣೆ ಹೊರೆಸಿದ್ದಾರೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಇಂದಿನ ಪಂದ್ಯದ ಆತಿಥ್ಯ ವಹಿಸಿಕೊಂಡಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸತತ ಮೂರು …
Read More »ಮಹಾರಾಷ್ಟ್ರದಲ್ಲಿ ಜೋರಾದ ಮರಾಠಾ ಮೀಸಲಾತಿ ಹೋರಾಟ
ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಬೇಡಿಕೆ ಜೋರಾಗಿದೆ. ಇದರ ನಡುವೆ ಮುಂಬೈನಲ್ಲಿ ಮೀಸಲಾತಿಗೆ ಒತ್ತಾಯಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ. ಜಲ್ನಾ ಜಿಲ್ಲೆಯ ಚಿಕಂಗಾವ್ ಮೂಲದ ಸುನೀಲ್ ಬಾಬುರಾವ್ ಕಾವ್ಲೆ ಮೃತ ಎಂದು ಗುರುತಿಸಲಾಗಿದೆ. ಮರಾಠಾ ಮೀಸಲಾತಿಗಾಗಿ ಕೆಲ ದಿನಗಳ ಹಿಂದೆ 150 ಎಕರೆ ಜಾಗದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶಗೊಂಡಿದ್ದ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಬುಧವಾರದಿಂದ ಮುಂಬೈ ಪ್ರವಾಸದಲ್ಲಿದ್ದಾರೆ. ಇಂದು ನವಿ ಮುಂಬೈ ಸೇರಿದಂತೆ ಹಲವು …
Read More »ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ.: ಸತೀಶ್ ಜಾರಕಿಹೊಳಿ
ಬೆಂಗಳೂರು : ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ. ನನ್ನ ಮೌನ ದೌರ್ಬಲ್ಯವಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಬೆಳಗಾವಿ ಜಿಲ್ಲೆ ಹಸ್ತಕ್ಷೇಪ ವಿಚಾರವಾಗಿ ಪ್ರತಿಕ್ರಿಯಿಸಿ, ವರ್ಗಾವಣೆ ವಿಚಾರವಾಗಿ ಹಸ್ತಕ್ಷೇಪವಾಗಿದೆ. ಈ ಹಿಂದೆ ಸಾಕಷ್ಟು ಬಾರಿ ಆಗಿದೆ. ನಾನು ಕೂಡ ಕಾಂಪ್ರಮೈಸ್ ಮಾಡಿಕೊಂಡಿದ್ದೇನೆ. ನಾನು ಅನುಸರಿಸಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು. ಪಕ್ಷದ ಹಿತದೃಷ್ಟಿಯಿಂದ …
Read More »ಆನ್ಲೈನ್ ಗೇಮ್ಸ್ನಲ್ಲಿ 1.5 ಕೋಟಿ ರೂ. ಗೆದ್ದಿದ್ದ ಪಿಎಸ್ಐ ಅಮಾನತು
ಪುಣೆ (ಮಹಾರಾಷ್ಟ್ರ): ಆನ್ಲೈನ್ ಗೇಮಿಂಗ್ ಆಯಪ್ನಲ್ಲಿ ಒಂದೂವರೆ ಕೋಟಿ ರೂ. ಬಹುಮಾನ ಗೆದ್ದು ಸುದ್ದಿಯಾಗಿದ್ದ ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಸೋಮನಾಥ್ ಝೆಂಡೆ ತಲೆದಂಡವಾಗಿದೆ. ಅಶಿಸ್ತಿನ ವರ್ತನೆ ಹಾಗೂ ಪೊಲೀಸ್ ಇಲಾಖೆಯ ಪ್ರತಿಷ್ಠೆಗೆ ಕಳಂಕ ತಂದ ಆರೋಪದಡಿ ಸಬ್ ಇನ್ಸ್ಪೆಕ್ಟರ್ ಆಗಿದ್ದ ಸೋಮನಾಥ್ ಅವರನ್ನು ಅಮಾನತುಗೊಳಿಸಲಾಗಿದೆ. ಪುಣೆಯ ಪಿಂಪ್ರಿ ಚಿಂಚ್ವಾಡ ನಗರದ ಪೊಲೀಸ್ ಮುಖ್ಯ ಕಚೇರಿಯಲ್ಲಿ ಪಿಎಸ್ಐ ಸೋಮನಾಥ್ ಝೆಂಡೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಆನ್ಲೈನ್ ಕ್ರಿಕೆಟ್ ಗೇಮ್ನಲ್ಲಿ 1.5 ಕೋಟಿ ರೂ. …
Read More »ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಶೇ.4ರಷ್ಟು ತುಟ್ಟಿ ಭತ್ಯೆ ಏರಿಕೆ
ನವದೆಹಲಿ: ಕೇಂದ್ರದ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಸರ್ಕಾರ ಬುಧವಾರ ಶೇ.4ರಷ್ಟು ಏರಿಕೆ ಮಾಡಿದೆ. ಇದು ಜುಲೈ 1ರಿಂದಲೇ ಪೂರ್ವಾನ್ವಯವಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಇದು ಲಕ್ಷಾಂತರ ಹಾಲಿ ನೌಕರರು ಹಾಗೂ ಪಿಂಚಿಣಿದಾರರಿಗೆ ಅನುಕೂಲವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ನಡೆಯಿತು. ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಈಗ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗಿದೆ, …
Read More »ಬೆಳಗಾವಿಯಿಂದಲೇ ಬಂಡಾಯ ಆರಂಭ ಆಗುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ತಿರುಗೇಟು ಕೊಟ್ಟಿರುವ ಡಿಸಿಎಂ
ಬೆಳಗಾವಿ: ಬೆಳಗಾವಿಯಿಂದಲೇ ಬಂಡಾಯ ಆರಂಭ ಆಗುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ತಿರುಗೇಟು ಕೊಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ, ಯಾರ ಬಗ್ಗೆಯೂ ಏನೂ ಇಲ್ಲ. 136 ಶಾಸಕರೆಲ್ಲರೂ ನಮ್ಮವರೆ.. ಬಿಜೆಪಿಯವರಿಗೆ ಒಂದು ನ್ಯೂಸ್ ಬೇಕು. ಅದಕ್ಕೆ ಈ ರೀತಿ ಏನೆನೋ ಸೃಷ್ಟಿಸುತ್ತಿದ್ದಾರೆ ಎಂದಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲರ ಭಾಷಣ ಕೇಳಿದ್ದೀರಾ.. ಅವಿಶ್ವಾಸ ನಿರ್ಣಯ ಮಂಡನೆ ವೇಳೆ …
Read More »