Breaking News

ರಾಜ್ಯ

‘CD’ ಪ್ರಕರಣ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ : ಸತೀಶ್ ಜಾರಕಿಹೊಳಿ

ಏ 17 ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಕೈ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಿಡಿ ಪ್ರಕರಣ ನಮ್ಮ ಮೇಲೆ ಯಾವುದೇ ಪರಿಣಾಮ ಬೀರಲ್ಲ, ಇದೊಂದು ಅವಕಾಶ ನಮಗೆ ಸಿಕ್ಕಿದೆ. ಯಮಕನಮರಡಿ ಕ್ಷೇತ್ರದ ಜನರು ಈಗ ಬೆಂಬಲ ನೀಡಿದ್ದಾರೆ ಎಂದು ಸತೀಶ್ ಹೇಳಿದ್ದಾರೆ,.ಸಿಡಿ ಪ್ರಕರಣ ಪ್ರಸ್ತಾಪದಿಂದ ಲಾಭ ಆಗಲಿದೆ ಎಂದು ಅನಿಸಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಮುಂದಿಟ್ಟುಕೊಂಡು ಚುನಾವಣೆ …

Read More »

ಸಂತ್ರಸ್ತೆ ಎಸ್‌ಐಟಿ ಎದುರು ಹಾಜರಾಗಲಿ: ಸಿದ್ದರಾಮಯ್ಯ ಸಲಹೆ

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ತನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂತ್ರಸ್ತ ಯುವತಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಹಾಜರಾಗಿ ತನ್ನ ಹೇಳಿಕೆ ದಾಖಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು. ಶುಕ್ರವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಯುವತಿ ಮರೆಯಾಗಿದ್ದುಕೊಂಡು ವಿಡಿಯೊ ಹೇಳಿಕೆ ಬಿಡುಗಡೆ ಮಾಡುವ ಬದಲಿಗೆ ನೇರವಾಗಿ ಎಸ್‌ಐಟಿ ಎದುರು ಹಾಜರಾಗಲಿ. ಅಲ್ಲಿ …

Read More »

ನಾಳೆ 4-6 ಗಂಟೆವರೆಗೆ ರಮೇಶ್ ಜಾರಕಿಹೊಳಿ ಸಿಡಿಸುವ ಮಹಾ ಬಾಂಬ್ ಮೇಲೆ ಎಲ್ಲರ ಚಿತ್ತ

ಬೆಂಗಳೂರು: ಸಿಡಿ ಲೇಡಿ ಎನ್ನಲಾದ ಯುವತಿ ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಗೆ ಒಳ್ಳೆಯದಾಗಲಿ, ಆಡಿಯೋದಲ್ಲಿ ಅವರ ಹೆಸರಿದ್ದ ಮಾತ್ರಕ್ಕೆ ಅವರು ಅಪರಾಧಿಯಲ್ಲ ಎಂದು ಹೇಳಿದ್ದಾರೆ. ಸಿಡಿಯಲ್ಲಿದ್ದ ಯುವತಿ ಆಡಿಯೋ ವೈರಲ್ ಹಿನ್ನೆಲೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ನನ್ನ ಹಳೇ ಸ್ನೇಹಿತ. ಅವರಿಗೆ ಒಳ್ಳೆಯದಾಗಲಿ. ಆಡಿಯೋದಲ್ಲಿ ಹೆಸರಿದ್ದ ಮಾತ್ರಕ್ಕೆ ಅವರು ಆರೋಪಿಯಲ್ಲ. ಅವರು ಕೆಪಿಸಿಸಿ ಅಧ್ಯಕ್ಷ …

Read More »

ಎಲೆಕ್ಟೊರಲ್ ಬಾಂಡ್​ಗಳ ವಿರುದ್ಧ ತಡೆಯಾಜ್ಞೆ ಇಲ್ಲ : ಸುಪ್ರೀಂ ಕೋರ್ಟ್

ನವದೆಹಲಿ : ಕಳೆದ ಮೂರು ವರ್ಷಗಳಂತೆ ಈ ಬಾರಿಯೂ ಏಪ್ರಿಲ್​ನಲ್ಲಿ ಎಲೆಕ್ಟೊರಲ್ ಬಾಂಡ್​ಗಳ ಖರೀದಿಗೆ ಅವಕಾಶ ಲಭಿಸಲಿದೆ. ಏಕೆಂದರೆ ದೇಶದ ಕೆಲವೆಡೆ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಾಂಡ್‌ಗಳ ಮಾರಾಟವನ್ನು ತಡೆಹಿಡಿಯಲು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ. ರಾಜಕೀಯ ಪಕ್ಷಗಳು ಹಣ ಸಂಗ್ರಹಿಸಲು ಅನುಕೂಲವಾಗುವಂತೆ ನರೇಂದ್ರ ಮೋದಿ ಸರ್ಕಾರವು ಜನವರಿ 2018 ರಲ್ಲಿ ಎಲೆಕ್ಟೊರಲ್ ಬಾಂಡ್​ ಸ್ಕೀಮ್​ಅನ್ನು ಜಾರಿಗೊಳಿಸಿತ್ತು. ವ್ಯಕ್ತಿಗಳು ಅಥವಾ ಕಂಪೆನಿಗಳು ಈ …

