Breaking News

ರಾಜ್ಯ

ಜೈನ ಸಂತರಿಗೂ ಉಚಿತ ಕೋವಿಡ್‌ ಲಸಿಕೆ?

ದಾವಣಗೆರೆ: ಲೋಕ ಸಂಚಾರ ಮಾಡುತ್ತಿರುವ ಜೈನ ಸಾಧು- ಸಾಧ್ವಿಯರಿಗೆ ಯಾವುದೇ ದಾಖಲೆ ಕಡ್ಡಾಯಗೊಳಿಸದೆ ಉಚಿತವಾಗಿ ಕೋವಿಡ್‌ ಲಸಿಕೆ ನೀಡಲು ಅನುಮತಿ ಕೋರಿ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಲೋಕ ವಿಹಾರಿಗಳಾದ ಜೈನ ಸಾಧು-ಸಾಧ್ವಿಯರಿಗೆ ಕೋವಿಡ್ ಲಸಿಕೆ ನೀಡುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್‌ ಜೈನ್‌ ಅವರು ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ …

Read More »

ಟ್ಯಾಕ್ಸಿ ಪ್ರಯಾಣ ದರ ಹೆಚ್ಚಳ

ಬೆಂಗಳೂರು: ರಾಜ್ಯದ ಎಲ್ಲ ಕಡೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುವವರ ಜೇಬಿಗೆ ಇನ್ನು ಮತ್ತಷ್ಟು ಕತ್ತರಿ ಬೀಳಲಿದೆ. ಟ್ಯಾಕ್ಸಿ ಬಳಕೆಗೆ ವಿಧಿಸುತ್ತಿದ್ದ ಪ್ರತಿ ಕಿ.ಮೀ ಹಾಗೂ ಕನಿಷ್ಠ 4 ಕಿ.ಮೀ ವರೆಗಿನ ದರವನ್ನು ಹೆಚ್ಚಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಜಿಎಸ್‌ಟಿ, ಟೋಲ್‌ ಶುಲ್ಕವನ್ನು ಪ್ರಯಾಣಿಕರಿಂದಲೇ ವಸೂಲಿ ಮಾಡಬಹುದು ಎಂದೂ ಆದೇಶ ಹೇಳಿದೆ. 2018ರಲ್ಲಿ ಹೊರಡಿಸಿದ್ದ ಆದೇಶದಲ್ಲಿ ಬೆಂಗಳೂರು ನಗರ ವ್ಯಾಪ್ತಿ ಮತ್ತು ಬಿಬಿಎಂಪಿ ವ್ಯಾಪ್ತಿಯಿಂದ 25 ಕಿ.ಮೀ.ವರೆಗಿನ ಪರಿಧಿಯಲ್ಲಿ ಟ್ಯಾಕ್ಸಿ ಪ್ರಯಾಣ …

Read More »

ಸಿ.ಡಿ. ಪ್ರಕರಣ: ಡಿಕೆಶಿ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್‌ನ ಲಖನ್ ಜಾರಕಿಹೊಳಿ

ಗೋಕಾಕ (ಬೆಳಗಾವಿ ಜಿಲ್ಲೆ): ‘ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಯುವತಿಯ ಪೋಷಕರೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಆರೋಪ ಮಾಡಿದ್ದಾರೆ. ತಂದೆ-ತಾಯಿಯೇ ಹೇಳಿರುವುದರಿಂದ ಅದು ಸತ್ಯವೇ ಇರಬೇಕು. ಹೀಗಾಗಿ, ನೈತಿಕ ಹೊಣೆ ಹೊತ್ತು ಶಿವಕುಮಾರ್‌ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಮುಖಂಡ ಲಖನ್‌ ಜಾರಕಿಹೊಳಿ ಆಗ್ರಹಿಸಿದರು. ಇಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂಧಿಗೆ ಮಾತನಾಡಿದ ಅವರು, ‘ಶಿವಕುಮಾರ್ ವಿರುದ್ಧದ ಆರೋಪವನ್ನು ಕಾಂಗ್ರೆಸ್ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಬೇಕು. ರಾಜೀನಾಮೆ ಪಡೆದುಕೊಳ್ಳಲೇಬೇಕು. ಆರೋಪ …

Read More »

