Breaking News

ರಾಜ್ಯ

ಮೆಡಿಕಲ್ ಶಾಪ್‌ ಮತ್ತು ಖಾಸಗಿ ಕ್ಲಿನಿಕ್ ಮುಚ್ಚಿದರೆ ಪರವಾನಿಗೆ ರದ್ದು : ಬಿ.ಸಿ.ಪಾಟೀಲ್

ಹಾವೇರಿ, ಮಾ‌. 30:ಕೊರೊನಾ‌ದಂತಹ ಮಾರಕ‌ ರೋಗ ಹರಡಿರುವ ಪ್ರಸಕ್ತ ಸಂದರ್ಭದಲ್ಲಿ ಮೆಡಿಕಲ್ ಶಾಪ್‌ಗಳಾಗಲೀ ಖಾಸಗಿ ವೈದ್ಯರು ಆಸ್ಪತ್ರೆಗಳನ್ನಾಗಲೀ ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಎಲ್ಲಾ ಖಾಸಗಿ ವೈದ್ಯರಿಗೆ ನೊಟೀಸ್ ನೀಡಲಾಗಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಡೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಸರ್ಕಾರದ ನೊಟೀಸ್‌ಗೂ ಬೆಲೆಕೊಡದೇ ಯಾರಾದರೂ ವೈದ್ಯರು ಆಸ್ಪತ್ರೆ ತೆರೆಯದೇ ಇದ್ದಲ್ಲಿ ಅಂತಹ ವೈದ್ಯರ ಪರವಾನಿಗೆ ರದ್ದುಪಡಿಸಲಾಗುವುದು.ಸೋಮವಾರ ಜಿಲ್ಲೆಯ ಹಿರೇಕೆರೂರು ನಗರ,‌ ರಾಣೆಬೆನ್ನೂರು, …

Read More »

ಯಮಕನಮರಡಿ: ಕ್ಷೇತ್ರ ವ್ಯಾಪ್ತಿಯಲ್ಲಿ ಇಂದೂ ಕೂಡ ಠಿಕಾಣಿ ಹೂಡಿದ್ದಾರೆಶಾಸಕ‌ ಸತೀಶ ಜಾರಕಿಹೊಳಿ

ಯಮಕನಮರಡಿ: ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ಮಾರಣಾಂತಿಕ ಸೊಂಕು ಹರಡದಂತೆ ಭಾರೀ ಮುನ್ನೆಚ್ಚರಿಕೆ ಕ್ರಮ ಮತ್ತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಶಾಸಕ‌ ಸತೀಶ ಜಾರಕಿಹೊಳಿ ಇಂದೂ ಕೂಡ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ. ಇಲ್ಲಿನ‌ ಪಾಶ್ಚಾಪೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದಾದ್ಯಂತ ಇಂದು ಸಂಚರಿಸಿ ಮಾಸ್ಕ ವಿತರಣೆ ಮಾಡಿ ಜನರಿಗೆ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಲು ಮನವಿ‌ ಮಾಡಿದರು. ಜನರಿಗೆ ದಿನನಿತ್ಯದ ಸರಕುಗಳ ವಿತರಣೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ …

Read More »

21 ರ ಪೈಕಿ 18 ವರದಿಗಳು ನೆಗಟಿವ್: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

ಬೆಳಗಾವಿ : ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಒಟ್ಟು 8 ಮಾದರಿಗಳ ಪೈಕಿ, 5 ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಂಟು ಮಾದರಿಗಳ ಪೈಕಿ ಇನ್ನು ಮೂರು ಮಾದರಿಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು‌ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿರುವ ಒಟ್ಟಾರೆ ೨೧ ಮಾದರಿಗಳ ಪೈಕಿ ಇದೀಗ ಒಟ್ಟಾರೆ ೧೮ ನೆಗೆಟಿವ್ …

Read More »

. ಲಾಕ್ ಡೌನ್ ಬಂದೋಬಸ್ತ್ ಗೆ ಸೇನಾ ಪಡೆ ಆಗಮಿಸಲಿದೆ ಇದೊಂದು ಸುಳ್ಳು ಸುದ್ದಿ:

