Breaking News

ರಾಷ್ಟ್ರೀಯ

ತೆಲಂಗಾಣದ ಎರಡನೇ ಸಿಎಂ ಆಗಿ ರೇವಂತ್​ ರೆಡ್ಡಿ ಪ್ರಮಾಣವಚನ

ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ 64 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್​ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾದ ಬಳಿಕ ಕಾಂಗ್ರೆಸ್​ ಮೊದಲ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಇದರೊಂದಿಗೆ ಕೆ. ಚಂದ್ರಶೇಖರ್​ ರಾವ್​ ನೇತೃತ್ವದ ಬಿಆರ್​ಎಸ್​ನ 10 ವರ್ಷಗಳ ಆಡಳಿತ ಅಂತ್ಯವಾಗಿದೆ. ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಎ. ರೇವಂತ್​ ರೆಡ್ಡಿ ರಾಜ್ಯದ ಎರಡನೇ ಸಿಎಂ ಆಗುವ ನಿರೀಕ್ಷೆಯಲ್ಲಿದ್ದಾರೆ. ಸೋಮವಾರ (ಡಿಸೆಂಬರ್ 4) ಪ್ರಮಾಣವಚನ ಸ್ವೀಕಾರ …

Read More »

ತೆಲಂಗಾಣದಲ್ಲಿ ಬಿಆರ್​ಎಸ್​ ಭ್ರಷ್ಟಾಚಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ: ಪ್ರಿಯಾಂಕ್ ಖರ್ಗೆ

ಕಲಬುರಗಿ: ತೆಲಂಗಾಣದಲ್ಲಿ ಬಿಎಸ್​ಆರ್​ ಸರ್ಕಾರ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತ‌ನಾಡಿದ ಅವರು, “ನಾನು ಖುದ್ದಾಗಿ ತೆಲಂಗಾಣಕ್ಕೆ ಭೇಟಿ ನೀಡಿದ್ದೇನೆ. 10 ವರ್ಷದ ಕೆಸಿಆರ್ ಆಡಳಿತದಲ್ಲಿ 10 ಸ್ಕ್ಯಾಮ್ ಗಳಲ್ಲಿ 10 ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿದೆ. ಕಾಳೇಶ್ವರಂ ನೀರಾವರಿ ಯೋಜನೆಯೊಂದರಲ್ಲೇ 1.50 ಲಕ್ಷ ಕೋಟಿ ಅವ್ಯವಹಾರ ಆಗಿರುವ ಬಗ್ಗೆ ಅಲ್ಲಿನ …

Read More »

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಫುಲ್ ಖುಷ್ ಮೂರು ರಾಜ್ಯಗಳಿಗೆ ಬಿಜೆಪಿಯೇ ಬಾಸ್

ಪ್ರಚಂಡ ವಿಜಯಕ್ಕೆ ಕಾರಣೀಕರ್ತರಾದ ಮತದಾರ ಪ್ರಭುಗಳು ಹಾಗೂ ಕಾರ್ಯಕರ್ತರಿಗೆ ಅಭಿನಂಧನೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ- ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ್ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಿರುವುದಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನೇನೂ ಲೋಕಸಭೆಯ ಚುನಾವಣೆಯ ಹೊಸ್ತಿನಲ್ಲಿರುವಾಗ ಈ ರಾಜ್ಯಗಳ ಫಲಿತಾಂಶಗಳು ನಮ್ಮ ಕಾರ್ಯಕರ್ತರನ್ನು ಹುರಿದುಂಬಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಕೇಂದ್ರ ಸರ್ಕಾರದ ಯೋಜನೆಗಳಿಂದ ಮತದಾರರು ಬಿಜೆಪಿಗೆ ಫುಲ್ …

Read More »

ಅಧಿವೇಶನದ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ಪೊಲೀಸರ ವಸತಿಗೆ ನಿರ್ಮಿಸಿರುವ ಜರ್ಮನ್ ಟೆಂಟ್​ಗೆ ಡಿಜಿ ಐಜಿಪಿ ಅಲೋಕ್‌ ಮೋಹನ್ ಭೇಟಿ

