Breaking News

ರಾಜ್ಯ

ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಅಭಿಯಾನಕ್ಕೆ ಪೋಸ್ಟರ್​ ಅಂಟಿಸಿದ್ದ ಯುವಕರ ವಿರುದ್ಧ FIR

ಚಿಕ್ಕಮಗಳೂರು, ಫೆ.26: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವರ್ಸಸ್ ಮಾಜಿ ಶಾಸಕ ಸಿ.ಟಿ ರವಿ (CT Ravi) ನಡುವೆ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಟಿಕೆಟ್ ಫೈಟ್ ಜೋರಾಗಿದೆ. ಗೋ ಬ್ಯಾಕ್, ಶೋಭಾ ಹಾಠಾವೋ ಎಂದು ಸಿ,ಟಿ.ರವಿ ಬೆಂಬಲಿಗರು ಅಭಿಯಾನ ನಡೆಸಿದ್ದಾರೆ. ಸದ್ಯ ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಅಭಿಯಾನ ವಿಚಾರ ಸಂಬಂಧ ಪೋಸ್ಟರ್​ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ FIR ದಾಖಲಾಗಿದೆ. ಕಳೆದ ಜನವರಿ 01ರಿಂದ ಚಿಕ್ಕಮಗಳೂರು ಉಡುಪಿ …

Read More »

ಸಿಎಂ, ಡಿಸಿಎಂ ರನ್ನು ಭೇಟಿಯಾದ ಜನಾರ್ಧನ ರೆಡ್ಡಿ – ರಾಜ್ಯಸಭಾ ಚುನಾವಣೆಗೆ ಬೆಂಬಲ!

ಬೆಂಗಳೂರು : ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ (DCM D K Shivakumar) ಅವರನ್ನು ಶಾಸಕ ಜನಾರ್ಧನ ರೆಡ್ಡಿ (Gali Janardhan reddy) ಭೇಟಿಯಾಗಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ (Rajyasabha election) ಕಾಂಗ್ರೆಸ್‌ (Congress) ಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (Kalyan rajya pragati party) ಬೆಂಬಲ ಸೂಚಿಸುವ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆಯೆನ್ನಲಾಗಿದೆ.   ಫೆ. 27 ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ತಮ್ಮ …

Read More »

ಆಸ್ತಿ ಖರೀದಿ, ಬಿಕರಿ ಪೊಲೀಸರಿಗೆ ಪರ್ವಿುಟ್ ಕಡ್ಡಾಯ; ದಾಖಲಾತಿ ಜತೆ ಅರ್ಜಿ ಸಲ್ಲಿಸಲು ಸೂಚನೆ

ಕೀರ್ತಿನಾರಾಯಣ ಸಿ. ಬೆಂಗಳೂರುಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ, ಬಿ ಮತ್ತು ಸಿ ದರ್ಜೆಯ (ಐಪಿಎಸ್ ಅಧಿಕಾರಿಗಳನ್ನು ಹೊರತುಪಡಿಸಿ) ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಿರ-ಚರಾಸ್ತಿಯನ್ನು ಖರೀದಿಸಲು, ಮಾರಾಟ ಮಾಡಲು ಹಾಗೂ ಉಡುಗೊರೆ ರೂಪದಲ್ಲಿ ಪಡೆಯುವ ಮುನ್ನ ಪ್ರಾಧಿಕಾರದಿಂದ ಅನುಮತಿ ಪಡೆಯುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿರುವ ರಾಜ್ಯ ಪೊಲೀಸ್ ಇಲಾಖೆ, ಆಸ್ತಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ದಾಖಲಾತಿಗಳನ್ನು ಸಲ್ಲಿಸಲು ಆದೇಶಿಸಿದೆ.   ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು …

Read More »

ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿದ ಚಿತ್ರದುರ್ಗದ ಗ್ರಾಮಸ್ಥ

ಚಿತ್ರದುರ್ಗ: ಅಬಕಾರಿ ಇಲಾಖೆಯಿಂದ ಬಾರ್ ಲೈಸೆನ್ಸ್ ಸಿಗೋದು ತುಂಬಾ ಕಷ್ಟ. ಅಂಥದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಕೊಡಿ ಎಂದು ಮನವಿ ಸಲ್ಲಿಸಿದ್ದಾನೆ. ಈ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಕೋಟಿ ಕೋಟಿ ರೂ. ಹಣ ಕೊಟ್ಟರೂ ಮದ್ಯ ಮಾರಾಟದ ಲೈಸೆನ್ಸ್‌ ಸಿಗುವುದೇ ಕಷ್ಟವಾಗಿದೆ. ಅಂಥದ್ದರಲ್ಲಿ ಇಲ್ಲಿ ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಪತ್ರ ಬರೆದಿರುವುದನ್ನು ನೋಡಿ ಅಬಕಾರಿ ಇಲಾಖೆ ಅಧಿಕಾರಿಗಳು ನಗಾಡಿದ್ದಾರೆ. ರಾಜ್ಯದಲ್ಲಿ …

Read More »

ಸಿದ್ದರಾಮಯ್ಯ ಬಗ್ಗೆ ಅನಂತ್​ಕುಮಾರ್​ ಹೆಗಡೆ ವ್ಯಂಗ್ಯ; ಸಚಿವ ಎಚ್​.ಕೆ. ಪಾಟೀಲ್​ ತಿರುಗೇಟು!

