Breaking News

ರಾಜ್ಯ

ಕಿತ್ತೂರು ಕರ್ನಾಟಕಕ್ಕೆ 371 ಜೆ ವಿಶೇಷ ಸ್ಥಾನ ನೀಡಿ : ಮಾಜಿ ಶಾಸಕ ಕೋನರೆಡ್ಡಿ ಆಗ್ರಹ

ಬೆಳಗಾವಿ : ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ನೀಡಿರುವ ಸಂವಿಧಾನದ ಪರಿಚ್ಛೇದ 371 ಜೆ ತಿದ್ದುಪಡಿ ಮಾಡಿ ಮುಂಬೈ ಕರ್ನಾಟಕದ ಪ್ರದೇಶದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವಂತೆ ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ವಿಭಾಗದ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಡಾ. ನಂಜುಂಡಪ್ಪ ವರದಿ ಜಾರಿಯಾದರೂ …

Read More »

ಹುಲಿಯೊಂದು ಹೆಬ್ಬಾವನ್ನ ಬೇಟೆಯಾಡುವ ಅಪರೂಪದ ದೃಶ್ ಕ್ಯಾಮರಾದಲ್ಲಿ ಸೆರೆ

ಮೈಸೂರು: ಹುಲಿಯೊಂದು ಹೆಬ್ಬಾವನ್ನ ಬೇಟೆಯಾಡುವ ಅಪರೂಪದ ದೃಶ್ಯ ನಾಗರಹೊಳೆಯ ಕಬಿನಿ ಭಾಗದಲ್ಲಿ ಸಫಾರಿ ಮಾಡುತ್ತಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾನ್ಯವಾಗಿ ಹೆಬ್ಬಾವುಗಳು ಆನೆ, ಸಿಂಹದಂತಹ ದೈತ್ಯ ಪ್ರಾಣಿಗಳನ್ನ ಸಲೀಸಾಗಿ ಬೇಟೆಯಾಡುತ್ತದೆ. ಹೆಬ್ಬಾವಿನ ಬಿಗಿ ಹಿಡಿತಕ್ಕೆ ಸಿಲುಕಿದ ಪ್ರಾಣಿಗಳು ಅಲ್ಲಿಂದ ಹೊರಬರಲಾಗದೇ ಅವುಗಳಿಗೆ ಆಹಾರವಾಗಿಬಿಡುತ್ತದೆ. ಆದರೆ ಇಲ್ಲಿ ಹುಲಿಯೊಂದು ತಾನೇ ಬಂದು ಮಲಗಿದ್ದ ಹೆಬ್ಬಾವನ್ನ ಬೇಟೆಯಾಡಿರೋದೆ ವಿಶೇಷ ಎನ್ನಲಾಗಿದೆ. ಈ ಹಿಂದೆ ಹಾವು ಮಲಗಿರುವುದನ್ನ ನೋಡಿ ಹುಲಿ ಹೆದರಿಕೊಂಡಿದ್ದ ವಿಡಿಯೋ ಸಾಮಾಜಿಕ …

Read More »

ಪೊಲೀಸ್​ ಮನೆಗೆ ಕನ್ನ.. ID ಕಾರ್ಡ್​ ನೋಡಿ ಬೆಚ್ಚಿಬಿದ್ದು ಕಳ್ಳರು ಮಾಡಿದ್ದೇನು..?

