ಬೆಳಗಾವಿ: ಐತಿಹಾಸಿಕ ರಾಜಹಂಸಗಡ ಕೋಟೆಯ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ. ಬೆಳಗಾವಿಯ ತಾಲೂಕಿನ ಯಳ್ಳೂರ ಗ್ರಾಮದ ಹೊರವಲಯದಲ್ಲಿ ರಾಜಹಂಸಗಡ ಕೋಟೆ ಗುಡ್ಡ ಇದೆ. ಕೋಟೆ ಗುಡ್ಡದ ಅಕ್ಕಪಕ್ಕದಲ್ಲಿರುವ ಒಣಹುಲ್ಲಿಗೆ ಆಕಸ್ಮಿಕ ಬೆಂಕಿ ಆವರಿಸಿಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಕಿ ನಂದಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣವಾಗಿರುವ ಐತಿಹಾಸಿಕ ರಾಜಹಂಸಗಡ ಕೋಟೆಗೆ ತನ್ನದೇ ಆದ ಹೆಸರಿದೆ.
Read More »ಗೊಂದಲಗಳನ್ನು ಸೃಷ್ಟಿಸುತ್ತಿದೆ ಕೊರೊನಾ ಲಸಿಕೆ..!
ಜಕಾರ್ತ, ಡಿ.20- ಮಹಾಮಾರಿ ಕೊರೊನಾಗೆ ಔಷ ಸಿಕ್ಕಿದೆ. ವಿಶ್ವಕ್ಕೆ ಎದುರಾಗಿರುವ ಕಂಟಕ ಮುಕ್ತಿ ದೊರೆಯಲಿದೆ ಎಂಬ ಆಶಾದಾಯಕ ಬೆಳವಣಿಗೆಯ ನಡುವೆಯೇ ಲಸಿಕೆ ತಯಾರಿಕೆಗೆ ಬಳಕೆ ಮಾಡಲಾಗಿರುವ ಅಂಶಗಳು ಧಾರ್ಮಿಕ ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ. ಇಂಡೋನೇಷ್ಯಾದ ರಾಜ ತಾಂತ್ರಿಕರು ಮತ್ತು ಇಸ್ಲಾಂ ಧಾರ್ಮಿಕ ಗುರುಗಳು ಅಲ್ಲಿ ಔಷಧ ತಯಾರಿಕೆಯ ಪ್ರಕ್ರಿಯೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಆನಂತರ ಇಂಡೋನೇಷ್ಯಾಗೆ ಲಕ್ಷ ಗಟ್ಟಲೆ ಔಷಯ ಡೋಸೇಜ್‍ಗಳನ್ನು ಕಳುಹಿಸಲಾಗಿದೆ. ಕೊರೊನಾ ಲಸಿಕೆ ಉತ್ಪಾದಕ ಕಂಪೆನಿಗಳು ಸುರಕ್ಷತೆ , …
Read More »ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ
ಬೆಂಗಳೂರು, ಡಿ.20- ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ರೈತರು ಮತ್ತು ಕಾರ್ಮಿಕರು ಪ್ರತಿಭಟನೆ ಹಾಗೂ ಸತ್ಯಾಗ್ರಹಗಳಲ್ಲಿ ತೊಡಗಿದ್ದಾರೆ. ಪ್ರತಿಭಟನಾ ನಿರತರನ್ನು ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಬಿಡದಿಯ ಟೊಯೋಟಾ ಕಂಪೆನಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಘಟಕಗಳನ್ನು ಹೊಂದಿದೆ. ಅದರ ಒಂದು ಘಟಕದಲ್ಲಿ ಸುಮಾರು ಎರಡು ಸಾವಿರ ಜನರು ಖಾಯಂ ನೌಕರರಾಗಿ ಕೆಲಸ ಮಾಡುತ್ತಿದ್ದರು. ಈ …
Read More »ಕೇವಲ ಎರಡು ಗಂಟೆಯಲ್ಲಿ 23,90,900 ರೂ. ದಂಡ ಸಂಗ್ರಹ: ಪೊಲೀಸ್ ಆಯುಕ್ತ ಡಾ|| ಬಿ.ಆರ್. ರವಿಕಾಂತೇಗೌಡ
ಬೆಂಗಳೂರು, ಡಿ.20- ರಸ್ತೆ ಬಳಕೆದಾರರ ಸುರಕ್ಷತೆ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ಪ್ರವರ್ತನ ಚಟುವಟಿಕೆಗಳನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗ ಆಪರೇಷನ್ ಸರ್‍ಪ್ರೈಸ್ ಚೆಕ್ ಕಾರ್ಯಾಚರಣೆ ಪ್ರಾರಂಭಿಸಿದ್ದು ಕೇವಲ ಎರಡು ಗಂಟೆಯಲ್ಲಿ 23,90,900 ರೂ. ದಂಡ ಸಂಗ್ರಹಿಸಲಾಗಿದೆ. ನಗರದ 44 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿನ್ನೆ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಆಪರೇಷನ್ ಸರ್‍ಪ್ರೈಸ್ ಚೆಕ್ ಕಾರ್ಯಾಚರಣೆ ಹಮ್ಮಿಕೊಂಡು ಒಟ್ಟು 178 ಸ್ಥಳಗಳಲ್ಲಿ 5123 …
