Breaking News

ರಾಜ್ಯ

ನಿಯಮ ಉಲ್ಲಂಘಿಸಿದರೆ ಲಾಠಿ ಚಾರ್ಜ್

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪೂರ್ಣ ಬಂದ್ ವಾತಾವರಣ ನಿರ್ಮಾಣವಾಗಿದೆ. ರಾತ್ರಿ 9ಗಂಟೆಯಿಂದ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಇರಲಿದೆ. ಇದೀಗ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ನೀಡಿದ್ದ ಸಮಯ ಮುಗಿದಿದ್ದು, ದಿನಸಿ, ತರಕಾರಿ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ. ಮನೆಯಿಂದ ಯಾರೊಬ್ಬರು ಹೊರಬರದಂತೆ ಎಚ್ಚರಿಕೆ ನಿದಲಾಗಿದೆ. ಅನಗತ್ಯವಾಗಿ ಜನರು ಓಡಾಟ ನಡೆಸಿದರೆ ಲಾಠಿ …

Read More »

ಮೋದಿಗೆ ಕೈ ಮುಗಿದು ಮನವಿ ಮಾಡಿದ ಸಿಎಂ! ಏಕೆ ಈ ರೀತಿ ಮಾಡಿದರು?

ನವದೆಹಲಿ : ಮಹಾಮಾರಿಯ ಅಟ್ಟಹಾಸ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿದೆ. ಹೀಗಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಕೇಜ್ರಿವಾಲ್ ಅವರು ಕೊರೊನಾ ಹೆಚ್ಚಾಗಿರುವ ಹತ್ತು ರಾಜ್ಯಗಳ ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಪ್ರಧಾನಿಯಲ್ಲಿ ಮನವಿ ಮಾಡಿದ್ದಾರೆ. ದೆಹಲಿ ಪರಿಸ್ಥಿತಿ ನೋಡಿ, ನನಗೆ ನಿದ್ದೆ ಬರುತ್ತಿಲ್ಲ. ಒಂದೊಂದು ಸಾವು ನನ್ನನ್ನು ಕಾಡುತ್ತಿದೆ ಎಂದು ಗದ್ಗದಿತರಾಗಿ ಹೇಳಿದ್ದಾರೆ. ದೆಹಲಿಯಲ್ಲಿ ಆಕ್ಸಿಜನ್ ತಯಾರಿಸುವ ಘಟಕ …

Read More »

ಚಿಕಿತ್ಸೆಗೆ 4,816 ಹಾಸಿಗೆಗಳ ವ್ಯವಸ್ಥೆ: ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊರಡಿಸಿರುವ ಹಲವು ಕಠಿಣ ನಿಯಮಗಳನ್ನು ಒಳಗೊಂಡ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಧಿಕಾರಿಗಳಿಗೆ ಸೂಚನೆ ನೀಡಿದರು. ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 3,035 ಸಾಮಾನ್ಯ ಬೆಡ್‌ಗಳು, 1,263 ಆಕ್ಸಿಜೆನ್ ಬೆಡ್‌ಗಳು, 243 ಹೈಪ್ರೆಷರ್ ಬೆಡ್‌ಗಳು, 135 ಐಸಿಯು ಬೆಡ್‌ಗಳು, 140 …

Read More »

ಸರ್ಕಾರಿ ನೌಕರರಿಗೆ ಮಾಸ್ಕ್ ಕಡ್ಡಾಯ : ಡಿಸಿ

ಚಿಕ್ಕೋಡಿ : ಕೊರೊನಾ ಎರಡನೆ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಇಲ್ಲದೇ ಹೋದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇಂದಿನಿಂದಲೇ ಎಲ್ಲ ಸರ್ಕಾರಿ ನೌಕರರು ಮಾಸ್ಕ್ ಧರಿಸುವಂತೆ ಆದೇಶ ಹೊರಡಿಸಲಾಗುತ್ತದೆ ಎಂದು ಜಿಲ್ಲಾ ಧಿಕಾರಿ ಡಾ| ಕೆ.ಹರೀಶ ಕುಮಾರ ಹೇಳಿದರು. ಪಟ್ಟಣದ ಮಿನಿವಿಧಾನಸೌಧದಲ್ಲಿ ಚಿಕ್ಕೋಡಿ ಉಪವಿಭಾಗದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊರೊನಾ ಎರಡನೆ ಅಲೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ …

Read More »

