Breaking News

ರಾಜ್ಯ

ಕೋವಿಡ್: ಗಡಿ ಜಿಲ್ಲೆ ಶಿಕ್ಷಕರು ಗಢಗಢ…. ದೊಡ್ಡ ಬೆಲೆ ತೆರುತ್ತಿದೆ ಶಿಕ್ಷಕ ಸಮುದಾಯ…

ಕೋವಿಡ್ ಸೋಂಕಿಗೆ ಗಡಿ ಜಿಲ್ಲೆಯಲ್ಲಿ ಶಿಕ್ಷಕ ಸಮುದಾಯ ದೊಡ್ಡ ಬೆಲೆ ತೆತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 90 ಶಿಕ್ಷಕರು ಕೋವಿಡ್ ಸೋಂಕಿಗೆ ಶಿಕಾರಿಯಾಗಿದ್ದಾರೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 23, ಎರಡನೇ ಅಲೆಯಲ್ಲಿ 20 ಶಿಕ್ಷಕರು ಬಲಿಯಾಗಿದ್ದಾರೆ. ಹತ್ತು ಶಿಕ್ಷಕರು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದವರಾಗಿದ್ದವರು ಎಂದು ಸರಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ ಎಂದು ಬೆಳಗಾವಿ ಡಿಡಿಪಿಐ ಆನಂದ ಪುಂಡಲೀಕ ಅವರು “ಜನ ಜೀವಾಳ”ಕ್ಕೆ ಮಾಹಿತಿ ನೀಡಿದ್ದಾರೆ. …

Read More »

ವರ್ಷದ ರಜೆಗೆ ಬಂದಿದ್ದ ಸೈನಿಕ ತೋಟದ ಮನೆಯಲ್ಲಿ ಕ್ವಾರಂಟೈನ್

ಹಾವೇರಿ: ರಾಜ್ಯದಲ್ಲಿ ಕೊರೊನಾ ಅರ್ಭಟ ಮುಂದುವರಿದಿದೆ. ವರ್ಷದ ರಜೆಗೆ ಬಂದಿದ್ದ ಸೈನಿಕ ಮನೆಗೆ ಹೋಗದೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ತೋಟದ ಮನೆಯಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಗ್ರಾಮದ ಹೊರವಲಯದಲ್ಲಿ ಇರುವ ಶಶಿಧರ ಎಲಿಗಾರ ಎಂಬುವರ ತೋಟದ ಮನೆಯಲ್ಲಿ ಸೈನಿಕ ಮಾಲತೇಶ ಕ್ವಾರಂಟೈನ್ ಆಗಿದ್ದಾರೆ. ನವದೆಹಲಿಯಲ್ಲಿ ಸೈನಿಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಾಲತೇಶ ತಿಪ್ಪಕ್ಕನವರ ಮನೆಗೆ ತೆರಳದೆ ನೇರವಾಗಿ ತೋಟದ ಮನೆಯಲ್ಲಿ ಹೋಂ ಕ್ವಾರಂಟೈನ್ ಆಗಿ ಸೈನಿಕ ಮಾಲತೇಶ …

Read More »

ಭಾರತದಲ್ಲಿ ತಗ್ಗಿದ್ದ ಕೊರೋನಾ ಅಬ್ಬರ : 24 ಗಂಟೆಯಲ್ಲಿ 2.81 ಲಕ್ಷ ಹೊಸ ಕೇಸ್, 4106 ಸಾವು..!

ನವದೆಹಲಿ,ಮೇ.17-ಅಂತೂ ಇಂತೂ ಕೊರೊನಾ ಸೋಂಕು ಭಾರಿ ಇಳಿಮುಖದತ್ತ ಮುಖ ಮಾಡಿದೆ. ಒಂದೇ ದಿನದಲ್ಲಿ ನಾಲ್ಕು ಲಕ್ಷ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಇದೀಗ 2.81 ಲಕ್ಷಕ್ಕೆ ಇಳಿದಿದೆ. ನಿನ್ನೆಯಿಂದ 2,81,386 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದು, ಇದು ಕಳೆದ 27 ದಿನಗಳಲ್ಲಿ ದಾಖಾಲಾದ ಅತ್ಯಂತ ಕಡಿಮೆ ಪ್ರಮಾಣ ಎಂದು ಗುರುತಿಸಲಾಗಿದೆ.2,81 ಲಕ್ಷ ಮಂದಿ ಹೊಸ ಸೋಂಕಿತರಿಂದಾಗಿ ದೇಶದ ಒಟ್ಟು ಸೋಂಕಿತರ ಸಂಖ್ಯೆ 2,49 ಕೋಟಿ ಗಡಿ ದಾಟಿದೆ.ಸೋಂಕು ಕಡಿಮೆಯಾದರೂ ಸಾವಿನ …

