Breaking News

ರಾಜ್ಯ

ಯಮಕನಮರಡಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ಕೇಸ್: ಆರೋಪಿ ಬಂಧನ ಪ್ರೀತಿಯ ವಿಚಾರಕ್ಕೆ ಗುಂಡಿನ ದಾಳಿ ಮಾಡಿದ ಆರೋಪಿ!

ಬೆಳಗಾವಿ: ಯಮಕನಮರಡಿಯಲ್ಲಿ ಡಿ. 16 ರಂದು ಕಾಂಗ್ರೆಸ ಕಾರ್ಯಕರ್ತರನ ಗುಂಡು ಹಾರಿಸಿದ ಪ್ರಕರಣ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಗಣಪತಿ ಗಲ್ಲಿಯ ವಿನಾಯಕ ಹೊರಕೇರಿ ಬಂಧಿತ ಆರೋಪಿ. ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಮಾಡಿ ಗ್ರಾಮದ ಬಸದಿ ಕಟ್ಟೆ ಮೇಲೆ ಕುಳಿತುಕೊಂಡಿದ್ದ ವೇಳೆ ಭರಮಾ ದೂಪದಾಳಿ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ವಿನಾಯಕ ಗುಂಡಿನ ದಾಳಿ ನಡೆಸಿದ್ದ.   ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯನ್ನು …

Read More »

ಕೌಜಲಗಿ ಅಶೋಕ ವಸಂತ ಉದ್ದಪ್ಪನವರ ಅವರು ಸತತವಾಗಿ 6ನೇ ಬಾರಿಗೆ ಹಾಗೂ ಮಕ್ತುಮ್‍ಸಾಬ ದಸ್ತಗೀರಸಾಬ ಖಾಜಿ ಅವರು 5ನೇ ಬಾರಿಗೆ ಜಯಭೇರಿ

ಗೋಕಾಕ: ತಾಲೂಕಿನ ಕೌಜಲಗಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೌಜಲಗಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಅವರ ಗುಂಪಿನ ಗ್ರಾ. ಪಂ ಮಾಜಿ ಅಧ್ಯಕ್ಷರಾದ     ಅಶೋಕ ವಸಂತ ಉದ್ದಪ್ಪನವರ ಅವರು ಸತತವಾಗಿ 6ನೇ ಬಾರಿಗೆ ಹಾಗೂ ಮಕ್ತುಮ್‍ಸಾಬ ದಸ್ತಗೀರಸಾಬ ಖಾಜಿ ಅವರು 5ನೇ ಬಾರಿಗೆ ಜಯಭೇರಿ ಬಾರಿಸುವ ಮೂಲಕ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದಾರೆ.

Read More »

ಸುಮಾರು.50.00000 ಲಕ್ಷ ರೂಪಾಯಿಗಳ ಅನುದಾನದ ಅಡಿಯಲ್ಲಿ. ಸನ್ಮಾನ ಶ್ರೀ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ.ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಇಂದು SCP&TSP ಯೋಜನೆಯಡಿಯಲ್ಲಿ ವಡೇರಹಟ್ಟಿ ಮುಖ್ಯ ರಸ್ತೆಯಿಂದ TO ಪಾಂಡು ಮನ್ನಿಕೇರಿ ತೋಟದವರಗೆ.   ಸುಮಾರು.50.00000 ಲಕ್ಷ ರೂಪಾಯಿಗಳ ಅನುದಾನದ ಅಡಿಯಲ್ಲಿ. ಸನ್ಮಾನ ಶ್ರೀ ಬಾಲಚಂದ್ರ ಜಾರಕಿಹೊಳಿ ಶಾಸಕರು ಅರಬಾಂವಿ ಮತ್ತು ಸನ್ಮಾನ ಶ್ರೀ ಸತೀಶ್ ಜಾರಕಿಹೊಳಿ ಶಾಸಕರು ಯಮಕನಮರಡಿ ನಿದರ್ಶನ ಮೇರೆಗೆ ಆಪ್ತ ಸಹಾಯಕ ರಾದ ದಾಸಪ್ಪ ನಾಯ್ಕಿ.ಇವರಿಂದ ರಸ್ತೆ ಕಾಮಗಾರಿಗೆ ಪೂಜೆಯ ಮಾಡುವ ಮುಖಾಂತರ ಚಾಲನೆ ನೀಡಿದರು. ಇದೆ ಸಮಯದಲ್ಲಿ ಊರಿನ ಪ್ರಮುಖರಾದ. …

Read More »