ರಸ್ತೆ ದಾಟುವಾಗ ಮಿನಿಲಾರಿ ಹಾಯ್ದು ಬಾಲಕ ಸಾವು

ಗೋಕಾಕ ಬ್ರೇಕಿಂಗ್ ರಸ್ತೆ ದಾಟುವಾಗ ಮಿನಿಲಾರಿ ಹಾಯ್ದು ಬಾಲಕ ಸಾವು ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದ ಘಟನೆ ಸಿದ್ದಾರ್ಥ ಹಣಮಂತ ಮಲ್ಲನ್ನವರ (2) ಸಾವಿಗಿಡಾದ ಬಾಲಕ ಚಾಲಕ‌ನನ್ನು ವಶಕ್ಕೆ ಪಡೆದ ಪೋಲಿಸರು. ಮುಗಿಲು ಮುಟ್ಟಿದ ಕುಟುಂಬದ ಅಕ್ರಂದನ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ

Read More »

96 ದಿನ ಜೈಲಿಗೆ ಹೋಗಿ ಬಂದಿದ್ದರಂತೆ ವೈಲ್ಡ್​ ಕಾರ್ಡ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ! ಕಾರಣ?

ಬಿಗ್​ ಬಾಸ್​ ಐದನೇ ವಾರದಲ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ. ಪ್ರಶಾಂತ್​ ಸಂಬರಗಿ ಆಪ್ತ ಚಕ್ರವರ್ತಿ ಚಂದ್ರಚೂಡ ಅನ್ನೋದು ವಿಶೇಷ. ಬಂದ ದಿನವೇ ಮನೆಯಲ್ಲಿ ತುಂಬಾನೇ ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ತುಂಬಾನೇ ಚರ್ಚೆಗೂ ಕಾರಣವಾಗಿದ್ದಾರೆ. ಪತ್ರಿಕೋದ್ಯಮದಿಂದ ತಮ್ಮ ವೃತ್ತಿ ಆರಂಭಿಸಿದ ಚಕ್ರವರ್ತಿ ಚಂದ್ರಚೂಡ ನಂತರ ಕಾಲಿಟ್ಟಿದ್ದು ಚಿತ್ರರಂಗಕ್ಕೆ. ಇವರು ಸಿನಿಮಾ ನಿರ್ದೇಶನಕ್ಕೆ ಇಳಿದರು. ಈಗ ನೇರವಾಗಿ ಬಿಗ್​ ಬಾಸ್​ ಮನೆಗೆ ಪ್ರವೇಶ ಪಡೆದುಕೊಂಡಿದ್ದಾರೆ. ಕವಿತೆ ಬರೆಯುವುದರ ಜತೆಗೆ ಸಾಮಾಜಿಕ …

Read More »

ಕಸದ ಗಾಡಿಯಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ ಪರಿಣಿತಿ! ಫೋಟೊ ವೈರಲ್

ಮುಂಬೈ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ತನ್ನ ನಟನೆಯಷ್ಟೇ, ತನ್ನ ಮಾದಕ ಮೈಮಾಟದಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರತಿಭೆ. ಇತ್ತೀಚೆಗಷ್ಟೇ ಈ ನಟಿಯ ಸೈನಾ ಸಿನಿಮಾ ತೆರೆ ಕಂಡು ಉತ್ತಮ ಪ್ರತಿಕ್ರಿಯೆ ಕಂಡಿದೆ. ಈಗ ಪರಿಣಿತಿ ಮತ್ತೆ ಸುದ್ದಿಯಲ್ಲಿದ್ದಾರೆ. ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. ಖ್ಯಾತ ಫೋಟೊಗ್ರಾಪರ್ ಡಬ್ಬು ರತ್ನಾನಿ ಕೈಚಳಕದಲ್ಲಿ ಸೆರೆಯಾಗಿರುವ ಪರಿಣಿತಿಯ ಹೊಸ ಫೋಟೊ ಪಡ್ಡೆ ಹುಡುಗರ ಮೈ ಬಿಸಿ ಏರಿಸಿದೆ. ಕಸದ ಗಾಡಿಯೊಂದಲ್ಲಿ …

Read More »

ವಿವಿಧೆಡೆ ಯುವತಿ ಜತೆಗೆ ಸ್ಥಳ ಮಹಜರು

ಬೆಂಗಳೂರು: ಸಿ.ಡಿ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ ಯುವತಿಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿದೆ. ಜತೆಗೆ ಒಂದೆರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್‌ ನೀಡಲಿದೆ ಎಂದು ತಿಳಿದು ಬಂದಿದೆ. ಗುರುವಾರ ಬೆಳಗ್ಗೆ ತಮ್ಮ ಪರ ವಕೀಲರ ಜತೆ ಆಗಮಿಸಿದ ಸಂತ್ರಸ್ತೆಯನ್ನು ತನಿಖಾಧಿಕಾರಿ ಕವಿತಾ ನೇತೃತ್ವದ ತಂಡ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆರ್‌.ಟಿ.ನಗರದ ಗಂಗಾನಗರದಲ್ಲಿರುವ ಪಿ.ಜಿ.ಗೆ ಕರೆದೊಯ್ದು 11 ಗಂಟೆಯಿಂದ ಮಧ್ಯಾಹ್ನ …

