Breaking News

ರಾಜ್ಯ

ಬಿಡಿಸಲು ಬಂದ ಕುಟುಂಬಸ್ಥರಿಗೆ ಪೊಲೀಸ್​ ಇನ್ಸ್​ಪೆಕ್ಟರ್​ ಕೈ ಮುಗಿದ ಬೇಡಿಕೊಂಡ ಘಟನೆ

ವಿಜಯನಗರ: ಲಾಕ್​ಡೌನ್​ ಸಂದರ್ಭದಲ್ಲಿ ಅನಗತ್ಯವಾಗಿ ಹೊರ ಬಂದವರನ್ನು ಬಿಡಿಸಲು ಬಂದ ಕುಟುಂಬಸ್ಥರಿಗೆ ಪೊಲೀಸ್​ ಇನ್ಸ್​ಪೆಕ್ಟರ್​ ಕೈ ಮುಗಿದ ಬೇಡಿಕೊಂಡ ಘಟನೆ ಹೊಸಪೇಟೆಯ ಉದ್ಯೋಗ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಸರ್​ ನನ್ನ ತಮ್ಮನನ್ನು ಬಿಟ್ಟುಬಿಡಿ ಎಂದು ವ್ಯಾಪಾರಿಯೊಬ್ಬರು ಕೇಳಿಕೊಂಡು ಬಂದಿದ್ದರು. ಈ ವೇಳೆ ಮಾತನಾಡಿದ ಇನ್ಸ್​ಪೆಕ್ಟರ್​, ದಯಮಾಡಿ ನಿಮಗೆ ಕೈ ಮುಗಿದು ಕೇಳುವೆ ಜನರನ್ನು ಬದುಕಿಸಿ ಎಂದರು. ನಿಮಗೆ ದುಡ್ಡು ಬೇಕು, ನಮಗೆ ಜನ ಬೇಕು. ನಾವು ಕೂಡ ಹೆಂಡತಿ …

Read More »

ಸಿ ಟಿ ರವಿ ವಿರುದ್ದ ಕಾಂಗ್ರೆಸ್‌ ನಿಂದ ಪೋಲೀಸ್‌ ದೂರು

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್‌ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದು, ಅವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಹನುಮಂತ ನಗರ ಬ್ಲಾಕ್ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಿ.ತೇಜೇಶ್ ಕುಮಾರ್ ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದ್ದಾರೆ. ‘ಸಿ.ಟಿ.ರವಿ ಅವರು ಕೊರೊನಾ ವಿಚಾರವನ್ನು ಪ್ರಸ್ತಾಪಿಸಿ, ಕಾಂಗ್ರೆಸ್‌ ಪಕ್ಷದ ವಿರುದ್ಧ ಹಲವು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ …

Read More »

ಆಕ್ಸಿಜನ್ ದುರಂತ: ಚಾಮರಾಜನಗರ ಡಿಸಿ ಡಾ.ಎಂ.ಆರ್‌.ರವಿ ಎತ್ತಂಗಡಿ

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ಹೊಣೆಯಾಗಿಸಿ ಸ್ಥಳ ನೀಡದೇ ಸರ್ಕಾರ ಅವರನ್ನು ಎತ್ತಂಗಡಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಫೆ‌.13ರಂದೇ ಚಾಮರಾಜನಗರ ಡಿಸಿ ರವಿ ಅವರನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ.ಬಿ‌.ಸಿ.ಸತೀಶ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಬಳಿಕ ಕೆಲವು ಬೆಳವಣಿಗೆಗಳು ನಡೆದು ರವಿ ಗಡಿಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಮುಂದುವರೆದಿದ್ದರು. ದುರಂತ ನಡೆದ ಬಳಿಕ ನಡೆದ ನ್ಯಾಯಾಂಗ ತನಿಖೆಯಲ್ಲಿ …

Read More »

ಕೊವಿಡ್ ಪರೀಕ್ಷೆಯನ್ನು ಮನೆಯಲ್ಲಿ ನಾವೇ ಮಾಡಿಕೊಳ್ಳಬಹುದು; ಐಸಿಎಂಆರ್​ನಿಂದ ಬಿಡುಗಡೆಯಾಯ್ತು ಹೊಸ ಕಿಟ್

