Breaking News

ರಾಜ್ಯ

10ನೇ ತರಗತಿ ಪಾಸಾದವರಿಗೆ ಆರ್​ಬಿಐನಲ್ಲಿ ಉದ್ಯೋಗವಕಾಶ

ನವದೆಹಲಿ (25.01.2021) : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಇರುವ 241 ಸೆಕ್ಯುರಿಟಿ ಗಾರ್ಡ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿದೆ. 10ನೇ ತರಗತಿ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 1, 2021ರ ಅನ್ವಯ ಕನಿಷ್ಟ 25 ರಿಂದ ಗರಿಷ್ಟ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿದಾರರು 50 ರೂ …

Read More »

ಬಿಪಿಎಲ್ ಪಡಿತರ ಚೀಟಿ ಹೊಂದಿರುವ 60 ವರ್ಷ ಮೇಲ್ಪಟ್ಟವರ ವೃದ್ದಾಪ್ಯ ವೇತನ

ಚಿಕ್ಕಮಗಳೂರು: ಬಿಪಿಎಲ್ ಪಡಿತರ ಚೀಟಿ ಹೊಂದಿರುವ 60 ವರ್ಷ ಮೇಲ್ಪಟ್ಟವರ ಆಧಾರ್ ದಾಖಲೆ ಆಧರಿಸಿ ಮನೆಬಾಗಿಲಿಗೆ ಪಿಂಚಣಿ ತಲುಪಿಸುವ ಆದೇಶ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಫಲಾನುಭವಿಗಳು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಅವರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. ಜನವರಿ 27 ರಂದು ಈ ಹೊಸ ಪ್ರಯೋಗಕ್ಕೆ ಚಾಲನೆ ನೀಡಲಾಗುವುದು ಎಂದರು. ಅಂಚೆ ಕಚೇರಿ ಮೂಲಕ ಪಿಂಚಣಿ ಹಣ ಸರಿಯಾಗಿ …

Read More »

ಸ್ಮಾರ್ಟ್ ಪೋನ್ ಗಳಿಗೆ ಭರ್ಜರಿ ಡಿಸ್ಕೌಂಟ್

ನವದೆಹಲಿ: ಹಿಂದೆಂದೂ ಕಂಡು ಕೇಳರಿಯದ ಮಾದರಿಯಲ್ಲಿ ಆಯಪಲ್ ಐಫೋನ್ 12 ಗೆ Maple ಆನ್ ಲೈನ್ ಮತ್ತು ಆಫ್ ಲೈನ್ ಸ್ಟೋರ್ ಗಳಲ್ಲಿ ಭರ್ಜರಿ ಡಿಸ್ಕೌಂಟ್ ದೊರಕುತ್ತಿದೆ. ಹೌದು ! ಮ್ಯಾಪಲ್ (Maple) ಸ್ಟೋರ್ ಗಳಲ್ಲಿ 16,000 ರೂ. ವರೆಗೂ ಡಿಸ್ಕೌಂಟ್ ನಲ್ಲಿ ಆಯಪಲ್ ಐಫೋನ್ ಗಳು ದೊರಕುತ್ತಿದೆ. ಖರೀದಿದಾರರು 8000 ರೂ.ಗಳ ಮ್ಯಾಪಲ್ ಎಕ್ಸ್‌ಕ್ಲೂಸಿವ್ ರಿಯಾಯಿತಿ ಮತ್ತು ಎಚ್‌ ಡಿಎಫ್‌ ಸಿ ಕ್ಯಾಶ್‌ಬ್ಯಾಕ್ ಆಫರ್ 9000 ರೂ.ಗಳವರೆಗೆ ಪಡೆಯಬಹುದು. …

Read More »