Read More »3.9 ಡಿಗ್ರಿ ಕೊರೆವ ಮಹಾಚಳಿಗೆ ತತ್ತರಿಸಿದ ದೆಹಲಿ,
ನವದೆಹಲಿ, ಡಿ.20- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಚಳಿಗಾಲದಲ್ಲೇ ಅತ್ಯಂತ ಕಡಿಮೆ ಶೀತ ವಾತವರಣ ದಾಖಲಾಗಿದ್ದು, ಜನ ಜೀವನ ಗಡಗಡ ನಡುಗಿ ಹೋಗಿದೆ. ಶನಿವಾರ ಸಫ್ಜಜಂಗ್‍ನ ಮಾಪಕ ಕೇಂದ್ರದಲ್ಲಿ 3.9 ಡಿಗ್ರಿ ಸೆಲ್ಸಿಯಸ್ ಶೀತ ವಾತವರಣ ದಾಖಲಾಗಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಶನಿವಾರ ಅತ್ಯಂತ ಕನಿಷ್ಠ ತಾಪಮಾನ 3.4 ಡಿಗ್ರಿ ದಾಖಲಾಗಿದೆ. ಲೋದಿ ರಸ್ತೆಯಲ್ಲಿ ಮಾಪನ ಕೇಂದ್ರದಲ್ಲಿ 3.3 ಡಿಗ್ರಿ ಸೆಲ್ಸಿಯಸ್ ತೇವಾಂಶ ವರದಿಯಾಗಿದೆ. …
Read More »ಪಿಡಿಓಎಸಿಬಿ ಅಧಿಕಾರಿಗಳ ಬಲೆಗೆ
ಶಿರಸಿ : ಶಿರಸಿ ತಾಲ್ಲೂಕಿನ ಕುಕ್ರಿ ಗ್ರಾಮದ ರೈತರರೊಬ್ಬರಿಂದ ಮನೆ ಸಂಖ್ಯೆ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಜಾನ್ಮನೆ ಗ್ರಾಮ ಪಂಚಾಯ್ತಿ ಪಿಡಿಓ ಕೃಷ್ಣಪ್ಪ ಯಲ್ವಗಿ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಸುಧೀಂದ್ರ ಹೆಗಡೆ ಎಂಬುವವರು 2014ರಲ್ಲಿ ಹೊಸ ಮನೆ ಕಟ್ಟಿಸಿದ್ದರು. ಅದಕ್ಕೆ ಸಂಖ್ಯೆ ನೀಡಲು ಪಿಡಿಓ ₹15 ಸಾವಿರ ಹಣದ ಬೇಡಿಕೆ ಇಟ್ಟಿದ್ದಾಗಿ ಸುಧೀಂದ್ರ ಎಸಿಬಿಗೆ ದೂರು ನೀಡಿದ್ದರು. ಶನಿವಾರ ಸುಧೀಂದ್ರ ಅವರು ಲಂಚ …
Read More »ಗೋಕಾಕದ ಕೆ,ಎಲ್,ಇ,ಆಂಗ್ಲ ಮಾದ್ಯಮ ಶಾಲಾ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ
ಗೋಕಾಕದ ಕೆ,ಎಲ್,ಇ,ಆಂಗ್ಲ ಮಾದ್ಯಮ ಶಾಲಾ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ ಮತ್ತು ಗೋಕಾಕ ತಾಲೂಕಾ ಘಟಕದ ಸಂಯುಕ್ತ ಆಶ್ರಯದಲ್ಲಿ ಎಸ್,ಎಸ್,ಎಲ್,ಸಿ, ಮತ್ತು ಪಿ,ಯು,ಸಿ,ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೀರಶೈವ ಲಿಂಗಾಯತ ರಾಷ್ಟ್ರಿಯ ಉಪಾದಕ್ಷರಾದ ಪ್ರಭಾಕರ ಕೊರೆ ಮಾತನಾಡಿ,ನೂರು ವರ್ಷದಲ್ಲಿ ಶಿಕ್ಷಣ ವಂಚಿತರಾದವರು ಇವತ್ತು ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಾವಿರಾರು ವಿದ್ಯಾರ್ಥಿಗಳಿಗೆ ಬೇದ ,ವರ್ಣ ಇಲ್ಲದೆ ಪ್ರತಿ ಸಮಾಜದವರಿಗೆ ಕೆ,ಎಲ್,ಇ,ಶಿಕ್ಷಣ ಸಂಸ್ಥೆ ಶಿಕ್ಷಣ …
