ಝಾಂಗ್ ಹೋಂಗ್ ಎಂಬ 46 ವರ್ಷ ವಯಸ್ಸಿನ ಅಂಧ ವ್ಯಕ್ತಿ ಮೌಂಟ್ ಎವರೆಸ್ಟ್ ಪರ್ವತ ಏರಿದ್ದಾರೆ. ಚೀನಾ ಮೂಲದ ಇವರು ನೇಪಾಳ ಕಡೆಯಿಂದ ಪರ್ವತ ಹತ್ತಿ ದಾಖಲೆ ಬರೆದಿದ್ದಾರೆ. ಇಡೀ ಏಷ್ಯಾದಲ್ಲೇ ಮೌಂಟ್ ಎವರೆಸ್ಟ್ ಏರಿದ ಮೊದಲ ಅಂಧ ಅನ್ನೋ ಬಿರುದು ಪಡೆದಿದ್ದು, ವಿಶ್ವದಲ್ಲಿ ಮೌಂಟ್ ಎವರೆಸ್ಟ್ ಏರಿದ 3ನೇ ಅಂಧ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಝಾಂಗ್ ಹೋಂಗ್, ಗಟ್ಟಿ ಮನಸ್ಸೊಂದಿದ್ರೆ ನಿನ್ ಕೈಲಿ ಆಗಲ್ಲ ಅನ್ನೋ ವಿಚಾರವನ್ನು …
Read More »ಪತಿಯನ್ನು ಹೋಮಕುಂಡದಲ್ಲಿ ಹಾಕಿ ಕೊಲೆ ಮಾಡಿದ್ದ ಪತ್ನಿ; ಬೆಚ್ಚಿಬೀಳಿಸಿದ್ದ ಹತ್ಯೆ ಪ್ರಕರಣದ ತೀರ್ಪು ಮುಂದೂಡಿಕೆ
ಉಡುಪಿ: ಪುತ್ರ ಹಾಗೂ ಪ್ರಿಯಕರನ ಜೊತೆಗೂಡಿ ಪತಿಯನ್ನು ಹೋಮಕುಂಡದಲ್ಲಿ ಹಾಕಿ ಸುಟ್ಟು ಕೊಲೆ ಮಾಡಿದ್ದ ಪ್ರಕರಣ ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನ್ಯಾಯಾಲಯ ಮುಂದೂಡಿದ್ದು, ಸದ್ಯದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆ ಇರುವುದರಿಂದ ಕುತೂಹಲ ಮೂಡಿಸಿದೆ. ಅನಿವಾಸಿ ಉದ್ಯಮಿ ಭಾಸ್ಕರ ಶೆಟ್ಟಿಯನ್ನು ಕೊಲೆ ಮಾಡಿದ್ದ ಪತ್ನಿ ರಾಜೇಶ್ವರಿ ಶೆಟ್ಟಿ, ಪ್ರಿಯಕರ ನಿರಂಜನ್ ಭಟ್, ಪುತ್ರ ನವನೀತ್ ಶೆಟ್ಟಿ ಪ್ರಮುಖ ಆರೋಪಿಗಳು. 2016ರ ಜುಲೈ ತಿಂಗಳಲ್ಲಿ ಈ …
Read More »ಸಚಿವ ಪ್ರಭು ಚವ್ಹಾಣ್ ವಿತರಿಸುತ್ತಿರುವ ಆಹಾರ ತಿನ್ನಲಿಕ್ಕೆ ಬಾರದಂತಿದೆ: ಅಲೆಮಾರಿ ಜನಾಂಗದ ಮಹಿಳೆಯರ ಆರೋಪ
ಬೀದರ್, ಮೇ 31: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ವಿತರಿಸುತ್ತಿರುವ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಅಲೆಮಾರಿ ಜನಾಂಗದ ಮಹಿಳೆಯರು ಆರೋಪಿಸಿದ್ದಾರೆ. ಔರಾದ ಪಟ್ಟಣದ ಹೊರವಲಯದಲ್ಲಿರುವ ಅಲೆಮಾರಿ ಜನಾಂಗದವರು ವಾಸಿಸುವ ಗುಡಿಸಲುಗಳಿಗೆ ಕೆಲವು ಸಂಘಟನೆಯ ಪದಾಧಿಕಾರಿಗಳು ಹೋಗಿ ತಮ್ಮ ವತಿಯಿಂದ ಉಚಿತವಾಗಿ ಆಹಾರಗಳನ್ನು ಹಂಚುವ ಸಂದರ್ಭದಲ್ಲಿ ಅಲೆಮಾರಿ ಜನಾಂಗದ ಮಹಿಳೆಯರು, ನಿಮ್ಮ ಆಹಾರ ಚೆನ್ನಾಗಿದೆ, …
Read More »ಲಾಕ್ ಡೌನ್ ಇದ್ದಷ್ಟು ದಿನ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿ!