ಬೆಳಗಾವಿ: ಲಾಕ್ ಡೌನ್ ಬಂದೋಬಸ್ತ್ ಗೆ ಸೇನಾ ಪಡೆ ಆಗಮಿಸಲಿದೆ ಎಂಬ ವದಂತಿ ಹರಿದಾಡುತ್ತಿದ್ದು, ಈ ವಿಚಾರವಾಗಿ ಬೆಳಗಾವಿ ಡಿಸಿಪಿ ಸೀಮಾ‌ ಲಾಟ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.‌ ಸೇನಾಪಡೆ ಆಗಮಿಸಲಿದೆ ಎಂಬುವುದನ್ನು ಅಲ್ಲಗೆಳೆದ ಅವರು, ಇದೊಂದು ಸುಳ್ಳು ಸುದ್ದಿ, ಬೆಳಗಾವಿ ಪೊಲೀಸರೆ ಇಲ್ಲಿನ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಸೇನೆ ಬಂದಿಲ್ಲ, ಬರೋದು ಇಲ್ಲ ಎಂದು ಹೇಳಿದ್ರು.‌ ಬೆಳಗಾವಿ ಜನತೆ ವದಂತಿಗಳಿಗೆ ಕಿವಿಗೊಡಬೇಡಿ. ಜಿಲ್ಲೆಗೆ ಸಮಂಧಿಸಿದ ಕೊರೊನಾ ಶಂಕಿತರ ರಿಪೋರ್ಟ್ ಗಳು …

Read More »

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮೂರು ಜಿಲ್ಲೆಯಲ್ಲಿಯೂ ಹಾಲು ಖರೀದಿ ಸ್ಥಗಿತಗೊಳಿಸಲಾಗುತ್ತಿದೆ.

ಶಿವಮೊಗ್ಗ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ಇಂದು ಮತ್ತು ನಾಳೆ ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಹಾಲು ಒಕ್ಕೂಟ ರೈತರಿಂದ ಹಾಲು ಖರೀದಿಸದಿರಲು ನಿರ್ಧರಿಸಿದೆ. ಈಗಾಗಲೇ ಡೈರಿಯಲ್ಲಿಯೆ ಹೆಚ್ಚಿನ ಪ್ರಮಾಣದ ಹಾಲು ಶೇಖರಣೆ ಆಗಿದ್ದು, ಸರಬರಾಜು ಆಗುತ್ತಿಲ್ಲ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ವ್ಯಾಪ್ತಿಗೆ ಒಳಪಡುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮೂರು ಜಿಲ್ಲೆಯಲ್ಲಿಯೂ ಹಾಲು ಖರೀದಿ ಸ್ಥಗಿತಗೊಳಿಸಲಾಗುತ್ತಿದೆ. ಈ ಕುರಿತು ಹಾಲು ಒಕ್ಕೂಟದ …

Read More »

ಕೊರೋನಾ ಕುರಿತ ಸರ್ವ ಪಕ್ಷಗಳ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಇಲ್ಲಿವೆ “…

ಬೆಂಗಳೂರು, ಮಾ.29-ಕೊರೋನಾ ತಡೆಯಲು ತೆಗೆದುಕೊಂಡಿರುವ ಲಾಕ್ ಡೌನ್ ಕ್ರಮದಿಂದಾಗಿ ಗಡಿಗಳಲ್ಲಿ ಸಿಕ್ಕಿಕೊಂಡಿರುವ ಜನರ ವೈದ್ಯಕೀಯ ತಪಾಸಣೆ ನಡೆಸಿ, ಅವರಿಗೆ ಆಶ್ರಯ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ನಾಯಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿಗೆ ಒಳಗಾಗಿರುವ ಪ್ರಯಾಣಿಕರಿಗೆ ಕ್ವಾರಂಟೈನ್ ವ್ಯವಸ್ಥೆಗೆ ಒಳಪಡಿಸಲು ಹಾಗೂ ಆರೋಗ್ಯವಾಗಿರುವ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, …

Read More »

ಎಚ್ಚರಿಕೆ : ಧೂಮಪಾಯಿಗಳನ್ನು ಮೊದಲು ಕಾಡಲಿದೆ ಕರೋನಾ ವೈರಸ್..!

ಕೊರೋನಾ ಸಾಂಕ್ರಾಮಿಕ ಸೋಂಕಿನ ಶಂಕಿತ ವ್ಯಕ್ತಿಗಳು ಧೂಮಪಾನಿಗಳಾಗಿದ್ದರೆ ಅವರುಗಳ ಮೇಲೆ ಸೋಂಕು ಕ್ಷಿಪ್ರವಾಗಿ ಇನ್ನಷ್ಟು ಪರಿಣಾಮ ಬೀರುತ್ತಿರುವುದಕ್ಕೆ ಸಮಗ್ರ ಪುರಾವೆ ದೊರೆತಿದೆ. ಮಪಾನಿಗಳಿಗೆ ಶ್ವಾಸಕೋಶ ಮತ್ತು ಹೃದಯ ಸೋಂಕಿನ ಅಪಾಯದ ತೀವ್ರತೆಗಳು ಹೆಚ್ಚಿವೆ, ಇದರಿಂದ ಅವರುಗಳು ಉಸಿರಾಟದ ತೊಂದರೆಗಳಿಗೂ ಸಿಲುಕಲಿದ್ದಾರೆ. ಸೋಂಕಿನಿಂದ ಅವರು ಕ್ಷಯರೋಗದಂತಹ ರೋಗಗಳಿಗೂ ತುತ್ತಾಗುತ್ತಿದ್ದಾರೆ. ಇದರರ್ಥ ಧೂಮಪಾನ ಮಾಡದ ವ್ಯಕ್ತಿಗಳಿಗೆ ಹೋಲಿಸಿದರೆ ಧೂಮಪಾನಿಗಳು ಕೋವಿಡ್-19ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ. ಧೂಮಪಾನಿಗಳಿಗೆ ಮೊದಲೇ ಶ್ವಾಸಕೋಶಗಳು ಹಾನಿಗೊಳಗಾಗಿರುವುದರಿಂದ ಅವರಿಗೆ ಕೊರೋನಾ …