Read More »

ಬೆತ್ತಲೆ ಪ್ರದರ್ಶನ ಮಾಡೋಳು ದೂರು ಕೊಡೋದು ದೊಡ್ಡ ವಿಚಾರವಲ್ಲ!

ರಮೇಶ್​ ಜಾರಕಿಹೊಳಿ ಖಾಸಗಿ ವಿಡಿಯೋದಲ್ಲಿ ಕಾಣಿಸಿಕೊಂಡಿರೋ ಯುವತಿ ದೂರು ಕೊಡಲು ಮುಂದಾಗಿರೋ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಮಾತನಾಡಿ, ‘ದೂರು ಕೊಡೋದು ದೊಡ್ಡ ವಿಚಾರವಲ್ಲ. ಜಗತ್ತಿನ ಮುಂದೆ ಬೆತ್ತಲೆ ಪ್ರದರ್ಶನ ಮಾಡೋಕೆ ರೆಡಿ ಇರೋಳು ದೂರು ಕೊಡೋದು ದೊಡ್ಡ ವಿಚಾರವಲ್ಲ. ಆಕೆ ಸಂತ್ರಸ್ತೆ ಅನ್ನೋದಾದ್ರೆ ಆವತ್ತೇ ದೂರು ಕೊಡಬೇಕಿತ್ತು. ಇದೆಲ್ಲಾ ಷಡ್ಯಂತ್ರ ಅಂತ ನಾನು ಮೊದಲೇ ಹೇಳಿಲ್ವಾ.. ನಾನು ಎಲ್ಲದಕ್ಕೂ ಮೆಂಟಲಿ ಪ್ರಿಪೇರ್ ಆಗಿದ್ದೀನಿ. ರೇಪ್ ಕೇಸ್ ಬೇಕಿದ್ರೆ ಹಾಕಲಿ. ಈ …

Read More »

ಪ್ರಿಯತಮೆಗೆ ಪ್ರೇಮ ನಿವೇದನೆ ಮಾಡಲು 2.5 ಕಿ.ಮೀ ರಸ್ತೆ ಪೂರ್ತಿ ‘I Love You, I Miss You’ ಎಂದು ಬರೆದ ಪಾಗಲ್ ಪ್ರೇಮಿ

ಕೊಲ್ಹಾಪುರ: ಸಣ್ಣ ಪುಟ್ಟ ವಿಚಾರಗಳಿಂದ ಸಂಗಾತಿಯನ್ನು ಸೆಳೆಯುವುದು ಅಥವಾ ಪ್ರೀತಿಯನ್ನು ವಿಶೇಷವಾಗಿ ಹೇಳುವ ಮೂಲಕ ಸಂಗಾತಿಯ ಮುಖದಲ್ಲಿ ಮಂದಹಾಸವನ್ನು ತರಿಸಲು ಪರದಾಡುವ ಪ್ರೇಮಿಗಳನ್ನು ನಾವು ನೋಡಿದ್ದೇವೆ. ಆದರೆ ಮಹಾರಾಷ್ಟ್ರದ ಕೊಲ್ಲಾಪುರದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಹೋಗಿ ವ್ಯಕ್ತಿಯೊಬ್ಬ ಸಿನಿಮಾದಲ್ಲಿ ಮಾಡುವಂತೆ ಮಾಡಿದ್ದಾನೆ. ಶಿರೋಲ್ ತಾಲೂಕಿನ ಧರಂಗುಟಿ ಗ್ರಾಮದ ಅಪರಿಚಿತ ವ್ಯಕ್ತಿಯೊಬ್ಬ ಗ್ರಾಮದ ಮುಖ್ಯ ರಸ್ತೆಯಲ್ಲಿ 2.5 ಕಿ.ಮೀ.ದೂರದವರೆಗೆ ಪೈಂಟ್ ನಿಂದ ‘ಐ ಲವ್ ಯೂ’ …

Read More »

1-5 ಶಾಲೆಗಳ ಪ್ರಾರಂಭಕ್ಕೆ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು.?