Read More »

ಮ ಕೊರೊನಾಗೆ ಬೆಳಗಾವಿಯಲ್ಲಿ ಶಿಕ್ಷಕ ಅಣ್ಣ-ತಮ್ ಬಲಿ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಇದೀಗ ಶಿಕ್ಷಕರಾಗಿದ್ದ ಅಣ್ಣ-ತಮ್ಮ ಇಬ್ಬರೂ ಮಹಾಮಾರಿಗೆ ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ತೋಪಿನಕಟ್ಟಿ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದ ಸಹೋದರರಿಬ್ಬರೂ 4 ದಿನಗಳ ಅಂತರದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ಅಣ್ಣ ಪಿ.ಕೆ.ಕುಂಬಾರ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಇದರ ಬೆನ್ನಲ್ಲೆ ತಮ್ಮ ನಾರಾಯಣ ಕುಂಬಾರ್ ಗೂ ಸೋಂಕು ಹರಡಿತ್ತು. ಇಬ್ಬರಿಗೂ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಾಲ್ಕು …

Read More »

ಬ್ಲಾಕ್ ಫಂಗಸ್’ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ ನೀಡಿ: ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು, ಮೇ 17: ಬ್ಲಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲ್ಲಿ ಸೇರಿಸಿ ಸೂಕ್ತ ಅಧಿಸೂಚನೆ ಹೊರಡಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬ್ಲಾಕ್ ಫಂಗಸ್, ಕಪ್ಪು ಶಿಲೀಂದ್ರದ ಸಮಸ್ಯೆ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಮ್ಯೂಕರ್ ಮೈಕೋಸಿಸ್ ಎಂದು ಕರೆಯಲಾಗುವ ಈ ಕಾಯಿಲೆಯು ಕೋವಿಡ್ ರೋಗಕ್ಕೆ ತುತ್ತಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವವರಲ್ಲಿ ಮಾರಣಾಂತಿಕವಾಗಿ ಪರಿಣಮಿಸುತ್ತಿದೆ. ಕೋವಿಡ್ ನಿಂದಾಗಿ ಸಾವು …

Read More »

ಖಾಸಗಿ ಆಸ್ಪತ್ರೆ ನೋಡಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ

ಮೈಸೂರು, : – ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದ ಹಾಸಿಗೆಗಳಿಗೆ ಜಿಲ್ಲಾಡಳಿತ ನಿಯೋಜಿಸುವ ಸೋಂಕಿತರಿಗೆ ಹಾಸಿಗೆ ಕೊಡಿಸಲು ಸರಿಯಾಗಿ ಸಮನ್ವಯ ಮಾಡದಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ನೇಮಿಸಿರುವ ನೋಡಲ್ ಅಧಿಕಾರಿಗಳು ಹಾಗೂ ಸಾಸ್ಟ್ (SAST)ಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದರು.ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಅವರು ವಾರ್ ರೂಂನಿಂದ ಸೋಂಕಿತರಿಗೆ ನಿಗದಿಪಡಿಸಿದ ಆಸ್ಪತ್ರೆಯಲ್ಲಿ ಅದೇ ವ್ಯಕ್ತಿಗೆ ಹಾಸಿಗೆ ಕೊಡಿಸುವ ವರೆಗೂ …

Read More »

ಕರೊನಾ ಮದ್ದು ನಾಳೆ ಬಿಡುಗಡೆ: ಕೆಲವು ಆಸ್ಪತ್ರೆಗಳಿಗೆ ಒಮ್ಮೆಗೆ 10 ಸಾವಿರ ಪ್ಯಾಕೆಟ್​ ವಿತರಣೆ

ನವದೆಹಲಿ: ಮದ್ದೇ ಇಲ್ಲದ ರೋಗ ಎನ್ನಲಾಗಿರುವ ಕರೊನಾಗೆ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮದ್ದು ಕಂಡು ಹಿಡಿದಿದ್ದು, ಅದು ನಾಳೆಯೇ ಲೋಕಾರ್ಪಣೆ ಆಗಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಈ ಔಷಧದ ಹತ್ತು ಸಾವಿರ ಪ್ಯಾಕೆಟ್​ಗಳನ್ನು ಕೆಲವು ಆಸ್ಪತ್ರೆಗಳಿಗೆ ನೀಡಲಿದ್ದಾರೆ. ಒ2 ಡಿಜೆ ಎಂಬ ಹೆಸರಿನ ಈ ಔಷಧವು ದೇಹವನ್ನು ಸೇರಿಕೊಂಡ ವೈರಾಣುಗಳ ಬಲವನ್ನು ಕುಂದಿಸಿ, ಸೋಂಕು ಇತರ ಭಾಗಗಳಿಗೆ ಹರಡದಂತೆ …

