Home / ಜಿಲ್ಲೆ / ಬೆಂಗಳೂರು:ಲಾಕ್ ಡೌನ್ ಹಿನ್ನೆಲೆ ಆಹಾರ ಧಾನ್ಯ, ಊಟ ಸಿಗದೆ 30ಕ್ಕೂ ಹೆಚ್ಚು ಜನ ನರಳಾಟ “….

ಬೆಂಗಳೂರು:ಲಾಕ್ ಡೌನ್ ಹಿನ್ನೆಲೆ ಆಹಾರ ಧಾನ್ಯ, ಊಟ ಸಿಗದೆ 30ಕ್ಕೂ ಹೆಚ್ಚು ಜನ ನರಳಾಟ “….

Spread the love

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆ ಆಹಾರ ಧಾನ್ಯ, ಊಟ ಸಿಗದೆ 30ಕ್ಕೂ ಹೆಚ್ಚು ಜನ ನರಳಾಡುತ್ತಿರುವ ಘಟನೆ ಬೆಂಗಳೂರು ಹೊರ ವಲಯದ ನೆಲಮಂಗಲದ ಹೊನ್ನಗಂಗಯ್ಯನ ಪಾಳ್ಯದಲ್ಲಿ ನಡೆದಿದೆ.

ಸುಮಾರು ಮೂರು ದಿನಗಳಿಂದ ಊಟ ಸಿಗದೆ ಹಕ್ಕಿಪಿಕ್ಕಿಯ ಜನ ನರಳಾಡುತ್ತಿದ್ದು, ತಾಲೂಕು ಆಡಳಿತ ಇತ್ತ ಗಮನಹರಿಸಿಲ್ಲ. ಕೊರೊನಾ ಭೀತಿಯಿಂದ ದೇಶವನ್ನೇ ಲಾಕ್‍ಡೌನ್ ಮಾಡಿರುವ ಹಿನ್ನಲೆ ದವಸ ಧಾನ್ಯ ಸಿಗದೆ ಜನ ಪರದಾಡುತ್ತಿದ್ದಾರೆ. ಮೂರು ದಿನಗಳಿಂದ ಊಟವಿಲ್ಲದೆ ಹಕ್ಕಿಪಿಕ್ಕಿ ಜನಾಂಗದವರುಪರಿತಪಿಸುತ್ತಿದ್ದರೂ ಈ ಕುಟುಂಬಗಳಿಗೆ ತಾಲೂಕು ಆಡಳಿತ ನೆರವು ನೀಡಲು ಮುಂದಾಗಿಲ್ಲ.

ಲಾಕ್‍ಡೌನ್ ಹಿನ್ನಲೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ತಬ್ಧವಾಗಿದ್ದು, ವಾಹನ ಸಂಚಾರ ತೀರಾ ವಿರಳವಾಗಿದೆ. ತುರ್ತು ಪರಿಸ್ಥಿತಿಯ ವಾಹನಗಳು ಮಾತ್ರ ಸಂಚರಿಸುತ್ತಿದ್ದು, ನೆಲಮಂಗಲದ ಜಾಸ್ ಟೋಲ್ ಮೂಲಕ ಓಡಾಡುತ್ತಿವೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಾತ್ರಿ ಪೀಣ್ಯ ಪೊಲೀಸರು ವಾಹನಗಳನ್ನು ತಡೆ ಹಿಡಿದ ಹಿನ್ನಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ವಿರಳವಾಗಿದೆ. ಅತ್ತ ನೆಲಮಂಗಲ ಪೊಲೀಸರು ಸಹ ವಾಹನಗಳ ತಪಾಸಣೆ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