ಮೇ ಮಧ್ಯದಲ್ಲಿ ದೇಶದಲ್ಲಿ ದಿನದಲ್ಲಿ 5 ಸಾವಿರ ಜನ ಕೊರೋನಾಗೆ ಬಲಿಯಾಗಲಿದ್ದಾರೆ : ಶಾಕಿಂಗ್ ವರದಿ ನೀಡಿದ ಅಧ್ಯಯನ

ನವದೆಹಲಿ : ಕೊರೊನಾ ವೈರಸ್ ಪ್ರೇರಿತ ಸಾವುಗಳ ಭಾರತದ ದೈನಂದಿನ ಸಂಖ್ಯೆ ಮೇ ಮಧ್ಯಭಾಗದಲ್ಲಿ 5,600 ಕ್ಕೆ ಏರಬಹುದು ಎಂದು ಅಮೆರಿಕದ ಅಧ್ಯಯನವು ಎಚ್ಚರಿಸಿದೆ. ಇದರರ್ಥ ಏಪ್ರಿಲ್ ಮತ್ತು ಆಗಸ್ಟ್ ನಡುವೆ ದೇಶದಲ್ಲಿ ಸುಮಾರು ಮೂರು ಲಕ್ಷ ಜನರು ಕೋವಿಡ್-19 ಗೆ ಪ್ರಾಣ ಕಳೆದುಕೊಳ್ಳಬಹುದು. COVID-19 projections’ ಎಂಬ ಶೀರ್ಷಿಕೆಯ ಈ ಅಧ್ಯಯನವನ್ನು ವಾಷಿಂಗ್ಟನ್ ವಿಶ್ವವಿದ್ಯಾಲಯದ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆ (ಐಎಚ್ ಎಂಇ) ನಡೆಸಿತು. ಈ ವರ್ಷದ …

Read More »

ಮೊನ್ನೆ ಬಸ್ ನಿಂದ‌ ಇಳಿಸಿ ಕೇಸ್ ಹಾಕಿಸಿದ್ರಿ! ಇವತ್ತು ನೋಡಿದ್ರೆ ನೀವೇ ಮಾಸ್ಕ್ ಹಾಕಿಲ್ಲ.

ಉಡುಪಿ ಡಿಸಿ ಅವರು ಉತ್ತರಿಸಲೇ ಬೇಕು… ಮೆಹಂದಿಯಲ್ಲಿ ಭಾಗವಹಿಸಿ, ಮಾಸ್ಕ್ ಹಾಕದೇ‌ ಇರೋ ವ್ಯಕ್ತಿ ನೀವೇ ಆಗಿದ್ದರೆ… ಖಂಡನೀಯ!! ಮದುವೆಗೆ ಮಾತ್ರ ಅವಕಾಶ, ಮೆಹಂದಿಗೆ ಇಲ್ಲ ಈ‌ ನಿಯಮ ಜನ ಸಾಮಾನ್ಯರಿಗೆ ಮಾತ್ರವಾ? ಅದೂ ಅಲ್ಲದೆ ಮೊನ್ನೆ ಬಸ್ ನಿಂದ‌ ಇಳಿಸಿ ಕೇಸ್ ಹಾಕಿಸಿದ್ರಿ! ಇವತ್ತು ನೋಡಿದ್ರೆ ನೀವೇ ಮಾಸ್ಕ್ ಹಾಕಿಲ್ಲ… ತಪ್ಪಲ್ವಾ ಸರ್… ನಾವು ಇಂಥ ತಪ್ಪು ಮಾಡೋದಿಲ್ಲ ಅಂಥಲ್ಲಾ.. ಆದರೆ ನೀವೇ ಮಾಡಿದ್ರೆ ಹೇಗೆ? ಬಡವರಿಗೊಂದು ನ್ಯಾಯ, …

Read More »

ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವ ತಯಾರಿಗಾಗಿ ಪುಸ್ತಕ ವಿತರಣೆ

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಹುಕ್ಕೇರಿಯಲ್ಲಿ, ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ವತಿಯಿಂದ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು, ಸಚಿವರಾದ ಶ್ರೀ ಉಮೇಶ ಕತ್ತಿ ಜಿ, ಊರಿನ ಹಿರಿಯರು, ಗಣ್ಯರು ಹಾಗೂ ಅಧಿಕಾರಿಗಳು ಜೊತೆಗೂಡಿ ವಿತರಿಸಿದರು. ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ 10 ತರಗತಿಯ ಎಲ್ಲಾ ಅಂಶಗಳನ್ನು ಈ ಪುಸ್ತಕದಲ್ಲಿ ಮುದ್ರಿಸಲಾಗಿದೆ. ಶೈಕ್ಷಣಿಕ ಜಿಲ್ಲೆಯ ಪರಿಣಿತ ಶಿಕ್ಷಕರ ಸಹಕಾರದಲ್ಲಿ ಈ …

