Breaking News

ರಾಜ್ಯ

ಶಿವರಾಜ ತಂಗಡಗಿ ಬೆಂಗಾವಲು ವಾಹನ ಅಪಘಾತ

ಗಂಗಾವತಿ (ಕೊಪ್ಪಳ): ಸಚಿವ ಶಿವರಾಜ ತಂಗಡಗಿ ಪ್ರಯಾಣಿಸುತ್ತಿದ್ದ ವಾಹನವನ್ನು ಹಿಂಬಾಲಿಸುತ್ತಿದ್ದ ನಿಗಮದ ಬೆಂಗಾವಲು ವಾಹನ ಅಪಘಾತಕ್ಕೀಡಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಚಾಲಕ ಅಮರೇಶ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ. ಚಿತ್ರದುರ್ಗ-ಹಿರಿಯೂರು ಮಧ್ಯೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಕಾನಹೊಸಳ್ಳಿ ಬಳಿ ಘಟನೆ ನಡೆದಿದೆ. ಗಂಗಾವತಿಯಲ್ಲಿ ಸಂಜೆವರೆಗೂ ಕೆಡಿಪಿ ಸಭೆ ನಡೆಸಿದ ಸಚಿವ ಶಿವರಾಜ ತಂಡಗಿ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.ಶಿವರಾಜ ತಂಗಡಗಿ ಪ್ರಯಾಣಿಸುತ್ತಿದ್ದ ಹಿಂದಿದ್ದ ಈ ಗಸ್ತು ವಾಹನದ …

Read More »

ಹಾವೇರಿ ರೈತನಿಗೆ ಒಲಿದ ಗೌರವ ಡಾಕ್ಟರೇಟ್

ಹಾವೇರಿ: ವೈವಿಧ್ಯಮಯ ಕೃಷಿಗಾಗಿ ಹಾವೇರಿಯ ಕಾಮನಹಳ್ಳಿ ಗ್ರಾಮದ ರೈತರೊಬ್ಬರು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಶಾಲೆಯ ಮೆಟ್ಟಿಲು ಹತ್ತದ ರೈತ ಮುತ್ತಣ್ಣ ಭೀರಪ್ಪ ಪೂಜಾರ ಎಂಬವರು “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು” ಎಂಬುದನ್ನು ನಿರೂಪಿಸಿದ್ದಾರೆ. ಇವರ ಸಮಗ್ರ ಕೃಷಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿದೆ. ಅಷ್ಟೇ ಅಲ್ಲದೇ, ಧರ್ಮಸ್ಥಳ ಕೃಷಿ ಮೇಳ, ಜಿಲ್ಲಾ ಮೇಳ ಸೇರಿದಂತೆ ವಿವಿಧ ಮೇಳಗಳಲ್ಲಿ ಹಲವು ಪ್ರಶಸ್ತಿಗಳು ಮುತ್ತಣ್ಣನವರನ್ನು ಅರಸಿಕೊಂಡು ಬಂದಿವೆ. 10 …

Read More »

ಮಗಳ ಮೇಲೆ ತಂದೆಯಿಂದ ಅತ್ಯಾಚಾರ ಆರೋಪ ಪ್ರಕರಣ: ಖುಲಾಸೆ ಆದೇಶ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಕೆಲ ವರ್ಷಗಳ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ಸದ್ದು ಮಾಡಿದ್ದ ಮೂರೂವರೆ ವರ್ಷದ ಮಗಳ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಯಾಗಿದ್ದ ಬೆಂಗಳೂರಿನ ಫ್ರೆಂಚ್ ರಾಯಭಾರ ಕಚೇರಿಯ ಮಾಜಿ ಉದ್ಯೋಗಿ ಪ್ಯಾಸ್ಕಲ್ ಮಜುರಿಯರ್​ ಎಂಬಾತನನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿಯಿತು. ಮಜುರಿಯರ್ ಅವರ ಪತ್ನಿ ಸುಜಾ ಜೋನ್ಸ್ ಮಜುರಿಯರ್ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾ.ಕೆ.ಎಸ್.ಹೇಮಲತಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ. …

Read More »