Read More »

ಅರೆಸ್ಟ್ ಮಿ ಟೂ” : ಕೇಂದ್ರ ಸರ್ಕಾರಕ್ಕೆ ನನ್ನನ್ನೂ ಬಂಧಿಸಿ ಎಂದು ಕೇಳಿಕೊಂಡ ಗಾಂಧಿ

ನವ ದೆಹಲಿ : ಕೋವಿಡ್ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸರಿಯಾಗಿ ನೀಭಾಯಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಟೀಕಿಸಿ ಹಾಕಿದ್ದ ಪೋಸ್ಟರ್ ಗಳಿಗೆ ಸಂಬಂಧಿಸಿದಂತೆ 17 ಮಂದಿಯನ್ನು ರಾಷ್ಟ್ರ ರಾಜಧಾನಿ ಪೊಲೀಸರು ಬಂಧಿಸಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಆ ವಿರೋಧದ ಧ್ವನಿಗೆ ತಮ್ಮ ಧ್ವನಿ ಸೇರಿಸಿದ್ದಾರೆ. ಈ ಕುರಿತಾಗಿ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ಗಾಂಧಿ …

Read More »

ರಾಜ್ಯದಲ್ಲಿ ಕೊರೊನಾ ಕಂಟ್ರೋಲ್‍ಗೆ ಬಂದಿಲ್ಲ. ಮೇ 24ರ ಬಳಿಕವೂ ಲಾಕ್ ಲಾಕ್..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕಂಟ್ರೋಲ್‍ಗೆ ಬಂದಿಲ್ಲ. ಕೇವಲ ಟೆಸ್ಟಿಂಗ್ ಕಡಿಮೆ ಮಾಡಿರೋ ಕಾರಣ ಕಡಿಮೆ ಸಂಖ್ಯೆ ಬರ್ತಿದೆ. ಆದರೆ ಸಕ್ರಿಯ ಕೇಸ್‍ಗಳ ಸಾಲಿನಲ್ಲಿ ಇಡೀ ದೇಶದಲ್ಲಿ ಕರ್ನಾಟಕವೇ ನಂಬರ್ 1. ಕರ್ನಾಟಕದಲ್ಲಿ ಭರ್ತಿ 6 ಲಕ್ಷ ಸಕ್ರಿಯ ಕೇಸ್‍ಗಳಿವೆ. ಪಾಸಿಟಿವಿಟಿ ರೇಟ್ 25ಕ್ಕಿಂತಲೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಲಾಕ್‍ಡೌನ್‍ಗೆ ಸರ್ಕಾರದ ಸಚಿವರು, ತಜ್ಞರು ಕೂಡ ಒತ್ತಡ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇನ್ನೊಂದು ವಾರ ಅಂದರೆ ಮೇ 24ರ …

Read More »

ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್​ ಮಾಡೋಕೆ ಮುಂದಾದ ಸಲ್ಲು

ಸಲ್ಮಾನ್​ ಖಾನ್​ ನಟನೆಯ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಚಿತ್ರ ಮೊದಲ ದಿನ ಒಟಿಟಿಯಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್​ ಮಾಡಿತ್ತು. ಆದರೆ, ವಿಮರ್ಶಕರಿಂದ ಸಿನಿಮಾಗೆ ಮೆಚ್ಚುಗೆ ಬಂದಿಲ್ಲ. ಇದು ಸಲ್ಮಾನ್​ ಖಾನ್​ ಅವರನ್ನು ಅಪ್ಸೆಟ್​ ಮಾಡಿದೆ. ಹೀಗಾಗಿ, ಅವರು ದಕ್ಷಿಣ ಭಾರತದ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. 2017ರಲ್ಲಿ ತೆರೆಕಂಡಿದ್ದ ‘ಟೈಗರ್ ಜಿಂದಾ ಹೇ’ ಚಿತ್ರವೇ ಕೊನೆ. ಅದಾದ ನಂತರದಲ್ಲಿ ಸಲ್ಲುಗೆ ಅಂಥ ಯಶಸ್ಸು ಸಿಕ್ಕಿಲ್ಲ. ‘ರೇಸ್​-3’, ‘ಭಾರತ್’​, ‘ದಬಾಂಗ್​ …

Read More »