ದೆಹಲಿ: ಕೊವಿಡ್-19 ಪರೀಕ್ಷೆಯನ್ನು ನಮಗೆ ನಾವೇ ಮಾಡಿಕೊಳ್ಳಬಹುದು. ಯಾವುದೇ ವೈದ್ಯಕೀಯ ಸಿಬ್ಬಂದಿಯ ಇರುವಿಕೆಯ ಹೊರತಾಗಿ, ಕೊರೊನಾ ಪರೀಕ್ಷೆಯನ್ನು ನಾವೇ ಮಾಡಿಕೊಳ್ಳಬಹುದು. ಈ ನೂತನ ವ್ಯವಸ್ಥೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಇಂದು (ಮೇ 19) ಸೂಚನೆ ನೀಡಿದೆ. ನಮಗೆ ನಾವೇ ಕೊರೊನಾ ಪರೀಕ್ಷೆ ನಡೆಸುವುದು ಹೇಗೆ ಎಂಬ ಬಗ್ಗೆ ಸೂಚನೆ ನೀಡಿದ ಐಸಿಎಂಆರ್ ಕೊವಿಸೆಲ್ಫ್ ಎಂಬ ಕಿಟ್​ನ ಬಗ್ಗೆ ವಿವರಣೆ ನೀಡಿದೆ. ಸ್ವತಃ ನಮಗೆ ನಾವೇ ಕೊವಿಡ್-19 ಪರೀಕ್ಷೆ …

Read More »

ಆಹಾರ ಪೊಟ್ಟಣಗಳ ಮೇಲೆ ಕೊರೊನಾ ಸೋಂಕಿತರಿಗೆ ವಿಶೇಷ ಸಂದೇಶ ಕಳುಹಿಸಿದ ಬಾಲಕ

ಸಂಪೂರ್ಣ ವಿಶ್ವವೇ ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಆತ್ಮವಿಶ್ವಾಸ ತುಂಬಬಲ್ಲ ಸಣ್ಣ ಮಾತೂ ಸಹ ಭಾರೀ ಖುಷಿಯನ್ನ ಕೊಡಬಹುದು. ಇದೇ ಮಾತನ್ನ ಅತ್ಯಂತ ಚಿಕ್ಕ ವಯಸ್ಸಿಗೆ ಅರ್ಥ ಮಾಡಿಕೊಂಡ ಬಾಲಕನೊಬ್ಬ ತನ್ನ ತಾಯಿ ಕೋವಿಡ್​ ರೋಗಿಗಳಿಗೆಂದು ತಯಾರು ಮಾಡಿದ್ದ ಊಟದ ಪ್ಯಾಕೆಟ್​ಗಳ ಮೇಲೆ ‘ಖುಷಿಯಾಗಿರಿ’ ಎಂದು ಬರೆದಿದ್ದಾನೆ. ಬಾಲಕ ಈ ರೀತಿ ಆಹಾರ ಪೊಟ್ಟಣಗಳ ಮೇಲೆ ಸಂದೇಶ ಬರೆಯುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ …

Read More »