Read More »

ಸ್ವಗ್ರಾಮಗಳತ್ತ ಕಾರ್ಮಿಕರ ವಲಸೆ : ಬೆಂಗಳೂರಲ್ಲೂ ದೆಹಲಿ ಪರಿಸ್ಥಿತಿ ನಿರ್ಮಾಣವಾಗದಂತೆ ಇಚ್ಛೆತ್ತ ಜಿಲ್ಲಾಡಳಿತ

ಬೆಂಗಳೂರು, ಮಾ.28- ದೆಹಲಿಯಲ್ಲಿ ಕಾರ್ಮಿಕರು ಸಾಮೂಹಿಕವಾಗಿ ವಲಸೆ ಹೋಗುತ್ತಿರುವ ದೃಶ್ಯಗಳು ಕರಳು ಕಿವುಚುತ್ತಿವೆ. ಬೆಂಗಳೂರಿನಲ್ಲೂ ಆ ರೀತಿಯ ಸನ್ನಿವೇಶ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಬೆಂಗಳೂರು ಜಿಲ್ಲಾಡಳಿತ ಕೂಲಿ ಕಾರ್ಮಿಕರಿಗೆ ತಾತ್ಕಾಲಿಕ ವಾಸ್ತವ್ಯದ ವ್ಯವಸ್ಥೆ ಮಾಡುತ್ತಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಮತ್ತವರ ತಂಡ ನಿನ್ನೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಥಮ ಹಂತದಲ್ಲಿ ಬೆಂಗಳೂರಿನ ಹೊರ ವಲಯದಲ್ಲಿರುವ ಮೂರು ಅಪಾರ್ಟ್ ಮೆಂಟ್ ಮತ್ತು ಎರಡು ಹಾಸ್ಟೇಲ್ ಗಳನ್ನು ಗುರುತಿಸಿದೆ. ಹೊಸದಾಗಿ ನಿರ್ಮಿಸಲಾದ ಅಪಾರ್ಟ್ …

Read More »

ಆರೋಗ್ಯಇಲಾಖೆ ಸಿಬ್ಬಂದಿಯ ಮೇಲೆ ಪೋಲೀಸರ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

ಬೆಳಗಾವಿ  ಆರೋಗ್ಯಇಲಾಖೆ  ಸಿಬ್ಬಂದಿಯ ಮೇಲೆ ಪೋಲೀಸರ ಹಲ್ಲೆ ಖಂಡಿಸಿ ಆರೋಗ್ಯ ಮೇಲ್ವಿಚಾರಕರು ಹಾಗೂ ಆರೋಗ್ಯ ಸಹಾಯಕರ ಜಿಲ್ಲಾ ಸಂಘದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ, ಪೋಲೀಸ್ ಆಯುಕ್ತರಿಗೆ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.         

Read More »

ಕೊರೋನಾ ವೈರಸ್ ತಡೆಗಟ್ಟಲು ಅಧಿಕಾರಿಗಳು , ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ: ಸಚಿವ ರಮೇಶ ಜಾರಕಿಹೊಳಿ ಸೂಚನೆ

ಗೋಕಾಕ :ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಅಧಿಕಾರಿಗಳು , ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು ರವಿವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ಕೊರೋನಾ ಮುಂಜಾಗೃತ ಕ್ರಮಗಳ ಕುರಿತು ತಾಲೂಕಾ ಅಧಿಕಾರಿಗಳ ಸಭೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಆಕಸ್ಮಿಕವಾಗಿ ದೇಶಾದ್ಯಂತ ಭೀಕರ ಕೊರೋನಾ ವೈರಸ ಅಪ್ಪಳಿಸಿ ಜನರ ಜೀವನವನ್ನೇ ಅಸ್ತವ್ಯಸ್ತ ಗೋಳಿಸಿದೆ ಜನತೆ ಅನಾವಶ್ಯಕವಾಗಿ ಹೊರ ಬರದಂತೆ ಮನೆಯಲ್ಲಿಯೇ ಇದ್ದು ವೈರಸ ಹರಡದಂತೆ ಸಹಕರಿಸಬೇಕು ಅಧಿಕಾರಿಗಳು …

Read More »