Read More »ಖಡಕ್ ಸೂಚನೆ ಹಿನ್ನೆಲೆ, ಅಂಕಲಗಿ ಪುಡಾರಿ ರಾಜು ತಳವಾರ್ ಅರೆಸ್ಟ್
ಗೋಕಾಕ: ಬಿಜೆಪಿ ಮುಖಂಡ ರಾಜು ತಳವಾರ ಹಾಗೂ ಕುಟುಂಬಸ್ಥರಿಂದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕಲಗಿಯ ಬಿಜೆಪಿ ಮುಖಂಡ ರಾಜು ತಳವಾರನನ್ನ ಬಂಧಿಸಲಾಗಿದೆ. ಗೋಕಾಕ ಡಿವೈಎಸ್ಪಿ ನೇತೃತ್ವದ ತಂಡ ರಾಜು ತಳವಾರನನ್ನ ಹೆಡೆಮುರಿ ಕಟ್ಟಿದ್ದು, ರಾಜು ತಳವಾರನನ್ನ ಕೂಡಲೇ ಬಂಧಿಸುವಂತೆ ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನಿನ್ನೆಯಷ್ಟೇ ಖಡಕ್ ಸೂಚನೆ ನೀಡಿದ್ದರು. ಕ್ಷುಲ್ಲಕ ಕಾರಣಕ್ಕೆ ಚಿಕ್ಕುಗೋಳ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರಾಜು ತಳವಾರ ಆಂಡ್ ಗ್ಯಾಂಗ್ …
Read More »ಗೋಕಾಕ: ಅಧಿಕಾರಿಗಳಿಗೆ ದೂರು ನೀಡಿ ತಂಗಿ ಬಾಲ್ಯ ವಿವಾಹ ತಡೆದ ಅಣ್ಣ
ಗೋಕಾಕ : ಅಧಿಕಾರಿಗಳಿಗೆ ದೂರು ನೀಡಿ ಅಣ್ಣನೇ ತಂಗಿಯ ಬಾಲ್ಯ ವಿವಾಹವನ್ನು ತಡೆದಿರುವ ಘಟನೆ ಗೋಕಾಕ ತಾಲ್ಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ. ಅತ್ತೆ, ಮಾವ ವಿದ್ಯಾಭ್ಯಾಸ ಕಲಿಸೋದಾಗಿ ಹೇಳಿ ನನ್ನ ತಂಗಿ ರಾಧಿಕಾಳನ್ನು ಇಟ್ಟುಕೊಂಡಿದ್ದರು. ಒತ್ತಾಯ ಪೂರ್ವಕವಾಗಿ ತಂಗಿಗೆ ಮದುವೆ ಮಾಡ್ತಿದ್ದರು ಎಂದು ರಾಧಿಕಾ ಅಣ್ಣ ರಾಜು ಮಗೆನ್ನವರ್ ಆರೋಪಿಸಿದ್ದಾನೆ. ರಮೇಶ್ ಕೆಂಪಣ್ಣ ಮೊದಗಿ ಹಾಗೂ ರಾಧಿಕಾ ಮಲ್ಲೇಶ ಮಗೆನ್ನವರ್ ಅವರು, ರಮೇಶ್(24) ಹಾಗೂ ರಾಧಿಕಾಗೆ(16)ಗೆ ಮದುವೆಗೆ ಏರ್ಪಾಡು ಮಾಡಿದ್ದರು. ಈ …
Read More »ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೇಗಾದರೂ ಮಾಡಿ, ಜನರನ್ನು ಮೋಸಗೊಳಿಸಿ ಗೆಲ್ಲಬೇಕೆಂಬ ಕುತಂತ್ರ ನಡೆಸಿರುವ ಕೆಲವು ಕುತಂತ್ರಿ ಅಭ್ಯರ್ಥಿಗಳು ಮಾಟ-ಮಂತ್ರ ನಡೆಸಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.
ಗೋಕಾಕ ತಾಲೂಕಿನ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಮ್ಮನಕೋಲ ಗ್ರಾಮದಲ್ಲಿ ವಾಮಾಚಾರ ನಡೆಸಿದ್ದಾರೆ. ಗ್ರಾಮದ ವಾರ್ಡ್ ವಿರೋಧಿ ಬಣದ ಅಭ್ಯರ್ಥಿಗಳ ಮನೆ ಎದುರು ಲಿಂಬೆ ಹಣ್ಣು, ತೆಂಗಿನಕಾಯಿ, ಗುಲಾಲು, ದಾರ ಹೀಗೆ ಅನೇಕ ವಸ್ತುಗಳನ್ನು ಇಟ್ಟು ವಾಮಾಚಾರ ನಡೆಸಿದ್ದಾರೆ. ಇದೊಂದು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದು, ಜನರು ವಾಮಾಚಾರ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಮಾರು 15-20 ವರ್ಷಗಳಿಂದ ರಾಜಕಾರಣ ನಡೆಸಿರುವವರು ಇಂಥ ವಾಮಾಚಾರ ಮಾಡಿಸಿದ್ದು, ಇಂಥ ರಾಜಕಾರಣದಿಂದ ಗ್ರಾಮದ …
Read More »
Laxmi News 24×7