ಹಂಪಿಯ 70ಕ್ಕೂ ಹೆಚ್ಚು ಖಾಸಗಿ ಗೈಡ್​​ಗಳಿಗೆ ಸಹಾಯ ಮಾಡಿದ ಮಾತೃ ಹೃದಯಿ ಡಾ.ಸುಧಾಮೂರ್ತಿ

ವಿಜಯನಗರ: ಈ ಕೊರೊನಾ ಬಂದಾಗಿನಿಂದ ಒಂದಲ್ಲ ಒಂದು ಸಮಸ್ಯೆ ಎಲ್ಲರನ್ನೂ ಕಾಡ್ತಿದೆ. ಯಾರನ್ನೂ ಬಿಡದ ಈ ಕೊರೊನಾದಿಂದಾಗಿ, ಅದೆಷ್ಟೋ ಜನರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಸಂಕಷ್ಟಕ್ಕೆ ಸಿಲುಕಿದವರಿಗೆ ಹಲವರು ನೆರವಿನ ಹಸ್ತವನ್ನೂ ಚಾಚಿದ್ದಾರೆ. ಅದರಲ್ಲಿ, ಸದಾ ಎಲ್ಲರ ಕಷ್ಟಗಳಿಗೆ ಸ್ಪಂದಿಸೋ ಮಾತೃ ಹೃದಯಿ ಡಾ.ಸುಧಾಮೂರ್ತಿ ಮಿಡಿದಿದ್ದಾರೆ. ಹಂಪಿ ಪ್ರವಾಸಿ ಗೈಡ್ಸ್‌ಗಳಿಗೆ ನೆರವಿನ ಸಹಾಯ ಹಸ್ತ ನೀಡಿದ್ದಾರೆ ಸುಧಾಮೂರ್ತಿ. ಕೊರೊನಾ ಹೊಡೆತಕ್ಕೆ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ …

Read More »

ಗ್ರಾಮಗಳಲ್ಲೇ ಕೊರೊನಾ ತಡೆಗೆ ಸ್ವಂತ ಟಫ್ ರೂಲ್ಸ್, ಊರನ್ನು ಕಾಪಾಡಿಕೊಳ್ಳಲು ಮುಂದಾದ ಜನ !

ಗದಗ: ರಾಜ್ಯದಲ್ಲೆಡೆ ಕೊರೊನಾ ಮಹಾಮಾರಿ ಅಟ್ಟಹಾಸ ಮೆರಿತಿದೆ. ಅದರಲ್ಲೂ ಕರ್ನಾಟಕದಲ್ಲಿ‌ ಆಗ್ತಿರೋ ಸಾವಿನ ಸಂಖ್ಯೆ ಭಾರತದ ಎರಡನೇ ಸ್ಥಾನದಲ್ಲಿದೆ. ನಗರದಲ್ಲಿ ವ್ಯಾಪಕವಾಗಿ ಹರಡಿದ್ದ ಕಣ್ಣಿಗೆ ಕಾಣದ ಮಾಯಾವಿ ಇದೀಗ ಹಳ್ಳಿ ಹಳ್ಳಿಗಳಿಗೂ ವ್ಯಾಪಿಸುತ್ತಿದೆ. ಅದಕ್ಕಂತಾನೆ‌ ಈ ಗ್ರಾಮದವರು ಮಾಡಿರೋ ಪ್ಲ್ಯಾನ್ ಏನು ಗೊತ್ತಾ. ಕೋವಿಡ್ ಎರಡನೇ ಅಲೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚಿಕ್ಕ ನರಗುಂದ ಗ್ರಾಮ ಪಂಚಾಯತಿ ಮುಂದಾಗಿದ್ದು, ಗ್ರಾಮದಲ್ಲಿ ಮಾಸ್ಕ್ ಹಾಕದೇ ತಿರುಗುವವರಿಗೆ 100 ರೂ, ದಂಡ, …

Read More »

ಒಂದೇ ತಾಂಡಾದ 100 ಜನರಿಗೆ ಕೊರೊನಾ.. 8 ಮಕ್ಕಳಿಗೂ ಪಾಸಿಟಿವ್

ಬಳ್ಳಾರಿ: ಜಿಲ್ಲೆಯ ಮಕ್ಕಳಲ್ಲೂ ಕೊರೊನಾ ವೈರಸ್ ಕಾಣಿಸಿಕೊಳ್ತಿದ್ದು.​. ವಿಜಯನಗರ ಜಿಲ್ಲೆಯ ಕೊಡ್ಲಗಿ ತಾಲೂಕಿನ ಶ್ರೀಕಂಠಪುರ ತಾಂಡಾದ 8 ಮಕ್ಕಳಲ್ಲಿ ಕೊರೊನಾ ಕಾಣಿಕೊಂಡಿದೆ. ಹೀಗಾಗಿ, ಇಡೀ ತಾಂಡಾದ ಜನರಿಗೆ ಆತಂಕ ಶುರುವಾಗಿದೆ. 8 ರಿಂದ 15 ವರ್ಷದೊಳಗಿನ ಎಂಟು ಮಕ್ಕಳಿಗೆ ಕೋವಿಡ್ ವೈರಸ್ ಧೃಡಪಟ್ಟಿದ್ದು, ಎಲ್ಲರು ಭಯದ ವಾತಾವರಣದಲ್ಲಿದ್ದಾರೆ. ಕಳೆದ ಮಂಗಳವಾರವಷ್ಟೇ ಅರ್‌ಟಿ‍ಪಿಸಿಆರ್ ಟೆಸ್ಟ್ ನಡೆದಿತ್ತು, ಈ ಪೈಕಿ 8 ಮಕ್ಕಳಲ್ಲಿ ಕೊರೊನಾ ದೃಢ ಪಟ್ಟಿತ್ತು. ಇಂದು ಕೂಡ 20 ಪಾಸಿಟಿವ್​ …

