Breaking News

ರಾಜ್ಯ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಶಂಕಿತ ಅಭ್ಯರ್ಥಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಭಾಗಿಯಾಗಿರುವ ಅಶ್ಲೀಲ ಸಿಡಿ ಪ್ರಕರಣದ ಶಂಕಿತ ಆರೋಪಿಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸಿಟಿ ಸಿವಿಲ್ ಕೋರ್ಟ್​ ಜೂನ್ 2ಕ್ಕೆ ಮುಂದೂಡಿದೆ. ಈ ಸಂಬಂಧ ಸಿಟಿ ಸಿವಿಲ್ ಕೋರ್ಟ್​ನ 91ನೇ ಕೋರ್ಟ್​ ಆದೇಶ ನೀಡಿದೆ. ಬ್ಲಾಕ್​ಮೇಲ್ ಸಂಬಂಧ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳಾದ ನರೇಶ್​ ಗೌಡ ಮತ್ತು ಶ್ರವಣ್ ಈ ಸಂಬಂಧ​ ನ್ಯಾಯಾಲಯದ …

Read More »

ಧಾರವಾಡ ರೈತರ ಜಮೀನಿಗೆ​ ಭೇಟಿ, ಹೊಲದಲ್ಲಿ ಕುಳಿತು ಸಮಸ್ಯೆ ಆಲಿಸಿದ ಡಿಕೆ ಶಿವಕುಮಾರ್​

ಧಾರವಾಡ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಧಾರವಾಡ ತಾಲೂಕಿನ ರಾಯಪುರ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ರೈತರ ಸದ್ಯದ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ರು. ಅನ್ನದಾತರ ಜೊತೆ ಹೊಲದಲ್ಲಿಯೇ ಕುಳಿತು ಅವರ ಸಮಸ್ಯೆಗಳನ್ನ ಆಲಿಸಿದರು. ಸದ್ಯ ಬಿತ್ತನೆ ಕಾರ್ಯ ಆರಂಭವಾಗಿದೆ. ಆದ್ರೆ ನಮಗೆ ಬೇಕಾದ ಬೀಜ ಸಿಗುತ್ತಿಲ್ಲ ಎಂದು ರೈತರು ಹೇಳಿದರು. 5 ಎಕರೆ ಮೇಲೆ ಎಷ್ಟೇ ಜಮೀನು ಇದ್ದರೂ ಸಹ ಸರ್ಕಾರ ಕೇವಲ …

Read More »

ವೃದ್ಧಾಪ್ಯ ವೇತನ ಪಡೆಯುವುದಕ್ಕೆ ಗದಗದಲ್ಲಿ ಅಜ್ಜಿ ಪರದಾಟ; ವಾಪಸ್ ಊರಿಗೆ ಕಳುಹಿಸಿದ ಪೊಲೀಸರು

ಗದಗ: ಕೊರೊನಾ ನಿಯಂತ್ರಿಸಲು ಲಾಕ್​ಡೌನ್​ ಜಾರಿಯಾದ ಕಾರಣ ಬಸ್ಗಳ ಓಡಾಡ ಸಂಪೂರ್ಣವಾಗಿ ನಿಂತಿದೆ. ಹೀಗಾಗಿ ವೃದ್ಧಾಪ್ಯ ವೇತನ ಪಡೆಯುವುದಕ್ಕೆ ಅಜ್ಜಿಯೊಬ್ಬರು ಪರದಾಟ ಪಟ್ಟಿದ್ದಾರೆ. ವೃದ್ಧಾಪ್ಯ ವೇತನ ಪಡೆಯಲು ಅಂಚೆ ಕಚೇರಿಗೆ ಬರುವಂತೆ ವೃದ್ಧೆಗೆ ತಿಳಿಸಿದ್ದರು. ಹೀಗಾಗಿ ಅಜ್ಜಿ ಅಂಚೆ ಕಚೇರಿಗೆ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ಪೊಲೀಸರು ಅಜ್ಜಿಯನ್ನು ತಡೆದು ಪ್ರಶ್ನೆ ಮಾಡಿದ್ದಾರೆ. ವೃದ್ಧಾಪ್ಯ ವೇತನ ಪಡೆಯಲು ಎರಡು ಕಿಲೋಮೀಟರ್ ನಡೆದುಕೊಂಡ ಬಂದ ಭಜಂತ್ರಿ ನಗರದ …

Read More »