ಬಾಗಲಕೋಟೆ: ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳಿಗೆ, ಶಾಸಕರಿಗೆ ಪಗಾರ ಕೊಡಲು ಹಣವಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಮಾಡಿದ ಟೀಕಾಪ್ರಹಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ. ಪಾಟೀಲ್, ಯಾವ ಶಾಸಕ ಪಗಾರ ಇಲ್ಲದೇ ಇದ್ದಾರೆ? ಹೇಳಿ ನೋಡೋಣ ಎಂದು ಹೇಳಿದ್ದಾರೆ.   ಬಾಗಲಕೋಟೆಯ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್, ಯಾವ ಶಾಸಕ ಪಗಾರ ಇಲ್ಲದೆ ಇದ್ದಾರೆ ಹೇಳಿ? ನಾನು ಮಂತ್ರಿ ಇದ್ದೇನೆ, ಇಲ್ಲೇ ಶಾಸಕರು ಸಹ ಇದ್ದಾರೆ. ನಮ್ಮ …

Read More »

ಕಳಸಾ-ಬಂಡೂರಿ: ಪರಿಸರ ಇಲಾಖೆ ಅನುಮತಿ ನೀಡಿದರೆ ನಾಳೆಯೇ ಕಾಮಗಾರಿ ಆರಂಭ: ಸಿಎಂ

ನವಲಗುಂದ: ‘ಕಳಸಾ-ಬಂಡೂರಿ (ಮಹಾದಾಯಿ) ಯೋಜನೆಯ ಚಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಕೇಂದ್ರ ಪರಿಸರ ಇಲಾಖೆಯ ಇವತ್ತು ಅನುಮತಿ ನೀಡಿದರೆ ನಾಳೆಯೇ ಕೆಲಸ ಆರಂಭಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ನವಲಗುಂದದ ಮಾಡೆಲ್‌ ಹೈಸ್ಕೂಲ್‌ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಗ್ಯಾರಂಟಿ ಕಾರ್ಯಕ್ರಮಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಕಳಸಾ- ಬಂಡೂರಿ ಯೋಜನಗೆ ಟೆಂಡರ್‌ ಆಹ್ವಾನಿಸಲಾಗಿದೆ. ಆದರೆ, ಯೋಜನೆಗೆ ಪರಿಸರ ಇಲಾಖೆ ಅನುಮೋದನೆ ನೀಡಬೇಕಿದೆ, ಆ …

Read More »

ಬೆಳಗಾವಿ: ಖ್ಯಾತ ವೈದ್ಯ ಡಾ.ಕೊಡಕಣಿ ನಿಧನ

ಬೆಳಗಾವಿ: ಇಲ್ಲಿನ ಖ್ಯಾತ ಪ್ರಸ್ತೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಾಗಿದ್ದ ಡಾ.ಬಿ.ಎಸ್. ಕೊಡಕಣಿ (89) ಅವರು ಗುರುವಾರ ನಿಧನರಾದರು. 1959ರಲ್ಲಿ ಬರೋಡಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಅವರು 1962ರಲ್ಲಿ ಸ್ತ್ರೀರೋಗ ಶಾಸ್ತ್ರದಲ್ಲಿ ಎಂ.ಡಿ. ಪದವೀಧರರಾಗಿ, ಮುಂಬೈ ಆಸ್ಪತ್ರೆಯಲ್ಲಿ ನಾಲ್ಕು ವರ್ಷಗಳ ರಿಜಿಸ್ಟ್ರಾರ್‌ ಆಗಿ ಸೇವೆಸಲ್ಲಿಸಿದ್ದರು. 1966ರಲ್ಲಿ ಜವಾಹರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. ಇಂಗ್ಲೆಂಡ್, ಯೂರೋಪ, ಕೆನಡಾ, ಅಮೆರಿಕಾಗಳಲ್ಲಿ ಉಪನ್ಯಾಸಕರಾಗಿ, …

Read More »