Read More »

ಸಿಂಗಾಪುರ, ಯುಎಇಯಲ್ಲಿ 12-15 ವರ್ಷದ ಮಕ್ಕಳಿಗೂ ಕೊರೋನಾ ಲಸಿಕೆ : ಭಾರತದಲ್ಲಿ ಯಾವಾಗ?

ನವದೆಹಲಿ : ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದ ನಂತರ, ಸಿಂಗಾಪುರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ 12-15 ವಯೋಮಾನದ ತುರ್ತು ಬಳಕೆಗಾಗಿ ಫೈಜರ್-ಬಯೋಎನ್ ಟೆಕ್ ಕೋವಿಡ್-19 ಲಸಿಕೆಯನ್ನು ಅನುಮೋದಿಸಿವೆ. ಯುರೋಪಿಯನ್ ವೈದ್ಯಕೀಯ ಏಜೆನ್ಸಿಯು ಮಕ್ಕಳಲ್ಲಿ ಫೈಜರ್ ಲಸಿಕೆಯ ಬಳಕೆಯನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದೆ. ಕೊರೊನಾ ವೈರಸ್ ನ ಹೆಚ್ಚು ಟ್ರಾನ್ಸ್ ಮಿಸಿಬಲ್ ರೂಪಾಂತರಗಳು ಹೊರಹೊಮ್ಮುತ್ತಿರುವುದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೆಲವು ದೇಶಗಳು ಮಕ್ಕಳಲ್ಲಿ ಹೆಚ್ಚಿನ ಸೋಂಕುಗಳನ್ನು ನೋಡುತ್ತಿರುವ ನಡುವೆ …

Read More »

ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಇಳಿಕೆ: ಮೂರನೇ ಅಲೆ ಎದುರಿಸಲು ಸಿದ್ಧತೆ

ದೆಹಲಿ, ಮೇ 20: ಕಳೆದ ನಾಲ್ಕು ವಾರಗಳ ಹಿಂದೆ ದೇಶದ ರಾಜಧಾನಿ ದೆಹಲಿ ಕೊರೊನಾ ವೈರಸ್‌ನಿಂದ ತತ್ತರಿಸಿಹೋಗಿತ್ತು. ಎರಡನೇ ಅಲೆ ದೇಶಾದ್ಯಂತ ದೊಡ್ಡ ಆಘಾತವನ್ನು ನೀಡುತ್ತಿರುವಂತೆಯೇ ದೆಹಲಿ ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್, ಬೆಡ್ ಸಮಸ್ಯೆಗಳು ಭಾರೀ ಪ್ರಮಾಣದಲ್ಲಿ ತಲೆದೂರಿತ್ತು. ಆದರೆ ಸದ್ಯ ಕೊರೊನಾ ವೈರಸ್‌ ಪ್ರಕರಣಗಳು ದೆಹಲಿಯಲ್ಲಿ ಕಡಿಮೆಯಾಗುತ್ತಿದೆ. ಹೀಗಾಗಿ ದೆಹಲಿ ಸರ್ಕಾರ ಮೂರನೇ ಅಲೆ ಎದುರಿಸಲು ಸಿದ್ಧತೆಗಳನ್ನು ಆರಂಭಿಸಿದೆ. ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೂರನೇ ಅಲೆ ಎದುರಿಸಲು …

Read More »