ಚಿತ್ರದುರ್ಗ: ಮನೆಗಳ್ಳತನ ಮಾಡಿದ ಖದೀಮರು ಪೊಲೀಸರ ಮನೆ ಎಂದು ತಿಳಿದು ಕದ್ದ ವಸ್ತುಗಳನ್ನು ವಾಪಾಸ್​ ಬಿಟ್ಟು ಹೋಗಿರುವ ಘಟನೆ ಚಿತ್ರದುರ್ಗದ ಬಸವೇಶ್ವರ ನಗರದಲ್ಲಿ ನಡೆದಿದೆ. ಮಾರ್ಚ್ 13ರ ರಾತ್ರಿ ಎಸ್​​ಪಿ ಕಚೇರಿಯ ಸಿಪಿಐ ಮೃತ್ಯುಂಜಯ ಅವರ ಮನೆಗೆ ಕನ್ನ ಹಾಕಿದ ಕಳ್ಳರು ಮನೆಯಲ್ಲಿದ್ದ ₹88 ಸಾವಿರ ಮೌಲ್ಯದ ಪಿಸ್ತೂಲ್, ₹7 ಲಕ್ಷ ಮೌಲ್ಯದ 266 ಗ್ರಾಂ ಬಂಗಾರ, ₹1.27 ಲಕ್ಷ ಮೌಲ್ಯದ 2 ಕೆಜಿ 450 ಗ್ರಾಂ ತೂಕದ ಬೆಳ್ಳಿ, …

Read More »

ಶಂಕಿತ ಆರೋಪಿಯ ವಾಯ್ಸ್ ಸ್ಯಾಂಪಲ್ ಪಡೆದು ಎಫ್ ಎಸ್ ಎಲ್ ಗೆ ರವಾನೆ :ಇಂದು ವರದಿ ಸಾಧ್ಯತೆ

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ವ್ಯಕ್ತಿಯ ವಾಯ್ಸ್ ಸ್ಯಾಂಪಲ್ ಅನ್ನು ಎಫ್‌ಎಸ್‌ಎಲ್​ಗೆ ಕಳುಹಿಸಲಾಗಿದ್ದು, ಇಂದು ವರದಿ ಹೊರ ಬೀಳುವ ನಿರೀಕ್ಷೆಯಿದೆ. ಒಂದು ವೇಳೆ ಸಿಡಿಯಲ್ಲಿರುವ ಧ್ವನಿಗೂ ಮತ್ತು ನೀಡಿರುವ ಧ್ವನಿಗೂ ಹೊಲಿಕೆ ಕಂಡು ಬಂದರೆ ಎಸ್‌ಐಟಿ ಬಂಧಿಸುವ ಸಾಧ್ಯತೆಯಿದೆ. ವಿಡಿಯೋದಲ್ಲಿನ ಹಿನ್ನೆಲೆ ಧ್ವನಿ ಚಿಕ್ಕಮಗಳೂರಿನ ವ್ಯಕ್ತಿಯದ್ದು ಎಂಬ ಶಂಕೆ ವ್ಯಕ್ತವಾದ ಬೆನ್ನಲ್ಲೆ ಎಸ್​ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಬಳಿಕ ಆತನ …

Read More »

ಸಚಿವರಿಗೆ ಬಿಸಿಮುಟ್ಟಿಸಿದ ಸಿಎಂB.S.Y.

ಬೆಂಗಳೂರು: ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಚಿವರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹತ್ವದ ಅನೌಪಚಾರಿಕ ಸಭೆ ನಡೆಸಿದರು. ಸಂಪುಟ ಸಭೆಯಲ್ಲಿ ಚರ್ಚಿಸುವ ಹೊರತಾಗಿ ಇತರ ಪ್ರಾಮುಖ್ಯ ವಿಚಾರಗಳನ್ನು ತುರ್ತಾಗಿ ಚರ್ಚಿಸುವ ಉದ್ದೇಶದಿಂದ ಸಭೆ ಕರೆದಿದ್ದರು ಎಂದು ಮೂಲಗಳು ತಿಳಿಸಿದೆ. ಈವರೆಗೂ ಸರ್ಕಾರದ ಕಡೆಯಿಂದ ಸಭೆಯ ಅಧಿಕೃತ ಮಾಹಿತಿ ಹೊರಬಂದಿಲ್ಲ. ಸದನದಲ್ಲಿ ಸಚಿವರ ನಡವಳಿಕೆಗಳ ಕುರಿತು ಸಿಎಂ ಬುದ್ಧಿವಾದ ಹೇಳಿದರೆ ಎಂದು ತಿಳಿದುಬಂದಿದೆ. ಕಲಾಪದಲ್ಲಿ ಪ್ರತಿಪಕ್ಷದಿಂದ ದಾಳಿ ನಡೆಯುವಾಗ ಸದನದಲ್ಲಿ ಒಂದಿಬ್ಬರು …