ಕೋಲಾರ : ರಾಜ್ಯದಲ್ಲಿ 1 ರಿಂದ 5 ನೇ ತರಗತಿವರೆಗೂ ಶಾಲೆ ಆರಂಭದ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ 1 ರಿಂದ 5 ನೇ ತರಗತಿಗಳು ಸದ್ಯಕ್ಕೆ ಆರಂಭವಿಲ್ಲ. 6 ನೇ ತರಗತಿಯಿಂದ ಮಾತ್ರ ಶಾಲೆಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಮಕ್ಕಳ ಹಿತದೃಷ್ಟಿಯಿಂದ ಕೈಗೊಂಡಿರುವ ಈ ನಿರ್ಧಾರವನ್ನು ಖಾಸಗಿ ಶಾಲೆಗಳೂ ಅನುಸರಿಸಬೇಕು ಎಂದು ಹೇಳಿದ್ದಾರೆ. …

Read More »

ಸಿಕ್ಕಿಬಿದ್ದ ‘ಸಿಡಿ ಲೇಡಿ’ : ವ್ಯಾನಿಟಿ ಬ್ಯಾಗ್ ನಲ್ಲಿ ಕ್ಯಾಮೆರಾ, ಅಸಲಿ ವಿಡಿಯೋ ಪತ್ತೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿ, ಕಲಾಪಕ್ಕೂ ಕಲ್ಲು ಹಾಕಿದ, ಮಾಜಿ ಸಚಿವ ರಮೇಶ ಜಾರಕಿಹೊಳಿ ಸೇಕ್ಸ್ ಸಿಡಿ ಕೇಸ್ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಹೌದು ಸತತ ಹದಿನೈದು ದಿನಗಳ ಸತತ ಕಾರ್ಯಾಚರಣೆ ಬಳಿಕ ಜಾರಕಿಹೊಳಿ ಸಿ.ಡಿ. ಪ್ರಕರಣದ ಅಸಲಿ ವಿಡಿಯೋ ಪತ್ತೆ ಹಚ್ಚುವಲ್ಲಿ ವಿಶೇಷ ತನಿಖಾ ದಳ (ಎಸ್ ಐಟಿ) ಯಶಸ್ಸು ಕಂಡಿದೆ. ಯುವತಿಯ ವ್ಯಾನಿಟಿ ಬ್ಯಾಗ್ ನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿಯೇ ಖಾಸಗಿ ಕ್ಷಣಗಳನ್ನು ಸೆರೆ …

Read More »

ಸಿಡಿ ಪ್ರಕರಣ; ಯುವತಿ ಪರ ವಕೀಲರು ಹೇಳುವುದೇನು?

ಬೆಂಗಳೂರು, ಮಾರ್ಚ್ 26; ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತಿರುವನ್ನು ಪಡೆದುಕೊಳ್ಳುತ್ತಿದೆ. ಸಂತ್ರಸ್ತ ಯುವತಿ 3ನೇ ವಿಡಿಯೋವನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾಳೆ. ಮಾಜಿ ಸಚಿವರ ವಿರುದ್ಧ ವಕೀಲರ ಮೂಲಕ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ. ಶುಕ್ರವಾರ ಯುವತಿ ವಿಡಿಯೋ ಬಿಡುಗಡೆಯಾದ ಬಳಿಕ ಆಕೆಯ ಪರ ವಕೀಲ ಜಗದೀಶ್ ಕೆ. ಎನ್. ಮಹಾದೇವ್ ಅವರು ಫೇಸ್ ಬುಕ್ ಲೈವ್ ಮೂಲಕ ಮಾತನಾಡಿದರು. “ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದಲೇ ಲಿಖಿತ …

Read More »

ಸತತ ಎರಡನೇ ದಿನ ಪೆಟ್ರೋಲ್ ಡೀಸೆಲ್ ದರದಲ್ಲಿ ಇಳಿಕೆ

ನವದೆಹಲಿ: ಸತತ ಏರಿಕೆ ಕಂಡಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರಎರಡು ದಿನಗಳಿಂದ ಇಳಿದು ಮುಖದಲ್ಲಿ ಸಾಗುತ್ತಿದ್ದು, ಇಂದು ಕೂಡ ದರದಲ್ಲಿ ಇಳಿಕೆ ಕಂಡಿದೆ. ಪೆಟ್ರೋಲ್ ದರ 21 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 20 ಪೈಸೆ ಇಳಿಕೆಯಾಗಿದೆ. ಫೆಬ್ರವರಿ ತಿಂಗಳ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇಂದು …

Read More »