Read More »

ಎ. 26 ರಿಂದ ಮೇ 4 ರವರೆಗೆ ಮಧ್ಯಾಹ್ನ ನಂತರ ಅಂಗಡಿ ಮುಗ್ಗಟ್ಟುಗಳು ಬಂದ್ ಕೊರೋನಾ ಚೈನ್ ಬ್ರೇಕ್ ಮಾಡುವುದೇ ತಮ್ಮ ಉದ್ಧೇಶ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಕೊರೋನಾ ಎರಡನೇ ಅಲೆ ದಿನೇ ದಿನೇ ಉಲ್ಭಣವಾಗುತ್ತಿದ್ದು, ಇದರ ಹತೋಟಿಗೆ ತರಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಇದಕ್ಕಾಗಿ ಸೋಮವಾರದಿಂದ ಮೇ 4 ರವರೆಗೆ ಸ್ವಯಂ ಪ್ರೇರಿತರಾಗಿ ಮದ್ಯಾಹ್ನ ಅಂಗಡಿಗಳನ್ನು ಬಂದ ಮಾಡಿ ಸಹಕರಿಸುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವ್ಯಾಪಾರಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೊರೋನಾ ಮಹಾಮಾರಿ ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳಲ್ಲಿ ಶರವೇಗದಲ್ಲಿ ಹರಡುತ್ತಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸೂಚನೆ …

Read More »

ಕೊರೊನಾ ನಿಯಮ ಪಾಲನೆಗೆ ಒಂಟೆ ಏರಿ ವಿನೂತನ ಜಾಗೃತಿ ಕಾರ್ಯಕ್ರಮ

ಬೆಳಗಾವಿ: ಕೊರೊನಾ ಎರಡನೇ ಅಲೆ ರಾಜ್ಯದಾದ್ಯಂತ ತೀವ್ರವಾಗಿದ್ದು, ರಾಜ್ಯ ಸರ್ಕಾರ ಸೋಂಕಿನ ನಿಯಂತ್ರಣಕ್ಕಾಗಿ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಈ ನಡುವೆ ಜನರಲ್ಲಿ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಬೆಳಗಾವಿ ಮಹಾನಗರ ಪಾಲಿಗೆ ಅಧಿಕಾರಿಗಳು ಒಂಟೆ ಏರಿ ವಿನೂತನ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಮಹಾನಗರ ಪಾಲಿಕೆ ಮಾರ್ಷಲ್​​ಗಳು ನಗರದ ಬೀದಿಗಳಲ್ಲಿ ಒಂಟಿ ಏರಿ ಸಂಚರಿಸುವ ಮೂಲಕ ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದು, ಕೊರೊನಾ …

Read More »

ವಿದ್ಯಾರ್ಥಿಗಳನ್ನ ಹೊರಹಾಕಿದ ಹಾಸ್ಟೆಲ್; ಅನ್ನ-ನೀರಿಗಾಗಿ​ ವಿವಿ ಸ್ಟೂಡೆಂಟ್ಸ್ ಪರದಾಟ

ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆಯ ಯಡವಟ್ಟಿನಿಂದಾಗಿ ಹಾಸ್ಟೆಲ್​ನಲ್ಲಿರುವ ವಿದ್ಯಾರ್ಥಿಗಳು ಕಳೆದೆರಡು ದಿನಗಳಿಂದ ಅನ್ನ ನೀರಿಗಾಗಿ ಪರದಾಡುತ್ತಿರುವ ಘಟನೆ ಚಿತ್ರದುರ್ಗ ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ನಲ್ಲಿ ನಡೆದಿದೆ. ಕೊರೊನಾ ಕಾರಣ ಹೇಳಿ ಆರೋಗ್ಯ ಇಲಾಖೆ ಏಕಾ ಏಕಿ ಹಾಸ್ಟೆಲ್​ ಬಂದ್​ ಮಾಡಿದ್ದು.. ಹಾಸ್ಟೆಲ್​ ಸಿಬ್ಬಂದಿ ವಿದ್ಯಾರ್ಥಿಗಳ ಬಟ್ಟೆ ಲಗೇಜನ್ನು ಹೊರಹಾಕಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಬಿ. ಎಡ್​ ಎಕ್ಸಾಮ್​ ಹಿನ್ನಲೆ ಹಾಸ್ಟೆಲ್​ನಲ್ಲಿ ಪರೀಕ್ಷಾ ಸಿದ್ಧತೆ ನಡೆಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸಂಕಷ್ಟ …

Read More »