ಬಜೆಟ್ 2021 ಬಗ್ಗೆ ತಿಳಿಯಲು ವಿಶೇಷ APP : ನಿರ್ಮಲಾ ಸೀತಾರಾಮನ್

ನವದೆಹಲಿ,: 2021-22ನೇ ಸಾಲಿನ ಬಜೆಟ್ ಇದೇ ಮೊದಲ ಬಾರಿಗೆ ಕಾಗದರಹಿತವಾಗಿ ಮಂಡನೆಯಾಗುತ್ತಿದೆ. 2021ರ ಫೆಬ್ರವರಿ 1 ರಂದು ಆಯವ್ಯಯ ಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ವಿಶೇಷ ಮೊಬೈಲ್ ಆಪ್ಲಿಕೇಷನ್ ಹೊರ ತರಲಾಗಿದೆ. ಡಿಜಿಟಲ್ ಆಡಳಿತದ ಅನುಕೂಲತೆಗಳನ್ನು ಬಳಸಿಕೊಂಡು ಸಂಸತ್ ಸದಸ್ಯರಿಗೆ ಮತ್ತು ಸಾಮಾನ್ಯ ಜನರಿಗೆ ಬಜೆಟ್ ನ ದಾಖಲೆಗಳು ತಾಕಲಾಟವಿಲ್ಲದೇ ಸುಗಮವಾಗಿ ದೊರಕಿಸಿಕೊಡಲು ”ಕೇಂದ್ರ ಬಜೆಟ್ ನ ಮೊಬೈಲ್ ಆಯಪ್ ” ಅನ್ನು ಹಣಕಾಸು …

Read More »

ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಸ್ತಬ್ಧಚಿತ್ರ ಗಣರಾಜ್ಯೋತ್ಸವ ದಲ್ಲಿ

ಹೊಸಪೇಟೆ: ಗಣರಾಜ್ಯೋತ್ಸವದ ನಿಮಿತ್ತ ರಾಜಪಥದಲ್ಲಿ ಜ. 26ರಂದು ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿರುವ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಸ್ತಬ್ಧಚಿತ್ರದಲ್ಲಿ ಕನ್ನಡ ಕಡೆಗಣಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಸ್ತಬ್ಧಚಿತ್ರದ ಮುಂಭಾಗದಲ್ಲಿ ಕನ್ನಡದ ಬದಲು ಹಿಂದಿ ಭಾಷೆಯಲ್ಲಿ ಕರ್ನಾಟಕ ಎಂದು ಬರೆಯಲಾಗಿದೆ. ಇಷ್ಟೇ ಅಲ್ಲ, ಕನ್ನಡ ಬಾವುಟದ ಬದಲು ಕೇಸರಿ ಧ್ವಜ ಬಳಸಲಾಗಿದೆ. ಇದೇ ವಿಷಯ ಈಗ ಟೀಕೆಗೆ ಕಾರಣವಾಗಿದೆ. ಇದೇನು ಒಕ್ಕೂಟ ವ್ಯವಸ್ಥೆಯ ದೇಶವೋ ಏನು? ಕನ್ನಡ ಬಾವುಟ ಎಲ್ಲಿ? …

Read More »

ಜನವರಿ 26 ದಂದು ರೈತರ ಬೃಹತ್ ಪರೇಡ್

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ಮತ್ತೆ ಹೋರಾಟ ಮುಂದುವರೆಸಿದ್ದು, ಜನವರಿ 26 ಗಣರಾಜ್ಯೋತ್ಸವದ ದಿನದಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೈತರು ಬೃಹತ್ ಪರೇಡ್ ನಡೆಸಲಿದ್ದಾರೆ. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಈ ಬಗ್ಗೆ ತಿಳಿಸಿದ್ದು, ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ ಮುಗಿಸುತ್ತಿದ್ದಂತೆಯೇ ರಾಜ್ಯದ ರೈತರು ಬೆಂಗಳೂರಿನಲ್ಲಿ ಪರೇಡ್ ಆರಂಭಿಸಲಿದ್ದಾರೆ. ತುಮಕೂರು ರಸ್ತೆ ನೈಸ್ ಜಂಕ್ಷನ್ ನಿಂದ ಅರಂಭವಾಗಲಿರುವ ಪರೇಡ್ ಫ್ರೀಡಂ ಪಾರ್ಕ್ …

Read More »

ಲಿಂಗಾಯತ ಮಠಾಧಿಪತಿಗಳ ಪ್ರಥಮ ಅಧ್ಯಕ್ಷರಾಗಿ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು

ಬೆಳಗಾವಿ : ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ನೂರಾರು ಲಿಂಗಾಯತ ಮಠಾಧಿಪತಿಗಳುಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ  ಇದೇ ದಿನಾಂಕ ೨೨ ಮತ್ತು ೨೩ ರಂದು ಅನೇಕ ಪ್ರಸ್ತುತ ವಿಷಯಗಳನ್ನು ಕುರಿತು ಚಿಂತನ -ಮಂಥನ ನಡೆಸಿ, ’ಲಿಂಗಾಯತ ಮಠಾಧಿಪತಿಗಳ ಒಕ್ಕೂಟ’ ಎಂಬ ನೂತನ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದಾರೆ. ಬಸವನಿಷ್ಠ ಲಿಂಗಾಯತ ಮಠಾಧಿಪತಿಗಳು ಸಮಾಜದ ಎಲ್ಲ ಸಮಸ್ಯೆಗಳಿಗೆ ಈವರೆಗೆ ಸ್ಪಂದಿಸುತ್ತ ಬಂದಿದ್ದಾರೆ. ಅವರು ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗು ಸಾಂಸ್ಕೃತಿಕ ಸೇವಾಕಾರ್ಯಗಳಿಗೆ ಇನ್ನಷ್ಟು …