Read More »

ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದ ರಮೇಶ್ ಜಾರಕಿಹೊಳಿ, ಸದ್ಯ ರಾಜಕೀಯದಲ್ಲಿ ಹಿನ್ನಡೆ ಅನುಭವಿಸುತ್ತಿರಲು ಕಾರಣ ಏನು?

ರಾಜಕೀಯದಲ್ಲಿ ಒಬ್ಬರ ವಿರುದ್ದ ಇನ್ನೊಬ್ಬರು ಕತ್ತಿ ಮಸೆಯುವುದು ನೋಡಿದ್ದೇವೆ, ತಂತ್ರ ಷಡ್ಯಂತ್ರ ರೂಪಿಸುವುದು ಇದ್ದಿದ್ದೇ. ಇದಕ್ಕೆ ರಾಜ್ಯದ ಯಾವ ಪಕ್ಷವೂ ಹೊರತಾಗಿಲ್ಲ. ಜಾರಕಿಹೊಳಿ ಸಿಡಿ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ಸರಕಾರ ವಿಶೇಷ ತನಿಖಾ ದಳವನ್ನು ರಚಿಸಿದೆ. ತನಿಖೆ ವೇಗವನ್ನು ಪಡೆದುಕೊಳ್ಳುತ್ತಿದ್ದು ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರುವುದರಿಂದ, ಬಿಜೆಪಿ ಮತ್ತು ಕಾಂಗ್ರೆಸ್ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿವೆ. ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ …

Read More »

ಶೇಂಗಾ ಹೋಳಿಗೆ ತಿಂದು ಮೀಸಲಾತಿ ಹೋರಾಟ ನಿಲ್ಲಿಸಿದ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀ

ಬೆಂಗಳೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕಳೆದ 64 ದಿನಗಳಿಂದ ನಡೆಸಲಾಗುತ್ತಿದ್ದ ಹೋರಾಟವನ್ನು ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀ ಅವರು ಶೇಂಗಾ ಹೋಳಿಗೆ ತಿನ್ನಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಅಂತ್ಯಗೊಳಿಸಿದ್ದಾರೆ. ಇಂದು ಬೆಳಗ್ಗೆ ಸದನದಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಒದಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಮುದಾಯದ ಸ್ವಾಮೀಜಿಗಳು ಆರು ತಿಂಗಳ ಕಾಲ ಹೋರಾಟವನ್ನು ಸ್ಥಗಿತಗೊಳಿಸಬೇಕೆಂದು ಮನವಿ ಮಾಡಿದ್ದರು. ಅದಾದ ಕೆಲವೇ …

Read More »

ರಮೇಶ್ ಜಾರಕಿಹೊಳಿ ಸದಾಶಿವ ನಗರದಲ್ಲಿರುವ ಮನೆ ಬದಲಿಸಿ ಮಲ್ಲೇಶ್ವರದ ಮಂತ್ರಿ ಅಪಾರ್ಟ್ ಮೆಂಟ್ ಗೆ ಶಿಫ್ಟ್ ?