ಯಲ್ಲಮ್ಮನಗುಡ್ಡ: ಭಾರತ ಹುಣ್ಣಿಮೆ ಜಾತ್ರೆಗೆ ಜನಸಾಗರ

ಯಲ್ಲಮ್ಮನಗುಡ್ಡ (ಬೆಳಗಾವಿ ಜಿಲ್ಲೆ): ಇಲ್ಲಿನ ಯಲ್ಲಮ್ಮನ ಸನ್ನಿಧಾನದಲ್ಲಿ ಶನಿವಾರ ಅಪಾರ ಸಂಖ್ಯೆ ಭಕ್ತಾದಿಗಳ ಸಮ್ಮುಖದಲ್ಲಿ ಭಾರತ ಹುಣ್ಣಿಮೆ ಜಾತ್ರೆ ಸಡಗರದಿಂದ ನೆರವೇರಿತು. ಕೋವಿಡ್‌ ಮತ್ತು ಬರಸ್ಥಿತಿಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಜಾತ್ರೆ ಸಂಭ್ರಮ ಕಳೆಗುಂದಿತ್ತು. ಈಗ ಮತ್ತೆ ವೈಭವ ಮರುಕಳಿಸಿದೆ. ಕೆಲವರು ಚಕ್ಕಡಿಗಳಲ್ಲಿ, ಇನ್ನೂ ಕೆಲವರು ಕಾಲ್ನಡಿಗೆಯಲ್ಲಿ ಗುಡ್ಡಕ್ಕೆ ಬಂದರು. ಯಲ್ಲಮ್ಮ ದೇವಸ್ಥಾನ, ಸುತ್ತಲಿನ ದೇಗುಲಗಳಲ್ಲಿ ಕಾರ್ಯಕ್ರಮ ನಡೆದವು. ಕರ್ನಾಟಕದ ಜಿಲ್ಲೆಗಳಲ್ಲದೇ, ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಬಂದಿದ್ದ …

Read More »

ಚನ್ನವೀರಯ್ಯ, ಶಿವಾಜಿಗೆ ಪ್ರಶಸ್ತಿ

ಮುಗಳಖೋಡ: ಬೆಳಗಾವಿ ಸಪ್ತಸ್ವರ ಸಂಗೀತ ಕಲಾ ಬಳಗದ ವತಿಯಿಂದ ನೀಡಲಾಗುವ ‘ಗಡಿನಾಡು ಪತ್ರಿಕಾ ಮಾಧ್ಯಮ ರತ್ನ’ ‍ರಾಜ್ಯಮಟ್ಟದ ಪ್ರಶಸ್ತಿಗೆ ಸಮೀಪದ ಹಂದಿಗುಂದದ ಚನ್ನವೀರಯ್ಯ ಹಿರೇಮಠ ಮತ್ತು ‘ಕರ್ನಾಟಕ ಪತ್ರಿಕಾ ಮಾಧ್ಯಮ ರತ್ನ’ ಪ್ರಶಸ್ತಿಗೆ ಪಾಲಭಾವಿಯ ಶಿವಾಜಿ ಮೇತ್ರಿ ಆಯ್ಕೆಯಾಗಿದ್ದಾರೆ.   ಫೆ.26ರಂದು ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಶಿವಾಜಿ

Read More »

ಉಧೋ ಉಧೋ ಯಲ್ಲಮ್ಮಹಿಂದೆ ‘ಬಳೆಕಟ್ಟೆ’ ಎಂದು ಕರೆಯಲಾಗುತ್ತಿದ್ದ ಸ್ಥಳವೀಗ ‘ಬಳೆಪೇಟೆ’ ಆಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನಗುಡ್ಡದಲ್ಲಿ ನಡೆಯುವ ಜಾತ್ರೆಯಲ್ಲಿ ಯಲ್ಲಮ್ಮ ದೇವಸ್ಥಾನದಿಂದ ಪಶ್ಚಿಮ ದಿಕ್ಕಿಗೆ ಕಣ್ಣು ಹಾಯಿಸಿದರೆ ವೈವಿಧ್ಯಮಯ ಬಣ್ಣ ಬಣ್ಣದ ಬಳೆಗಳ ಮಾರಾಟ ಕಂಡುಬರುತ್ತದೆ. ಹಿಂದೆ ‘ಬಳೆಕಟ್ಟೆ’ ಎಂದು ಕರೆಯಲಾಗುತ್ತಿದ್ದ ಸ್ಥಳವೀಗ ‘ಬಳೆಪೇಟೆ’ ಆಗಿದೆ. ನೂರಾರು ಕುಟುಂಬಗಳು ದಶಕಗಳಿಂದ ಬಳೆ ಮಾರಾಟ ಮಾಡುತ್ತ ಬಂದಿವೆ. ಈಗೀಗ ಮಾರುಕಟ್ಟೆಯಲ್ಲಿ ಜಾಗ ಸಾಲದ್ದಕ್ಕೆ ಗುಡ್ಡದ ಪರಿಸರದಲ್ಲಿ ಎಲ್ಲೆಂದರಲ್ಲಿ ಬಳೆಗಳ ಮಾರಾಟ ನಡೆಯುತ್ತದೆ. ಹುಣ್ಣಿಮೆ ಸಮೀಪಿಸುತ್ತಲೇ ಎಲ್ಲ ಅಂಗಡಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತದೆ. ಬಳೆಗಳನ್ನು ಒಪ್ಪ-ಓರಣವಾಗಿ …

Read More »