ಶಕ್ತಿಪೀಠ ಕಾಮಾಕ್ಯ ದೇವಾಲಯಕ್ಕೆ ಭೇಟಿ ನಿಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ರಮೇಶ್ ಜಾರಕಿಹೊಳಿ

ನವದೆಹಲಿ; ಹೊಸ ವರ್ಷದ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಸ್ಸಾಂ ನ ಗುವಾಹಟಿಯ ನೀಲಾಚಲ ಬೆಟ್ಟದ ಶಕ್ತಿಪೀಠ ಕಾಮಾಕ್ಯ ದೇವಾಲಯಕ್ಕೆ ಭೇಟಿ ನಿಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್, ಶಾಸಕ ಮಹೇಶ್ ಕುಮಟಳ್ಳಿ ಸಾಥ್ ನೀಡಿದ್ದಾರೆ. ಕಾಮಾಕ್ಯ ದೇವಾಲಯದಲ್ಲಿ ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಹಾಗೂ ತಾರ ದೇವಿ ರೂಪದಲ್ಲಿ ಜಗನ್ಮಾತೆಯನ್ನು ಆರಾಧಿಸಲಾಗುತ್ತಿದ್ದು, ಮಹಾಮಾರಿ ಕೊರೊನಾ ಸೋಂಕು …

Read More »

ಹೊಸ ವರ್ಷಾಚರಣೆ ಕಿಕ್, ಅಬಕಾರಿ ಇಲಾಖೆಗೆ ಭರ್ಜರಿ ಕಲೆಕ್ಷನ್..!

ಬೆಂಗಳೂರು,ಜ.1-ಕೋವಿಡ್-19, ಬ್ರಿಟನ್‍ನ ರೂಪಾಂತರಿ ವೈರಸ್, ಹಾಗೂ ಪೊಲೀಸರ ಕಟ್ಟುನಿಟ್ಟಿನ ಕ್ರಮದ ನಡುವೆಯೂ ನಿನ್ನೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಬಕಾರಿ ಇಲಾಖೆಗೆ ಭರ್ಜರಿ ಕಿಕ್ ಹೊಡೆದಿದೆ.  ನಿನ್ನೆ ಒಂದೇ ದಿನ ಅಬಕಾರಿ ಇಲಾಖೆಗೆ ಸುಮಾರು 151 ಕೋಟಿಗೂ ಅಧಿಕ ವಹಿವಾಟು ನಡೆದಿದ್ದು, ಇತ್ತೀಚಿನ ದಿನಗಳಲ್ಲಿ ಇದು ದಾಖಲೆ ಪ್ರಮಾಣದ ವಹಿವಾಟು ಎನ್ನಲಾಗಿದೆ. ನಿನ್ನೆ ಬೆಳಗ್ಗೆಯಿಂದ ರಾತ್ರಿಗೆ ಮುಕ್ತಾಯಗೊಂಡ ವಹಿವಾಟಿನಲ್ಲಿ ಸುಮಾರು 2.23 ಲಕ್ಷ ಕಾಟನ್‍ಬಾಕ್ಸ್ ಭಾರತೀಯ ಮದ್ಯ(120 ಕೋಟಿ 21 ಲಕ್ಷ) …

Read More »

ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ ಈ ಮಾರ್ಗದ ರೈಲು ಸಂಚಾರ ಸ್ಥಗಿತ

ಶಿವಮೊಗ್ಗ: ಬೆಂಗಳೂರು-ತಾಳಗುಪ್ಪ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ. ಹೊಸನಗರ ತಾಲೂಕಿನ ಅರಸಾಳು ಸಮೀಪ ರೈಲು ಹಳಿ ತಪ್ಪಿದೆ. ತಿರುವಿನಲ್ಲಿ ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಸಂಭವನೀಯ ಅನಾಹುತ ತಪ್ಪಿದೆ. ಡ್ರಿಲ್ ಮೆಲ್ಟ್ ಕಟ್ ಆಗಿದ್ದೇ ಘಟನೆಗೆ ಕಾರಣವಾಗಿದ್ದು, ರೈಲ್ವೆ ಇಂಜಿನ್ ಗಾಲಿ ಹಳಿಯಿಂದ ಜಾರಿದೆ. ಪ್ರಯಾಣಿಕರಿಗೆ ರೈಲ್ವೆ ಇಲಕಹೆ ಪರ್ಯಾಯ ವ್ಯವಸ್ಥೆ ಮಾಡಿದೆ.

