Breaking News

ರಾಜ್ಯ

ಮಳೆಯಿಂದ ಹಾನಿ; ವಸತಿ, ಪರಿಹಾರಕ್ಕೆ ಆಗ್ರಹಿಸಿ ರಸ್ತೆ ತಡೆದು ಆಕ್ರೋಶ

ವಿಜಯಪುರ*ಮಳೆಯಿಂದ ಹಾನಿ; ವಸತಿ, ಪರಿಹಾರಕ್ಕೆ ಆಗ್ರಹಿಸಿ ರಸ್ತೆ ತಡೆದು ಆಕ್ರೋಶ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಇತ್ತೀಚಿನ ಸುರಿದ ಭಾರಿ ಮಳೆಗೆ ಲಕ್ಷ್ಮೀನಗರದ ಪಕ್ಕದ ಜಮೀನಿನ ಒಡ್ಡು ಒಡೆದು ಮನೆಯೊಳಗೆ ನೀರು ನುಗ್ಗಿ ಜನರು ರಾತ್ರಿಯಿಡಿ ಪರದಾಡುವಂತಾಗಿತ್ತು. ಹೀಗಾಗಿ, ತಮಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ನಿವಾಸಿಗಳು ಅಂಬೇಡ್ಕರ ವೃತ್ತದಲ್ಲಿ ದಿಢೀ‌ರ್ ರಸ್ತೆ ತಡೆದು ಧರಣಿ ನಡೆಸಿದರು. ಪ್ರತಿಭಟನೆ ನಿರತರರು ವಿವಿಧ ಮನೆಯಲ್ಲಿನ ಸಾಮಗ್ರಿ ಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ, ಆಕ್ರೋಶ …

Read More »

ನಗರದಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನು ತಾಯಿ ಮಡಿಲಿಗೆ ಸೇರಿಸಿದ ಸಾಮಾಜಿಕ ಕಾರ್ಯಕರ್ತ

ಹಾವೇರಿ: ನಗರದಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವತಿಯನ್ನು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ತಾಯಿಯ ಮಡಿಲಿಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದಾವಣಗೆರೆ ಮೂಲದ ಯುವತಿ ಮುಮ್ತಾಜ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ನಾಲ್ಕೈದು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಮುಮ್ತಾಜ್ ಗುರುವಾರ ಹಾವೇರಿ ನಗರದಲ್ಲಿ ಅಲೆದಾಡುತ್ತಿದ್ದನ್ನು ಕಂಡ ಸ್ಥಳೀಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್​ಗೆ ಮಾಹಿತಿ ನೀಡಿದ್ದರು. ನಂತರ ಖಾದರ್, ಮಾನಸಿಕ ಅಸ್ವಸ್ಥ ಯುವತಿಯನ್ನು​ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ, ವೈದ್ಯರಿಗೆ ತೋರಿಸಿದ್ದರು. …

Read More »

ಶೃಂಗೇರಿ ಟು ಮಂಗಳೂರು ರಸ್ತೆ ಸಂಚಾರ ಬಂದ್

ಚಿಕ್ಕಮಗಳೂರು, ಜೂನ್​ 15: ಮಲೆನಾಡು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರಿ ಮಳೆ (Rain) ಮುಂದುವರೆದಿದೆ. ಹಲವೆಡೆ ಅವಾಂತರಗಳು ಸಂಭವಿಸಿವೆ. ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಬಳಿಯ ರಾಷ್ಟ್ರೀಯ ಹೆದ್ದಾರಿ 169ರ ಒಂದೇ ಸ್ಥಳದಲ್ಲಿ ಪದೇಪದೇ ಗುಡ್ಡ ಕುಸಿಯುತ್ತಿದೆ. ಶೃಂಗೇರಿ-ಮಂಗಳೂರು ಮಾರ್ಗದ (Sringeri to Mangaluru) ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಮಂಗಳೂರಿಗೆ ತೆರಳುವ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಶೃಂಗೇರಿ ಟು ಮಂಗಳೂರು ರಸ್ತೆ ಸಂಚಾರ ಬಂದ್ ಧಾರಾಕಾರವಾಗಿ ಸುರಿಯುತ್ತಿರುವ …

Read More »

ಅಜ್ಜಿ ತಿಥಿ ಕಾರ್ಯಕ್ಕೆ ಹೋಗಿದ್ದವರ ಮನೆಯಲ್ಲಿ ಕಳ್ಳತನ

ಆನೇಕಲ್, ಜೂನ್​ 15: ಅಜ್ಜಿಯ ತಿಥಿ ಕಾರ್ಯಕ್ಕೆ ಹೋದವರಿಗೆ ಕಳ್ಳರು ಶಾಕ್ ನೀಡಿದ್ದಾರೆ. ಅತ್ತ ಹಳೆ ಮನೆಯಲ್ಲಿ ಮನೆ ಮಂದಿಯಲ್ಲ ಸೇರಿ ಅಜ್ಜಿಯ ತಿಥಿ ಕಾರ್ಯ ಮಾಡುತ್ತಿದ್ದರೇ, ಇತ್ತ ಕಳ್ಳರು ಮಾತ್ರ ಹೊಸ ಮನೆಯಲ್ಲಿದ್ದ 240 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲೂಕಿನ ಆಡೆಸೊಣ್ಣಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೇ 2ನೇ ತಾರೀಖು ರಾತ್ರಿ ಪ್ರೇಮಾ ಎಂಬುವವರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ …

