ಬೆಂಗಳೂರು : ಮಹಿಳೆಯೊಬ್ಬರನ್ನು ಹತ್ಯೆಗೈದು ಆಕೆಯ ಮೃತದೇಹವನ್ನು ಕಸದ ಲಾರಿಯಲ್ಲಿ ಹಾಕಿರುವ ಬೆಚ್ಚಿಬೀಳಿಸುವ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ನಡೆದಿದೆ. ಸುಮಾರು 30-35 ವಯಸ್ಸಿನ ಮಹಿಳೆಯ ಮೃತದೇಹ ಮೂಟೆಕಟ್ಟಿರುವ ಸ್ಥಿತಿಯಲ್ಲಿ ಬಿಬಿಎಂಪಿಯ ಕಸದ ಲಾರಿಯಲ್ಲಿ ಪತ್ತೆಯಾಗಿದೆ. ಶನಿವಾರ ತಡರಾತ್ರಿ ಆಟೋ ರಿಕ್ಷಾದಲ್ಲಿ ಮೃತದೇಹ ತಂದಿರುವ ದುಷ್ಕರ್ಮಿಗಳು ಕಸದ ಲಾರಿಯಲ್ಲಿರಿಸಿ ಪರಾರಿ ಆಗಿರುವ ಕುರಿತು ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಮೃತಳ ಗುರುತು ಇನ್ನೂ …
Read More »ಮೂವರು ಐಪಿಎಸ್ ಆಧಿಕಾರಿಗಳ ಅಮಾನತು ಅಂಗೀಕರಿಸಿದ ಕೇಂದ್ರ ಸರ್ಕಾರ
ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸಂಬಂಧ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ ಹಿನ್ನೆಲೆ ಕರ್ತವ್ಯ ಲೋಪ ಆರೋಪದಡಿ ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಿತ್ತು. ಇದೀಗ ರಾಜ್ಯ ಸರ್ಕಾರದ ವರದಿಯನ್ನು ಅಂಗೀಕರಿಸಿ ಕೇಂದ್ರ ಡಿಪಿಎಆರ್‌ಗೆ ಮಾಹಿತಿ ರವಾನೆ …
Read More »ಎಸಿ ಬೋಗಿಗಳಲ್ಲಿ ಶ್ರೀಮಂತರನ್ನೇ ಟಾರ್ಗೆಟ್ ಮಾಡಿ ಕಳ್ಳತನ
ಹಾಸನ: ರೈಲುಗಳ ಎಸಿ ಬೋಗಿಗಳಲ್ಲಿ ಪ್ರಯಾಣಿಕರ ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದ ಖತರ್ನಾಕ್ ಅಂತಾರಾಜ್ಯ ಕಳ್ಳನನ್ನು ಬಂಧಿಸಿರುವ ಅರಸೀಕೆರೆ ರೈಲ್ವೆ ಪೊಲೀಸರು, ಆರೋಪಿಯಿಂದ 22.75 ಲಕ್ಷ ಮೌಲ್ಯದ 218 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಜಿತೇಂದ್ರಕುಮಾರ ಚಾವ್ಲಾ (37) ಬಂಧಿತ ಆರೋಪಿ. ಈತನ ಮೇಲೆ ಮಹಾರಾಷ್ಟ್ರ, ತಮಿಳುನಾಡು ಹಾಗೂ ಉತ್ತರಾಖಂಡ ರೈಲ್ವೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸುಮಾರು 13 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆರೋಪಿಯು ಪೊಲೀಸ್ …
Read More »ವಿಜ್ರಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ ಮಹತ್ವ ಮರೆಯಾಗಬಾರದು ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ:CM
