ಬೆಳಗಾವಿ: ಉಪಚುನಾವಣೆ ಮುಗಿದ ಬೆನ್ನಲ್ಲೇ ಗಡಿಜಿಲ್ಲೆ ಬೆಳಗಾವಿಗೆ ಕೊರೊನಾ ಆತಂಕ ಶುರುವಾಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪನವರ ಸಂಪರ್ಕದಲ್ಲಿದ್ದವರ ಕೋವಿಡ್ ಟೆಸ್ಟ್ ವರದಿ ಇಂದು ಬರಲಿದೆ. ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಕೆಲ ದಿನಗಳಿಂದ ಸಿಎಂ ಸಂಪರ್ಕದಲ್ಲಿದ್ದವರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದೆ. ಬೆಳಗಾವಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸಿಎಂ ಸಂಪರ್ಕಕ್ಕೆ ಬಂದ 500 …
Read More »ಕೊರೊನಾ ಮಧ್ಯೆ 3 ಕ್ಷೇತ್ರಗಳಿಗೆ ಉಪ ಚುನಾವಣೆ- ಕರ್ತವ್ಯಕ್ಕೆ ಬಾರದ 29 ಮಂದಿ ವಿರುದ್ಧ ಎಫ್‍ಐಆರ್
ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳಾದ ಬೆಳಗಾವಿ, ಮಸ್ಕಿ, ಬಸವಕಲ್ಯಾಣದ ಉಪಚುನಾವಣೆಗೆ ತೆರೆ ಬಿದ್ದಿದೆ. ಬೆಳಗಾವಿಯಲ್ಲಿ ಶೇ.60, ಬಸವಕಲ್ಯಾಣ ಶೇ.65 ಹಾಗೂ ಮಸ್ಕಿಯಲ್ಲಿ ಶೇ.71ರಷ್ಟು ಮತದಾನವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಸೇರಿದಂತೆ ಕುಟುಂಬಸ್ಥರು ಮತ ಚಲಾಯಿಸಿ, ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ರು. ಗೋಕಾಕ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮತದಾನ ಮಾಡಿದ್ರು. ಸೋಂಕು ಪೀಡಿತ ಸವದತ್ತಿ ಶಾಸಕ ಆನಂದ್ ಮಾಮನಿ ಪಿಪಿಇ ಕಿಟ್ ಧರಿಸಿ ಓಟ್ ಮಾಡಿದ್ರು. …
Read More »ಕೊರೊನಾದಿಂದ ಬಳಲುತ್ತಿರೋ ಸಿಎಂ ಆರೋಗ್ಯ ಸ್ಥಿರ
ಬೆಂಗಳೂರು: ಕೋವಿಡ್ ನಿಂದ ಮಣಿಪಾಲ್ ಆಸ್ಪತ್ರೆ ಸೇರಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಲವಲವಿಕೆಯಿಂದ ಇದ್ದಾರೆ ಅಂತ ಮಣಿಪಾಲ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ಹೇಳಿದೆ. ತಜ್ಞ ವೈದ್ಯರ ತಂಡ ಶ್ವಾಸಕೋಶದ ಮೇಲೂ ನಿಗಾ ಇರಿಸಲಾಗಿದೆ ಅಂದಿದೆ. ಸಿಎಂ ಮೊಮ್ಮಗಳು ಸೌಂದರ್ಯ ಮತ್ತು ಅವರ ಪತಿ ಡಾ.ನಿರಂಜನ್‍ರಿಗೂ ಪಾಸಿಟಿವ್ ಆಗಿದ್ದು, ಮಣಿಪಾಲದಲ್ಲಿ ಸಿಎಂ ಪಕ್ಕದ ವಾರ್ಡ್‍ನಲ್ಲೇ ದಾಖಲಿಸಲಾಗಿದೆ. ಸಿಎಂ ಪ್ರಾಥಮಿಕ ಸಂಪರ್ಕಿತರಾಗಿರೋ ಡಿಸಿಎಂ ಲಕ್ಷ್ಮಣ ಸವದಿ ಗನ್‍ಮ್ಯಾನ್‍ಗೂ ಸೋಂಕು ದೃಢವಾಗಿದೆ. …
Read More »5 ವರ್ಷಗಳಲ್ಲಿ ಚಿರತೆಗಳ ಸಂಖ್ಯೆ ದುಪ್ಪಟ್ಟು : ದೇಶದಲ್ಲೇ ಕರ್ನಾಟಕಕ್ಕೆ ದ್ವಿತೀಯ ಸ್ಥಾನ