Read More »

ಪ್ರೀತಿ ಕೊಂದ ಕೊಲೆಗಾರ 6 ತಿಂಗಳ ಬಳಿಕ ಸಿಕ್ಕಿಬಿದ್ದ: ಹಂತಕನ ಹೆಡೆಮುರಿ ಕಟ್ಟಿದ್ದೇ ರೋಚಕ

ಗದಗ, (ಜೂನ್ 15): ಮದುವೆಯಾಗು ಎಂದು ಪೀಡಿಸಿದ್ದ ಪ್ರೇಯಿಸಿ (Lover) ಮಧುಶ್ರೀಯನ್ನು ಕೊಲೆ ಮಾಡಿ ಬಳಿಕ ಹಳ್ಳದಲ್ಲಿ ಹೂತ್ತಿದ್ದ ಪ್ರಕರಣವನ್ನು ಗದಗ (Gadag) ಪೊಲೀಸರು ಭೇದಿಸಿದ್ದಾರೆ. ಗದಗ ತಾಲೂಕಿನ ನಾರಾಯಣಪುರ (Narayanapura) ಗ್ರಾಮದ ಸತೀಶ್ ಹಿರೇಮಠ ಅದೇ ಗ್ರಾಮದ ಮಧುಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಹೀಗೆ ಒಂದು ದಿನ ಕುಟುಂಬಸ್ಥರ ಕಣ್ತಪ್ಪಿಸಿ ಇಬ್ಬರು ಹಳ್ಳಿ ಗ್ರಾಮದ ಹೊರಹೊಲದಲ್ಲಿ ಭೇಟಿಯಾಗಿದ್ದು, ಈ ವೇಳೆ ಮಧುಶ್ರೀ ತನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಬಳಿಕ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸತೀಶ್, ವೇಲ್​ ನಿಂದ …

Read More »

ಕಾಂತಾರ ಶೂಟಿಂಗ್​ ವೇಳೆ ಶಿಪ್​ ಪಲ್ಟಿ

ಶಿವಮೊಗ್ಗ: ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನ ಮಾಡುತ್ತಿರುವ ʼಕಾಂತಾರ-1ʼ ಚಿತ್ರದ ಶೂಟಿಂಗ್ ವೇಳೆ ಜಲಾಶಯದಲ್ಲಿ ಶಿಪ್​ ಮಗುಚಿದ ಘಟನೆ‌ ಬಗ್ಗೆ ಹೊಂಬಾಳೆ ಫಿಲ್ಮ್ಸ್ ‌ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್‌ ಸ್ಪಷ್ಟನೆ ನೀಡಿದ್ದಾರೆ. “ಮಾಣಿ ಹಿನ್ನೀರಿನಲ್ಲಿʼಕಾಂತಾರ ಚಾಪ್ಟರ್ 1ʼ ಚಿತ್ರೀಕರಣ ನಡೆಯುತ್ತಿದೆ. ಬ್ಯಾಕ್‌ ಡ್ರಾಪ್​ಗೋಸ್ಕರ ಶಿಪ್​​ ಸೆಟ್‌ನ್ನು ಹಾಕಲಾಗಿತ್ತು. ಜೋರಾದ ಗಾಳಿ – ಮಳೆಯಿಂದ ಶಿಪ್​ ಪಲ್ಟಿಯಾಗಿದೆ. ನಮ್ಮ ತಂಡದವರು ಯಾರೂ ಕೂಡ ಅದರ ಸುತ್ತಮುತ್ತ ಇರಲಿಲ್ಲ. ನಮ್ಮ ಶೂಟಿಂಗ್‌ ದೂರದಲ್ಲಿ ನಡೆಯುತ್ತಿತ್ತು. …

Read More »