Read More »

1ರಿಂದ 9 ತರಗತಿ : ಮೇ ತಿಂಗಳಲ್ಲಿ ಬೇಸಗೆ ರಜೆ ಸಾಧ್ಯತೆ

ಬೆಂಗಳೂರು: ರಾಜ್ಯದ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ ಬೇಸಗೆ ರಜೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ. ಬಿಸಿಲಿನ ತಾಪಮಾನ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಪ್ರಿಲ್‌ ಅಂತ್ಯದೊಳಗೆ 9ನೇ ತರಗತಿ ವರೆಗಿನ ಎಲ್ಲ ವಿದ್ಯಾರ್ಥಿಗಳ ಪಠ್ಯಕ್ರಮ ಪೂರ್ಣಗೊಳಿಸಿ, ಮೌಲ್ಯಮಾಪನ ಪ್ರಕ್ರಿಯೆ ನಡೆಸಿ ರಜೆ ಘೋಷಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ವಿಳಂಬವಾಗಿ ಆರಂಭವಾಗಿದ್ದರಿಂದ ಬೇಸಗೆ ರಜೆ ಕಡಿತ ಮಾಡುವ ಬಗ್ಗೆ ಈ …

Read More »

ಅಂಬೇಡ್ಕರ್‌ ಜಯಂತಿ ಸಾಂಕೇತಿಕ ಆಚರಣೆಗೆ ಡಿ.ಸಿ ಸೂಚನೆ; ಪ್ರತಿಭಟನೆ

ಕಲಬುರ್ಗಿ: ಕೋವಿಡ್‌ ಹಾವಳಿ ಹೆಚ್ಚಿರುವ ಕಾರಣ ಅಂಬೇಡ್ಕರ್‌ ಜಯಂತಿಯನ್ನು ಸರಳವಾಗಿ ಆಚರಿಸಬೇಕು ಎಂಬ ಜಿಲ್ಲಾಧಿಕಾರಿ ಮನವಿಗೆ ವಿರೋಧ ವ್ಯಕ್ತಪಡಿಸಿದ ಕೆಲ ಸಂಘಟನೆಗಳವರು, ‘ಕೋವಿಡ್‌ ಬಂದು ಜೀವ ಹೋದರೂ ಚಿಂತೆಯಿಲ್ಲ. ಜಯಂತಿ ಆಚರಿಸದೇ ಬಿಡುವುದಿಲ್ಲ’ ಎಂದು ಪಟ್ಟು ಹಿಡಿದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಏ. 5ರಂದು ಡಾ.ಬಾಬು ಜಗಜೀವನರಾಂ ಜಯಂತಿ ಹಾಗೂ 14ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತ್ಯುತ್ಸವ ಸಂಬಂಧ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗುರುವಾರ ಇಲ್ಲಿ ವಿವಿಧ ಸಂಘಟನೆಗಳ ಸಭೆ …

Read More »

ಹಳೆಯ ದ್ವೇಷದ ಕಾರಣ ಯುವಕನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು

ಹಳೆಯ ದ್ವೇಷದ ಕಾರಣ ಯುವಕನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು ಹಳೆಯ ದ್ವೇಷದ ಕಾರಣ ಗೋಕಾಕದಲ್ಲಿ‌ ಯುವಕನೊರ್ವನಿಗೆ ಚಾಕು ಇರಿತದಿಂದ ಗಂಬೀರ ಗಾಯಗೊಂಡ ಕಾರಣ ಸಂಬಂದಿಕರು ಗೋಕಾಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ವಿಶಾಲ ತಾಯಿ, ಸರೋಜಾ, ಮೇಸ್ತ್ರೀ ,23 ವರ್ಷದ, ಎಂಬ ಯುವಕನಿಗೆ ಗೋಕಾಕ ತಹಸಿಲ್ದಾರ ಕಚೇರಿಯ ಆವರಣದಲ್ಲಿ ಹಳೆಯ ದ್ವೇಷದ ಕಾರಣ 5-6 ಜನ ದುಷ್ಕರಮಿಗಳು ಚಾಕು ಹಾಕಿದ್ದರಿಂದ ಸ್ಥಳದಲ್ಲಿದ ಸಂಬಂದಿಕರು ತಕ್ಷಣ ಗೋಕಾಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ

Read More »