ನಿಗಮದ ಹಣ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಬಳ್ಳಾರಿ ಲೋಕಸಭಾ ಕ್ಷೇತ್ರ ಗೆದ್ದಿದೆ: ಜನಾರ್ದನ ರೆಡ್ಡಿ

ಗಂಗಾವತಿ(ಕೊಪ್ಪಳ): ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಮಾಡಿಕೊಂಡೇ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆಯಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳು ಜನಸಾಮಾನ್ಯರು, ರೈತಾಪಿ ವರ್ಗದವರಿಂದ ನಗದು ಹಣ ಪಡೆದುಕೊಂಡು ನಿಗಮದ ಹಣವನ್ನು ಅವರ ಖಾತೆಗೆ …

Read More »

ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ: ಬಿಜೆಪಿ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು….‌

ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ: ಬಿಜೆಪಿ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು….‌ ಸಿಎಂ, ಡಿಸಿಎಂ ರಾಜೀನಾಮೆಗೆ ಅಗ್ರಹಿಸಿದ ವಿಜಯೇಂದ್ರ ಹಾಗೂ ಆರ್ ಅಶೋಕ ಆರ್ಸಿಬಿ ವಿಜಯೋತ್ಸವ ಕಾಲ್ತುಳಿತದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ ನಡೆಸಿತು.ಆರ್ಸಿಬಿ ತಂಡ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ ಮತ್ತು ಮುಖ್ಯಮಂತ್ರಿ, ಡಿಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ, ನಗರದ …

Read More »

ಮುಧೋಳ ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ಗೋಲ್ ಮಾಲ್ !!??

ಮುಧೋಳ ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ಗೋಲ್ ಮಾಲ್ !!?? ಕಾರ್ಮಿಕರಿಲ್ಲದೇ…ಮಷೀನ್ ಬಳಸಿ ಕೆಲಸ…ಸರ್ಕಾರದ ಕಣ್ಣಿಗೆ ಮಣ್ಣೆರೆಚಿದ್ರಾ ಅಧಿಕಾರಿಗಳು!!! ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಗುಲಗಾಲ‌ಜಂಬಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗೋಲ್’ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ನರೇಗಾ ಕೆಲಸಕ್ಕೆ ಯಂತ್ರೋಪಕರಣಗಳ ಬಳಕೆ ಮಾಡಲಾಗಿದ್ದು,. ಗ್ರಾಮೀಣ ಜನರಿಗೆ ಜೀವನಭದ್ರತೆ ಒದಗಿಸುವ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ಕಾರ್ಮಿಕರಿಗೆ ಕೆಲಸ ನೀಡುವ ಬದಲಿಗೆ ಯಂತ್ರೋಪಕರಣ ಬಳಕೆ …

Read More »

ಕಾಲ್ತುಳಿತ ಪ್ರಕರಣ, ಸಿಎಂ ಡಿಸಿಎಂ ಹೊಣೆ ಹೊರಬೇಕೆಂಬ ಬಿಜೆಪಿಗೆ ಡಿಕೆಶಿ ಟಾಂಗ್….

ಕಾಲ್ತುಳಿತ ಪ್ರಕರಣ, ಸಿಎಂ ಡಿಸಿಎಂ ಹೊಣೆ ಹೊರಬೇಕೆಂಬ ಬಿಜೆಪಿಗೆ ಡಿಕೆಶಿ ಟಾಂಗ್…. ಬಿಜೆಪಿಗರನ್ನೇ ಹೊತ್ತು ಮೆರವಣಿಗೆ ಮಾಡೋಣ : ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಸಿಎಂ, ಡಿಸಿಎಂ ಹೊಣೆ ಹೊರಬೇಕೆಂಬ ಬಿಜೆಪಿಯವರ ಆರೋಪಕ್ಕೆ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರನ್ನೇ ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡೋಣ. ಅವರು …

Read More »