Read More »

ಶಾಸಕ ಮಹಾಂತೇಶ ದೊಡ್ಡಗೌಡರ್ ಸೋಮವಾರ ಒಟ್ಟೂ 3.27 ಕೋಟಿ ರೂ ವೆಚ್ಚದ 6 ಯೋಜನೆಗಳಿಗೆ ಭೂ ಮಿ ಪೂಜೆ

ಕಿತ್ತೂರು – ಶಾಸಕ ಮಹಾಂತೇಶ ದೊಡ್ಡಗೌಡರ್ ಸೋಮವಾರ ಒಟ್ಟೂ 3.27 ಕೋಟಿ ರೂ ವೆಚ್ಚದ 6 ಯೋಜನೆಗಳಿಗೆ ಭೂ ಮಿ ಪೂಜೆ ನೆರವೇರಿಸಲಿದ್ದಾರೆ. ಅದರ ಸಮಗ್ರ ವಿವರ ಇಲ್ಲಿದೆ – 11 ಗಂಟೆಗೆ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ 33 ಲಕ್ಷ ವೆಚ್ಚದಲ್ಲಿ ಜಲಮಿಷನ್ ಯೋಜನೆಯಡಿ  ಕುಡಿಯುವ ನೀರಿನ ಯೋಜನೆಯ  ಭೂಮಿ ಪೂಜಾ  ಕಾರ್ಯಕ್ರಮ. 12 ಗಂಟೆಗೆ ಕಲಬಾಂವಿ  ಗ್ರಾಮದಲ್ಲಿ ಜಲಮಿಷನ್ ಯೋಜನೆಯಡಿ 49 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ  ಭೂಮಿ …

Read More »

ಮೂಡಲಗಿಯಲ್ಲಿ ಸಂಸದ ಈರಣ್ಣ ಕಡಾಡಿ ಅವರೊಂದಿಗೆ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲ ಮೂಡಲಗಿ : ನೆರೆ ಹಾವಳಿ ಸಮಯದಲ್ಲಿ ಕುಸಿದು ಬಿದ್ದಿರುವ ಮನೆಗಳ ಸಂತ್ರಸ್ತರಿಗೆ ಸೂರು ಕಲ್ಪಿಸಿಕೊಡುವ ವ್ಯವಸ್ಥೆ ಕೂಡಲೇ ಮಾಡಬೇಕು. ಹೈಡ್/ಡೆಲಿಟ್ ಆದ ಮನೆಗಳ ತಾಂತ್ರಿಕ ದೋಷವನ್ನು ಕೂಡಲೇ ನಿವಾರಿಸಬೇಕು. ಮಾರ್ಚ ತಿಂಗಳ ಅಂತ್ಯದೊಳಗೆ ವಸತಿ ಇಲಾಖೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಶುಕ್ರವಾರದಂದು ಜರುಗಿದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, …

Read More »

ಬಸ್ ಪಾಸ್ ಇದ್ರು ನಡೆದುಕೊಂಡು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು..!

ಗದಗ (ಜ. 24): ಕೊರೋನಾ ಹಾವಳಿಯಿಂದ ಆನ್ ಲೈನ್ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದು, ಈಗ ತಾನೇ ಕಾಲೇಜು ಕಡೇ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ. ಒಂದು ಕಡೇ ಕೊರೊನಾ ಆತಂಕ ಇನ್ನೊಂದೆಡೆ ಸಮರ್ಪಕ  ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಇರದಿದಕ್ಕೆ ವಿದ್ಯಾರ್ಥಿಗಳು ಪಡಬಾರದ ಕಷ್ಟವನ್ನು ಅನುಭವಿಸುತ್ತಿದ್ದಾರೆ. ತಾಲೂಕಿನ ಹಾತಲಗೇರಿ ಗ್ರಾಮದ ವಿದ್ಯಾರ್ಥಿಗಳು ನಿತ್ಯ ಗದಗ ನಗರಕ್ಕೆ ನಡೆದುಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾತಲಗೇರಿ ಗ್ರಾಮದಲ್ಲಿ ಸುಮಾರು  40 ರಿಂದ‌ 50 ವಿದ್ಯಾರ್ಥಿಗಳು, …

Read More »