ಬೆಳಗಾವಿ: ತಾಲೂಕಿನ ಅಲಾರವಾಡ ಗ್ರಾಮದ ಹೊರ ವಲಯದಲ್ಲಿ ಚಳಿಗಾಲದ ಅಧಿವೇಶನದ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ಪೊಲೀಸರ ವಸತಿಗೆ ನಿರ್ಮಿಸಿರುವ ಜರ್ಮನ್ ಟೆಂಟ್​ಗೆ ಡಿಜಿ – ಐಜಿಪಿ ಅಲೋಕ್​ ಮೋಹನ್ ಅವರು ಭೇಟಿ ನೀಡಿ, ವ್ಯವಸ್ಥೆ ಪರಿಶೀಲನೆ ನಡೆಸಿದರು. 10 ದಿನಗಳ ಚಳಿಗಾಲದ ಅಧಿವೇಶನಕ್ಕೆ ಅಧಿವೇಶನ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ಪೊಲೀಸರ ವಸತಿಗೆ ಜರ್ಮನ್​ ಟೆಂಟ್ ಮೂಲಕ ಟೌನ್ ಶಿಪ್ ನಿರ್ಮಿಸಲಾಗಿದೆ. ಟೆಂಟ್​ಗಳಿಗೆ ಭೇಟಿ ನೀಡಿದ‌ ಅಲೋಕ್​ ಮೋಹನ್ ಅವರು ಪೊಲೀಸ್ ಸಿಬ್ಬಂದಿಗಳನ್ನು ಮಾತನಾಡಿಸಿ ಇಲ್ಲಿ …

Read More »

ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್​ಗೆ ಅನುಮತಿ ನಿರಾಕರಣೆ : ಪೊಲೀಸ್ ಕಮೀಷ್​ನರ್ ಖಡಕ್ ಆದೇಶ

ಬೆಳಗಾವಿ : ಮಹಾಮೇಳಾವ್ ಸಿದ್ಧತೆಯಲ್ಲಿ ತೊಡಗಿದ್ದ ಎಂಇಎಸ್‌ಗೆ ಬೆಳಗಾವಿ ಜಿಲ್ಲಾಡಳಿತ ಬಿಗ್ ಶಾಕ್ ಕೊಟ್ಟಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮಹಾಮೇಳಾವ್​ಗೆ ಅನುಮತಿ ನಿರಾಕರಿಸಿ ನಗರ ಪೊಲೀಸ್ ಆಯುಕ್ತ ಎಸ್‌ ಎನ್ ಸಿದ್ದರಾಮಪ್ಪ ಖಡಕ್ ಆದೇಶ ಹೊರಡಿಸಿದ್ದಾರೆ. ಅನುಮತಿ ನಿರಾಕರಣೆ ಮಧ್ಯೆಯೂ ಎಂಇಎಸ್ ಮಹಾಮೇಳಾವ್ ನಡೆಸುವ ಸಾಧ್ಯತೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರು, ಬೆಳಗಾವಿಯ ಮೂರು ಪ್ರಮುಖ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದಿದ್ದಾರೆ. ಟಿಳಕವಾಡಿ …

Read More »

ಸ್ವೀಟ್‌ ತಿನ್ನಿಸಿ ರೇವಂತ್‌ ರೆಡ್ಡಿ ಅಭಿನಂದಿಸಿದ ಡಿ ಕೆ ಶಿ

ಹೈದ್ರಾಬಾದ್ : ತೆಲಂಗಾಣದಲ್ಲಿ (Telanagana)ಅಭೂತಪೂರ್ವ ಗೆಲುವು ಸಾಧಿಸಿ ಕಾಂಗ್ರೆಸ್‌(Congress) ಭರ್ಜರಿ ಸಂಭ್ರಮಾಚರಣೆ ನಡೆಸುತ್ತಿದೆ. ಹೈದ್ರಾಬಾದ್ ಕಚೇರಿಯಲ್ಲಿ ರೇವಂತ್‌ ರಡ್ಡಿಯನ್ನು ಅಪ್ಪಿ ಸಿಹಿ ತಿನ್ನಿಸಿ ಡಿ ಕೆ ಶಿವಕುಮಾರ್‌ ಅಭಿನಂದನೆ ಸಲ್ಲಿಸಿದ್ದಾರೆ.   ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯುವುದು ಪಕ್ಕಾ ಆದ ಹಿನ್ನೆಲೆ ಡಿ ಕೆ ಶಿವಕುಮಾರ್‌ , ರೇವಂತ ರೆಡ್ಡಿ ನೇತೃತ್ವದಲ್ಲಿ ಪಕ್ಷದ ನಾಯಕರ ಸಭೆ ಆರಂಭವಾಗಿದ್ದು ಮುಂದಿನ ನಡೆ ಬಗ್ಗೆ ಚರ್ಚಿಸಲಾಗುತ್ತಿದೆ. ಕಾಂಗ್ರೆಸ್‌ ಅಧಿಕಾರ ಹಿಡಿದರೆ ಸಿಎಂ ಸ್ಥಾನಕ್ಕೆ …

Read More »

SC/ST ವಿದ್ಯಾರ್ಥಿಗಳಿಗೆ ‘ಗುಡ್ ನ್ಯೂಸ್ ಎಲ್ಲರಿಗೂ ಸಿಗಲಿದೆ ‘ಪ್ರೋತ್ಸಾಹ ಧನ’

