Breaking News

ರಾಜ್ಯ

ಸ್ಮಶಾನದಲ್ಲಿ ವಾಹನಕ್ಕೆ ಚಾಲನೆ, ಬರ್ತ್ ಡೇ ಸೆಲೆಬ್ರೆಷನ್ : ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದ MBV

ಗೋಕಾಕ : ಮಾನವ ಬಂಧುತ್ವ ವೇದಿಕೆಯ ಡಿ.6ರಂದು ನಡೆಸುವ ಮಹಾ ಪರಿನಿರ್ಮಾಣ ದಿನ ಈ ಬಾರಿ ವಿಶೇಷತೆಯಿಂದ ಕೂಡಿತ್ತು. ಸ್ಮಶಾನ ಭೂಮಿಯಲ್ಲಿ ವಾಹನಕ್ಕೆ ಚಾಲನೆ, ಬರ್ತಡೇ ಆಚರಿಸಿ, ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು 2014ರಿಂದ ಮೌಢ್ಯ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಸಹ ವಿಶೇಷ , ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿರುವ ಮೂಢನಂಬಿಕೆ ಹೊಗಲಾಡಿಸಲು ಸಮಾರಂಭ ಏರ್ಪಡಿಸಲಾಗಿತ್ತು. …

Read More »

ನಾನು ಸಹಕಾರ ಮಂತ್ರಿಯಾಗಿ ಸಾಲ ಮನ್ನಾ ಮಾಡೋದು ಗ್ಯಾರಂಟಿ”

ಮಧುಗಿರಿ, – ರಾಜ್ಯದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಹಾಗೂ ನಾನು ಸಹಕಾರ ಮಂತ್ರಿಯಾಗಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವುದು ನಿಶ್ಚಿತ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಪಟ್ಟಣದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿ ಮಾತನಾಡಿದ ಅವರು, ಕಳೆದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುವುದರ ಜೊತೆಗೆ ಅನೇಕ …

Read More »

ದೇವಾಲಯಕ್ಕೆ ನುಗ್ಗಿದ ಕರಡಿ-

ತುಮಕೂರು: ಮಧುಗಿರಿ ತಾಲೂಕಿನ ಬೆಡತ್ತೂರು ಗ್ರಾಮದ ಬಳಿ ಪ್ರತಿನಿತ್ಯ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.ಗ್ರಾಮದ ಪಿಲ್ಲೆಕಮ್ಮ ದೇವಸ್ಥಾನದ ಬಳಿ ಭಾನುವಾರ ಕರಡಿಯೊಂದು ಕಾಣಿಸಿಕೊಂಡಿದೆ. ಕರಡಿ ದೇವಸ್ಥಾನ ಪ್ರವೇಶಿಸುತ್ತಿರುವ ವಿಡಿಯೋವನ್ನು ಗ್ರಾಮದ ಶಿವರಾಜು ಎಂಬುವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಗ್ರಾಮಸ್ಥರ ಕೂಗಾಟ ಚೀರಾಟ ಕೇಳಿ ಕರಡಿ ದೇವಸ್ಥಾನದಿಂದ ಕಾಡಿನತ್ತ ತೆರಳಿದೆ. ಈ ಭಾಗದಲ್ಲಿ ನಾಲ್ಕೈದು ಕರಡಿಗಳು ಓಡಾಡಿಕೊಂಡಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಈ ಬಗ್ಗೆ ಹಲವು ಬಾರಿ …

Read More »

ಅಧಿವೇಶನದಲ್ಲಿ ಕೋಲಾಹಲ, ಗದ್ದಲ ಸಾಧ್ಯತೆ…………..