3 ದಿನ ಹಿಂದೆ ಮೃತಪಟ್ಟ ಮರಿ ಆನೆ ಜೊತೆ ಅಲೆದಾಡುತ್ತಿರುವ ತಾಯಿ ಆನೆ

3 ದಿನ ಹಿಂದೆ ಮೃತಪಟ್ಟ ಮರಿ ಆನೆ ಜೊತೆ ಅಲೆದಾಡುತ್ತಿರುವ ತಾಯಿ ಆನೆ ಹಾಸನ: ಆನೆಗಳು ತಮ್ಮ ಮರಿಗಳ ಬಗ್ಗೆ ಅದೆಷ್ಟು ಪ್ರೀತಿ ಹೊಂದಿರುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮರಿ ಆನೆ ಮೃತಪಟ್ಟು ಮೂರು ದಿನ ಕಳೆದಿದೆ. ಆದರೆ, ಇದನ್ನು ತಿಳಿಯದ ತಾಯಿ ಆನೆ ತನ್ನ ಮರಿಯ ಕಳೆಬರಹವನ್ನು ತಾನು ಹೋದ ಕಡೆಗೆಲ್ಲಾ ಎಳೆದುಕೊಂಡು ಹೋಗುತ್ತಿದೆ. ಈ ಘಟನೆ ನಡೆದಿದ್ದು, ಹಾಸನದ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ …

Read More »

ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪ: ಐಶ್ವರ್ಯಾ ಗೌಡಗೆ ಷರತ್ತು ಬದ್ಧ ಜಾಮೀನು

ಬೆಂಗಳೂರು: ಚಿನ್ನದ ವ್ಯಾಪಾರಿಗೆ 9.82 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ)ದಿಂದ ಬಂಧನಕ್ಕೊಳಗಾಗಿದ್ದ ಐಶ್ವರ್ಯಾ ಗೌಡ ಅವರಿಗೆ ಬೆಂಗಳೂರಿನ 1ನೇ ಸಿಸಿಹೆಚ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಐಶ್ವರ್ಯಾ ಗೌಡ ಪರ ವಾದ ಮಂಡಿಸಿದ್ದ ವಕೀಲ ಎಸ್. ಸುನೀಲ್ ಅವರು, “ಅನುಸೂಚಿತ ಪ್ರಕರಣವಲ್ಲದಿದ್ದರೂ ಇ.ಡಿ ಅಧಿಕಾರಿಗಳು ಐಶ್ವರ್ಯಾ ಗೌಡ ಅವರನ್ನು ಬಂಧಿಸಿದ್ದಾರೆ ಹಾಗೂ ಮಹಿಳೆಗೆ ಬಂಧನದಿಂದ ವಿಶೇಷ ವಿನಾಯಿತಿ ಇದೆ” …

Read More »

ಮಳೆಗೆ ಜೋಗ ಜಲಪಾತ ಬಿಳಿನೊರೆಯಿಂದ ಉಕ್ಕಿ ಹರಿಯುತ್ತಿದೆ.

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕಳೆದ ಶನಿವಾರದಿಂದ ಮಳೆಯ ಆಗಮನವಾಗಿದೆ. ನದಿ ಹಳ್ಳಗಳು ಮತ್ತೆ ತುಂಬಿ ಹರಿಯಲು ಪ್ರಾರಂಭಿಸಿವೆ. ಜಗತ್​ ಪ್ರಸಿದ್ಧ ಜೋಗ ಜಲಪಾತದಲ್ಲಿ ಮತ್ತೆ ಶರಾವತಿ ವೈಭವ ಕಣ್ತುಂಬಿಕೊಳ್ಳಲು ಅವಕಾಶ ಮಾಡಿ ಕೊಟ್ಟಿದೆ. ಸಾಗರ ತಾಲೂಕಿನ ಶರಾವತಿ ನದಿ ಪಾತ್ರದಲ್ಲಿ ಮಳೆಯಾಗುತ್ತಿದ್ದು ಜೋಗ ಜಲಪಾತದಲ್ಲಿ ರಾಜ, ರಾಣಿ, ರೋರರ್​, ರಾಕೆಟ್​​ ಮೂಲಕ ಶರಾವತಿ ಧುಮ್ಮುಕ್ಕುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಜಲಪಾತ ಸಿರಿಯನ್ನು ನೋಡಲು ಪ್ರವಾಸಿಗರು …

Read More »