Breaking News

ರಾಜ್ಯ

ಘಟಪ್ರಭಾ, ಮಲಪ್ರಭಾ ಜಲಾಶಯಗಳ ಹೊರಹರಿವು ಇಳಿಕೆ

ಬೆಳಗಾವಿ: ಜಿಲ್ಲೆಯಂತೆ ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲೂ ಶುಕ್ರವಾರ ಮಳೆಯ ಅಬ್ಬರ ಕಡಿಮೆಯಾಗಿದೆ. ಅಲ್ಲಿಂದ ಕೃಷ್ಣಾ ನದಿಗೆ ಹರಿದು ಬರುತ್ತಿದ್ದ ಒಳಹರಿವು ತೀವ್ರ ಗತಿಯಲ್ಲಿ ಕಡಿಮೆಯಾಗಿದೆ. 1.73 ಲಕ್ಷ ಕ್ಯುಸೆಕ್‌ ನೀರು ಹರಿದು ಬಂದಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ 25 ಸಾವಿರ ಕ್ಯುಸೆಕ್‌ ಕಡಿಮೆಯಾಗಿದೆ. ಇದೇ ರೀತಿ, ಘಟಪ್ರಭಾ ಹರಿವು ಕೂಡ ಕಡಿಮೆಯಾಗಿದೆ. 19,775 ಕ್ಯುಸೆಕ್‌ ಒಳಹರಿವು ಇದೆ. ಹಿಂದಿನ ದಿನ 31,627 ಕ್ಯುಸೆಕ್‌ ಇತ್ತು. ಹಿಡಕಲ್‌ ಬಳಿಯ ಜಲಾಶಯದಿಂದ ಹೊರಬಿಡುವ ನೀರಿನ …

Read More »

ಕೊರೊನಾ ನಡುವೆ ಸೆ.21 ರಿಂದ ವಿಧಾನಮಂಡಲ ಅಧಿವೇಶನ

ಬೆಂಗಳೂರು: ಸೆಪ್ಟೆಂಬರ್ 21 ರಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕಲಾಪ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.   ಸೆ. 21 ರಿಂದ 30 ರವರೆಗೆ ಬೆಂಗಳೂರಿನಲ್ಲಿ ಮಂಡಲ ಅಧಿವೇಶನ ನಡೆಯಲಿದೆ. ಅಧಿವೇಶನದ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರ ಇರಬಾರದು ಎಂದು …

Read More »

ಇಂದು ಕಾವೇರಿಗೆ ಯಡಿಯೂರಪ್ಪ ಬಾಗಿನ – ಎರಡೆರಡು ದಾಖಲೆ ಬರೆಯಲಿದ್ದಾರೆ ಸಿಎಂ ಇವರಿಂದ ಪ್ರಕಟಿಸಲಾಗಿದೆ

ಮಂಡ್ಯ : ಒಡಲು ತುಂಬಿರುವ ಕನ್ನಂಬಾಡಿ ಕಟ್ಟೆಯಲ್ಲಿ ಕಾವೇರಿ ಮಾತೆಗೆ ಸಿಎಂ ಯಡಿಯೂರಪ್ಪ ಇಂದು ಬಾಗಿಲ ಅರ್ಪಿಸಲಿದ್ದಾರೆ. ಕೆಆರ್‌ಎಸ್‌ ಜಲಾಶಯದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಕಾವೇರಿಗೆ ಬಾಗಿನ ಸಲ್ಲಿಸುವ ಭಾಗ್ಯ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ದೊರೆತಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈಗಾಗಲೇ ಕಾವೇರಿ ತಾಯಿಗೆ ನಾಲ್ಕು ಬಾರಿ ಬಾಗಿನ ಅರ್ಪಿಸಿದ್ದಾರೆ. ಗೌರಿ ಹಬ್ಬದಂದು ಐದನೇ ಬಾರಿಗೆ ಬಾಗಿನ ಅರ್ಪಿಸಲಿದ್ದಾರೆ.ಈ ಮೂಲಕ ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ಬಾರಿ ಬಾಗಿನ …

Read More »

ಡ್ಯಾಂಗಳಿಂದ ಕೃಷ್ಣೆಗೆ ಹರಿದುಬಂತು ಅಪಾರ ನೀರು

ಬೆಳಗಾವಿ : ರಾಜ್ಯದಲ್ಲಿ ಮಳೆ ಇಳಿಮುಖವಾದ ಬೆನ್ನಲ್ಲೇ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲೂ ಮಳೆ ಸಂಪೂರ್ಣ ತಗ್ಗಿರುವುದರಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಎದುರುಸುತ್ತಿರುವ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಪಾತ್ರದ ನಿವಾಸಿಗಳು ನಿರಾಳವಾಗಿದ್ದಾರೆ. ಆದರೆ ಮಹಾರಾಷ್ಟ್ರದ ಜಲಾಶಯಗಳಿಂದ ನದಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಹರಿದು ಬರುವ ನೀರಿನ ಪ್ರಮಾಣ 2.17 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿರುವುದರಿಂದ ನದಿ ಅಪಾಯದ ಮಟ್ಟದಲ್ಲೇ ಹರಿಯುತ್ತಿದೆ. ಇದೇ ವೇಳೆ ತುಂಗಭದ್ರಾ ಮತ್ತು ಮಲಪ್ರಭಾ ಜಲಾನಯನ ಪ್ರದೇಶದಲ್ಲೂ ಮಳೆ …