ವಿಜ್ರಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ ಮಹತ್ವ ಮರೆಯಾಗಬಾರದು ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ: ಜನರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ ಪೊಲೀಸರು ಜನಸ್ನೇಹಿ ಆಗಿರಬೇಕು. ಪ್ರವಾಸಿಗರೊಂದಿಗೆ ಪ್ರೀತಿಯಿಂದ ವರ್ತಿಸಬೇಕು: ಸಿ.ಎಂ ಸೂಚನೆ ಬೆಂಗಳೂರು ಜೂ 29: ವಿಜ್ರಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ ಮಹತ್ವ ಮರೆಯಾಗಬಾರದು. ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ, ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ …
Read More »ಸದಲಗಾ ಪಟ್ಟಣದ ನವನಾಥ ಜ್ಯುವೆಲ್ಲರ್ಸ್‌ನಲ್ಲಿ ಕಳ್ಳತನ,ಚಿನ್ನಾಭರಣ, ನಗದು ದೋಚಿ ಪರಾರಿಯಾದ ಕಳ್ಳರು
ಸದಲಗಾ ಪಟ್ಟಣದ ನವನಾಥ ಜ್ಯುವೆಲ್ಲರ್ಸ್‌ನಲ್ಲಿ ಕಳ್ಳತನ,ಚಿನ್ನಾಭರಣ, ನಗದು ದೋಚಿ ಪರಾರಿಯಾದ ಕಳ್ಳರು ಚಿಕ್ಕೋಡಿ: ಸದಲಗಾ ಪಟ್ಟಣದ ಚನ್ನಮ್ಮ ವೃತ್ತದಲ್ಲಿರುವ ನವನಾಥ ಜ್ಯುವೆಲ್ಲರ್ಸ್ ನಲ್ಲಿ ಕಳ್ಳರು ಚಿನ್ನ ಮತ್ತು ಬೆಳ್ಳಿ ಆಭರಣ ಅಂಗಡಿಯ ಶೆಟರ್ ಮುರಿದು ಒಳಗೆ ನುಗ್ಗಿ ಆಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಅಂಗಡಿಯ ಮಾಲೀಕ ವಿನಾಯಕ ವಿಜಯಕುಮಾರ ಮಾಳಿ ಸದಲಗಾ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಎಸ್ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ವಿಶ್ವನಾಥ್ ಚೌಗಲಾ, ಸದಲಗಾ ಪಿಎಸ್ಐ ಶಿವಕುಮಾರ್ …
Read More »ಮನೆ ಬಿಟ್ಟು ಹೊಗಿದ್ದ ವ್ಯಕ್ತಿ 38 ವರ್ಷದ ಬಳಿಕ ಮನೆಗೆ ವಾಪಸ್.!!! 18ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ ಚಂದ್ರಶೇಖರ್…
ಮನೆ ಬಿಟ್ಟು ಹೊಗಿದ್ದ ವ್ಯಕ್ತಿ 38 ವರ್ಷದ ಬಳಿಕ ಮನೆಗೆ ವಾಪಸ್.!!! 18ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ ಚಂದ್ರಶೇಖರ್… ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕು, ಗೊರಬಾಳ ಗ್ರಾಮದಲ್ಲಿ ಅತ್ಯಂತ ಅಪರೂಪದ ಘಟನೆಗೆ ಇಂದು ಸಾಕ್ಷಿಯಾಯಿತು. 38 ವರ್ಷಗಳ ಹಿಂದೆ, ತನ್ನ 18ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋದ ಚಂದ್ರಶೇಖರ್ ರಾಠೋಡ್, ಇದೀಗ ತಮ್ಮ ಸ್ವಗ್ರಾಮ ಗೊರಬಾಳಕ್ಕೆ ಮರಳಿ ಬಂದಿದ್ದಾರೆ. ಅಂದು ಏನೋ ಕಾರಣಗಳಿಂದ ಮನೆಯನ್ನೇ ಬಿಟ್ಟು ಹೋಗಿದ್ದ ಚಂದ್ರಶೇಖರ್, …
Read More »ಕಳಪೆ ಹತ್ತಿ ಬೀಜ ಬಿತ್ತಿ ನಷ್ಟಕ್ಕೊಳಗಾದ ರೈತರು!!!