ಬೆಂಗಳೂರು: ಮೆಟ್ರಿಕ್ ನಂತರದ ವ್ಯಾಸಂಗದಲ್ಲಿ ಪಥಮ ಪ್ರಯತ್ನದಲ್ಲಿ, ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಕಾರ್ಯಕ್ರಮ ಸಂಬಂಧ ಹಾಲಿ ಇರುವ ಆದೇಶವನ್ನು ಮಾರ್ಪಡಿಸಿ ಆದೇಶವನ್ನು ಹೊರಡಿಸಿದೆ. ಹೊಸ ಆದೇಶದಲ್ಲಿ ಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ ಜಾತಿಯ ವಿದ್ಯಾರ್ಥಿಗಳು ಶೇ.60 ರಿಂದ ಶೇ.74.99 ಅಂಕ ಪಡೆದಲ್ಲಿ ರೂ.7000/-ಗಳನ್ನು ಮತ್ತು ಶೇ.75 ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ.15000/- ಗಳನ್ನು ಒಂದು …

Read More »

ಬಿಜೆಪಿ ಗ್ಯಾರಂಟಿ ಘೋಷಿಸಿದ್ದು ಅದರ ಗೆಲುವಿಗೆ ಕಾರಣ: ಎಂ.ಬಿ ಪಾಟೀಲ್

ವಿಜಯಪುರ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ವಿರೋಧಿಸಿದವರೇ ಗ್ಯಾರಂಟಿ ಘೋಷಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪು ಒಪ್ಪಲೇಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ್ದಾರೆ.   ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಕೆಲಸ ಮಾಡಿದೆ ಎಂದಾಯಿತಲ್ಲವೇ. ಇದೀಗ ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು ಕೂಡ ಗೆಲುವಿಗೆ ಕಾರಣ ಅಲ್ಲವೇ ಎಂದು ಪ್ರಶ್ನಿಸಿದರು. ಮೂರು ರಾಜ್ಯಗಳಲ್ಲಿ ಬಿಜೆಪಿ …

Read More »

ಚಳಿಗಾಲದ ಅಧಿವೇಶನಸೋಮವಾರ ಪ್ರಾರಂಭವಾಗಲಿದ್ದು, ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸಿದರೆ “ಕೆಟ್ಟ ಫಲಿತಾಂಶ” ಎದುರಿಸಬೇಕಾಗುತ್ತದೆ :

ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಪ್ರಾರಂಭವಾಗಲಿದ್ದು, ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸಿದರೆ “ಕೆಟ್ಟ ಫಲಿತಾಂಶ” ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಭಾನುವಾರ ಹೇಳಿದ್ದಾರೆ.   ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸಿದರೆ, ಇಂದು ಬಂದಿರುವುದಕ್ಕಿಂತ ಕೆಟ್ಟ ಫಲಿತಾಂಶವನ್ನು ಎದುರಿಸಬೇಕಾಗುತ್ತದೆ ಎಂದು ಸಚಿವರು ಹೇಳಿದರು. ಸಂಸತ್ ನ ಚಳಿಗಾಲದ ಅಧಿವೇಶನವು ಡಿಸೆಂಬರ್ 4ರಿಂದ 22ರವರೆಗೆ ನಡೆಯಲಿದೆ. ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ವಿರುದ್ಧದ ‘ನಗದು-ಪ್ರಶ್ನೆ’ ಆರೋಪಗಳು ಸೇರಿ …

Read More »

ಬಿಜೆಪಿಗೆ ಉತ್ತರ ಭಾರತದ ಮೂರು ರಾಜ್ಯಗಳ ಚುನಾವಣ ಫಲಿತಾಂಶ ಉತ್ಸಾಹ ಇಮ್ಮಡಿಗೊಳಿಸಿದೆ.

ಹೊಸದಿಲ್ಲಿ: 2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪೂರ್ಣ ಬಹುಮತ ಪಡೆದು ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಹವಣಿಕೆಯಲ್ಲಿರುವ ಬಿಜೆಪಿಗೆ ಉತ್ತರ ಭಾರತದ ಮೂರು ರಾಜ್ಯಗಳ ಚುನಾವಣ ಫಲಿತಾಂಶ ಉತ್ಸಾಹ ಇಮ್ಮಡಿಗೊಳಿಸಿದೆ. ಎಲ್ಲ ಸವಾಲುಗಳನ್ನು, ಸಮೀಕ್ಷೆಗಳನ್ನೂ ಮೀರಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಉತ್ತರ ಭಾರತದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರ ಹಾಕಿಯೇ ಜಿದ್ದಿಗೆ ಬಿದ್ದು ರಣತಂತ್ರ …

Read More »