Read More »

ಶಾಲಾ- ಕಾಲೇಜುಗಳ ಪುನರಾರಂಭ ಭರ್ಜರಿ ತಯಾರಿ

ಧಾರವಾಡ (ಜನವರಿ 1); ಎಸ್​ಎಸ್​ಎಲ್​ಸಿ  ಹಾಗೂ ದ್ವಿತೀಯ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಹಾಗೂ 6 ರಿಂದ 9 ನೇಯ ತರಗತಿ ಮಕ್ಕಳಿಗೆ ವಿದ್ಯಾಗಮ 2 ರ ಪ್ರಾರಂಭಕ್ಕೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ,ಕಾಲೇಜುಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಅವರು ಶಹರ ಹಾಗೂ ಗ್ರಾಮೀಣ ಪ್ರದೇಶದ ಅನೇಕ ಶಾಲೆ,ಕಾಲೇಜುಗಳಿಗೆ ಭೇಟಿ ನೀಡಿ ಕೋವಿಡ್ 19 ರ ತಡೆಗೆ …

Read More »

ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹೊಸ ವರ್ಷದ ಶುಭಕೋರಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹೊಸ ವರ್ಷದ ಶುಭಕೋರಿದ್ದಾರೆ. ರಾಷ್ಟ್ರಪತಿ ಕೋವಿಂದ್‌, ‘ಎಲ್ಲರಿಗೂ ಹೊಸವರ್ಷದ ಶುಭಾಶಯಗಳು. ಹೊಸ ಆರಂಭ ಮಾಡಲು, ವೈಯಕ್ತಿಕ ಮತ್ತು ಸಾಮೂಹಿಕ ಅಭಿವೃದ್ಧಿಗೆ ನೆರವಾಗಲು ಹೊಸವರ್ಷವು ಅವಕಾಶ ಮಾಡಿಕೊಡುತ್ತದೆ. ಕೋವಿಡ್-19 ಸನ್ನಿವೇಶದಲ್ಲಿ ಎದುರಾದ ಸವಾಲುಗಳು, ಒಗ್ಗಟ್ಟಿನೊಂದಿಗೆ ಮುನ್ನಡೆಯುವ ನಮ್ಮ ಸಂಕಲ್ಪವನ್ನು ಬಲಪಡಿಸಿವೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ‘ನಿಮಗೆ 2021ರ ಶುಭಾಶಯಗಳು! ಈ ವರ್ಷ ಉತ್ತಮ ಆರೋಗ್ಯ, ಸಂತಸ ಮತ್ತು ಸಮೃದ್ಧಿ …

Read More »

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ

ಬೆಂಗಳೂರು,ಜ.1-ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ವದಂತಿ, ಶಾಸಕರ ಅಸಮಾಧಾನ, ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಹೀಗೆ ಹತ್ತು ಹಲವು ಗೊಂದಲಗಳ ನಡುವೆಯೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳನ್ನು ಹೇಗೆ ನಿವಾರಿಸುತ್ತಾರೆ ಎಂಬುದುಯಕ್ಷ ಪ್ರಶ್ನೆಯಾಗಿದೆ. ಇಂದು ಸಂಜೆ ದೆಹಲಿಯಿಂದ ಆಗಮಿಸಲಿರುವ ಅರುಣ್ ಸಿಂಗ್ ಶಾಸಕರು, ಸಂಸದರು ಹಾಗೂ ಪದಾಧಿಕಾರಿಗಳನ್ನು ಭೇಟಿಯಾಗಿ …

Read More »

ಕರ್ನಾಟಕದಲ್ಲಿ ಉದ್ಯೋಗಾವಕಾಶಗಳ ಹೆಚ್ಚಿಸಲಿದೆ ತುಮಕೂರು ಕೈಗಾರಿಕಾ ನೋಡ್ ‌: ಜಗದೀಶ್‌ ಶೆಟ್ಟರ್

ಬೆಂಗಳೂರು : ಕರ್ನಾಟಕವನ್ನು ವಿಶ್ವದರ್ಜೆಯ ಔದ್ಯಮಿಕ ಜಾಲವಾಗಿ ಅಭಿವೃದ್ಧಿ ಪಡಿಸಲು ಚೆನೈ – ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕಾ ನೋಡ್‌ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 1,701.81 ಕೋಟಿ ರೂ. ಮೀಸಲಿರಿಸಿದ್ದು, ಇದರಿಂದ ಅಂದಾಜು 88,500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡಿದ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಪ್ರಧಾನಿ ನರೇಂದ್ರ ಮೋದಿ …

Read More »