ಕಳಪೆ ಹತ್ತಿ ಬೀಜ ಬಿತ್ತಿ ನಷ್ಟಕ್ಕೊಳಗಾದ ರೈತರು!!! ಕಳಪೆ ಬೀಜ ಬಿತ್ತಿದ ರೈತರ ಹತ್ತಿ ಬೆಳೆಯಲ್ಲಿ ಹೂ-ಕಾಯಿ ಬಿಡದೇ ಸಂಪೂರ್ಣ ನಾಶ ಅಗ್ರೋ ಅಮರ್ ಬೈಟೆಕ್ ಕಂಪನಿಯಿಂದ ಕಳಪೆಮಟ್ಟದ ಬೀಜ ವಿತರಣೆ ಆರೋಪ 6 ಎಕರೆ ಹತ್ತಿ ಬೆಳೆ ಹಾನಿಗೊಳಗಾದ ರೈತ ವೆಂಕಟೇಶ್ ಮತ್ತು ಬಸವರಾಜ್ ಕಂಗಾಲು ಕಂಪನಿ ವಿರುದ್ಧ ಕ್ರಮಕ್ಕೆ ರೈತ ಮುಖಂಡರಿಂದ ಜಿಲ್ಲಾಡಳಿತಕ್ಕೆ ಮನವಿ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಸೋಮಲಪೂರ ಗ್ರಾಮದಲ್ಲಿ ಕಳಪೆ ಹತ್ತಿ ಬೀಜ …
Read More »ಮಾದಕವಸ್ತು ಮಾರಾಟ; ಆಯುಧದೊಂದಿಗೆ ವ್ಯಕ್ತಿಯ ಬಂಧನ
ಮಾದಕವಸ್ತು ಮಾರಾಟ; ಆಯುಧದೊಂದಿಗೆ ವ್ಯಕ್ತಿಯ ಬಂಧನ ಮಾದಕ ವಸ್ತುಗಳ ಅಕ್ರಮ ಮಾರಾಟದ ಮೇಲೆ ಬೆಳಗಾವಿ ಮಾಳಮಾರುತಿ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಬೆಳಗಾವಿ ನಗರದಲ್ಲಿನ ಆರ್‌ಟಿಓ ಗೌಂಡ್, ಅಟೋನಗರದ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಯಿತು. ಶ್ರೀಶೈಲ್ ಹುಲಗೇರಿ, ಪಿಎಸ್‌ಐ ಮಾಳಮಾರುತಿ ಠಾಣೆ ಮತ್ತು ಅವರ ಸಿಬ್ಬಂದಿ ತಂಡವು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಾಧಿಕ್ ಮೊಹಮ್ಮದ್ ಶರೀಫ್ ಅತ್ತಾರ್’ನನ್ನು ವಶಕ್ಕೆ ಪಡೆದರು. …
Read More »ನರೇಗಾ ಕಾರ್ಮಿಕರ ಮದುವೆಯ 60ನೇ ವಾರ್ಷಿಕೋತ್ಸವ
ಹೇಗಿತ್ತು ನೋಡಿ…ನರೇಗಾ ಕಾರ್ಮಿಕರ ಮದುವೆಯ 60ನೇ ವಾರ್ಷಿಕೋತ್ಸವ ಇಲ್ಲಿ ಯಾವುದೇ ಮಂಟಪವಿರಲಿಲ್ಲ, ವಾದ್ಯ ಮೇಳ ಗಟ್ಟಿ ಮೇಳದ ಸದ್ದಿರಲಿಲ್ಲ, ಬಂಧುಗಳು ಬಳಗದವರು ಬಣ್ಣ ಬಣ್ಣದ ಬಟ್ಟೆ ತೊಟ್ಟಿರಲಿಲ್ಲ, ವಧು-ವರರೂ ಅಷ್ಟೇ ತುಂಬ ಸಿಂಪಲ್ ಆದರೂ ಅಲ್ಲೊಂದು ಮದುವೆ ಆಯ್ತು. ಹೇಂಗಂತೀರಾ ಈ ಸ್ಟೋರಿ ನೋಡಿ. ಆಕಾಶವೇ ಮಂಟಪವಾದ ಜಿಟಿ ಜಿಟಿ ಮಳೆಯೇ ವಧುವರರನ್ನು ಆಶೀರ್ವದಿಸಿದ ಅಪರೂಪದ ಮದುವೆಯೊಂದು ನಡೆದಿದ್ದು ಇದೇ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ …
Read More »5 ಹುಲಿಗಳ ಸಾವು ಪ್ರಕರಣ: ಹಸು ಮಾಲೀಕ ಸೇರಿ ವಿಷ ಹಾಕಿದ್ದ ಮೂವರ ಬಂಧನ
ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿತರನ್ನು ಅರಣ್ಯ ಇಲಾಖೆ ಶನಿವಾರ ಬಂಧಿಸಿ, ಹೆಚ್ಚಿನ ವಿಚಾರಣೆ ಕೈಗೊಂಡಿದೆ. ಹನೂರು ತಾಲೂಕಿನ ಕೊಪ್ಪ ಗ್ರಾಮದ ಹಸುವಿನ ಮಾಲೀಕ ಕೋನಪ್ಪ ಹಾಗೂ ಹಸುವಿನ ಮೃತದೇಹಕ್ಕೆ ವಿಷಪ್ರಾಶನ ಮಾಡಿದ ಆರೋಪದ ಮೇಲೆ ಮಾದುರಾಜ್ ಹಾಗೂ ನಾಗರಾಜು ಪೂಜಾರಿಗೌಡ ಎಂಬ ದನಗಾಹಿಗಳನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಮೀಣ್ಯಂ ಸಮೀಪವೇ ಕೊಪ್ಪ ಗ್ರಾಮವಿದ್ದು ಜಾನುವಾರುಗಳಿಗೆ …
Read More »
Laxmi News 24×7