Read More »

ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಸಾವು, ಸೋಂಕು ವರದಿ : ಗುರುವಾರದ ರಿಪೋರ್ಟ್ ಎಷ್ಟು..?

ಬೆಂಗಳೂರು : ರಾಜ್ಯದಲ್ಲಿ ಗುರುವಾರ 7,385 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಂದೂವರೆ ತಿಂಗಳ ಮಗು ಸೇರಿ 102 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದೇ ದಿನ 6231 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ ಸೋಂಕು ದೃಢಪಟ್ಟವರ ಒಟ್ಟು ಸಂಖ್ಯೆ 2.56 ಲಕ್ಷಕ್ಕೆ ಏರಿಕೆಯಾಗಿದ್ದರೆ, ಮೃತಪಟ್ಟವರ ಸಂಖ್ಯೆ ನಾಲ್ಕೂವರೆ ಸಾವಿರ ಗಡಿ (4,429) (ಆತ್ಮಹತ್ಯೆ ಸೇರಿದಂತೆ 16 ಅನ್ಯ ಕಾರಣದ ಸಾವು ಪ್ರಕರಣ ಹೊರತುಪಡಿಸಿ) ತಲುಪಿದೆ. ಇದರ ನಡುವೆ …

Read More »

ಗೊಬ್ಬರ ಇಲ್ಲ, ಆಕ್ಸಿಜನ್ ಇಲ್ಲ, ಇದು ಸಶಕ್ತ ಸರ್ಕಾರದ ಲಕ್ಷಣವೇ..? : ಹೆಚ್ಡಿಕೆ ಪ್ರಶ್ನೆ

ಬೆಂಗಳೂರು, ಆ.20-ಕೊಪ್ಪಳ ಜಿಲ್ಲೆಯ ರೈತರೊಬ್ಬರು ವಾರದಿಂದ ಅಲೆದರೂ ಒಂದು ಚೀಲ ಗೊಬ್ಬರ ಸಿಕ್ಕಿಲ್ಲ ಎಂದು ಅಳುತ್ತಿದ್ದರೆ, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ರೋಗಿಗಳು ನರಳಾಡುತ್ತಿರುವುದು ಸರ್ಕಾರ ಸಶಕ್ತವಾಗಿರುವ ಲಕ್ಷಣವೋ? ನಿಶಕ್ತವಾಗಿರುವ ಲಕ್ಷಣವೋ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ವೈದ್ಯಕೀಯ ಸಚಿವ ಡಾ.ಸುಧಾಕರ್ ಅವರ ಟ್ವೀಟ್ ಗೆ ಪ್ರತಿಯಾಗಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮಾಧ್ಯಮಗಳ ವರದಿಗಳನ್ನು ಗಮನಿಸುವಷ್ಟು ವ್ಯವಧಾನವಿರದ ನೀವು ಮಾಧ್ಯಮಗಳ ಮುಂದೆ ಕುಳಿತು “ಪೋಜು” ಕೊಡುವುದು ಬಿಟ್ಟು ಮೈಬಗ್ಗಿಸಿ ಕೆಲಸ …

Read More »

ಸರ್ಕಾರ 50 ಲಕ್ಷದಷ್ಟು ಕೊರೊನಾ ಲಸಿಕೆಯನ್ನು ಖರೀದಿಸಬಹುದು ಎಂದು ವರದಿಯಾಗಿದೆ…………..!

ನವದೆಹಲಿ: ಕೆಲವೇ ತಿಂಗಳಲ್ಲಿ ಕೋವಿಡ್‌19ಗೆ ಲಸಿಕೆ ಬರಬಹುದು ಎಂಬ ನಿರೀಕ್ಷೆಗಳ ನಡುವೆ ಕೇಂದ್ರ ಸರ್ಕಾರ 50 ಲಕ್ಷದಷ್ಟು ಕೊರೊನಾ ಲಸಿಕೆಯನ್ನು ಖರೀದಿಸಬಹುದು ಎಂದು ವರದಿಯಾಗಿದೆ.ಮೊದಲ ಹಂತದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಿಬ್ಬಂದಿಗೆ, ಸೈನಿಕರಿಗೆ ಲಸಿಕೆಯನ್ನ ನೀಡಲಾಗುತ್ತದೆ. ಹಿರಿಯ ನಾಗರಿಕರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಲಸಿಕೆಯನ್ನು ನೀಡುವ ನಿರೀಕ್ಷೆ ಇದೆ. ನೀತಿ ಆಯೋಗ, ಆರೋಗ್ಯ ಸಚಿವಾಲಯ ಮತ್ತು ಔಷಧ ಕಂಪನಿಗಳ ಜೊತೆಗೆ ಸೋಮವಾರ ಸಭೆ ನಡೆದಿತ್ತು. ಕೊರೊನಾ ಲಸಿಕೆಯ ಉತ್ಪಾದನಾ …