ಇದು ಬೆಂಗಳೂರಿನ ಆರ್ಮಿ ಫ್ಯಾಮಿಲಿ

ಡೆಹ್ರಾಡೂನ್/ಬೆಂಗಳೂರು: ಇಲ್ಲಿನ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ)ಯಲ್ಲಿ 2025ರ ಪಾಸಿಂಗ್​ ಔಟ್​ ಪರೇಡ್ ಶನಿವಾರ​ ನಡೆಯಿತು. ಈ ಪರೇಡ್​ನಲ್ಲಿ 451 ಕೆಡೆಟ್​ಗಳು ಭಾಗಿಯಾಗಿದ್ದು, ತರಬೇತಿ ಪಡೆದು ಸೇನೆಗೆ ಸೇರ್ಪಡೆಯಾದರು. ಈ ವೇಳೆ ಅಭ್ಯರ್ಥಿಗಳ ಕುಟುಂಬಸ್ಥರು ಇದ್ದರು. ಆದರೆ ಬೆಂಗಳೂರಿನ ಕುಟುಂಬವೊಂದು ವಿಶೇಷ ಕಾರಣಕ್ಕೆ ಎಲ್ಲರ ಗಮನ ಸೆಳೆಯಿತು. ಸೇನಾ ಪಡೆಗಳಲ್ಲಿ ಒಂದೇ ಕುಟುಂಬದ ಮೂವರು: ಹೌದು, ತಂದೆ ವಾಯುಪಡೆಯಲ್ಲಿದ್ದರೆ ಅವರ ಹಿರಿಯ ಮಗ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಕಿರಿಯ ಮಗ ಅನ್ಮೋಲ್ …

Read More »

ಶ್ರೀಮಂತ ಯುವಕನಿಗೆ ಮದ್ಯ ಕುಡಿಸಿ ಗ್ಯಾಂಗ್​ನಿಂದ ದರೋಡೆ ಮಾಡಿಸಿದ ಸ್ನೇಹಿತರು:

ಬೆಂಗಳೂರು : ಯುವಕನಿಗೆ ಮದ್ಯಪಾನ ಮಾಡಿಸಿ ಆತನ ಸ್ನೇಹಿತರೇ ಮತ್ತೊಂದು ಗ್ಯಾಂಗ್​ನ ಮೂಲಕ ರಾಬರಿ ಮಾಡಿಸಿರುವ ಘಟನೆ ಚಿಕ್ಕಜಾಲ ವ್ಯಾಪ್ತಿಯಲ್ಲಿ ನಡೆದಿದೆ. ಚಂದನ್​​ ಎಂಬಾತನ ಚಿನ್ನದ ಸರ, ಕೈಕಡಗ ದರೋಡೆ ಮಾಡಲಾಗಿದ್ದು, ಕೊನೆಗೆ ಆತನೊಂದಿಗೆ ಸ್ನೇಹಿತರಾದ ಪವನ್ ಹಾಗೂ ಅಚಲ್ ಪೊಲೀಸ್​ ಠಾಣೆಗೆ ತೆರಳಿ ದೂರು ಕೊಡಿಸಿದ್ದರು. ಆದರೆ ಪೊಲೀಸರ ತನಿಖೆಯ ವೇಳೆ ಚಂದನ್‌ನ ಸ್ನೇಹಿತರ ಕಳ್ಳಾಟ ಬಯಲಾಗಿದೆ. ಪ್ರಕರಣದ ಹಿನ್ನೆಲೆ: ಸ್ನೇಹಿತರಾಗಿದ್ದ ಚಂದನ್, ಪವನ್ ಮತ್ತು ಅಚಲ್ ಕಳೆದ ತಿಂಗಳು ಚಿಕ್ಕಜಾಲದ …

Read More »

ಹಂತ ಹಂತವಾಗಿ ಅಭಿವೃದ್ಧಿಯತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರ : ಚನ್ನರಾಜ ಹಟ್ಟಿಹೊಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ

ಹಂತ ಹಂತವಾಗಿ ಅಭಿವೃದ್ಧಿಯತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರ : ಚನ್ನರಾಜ ಹಟ್ಟಿಹೊಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ ಹಿರೆಬಾಗೇವಾಡಿ (ಬೆಳಗಾವಿ) : ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು, ಕ್ಷೇತ್ರದಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು, ಶೈಕ್ಷಣಿಕ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಸಂಕಲ್ಪ ಮತ್ತು ಭರವಸೆಯನ್ನು ಈಡೇರಿಸುವ ದಿಸೆಯಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಇಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭದ ಮೂಲಕ …

Read More »

ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಜೂ.17ರಂದು ರಾಜ್ಯ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಕಾಲ್ತುಳಿತ ದುರಂತ ಸಂಬಂಧ ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಜೂನ್ 17ರಂದು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಗೋಪಾಲಯ್ಯ, “ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಬಿಜೆಪಿ ಹೋರಾಟ ನಡೆಸಲಿದೆ. ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮತ್ತು ಸಿಎಂ ನಿವಾಸ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಧಾನಸೌಧದಲ್ಲಿ ನಡೆದಿದ್ದು ಸನ್ಮಾನ ಕಾರ್ಯಕ್ರಮ ಅಲ್ಲ, ಅವಮಾನ ಮಾಡುವ …

Read More »