ಮಗನ ಔಷಧಿಗೆ 280 ಕಿಲೋಮೀಟರ್ ಸೈಕಲ್ ತುಳಿದ ಅಪ್ಪ

ಮೈಸೂರು : ಮಗನಿಗೆ ಔಷಧಿ ತರಲು ಸುಮಾರು 280 ಕಿಲೋಮೀಟರ್ ವರೆಗೆ ತಂದೆ ಸೈಕಲ್ ತುಳಿದಿರುವ ಮನ ಕಲಕುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಗಾರೆ ಕೆಲಸ ಮಾಡುತ್ತಿರುವ ಜಿಲ್ಲೆಯ ಗಾಣಿಗನಕೊಪ್ಪಲು ಗ್ರಾಮದ ನಿವಾಸಿ ಆನಂದ್ ಎಂಬುವವರು ತನ್ನ ಮಗನಿಗೆ ಔಷಧಿ ತರಲು ಸೈಕಲ್ ನಲ್ಲಿ ಸುಮಾರು 280 ಕಿಲೋಮೀಟರ್ ಹೋಗಿದ್ದಾರೆ. ಮಾನಸಿಕ ವಿಶೇಷ ಚೇತನ ಮಗನಿಗೆ 10 ವರ್ಷಗಳಿಂದ ಮಾತ್ರೆ ಕೊಡಿಸಲಾಗುತ್ತಿದೆ. ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. …

Read More »

71 ಶವಗಳನ್ನು ಗಂಗಾ ನದಿಯಿಂದ ಶಪಡಿಸಿಕೊಂಡು ಅಂತ್ಯಸಂಸ್ಕಾರ

ಬಲರಾಂಪುರ್: ಉತ್ತರಪ್ರದೇಶದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ನದಿಗೆ ಎಸೆಯುವ ಆಘಾತಕಾರಿ ವಿಡಿಯೋ ಬಯಲಾಗಿದೆ. ಗಂಗಾ ನದಿ ತೀರದಲ್ಲಿ ಆಳವಿಲ್ಲದ ಸಮಾಧಿಗಳಲ್ಲಿ ಸಾವಿರಾರು ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಕೆಲವು ಮೃತದೇಹಗಳನ್ನು ನದಿಗೆ ಎಸೆಯಲಾಗಿದೆ ಎಂದು ಕೆಲವು ವಾರಗಳ ಹಿಂದೆ ವಿಶ್ವದಾದ್ಯಂತ ಸುದ್ದಿಯಾಗಿತ್ತು. ನದಿಗಳಲ್ಲಿ ಮೃತದೇಹಗಳನ್ನು ಎಸೆಯದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಉತ್ತರದ ಅನೇಕ ರಾಜ್ಯಗಳಿಗೆ ಆದೇಶಿಸಿದೆ. ಇಂತಹ ಘಟನೆ ಮರುಕಳಿಸದಂತೆ ನದಿ ತೀರಗಳಲ್ಲಿ ಗಸ್ತು ಹೆಚ್ಚಿಸುವಂತೆ ಕೇಂದ್ರದಿಂದ …

Read More »

ಹತ್ತು ವರ್ಷಗಳ ಬಳಿಕ ಮನೆಗೆ ಮರಳಿ ಬಂದ ಮಗ – ಕುಟುಂಬಸ್ಥರ ಸಂತೋಷ

ಕೊಪ್ಪಳ: ಹತ್ತು ವರ್ಷಗಳ ಮಗ ಬಳಿಕ ಜುಮಲಾಪೂರ ಗ್ರಾಮದ ಯುವಕನೊಬ್ಬ ಮರಳಿ ಮನೆಗೆ ಬಂದಿರುವ ಘಟನೆ ನಡೆದಿದ್ದು, ಕುಟುಂಬದವರೆಲ್ಲ ಸಂತಸ ಪಟ್ಟಿದ್ದಾರೆ. ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಗುರುಬಸಪ್ಪ ಹಾಗೂ ಪಾರ್ವತಮ್ಮ ದಂಪತಿಯ ಪುತ್ರ ದೇವರಾಜ (30) ಹತ್ತು ವರ್ಷದ ನಂತರ ಮರಳಿ ಮನೆಗೆ ಬಂದಿದ್ದಾನೆ. ಬಾಲ್ಯದಲ್ಲಿ ತಂದೆ, ತಾಯಿ ಜೊತೆ ವಾಗ್ವಾದ ಮಾಡಿಕೊಂಡು ಊರು ಬಿಟ್ಟು ತೆರಳಿದ್ದು, ಇದೀಗ ಕೊರೊನಾದಿಂದಾಗಿ ಕಂಪೆನಿಗಳು ಮುಚ್ಚಿರುವ ಕಾರಣ ತಮ್ಮ ಸ್ನೇಹಿತರ ಸಹಾಯದಿಂದ …

Read More »

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ 35 ಗ್ರಾಂ ಚಿನ್ನವನ್ನೇ ನುಂಗಿರುವ ಘಟನೆ.