Read More »

ಮಹಾರಾಷ್ಟ್ರದ ಖ್ಯಾತ ಚಿತ್ರಕಲಾವಿದ ಮತ್ತು ಫೋಟೋಗ್ರಾಫರ್ ರಾಮ್ ಇಂದ್ರನಿಲ್ ಕಾಮತ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಮುಂಬೈ: ಮಹಾರಾಷ್ಟ್ರದ ಖ್ಯಾತ ಚಿತ್ರಕಲಾವಿದ ಮತ್ತು ಫೋಟೋಗ್ರಾಫರ್ ರಾಮ್ ಇಂದ್ರನಿಲ್ ಕಾಮತ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮುಂಬೈ ಮೂಲದ ಪ್ರಸಿದ್ಧ ಕಲಾವಿದ ರಾಮ್ ಇಂದ್ರನಿಲ್ ಕಾಮತ್ (41) ಅವರು ತನ್ನ ತಾಯಿಯೊಂದಿಗೆ ಮುಂಬೈನ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಬುಧವಾರ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ಗುರುವಾರ ತಿಳಿಸಿದ್ದಾರೆ. ಕಾಮತ್ ಅವರು ಜನಪ್ರಿಯ ವರ್ಣಚಿತ್ರಕಾರರಾಗಿದ್ದರು. ಜೊತೆಗೆ ಫೋಟೋಗ್ರಾಫರ್ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಅವರು ಬುಧವಾರ ಮಧ್ಯಾಹ್ನ …

Read More »

ಎಂಎಸ್ ಧೋನಿಯವರು, ಒಬ್ಬ ಕಲಾವಿದ, ಸೈನಿಕ ಮತ್ತು ಕ್ರೀಡಾಪಟು:ನರೇಂದ್ರ ಮೋದಿ

ನವದೆಹಲಿ: ಭಾರತ ಮಾಜಿ ನಾಯಕ ಎಂಎಸ್ ಧೋನಿಯವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪತ್ರ ಬರೆದಿದ್ದು, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಾಡಿಹೊಗಳಿದ್ದಾರೆ. ಭಾರತದ ಕ್ರಿಕೆಟ್ ತಂಡಕ್ಕಾಗಿ 16 ವರ್ಷಗಳ ಕಾಲ ಆಡಿ, ದೇಶಕ್ಕೆ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ತಂದು ಕೊಟ್ಟ ಚಾಣಾಕ್ಷ ನಾಯಕ ಎಂಎಸ್ ಧೋನಿಯವರು ಅಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು. ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಹೇಳಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. …

Read More »

ತಂದೆ-ತಾಯಿ ಕಳೆದುಕೊಂಡು ಅನಾಥಳಾಗಿರುವ ಮೇಘನಾ

ದಾವಣಗೆರೆ, ಆ.20- ತಂದೆ-ತಾಯಿ ಕಳೆದುಕೊಂಡು ಅನಾಥಳಾಗಿರುವ ಮೇಘನಾ ಕೂಲಿನಾಲಿ ಮಾಡಿ ತಮ್ಮನನ್ನು ಸಾಕಿ ಸಲಹುತ್ತಿದ್ದರೂ ನೆತ್ತಿಯ ಮೇಲೊಂದು ಸೂರಿಲ್ಲದೆ ಪರಿತಪಿಸುತ್ತಿದ್ದಾರೆ. ಜಗಳೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗ್ರಾಮವೊಂದರ ಮಳೆ ಸೋರುವ ಹಾಳು ಮನೆಯಲ್ಲಿ ವಾಸಿಸುತ್ತಿರುವ ಮೇಘನಾ ಭವಿಷ್ಯದಲ್ಲಿ ಸಾಧನೆ ಮಾಡುವ ಹಂಬಲ ಹೊಂದಿದ್ದಾಳೆ. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಮೇಘನಾ ಭವಿಷ್ಯದಲ್ಲಿ ಬ್ಯಾಂಕ್ ಅಕಾರಿಯಾಗುವ ಕನಸು ಕಂಡಿದ್ದಾಳೆ. ತನ್ನ ಓದಿನ ಜತೆಗೆ ಕೂಲಿನಾಲಿ ಮಾಡಿ ಜೀವನ …

Read More »