ಬೆಂಗಳೂರು: ಇಂದಿನಿಂದ ಇದೇ 15 ರವರೆಗೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಉಭಯ ಸದನಗಳ ಕಲಾಪಗಳಲ್ಲೂ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಪರಸ್ಪರ ವಾಕ್ಸಮರ ನಡೆಯಲಿದೆ. ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ನೆರೆ ಪರಿಹಾರದಲ್ಲಿನ ವೈಫಲ್ಯ, ಕೇಂದ್ರದಿಂದ ಪರಿಹಾರ ಬಿಡುಗಡೆಯಲ್ಲಿನ ತಾರತಮ್ಯ, ರೈತರ ಸಮಸ್ಯೆಗಳು, ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯ, ಸಚಿವ ಸಂಪುಟ ವಿಸ್ತರಣೆಯ ಗೊಂದಲಗಳಿಂದ …

Read More »

ಗೋಕಾಕದಲ್ಲಿ ಬಿಜೆಪಿ ಎಸ್ಸಿ ಮೊರ್ಚಾ ನಗರ ಘಟಕದಿಂದ ಮಹಾ ಪರಿನಿರ್ವಾಣ ದಿನ ಆಚರಣೆ

    ಗೋಕಾಕ ನಗರದ ಆದಿಜಾಂಬವ ನಗರದಲ್ಲಿರುವ ಅಂಬೇಡ್ಕರ ಭವನದಲ್ಲಿ ಭಾರತ ರತ್ನ ,ಸಂವಿಧಾನ ಶಿಲ್ಲಿ ಡಾ: ಬಾಬಾ ಸಾಹೇಬರ ಪುಣ್ಯಸ್ಮರಣೆಯ ಮಹಾ ಪರಿ ನಿರ್ವಾಣ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗೋಕಾಕದಲ್ಲಿ ಬಿಜೆಪಿ ಎಸ್ಸಿ ಮೊರ್ಚಾ ನಗರ ಘಟಕದಿಂದ ಮಹಾ ಪರಿನಿರ್ವಾಣ ದಿನ ಆಚರಣೆ ಮಾಡಿ ಇವತ್ತಿನ ಯುವಕರು ಮೊಬೈಲಗೆ ಮೊರೆ ಹೊಗದೆ ಜೀವನದಲ್ಲಿ ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಖಬೇಕಾಗಿದೆಎಂದು ಗೋಕಾಕ ಎಸ್ಸಿ ಮೊರ್ಚಾ ಅದ್ಯಕ್ಷರಾದ ಮಂಜು …

Read More »

ಸಮಾನತೆಯ ಸಮಾಜ ನಿರ್ಮಾಣ ನಮ್ಮ ಗುರಿಯಾಗಲಿ: ಸತೀಶ್ ಜಾರಕಿಹೊಳಿ

ಗೋಕಾಕ: ಬುದ್ಧ, ಬಸವ, ಅಂಬೇಡ್ಕರ್ ರವರು ಕಂಡಿದ್ದ ಸಮಾನತೆಯ ಸಮಾಜವನ್ನು ನಾವು ಕಟ್ಟಬೇಕಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ, ಒಗಟ್ಟು ನಮಗೆ ತುಂಬ ಮುಖ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಮರಾಠ ಸಮಾಜ ಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಪ್ರತಿವರ್ಷ ನಡೆಯುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಹಣ ದಿನದಂದು ಆಚರಿಸುವ ಮೌಢ್ಯ ವಿರೋಧಿ ದಿನ ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನ್ಯಾಯಕ್ಕೆ ಒಳಗಾಗಿರುವ ಜನರನ್ನು …

Read More »

ಅಂಬೇಡ್ಕರ್ ಕನಸನ್ನು ನೆನೆಸು ಮಾಡುವುದು ಸತೀಶ್ ಜಾರಕಿಹೊಳಿ ಅವರ ಕನಸು: ಡಾ.ಯಲ್ಲಪ್ಪ ಹಿಮ್ಮಡಿ

ಗೋಕಾಕ: ಸಮಾಜದ ಒಳಿತಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಂಡಿದ್ದ ಕನಸನ್ನು ನೆನೆಸು ಮಾಡಲು ಶ್ರಮಿಸುತ್ತಿರುವರು ಶಾಸಕ ಸತೀಶ್ ಜಾರಕಿಹೊಳಿ ಅವರು ಎಂದು ಬಂಡಾಯ ಸಾಹಿತ್ಯ ಸಂಘಟನೆಯ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು. ನಗರದ ಮರಾಠ ಸಮಾಜ ಭೂಮಿಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಪ್ರತಿವರ್ಷ ನಡೆಯುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಹಣ ದಿನದಂದು ಆಚರಿಸುವ ಮೌಢ್ಯ ವಿರೋಧಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. …

Read More »