ಮಂಗಳೂರು, ಮೇ 31: ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ 35 ಗ್ರಾಂ ಚಿನ್ನವನ್ನೇ ನುಂಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ಶಿಬು ಎಂಬುವವನ್ನೇ ಚಿನ್ನ ನುಂಗಿರುವ ಆರೋಪಿ. ಜುವೆಲ್ಲರಿ ಶಾಪ್‌ನಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಬರೋಬ್ಬರಿ 35 ಗ್ರಾಂ ಚಿನ್ನವನ್ನು ಶಿಬು ನುಂಗಿ ಎಲ್ಲರೂ ದಂಗಾಗುವಂತೆ ಮಾಡಿದ್ದಾನೆ. ಸುಳ್ಯದ ಜುವೆಲ್ಲರಿ ಅಂಗಡಿಯೊಂದರಲ್ಲಿ ಮಾರ್ಚ್ 31ರಂದು …

Read More »

1 -10 ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಅಕ್ಕಿ, ಗೋಧಿ, ಬೇಳೆ, ಎಣ್ಣೆ ವಿತರಣೆ

ಬೆಂಗಳೂರು: ಒಂದರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅಕ್ಕಿ, ಬೇಳೆ, ಗೋಧಿ, ಉಪ್ಪು ಹಾಗೂ ಸೂರ್ಯಕಾಂತಿ ಎಣ್ಣೆಯನ್ನು ನೀಡಲಾಗುವುದು. 2020ರ ನವೆಂಬರ್ ನಿಂದ 2021 ರ ಏಪ್ರಿಲ್ ವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಬದಲಿಗೆ ಆಹಾರಧಾನ್ಯ ಬಿಡುಗಡೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಮಕ್ಕಳಿಗೆ ಆಹಾರಧಾನ್ಯಗಳನ್ನು ವಿತರಣೆ ಮಾಡುವಂತೆ ಶಾಲೆಗಳ ಮುಖ್ಯಸ್ಥರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು …

Read More »

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಕುಚ್ಚಲಕ್ಕಿ ನೀಡಲು ಚಿಂತನೆ -ಕರಾವಳಿ ಜಿಲ್ಲೆಗಳಲ್ಲಿ ಬೇಡಿಕೆಯಂತೆ ವಿತರಣೆ

ಬೆಂಗಳೂರು: ಪಡಿತರ ಚೀಟಿ ಹೊಂದಿದವರಿಗೆ ಅಕ್ಕಿ ಜೊತೆಗೆ ರಾಗಿ ಮತ್ತು ಜೋಳ ವಿತರಿಸಲಾಗುತ್ತಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಪರಿತರ ಚೀಟಿದಾರರಿಗೆ ಅಕ್ಕಿ ಜೊತೆಗೆ ರಾಗಿ ಹಾಗೂ ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆ ಜೋಳ ನೀಡಲಾಗುತ್ತಿದೆ. ಅದೇ ರೀತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಬಳಕೆಯಲ್ಲಿರುವ ಕುಚ್ಚಲಕ್ಕಿ ವಿತರಿಸಬೇಕೆಂಬ ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. …

Read More »

ಜೂನ್ 13ರವರೆಗೂ ರಾಜ್ಯದಲ್ಲಿ ‘ಲಾಕ್’ ಮುಂದುವರಿಕೆ.? ಸಮಿತಿ ನೀಡಿದ ವರದಿ ಬಗ್ಗೆ ಆರೋಗ್ಯ ಸಚಿವರ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿ ಲಾಕ್ ಡೌನ್ ಜೂನ್ 13ರವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಲು ಜೂನ್ 7ರ ಬಳಿಕ ಇನ್ನೂ ಒಂದು ವಾರಗಳ ಕಾಲ ಕಠಿಣ ಲಾಕ್ ಡೌನ್ ಉತ್ತಮ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿ ತಿಳಿಸಿದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇನ್ನೂ …

Read More »