ಉಡುಪಿ : ಚಿರತೆ ದಾಳಿಯಿಂದ ನಾಯಿ/ಹಸು ಬಲಿ, ಚಿರತೆ ಬೋನಿಗೆ ಇತ್ಯಾದಿ ಸುದ್ದಿಗಳನ್ನು ಆಗಾಗ್ಗೆ ಮಾಧ್ಯಮಗಳಲ್ಲಿ ನೋಡುತ್ತೇವೆ. ಕಾಡು ನಾಶದಿಂದ ವನ್ಯಜೀವಿಗಳು ನಾಡಿಗೆ ಬರುತ್ತಿವೆ ಎಂಬ ಕಾರಣ ನಿಜವಾದರೂ ಕಾಡು ನಾಶವಾಗುತ್ತಿದ್ದರೂ ವನ್ಯಜೀವಿಗಳ ಸಂಖ್ಯೆ ಏರುತ್ತಲ್ಲಿದೆ ಎಂಬ ಇನ್ನೊಂದು ಸತ್ಯವೂ ಗೋಚರಿಸುತ್ತಿದೆ. ಸರಕಾರದ ವನ್ಯಜೀವಿ ರಕ್ಷಣ ಕಾಯಿದೆಯಂತೆ ಅರಣ್ಯ ಇಲಾಖೆಯವರು ಮಾಡುತ್ತಿರುವ ಸಂರಕ್ಷಣ ಪ್ರಯತ್ನಗಳೂ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿವೆ. 2014ರಲ್ಲಿ ಭಾರತದಲ್ಲಿ ಚಿರತೆಯ ಗಣತಿ ನಡೆದಿದ್ದು ಬಳಿಕ …
Read More »ʼಹೆಲಿಪ್ಯಾಡ್ ನಮ್ಮ ಆಸ್ತಿ, ಮರ ಕಡಿಯಲು ಜನಾಭಿಪ್ರಾಯ ಸಂಗ್ರಹದ ಅಗತ್ಯ ಏನು?ʼ
ಮೈಸೂರು: ಹೆಲಿಟೂರಿಸಂಗಾಗಿ ಲಲಿತಮಹಲ್ ಬಳಿ ನೂರಾರು ಮರಗಳನ್ನು ಕಡಿಯುವ ಬಗ್ಗೆ ಸಾರ್ವಜನಿಕ ಅಹವಾಲು ಸಂಗ್ರಹಿಸಲು ಏ.೨೩ರಂದು ದಿನಾಂಕ ನಿಗದಿ ಮಾಡಿರುವ ಅರಣ್ಯಾಧಿಕಾರಿಗಳ ನಡೆಗೆ ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲಲಿತಮಹಲ್ ಪ್ಯಾಲೆಸ್ ಮುಂಭಾಗದ ಮೈದಾನದಲ್ಲಿ ಹೆಲಿ ಟೂರಿಸಂಗಾಗಿ ನೂರಾರು ಮರಗಳನ್ನು ಕಡಿಯಲು ಸಾರ್ವಜನಿಕ ಅಹವಾಲಿಗೆ ಆಹ್ವಾನಿಸಿರುವುದು ಮಾಧ್ಯಮಗಳಿಂದ ತಿಳಿದು ಬಂದಿದೆ. ಲಲಿತಮಹಲ್ ಸುತ್ತ-ಮುತ್ತ ಇರುವುದು ಸಾರ್ವಜನಿಕವಲ್ಲ ಖಾಸಗಿ ಒಡೆತನದ ಆಸ್ತಿ. ಈ ಜಾಗದಲ್ಲಿರುವ ಮರಗಳನ್ನು ಕಡಿಯುವುದಕ್ಕೆ ಸಾರ್ವಜನಿಕರ ಅಹವಾಲು …
Read More »ಕರೊನಾ ಇಷ್ಟು ಪ್ರಮಾಣದಲ್ಲಿ ಹೆಚ್ಚಾಗಲು ಎರಡು ಪ್ರಮುಖ ಕಾರಣ ನೀಡಿದ ದೆಹಲಿ ಏಮ್ಸ್ ನಿರ್ದೇಶಕ
ನವದೆಹಲಿ: ದೇಶದಲ್ಲಿ ಕರೊನಾವೈರಸ್ನ ಎರಡನೇ ಅಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದಕ್ಕೆ ಪ್ರಮುಖ ಎರಡು ಕಾರಣಗಳನ್ನು ದೆಹಲಿಯ ಏಮ್ಸ್ ವೈದ್ಯರು ಕಂಡುಕೊಂಡಿದ್ದಾರೆ. ಏಮ್ಸ್ ನ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಹೇಳುವ ಪ್ರಕಾರ ಕಳೆದ ನಾಲ್ಕು ತಿಂಗಳಿನಿಂದ ಕೋವಿಡ್ ಕಡಿಮೆಯಾಗಿದೆಯಂದು ಜನ ಮುನ್ನೆಚ್ಚರಿಕೆ ಕ್ರಮಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದು ಹಾಗೂ ರೂಪಾಂತರಗೊಂಡಿರುವ ಕರೊನಾವೈರಸ್ನ ಆರ್ಭಟದಿಂದ ಇವತ್ತು ವ್ಯಾಪಕ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಡಿಸೆಂಬರ್ನಿಂದ ಏಪ್ರಿಲ್ವರೆಗೆ …
Read More »ಸತೀಶ್ ಜಾರಕಿಹೊಳಿ ಒಂದು ಲಕ್ಷದಷ್ಟು ಗೆಲುವಿನ ಅಂತರ ಕಾಯ್ದುಕೊಳ್ಳಲಿದ್ದಾರೆ: ಹೆಬ್ಬಾಳಕರ್
ಬೆಳಗಾವಿ – ಶನಿವಾರ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಕನಿಷ್ಠ 80 ಸಾವಿರದಿಂದ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಭವಿಷ್ಯ ಹೆಳುವುದಿಲ್ಲ. ಆದರೆ ಕ್ಷೇತ್ರದ ಎಲ್ಲ ಕಡೆಯಿಂದ ಮಾಹಿತಿ ಪಡೆದು ಹೇಳುತ್ತಿದ್ದೇನೆ. ಸತೀಶ್ ಜಾರಕಿಹೊಳಿ ಗೆಲ್ಲುವುದರಲ್ಲಿ ಯಾವುದೆ ಸಂಶಯವಿಲ್ಲ. ಒಂದು ಲಕ್ಷದಷ್ಟು ಗೆಲುವಿನ ಅಂತರ ಕಾಯ್ದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮತದಾನ …
Read More »ಮಂಗಳಾ ಅಂಗಡಿ ಗೆಲವು ನಿಶ್ಚಿತ- ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಗೆಲುವು ಖಚಿತವೆಂದು ಕೆಎಮ್‍ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರ ಸಂಜೆ ನಗರದ ಹೊಸಪೇಟ ಗಲ್ಲಿಯಲ್ಲಿರುವ ಕೆಬಿಎಸ್ ನಂ 3 ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಪರ ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಮತ್ತು ಮುಖಂಡರು ಒಗ್ಗಟ್ಟಾಗಿ ಪ್ರಚಾರ ಕಾರ್ಯ ನಡೆಸಿದ್ದೇವೆ. ಮತದಾರರು ಸಹ ಬಿಜೆಪಿ ಜನೋಪಯೋಗಿ …
Read More »ಸಾಂಸ್ಕೃತಿಕ ನಗರದಲ್ಲಿ ಮೊಳಗಿದ ವಿಜಯ್ ಪ್ರಕಾಶ್ ʼಜೈ ಹೋʼ
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ʻಜೈ ಹೋ. ಜೈ ಹೋ.ʼ, ʻಬೊಂಬೆ ಹೇಳುತೈತೆ. ಮತ್ತೆ ಹೇಳುತೈತೆ.. ನೀನೆ ರಾಜಕುಮಾರʼ ಹಾಡುಗಳು ಮಾರ್ದನಿಸಿದವು. ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ತಮ್ಮ ಕಂಚಿನ ಕಂಠದಿಂದ ಸುಮಧುರ ಗಾಯನಗಳೊಂದಿಗೆ ಸಂತ ಫಿಲೋಮಿನಾ ಕಾಲೇಜಿನ ಯುವ ಮನಸ್ಸುಗಳನ್ನು ಸಂಗೀತ ಅಲೆಯಲ್ಲಿ ತೇಲಿಸಿದರು. ಮೈಸೂರಿನ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎಡಿನ್ ಕ್ರಿಕೆಟ್ ಪಂದ್ಯಾವಳಿಗಾಗಿ ರೂಪಿಸಿರುವ ವೇದಿಕೆಯು ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಯಿತು. ಕ್ರೀಡೆ ಮತ್ತು …
Read More »ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು; ಇಬ್ಬರ ಸಾವು
ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಬೈರೆ ಗ್ರಾಮದ ಬಳಿ ಕಾರೊಂದು ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾದ ಪರಿಣಾಮ ಇಬ್ಬರು ಮೃತಪಟ್ಟು ಐವರು ಗಾಯಗೊಂಡಿದ್ದಾರೆ. ಬೆಂಗಳೂರು ಮೂಲದವರು ಪ್ರಯಾಣಿಸುತ್ತಿದ್ದ ಕಾರು ಬೈರೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಸೈಯದ್(35) ಮತ್ತು ತಾಯವ್ವ ದುರ್ಮರಣಕ್ಕೀಡಾಗಿದ್ದಾರೆ. ಇನ್ನುಳಿದ ಐವರಿಗೆ ಗಾಯಗಳಾಗಿದ್ದು, ಉತ್ತರ ಕನ್ನಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ಹಳಗಾ ಗ್ರಾಮದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ …
Read More »
Laxmi News 24×7