ಸತೀಶ ಜಾರಕಿಹೊಳಿ ವೈಚಾರಿಕತೆ ಚಿಂತನೆ ಕರ್ನಾಟಕ ಅಷ್ಟೇ ಅಲ್ಲ ದೇಶದ ತುಂಬ ಹಬ್ಬಲಿ: ಅಶೋಕ ಪೂಜಾರಿ

ಗೋಕಾಕ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಗತ್ತಿನ ಶ್ರೇಷ್ಟ‌ ನಾಯಕ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಬಣ್ಣಿಸಿದರು. ನಗರದ ಮರಾಠಾ ರುದ್ರಭೂಮಿಯಲ್ಲಿ ನಡೆದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ನಿಮಿತ್ತ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೌಡ್ಯ ವಿರೋಧಿ ಪರಿವರ್ತನಾ ದಿ‌ನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೂಢನಂಬಿಕೆ ವಿರುದ್ದ ಹೋರಾಡುತ್ತಿರುವ ಸತೀಶ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಬೇಕಿದೆ. ಮಾನವ ಬಂಧುತ್ವ ವೇದಿಕೆ ವೈಚಾರಿಕತೆ ಹೋರಾಟ ಕರ್ನಾಟಕ ಅಷ್ಟೇ ಅಲ್ಲ‌. …

Read More »

ಗ್ರಾಪಂ.ಚುನಾವಣೆಗೆ ಡಿ.7 ಮತ್ತು 11ರಂದು ಅಧಿಸೂಚನೆ : ಚುನಾವಣಾ ಅಕ್ರಮ ತಡೆಗೆ-ಬಿಗಿ ಬಂದೋಬಸ್ತ್

ಬೆಳಗಾವಿ: ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಸೋಮವಾರ (ಡಿ.7) ಮತ್ತು ಎರಡನೇ ಹಂತದ ಚುನಾವಣೆಗೆ ಶುಕ್ರವಾರ(ಡಿ.11) ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ (ಡಿ.6) ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಅಧಿಸೂಚನೆ ಹೊರಡಿಸಿದ ಬಳಿಕ ನಾಮಪತ್ರಗಳನ್ನು ಸ್ವೀಕಾರ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಸಲು ಮೊದಲನೇ ಹಂತಕ್ಕೆ ಡಿ.11; ಎರಡನೇ ಹಂತಕ್ಕೆ ಡಿ.16 ಕಡೆಯ ದಿನವಾಗಿರುತ್ತದೆ. ನಾಮಪತ್ರಗಳ ಪರಿಶೀಲನೆ ಮೊದಲನೇ ಹಂತಕ್ಕೆ ಡಿ.12; …

Read More »

ಅಂಬೇಡ್ಕರ ಬರೀ ವ್ಯಕ್ತಿಯಲ್ಲ. ಅವರೊಬ್ಬ ದೊಡ್ಡ ಶಕ್ತಿ : ಕುದರಿ

ಘಟಪ್ರಭಾ : ಅಂಬೇಡ್ಕರ ಬರೀ ವ್ಯಕ್ತಿಯಲ್ಲ. ಅವರೊಬ್ಬ ದೊಡ್ಡ ಶಕ್ತಿ. ದೇಶಕ್ಕೆ ವಿಶ್ವದಲ್ಲಿಯೇ ದೊಡ್ಡ ಸಂವಿಧಾನ ನೀಡಿರುವ ಅಂಬೇಡ್ಕರ ಅವರನ್ನು ಗೌರವಿಸಿ ಪೂಜಿಸಬೇಕಾದ ಅಗತ್ಯವಿದೆ ಎಂದು ಅರಭಾವಿ ಮಂಡಲ ಎಸ್‍ಸಿ ಮೋರ್ಚಾ ಅಧ್ಯಕ್ಷ ನಾಗಪ್ಪ ಕುದರಿ ಹೇಳಿದರು. ಭಾನುವಾರದಂದು ಇಲ್ಲಿಗೆ ಸಮೀಪದ ಅರಭಾವಿ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನದಲ್ಲಿ ಜರುಗಿದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ ಅವರ ಪರಿನಿರ್ವಾಣ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬೇಡ್ಕರ ಅವರನ್ನು ಕೇವಲ …

Read More »