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಂದೂವರೆ ವರ್ಷದ ಹಿಂದೆ ಖರೀದಿಸಿದ್ದ ಮನೆಯೇ ಅವರಿಗೆ ಮುಳುವಾಗಿದೆಯಾ? ಅವರ ಸಂಕಷ್ಟಗಳಿಗೆ ಈ ಹೊಸ ಮನೆಯ ವಾಸ್ತು ದೋಷವೇ ಕಾರಣವೇ ಎಂಬುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹೌದು, ರಮೇಶ್ ಜಾರಕಿಹೊಳಿ ಬೆಂಗಳೂರಿನ ಸದಾಶಿವನಗರದಲ್ಲಿ ಒಂದೂವರೆ ವರ್ಷದ ಹಿಂದೆ ಖರೀದಿಸಿದ್ದ ಮನೆಯನ್ನು ಇದೀಗ ಮಾರಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಈ ಪ್ರವೇಶಿಸಿದಾಗಿನಿಂದ ಅವರಿಗೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತಿದ್ದು, ಸಂಕಷ್ಟಗಳಿಂದ ಹೊರಬರಲು ಅವರು ಈ …

Read More »

ಗ್ರಾಮ ಪಂಚಾಯತ್‌ ಭರ್ತಿ 8 ಸಾವಿರ ಹುದ್ದೆಗಳು ಖಾಲಿ ;

ಬೆಂಗಳೂರು : ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆದು, ಅಧ್ಯಕ್ಷ- ಉಪಾಧ್ಯಕ್ಷರು ಆಯ್ಕೆಯಾಗಿ ಪೂರ್ಣ ಪ್ರಮಾಣದಲ್ಲಿ ಪಂಚಾಯತ್ಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಬಹುತೇಕ ಕಡೆ ಖಾಲಿ ಹುದ್ದೆಗಳು ಹೊಸ ಅಧ್ಯಕ್ಷ- ಉಪಾಧ್ಯಕ್ಷರನ್ನು ಸ್ವಾಗತಿಸುವ ಸ್ಥಿತಿ ಇದೆ. ಬಹುತೇಕ ಗ್ರಾ.ಪಂ.ಗಳಲ್ಲಿ ಪಿಡಿಒ, ಗ್ರಾ.ಪಂ. ಕಾರ್ಯದರ್ಶಿ, ದ್ವಿ.ದ. ಲೆಕ್ಕ ಸಹಾಯಕರ ಹುದ್ದೆಗಳು ಖಾಲಿ ಇವೆ. ಕೊರೊನಾ ಕಾರಣಕ್ಕೆ ಆರ್ಥಿಕ ಮಿತವ್ಯಯ ಹೇರಿದ್ದರ ಪರಿಣಾಮ ಒಂದು ವರ್ಷದಿಂದ ಹೊಸ ನೇಮಕ ಆಗಿಲ್ಲ. ಇದು ಆಡಳಿತ ಮತ್ತು …

Read More »

ನಾಡಗೀತೆಗೆ ಶೀಘ್ರದಲ್ಲೇ ಕತ್ತರಿ ಹಾಕುವ ಸಾಧ್ಯತೆ: ಸಚಿವ ಅರವಿಂದ ಲಿಂಬಾವಳಿ

ಗದಗ : ನಾಡಗೀತೆಗೆ ಶೀಘ್ರದಲ್ಲೇ ಕತ್ತರಿ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಸಾಹಿತಿಗಳು ಮತ್ತು ತಜ್ಞರ ಸಭೆ ಕರೆದು ತೀರ್ಮಾನ ಮಾಡುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾಡಗೀತೆ ಬಹಳ ಸುದೀರ್ಘವಾಗಿ ಇರುವುದರಿಂದ ಪುನರ್ ಪರಿಶೀಲನೆ ಮಾಡಿ ಶೀಘ್ರದಲ್ಲೇ ನಾಡಗೀತೆ ಕಡಿತಕ್ಕೆ ಚಿಂತನೆ ನಡೆದಿದೆ. ಈ ಬಗ್ಗೆ ಸಾಹಿತಿಗಳು ಮತ್ತು ತಜ್ಞರ ಸಭೆ ಕರೆದು …

Read More »