ವಿಜಯಪುರ, ಮೇ 31: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ವಿರುದ್ದ ಕಿಡಿಕಾರುವಲ್ಲಿ ವಿರೋಧ ಪಕ್ಷದವರೂ ನಾಚಿಸುವಂತೆ ಮಂಚೂಣಿಯಲ್ಲಿ ಬರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ವಿರುದ್ದ ಗುಡುಗಿದ್ದಾರೆ. ಈಗಿರುವ ಲಾಕ್ ಡೌನ್ ಎಲ್ಲಾ ವೇಸ್ಟ್, ಜೂನ್ ಏಳರ ನಂತರ ಲಾಕ್ ಡೌನ್ ವಿಸ್ತರಿಸಬಾರದು ಎಂದು ಅಭಿಪ್ರಾಯ ಪಟ್ಟಿರುವ ಯತ್ನಾಳ್, ಲಾಕ್ ಡೌನ್ ಇದ್ದರೆ ಮಾತ್ರ ಯಡಿಯೂರಪ್ಪನವರ ಸಿಎಂ ಕುರ್ಚಿ ಭದ್ರ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. …
Read More »ಸಿಎಂ ಬದಲಾವಣೆ ವಿಚಾರಗಳು ಏಕೆ ಹುಟ್ಟಿಕೊಳ್ಳುತ್ತಿವೆಯೋ ನನಗೆ ಗೊತ್ತಾಗುತ್ತಿಲ್ಲ ; ಜಗದೀಶ ಶೆಟ್ಟರ್
ಧಾರವಾಡ: ಸಿಎಂ ಬದಲಾವಣೆ ವಿಚಾರವಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಜಾಣತನದ ಉತ್ತರ ನೀಡಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಾಕಾರಣದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆಗಾಗ ಸಿಎಂ ಬದಲಾವಣೆ ವಿಚಾರಗಳು ಏಕೆ ಹುಟ್ಟಿಕೊಳ್ಳುತ್ತಿವೆಯೋ ನನಗೆ ಗೊತ್ತಾಗುತ್ತಿಲ್ಲ. ರೇಣುಕಾಚಾರ್ಯ ಅವರ ಸಹಿ ಸಂಗ್ರಹದ ವಿಚಾರ ನನಗೆ ಗೊತ್ತಿಲ್ಲ. ಈ ಎಲ್ಲ ವಿಚಾರವಾಗಿ ಯಾವ ವೇದಿಕೆಯಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ. ಇದು ವೇದಿಕೆಯಲ್ಲ ಎಂಬ ಉತ್ತರ …
Read More »ಸಚಿವ ಪ್ರಭು ಚವ್ಹಾಣ್ ವಿರುದ್ಧ ಕಳಪೆ ಗುಣಮಟ್ಟದ ಆಹಾರ ವಿತರಣೆ ಆರೋಪ
ಬೀದರ್, ಮೇ 31: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ವಿತರಿಸುತ್ತಿರುವ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ. ಆಹಾರವನ್ನು ಮಕ್ಕಳು ಮುಟ್ಟುತ್ತಿಲ್ಲ, ನಾವು ಸಹ ತಿನ್ನುತ್ತಿಲ್ಲ. ಅದು ತಿನ್ನುವುದಕ್ಕೆ ಬಾರದಂತಿದೆ ಎಂಬ ಔರಾದ್ ಪಟ್ಟಣದ ಅಲೆಮಾರಿ ಜನಾಂಗದ ಮಹಿಳೆಯರು ಆರೋಪಿಸಿದ್ದಾರೆ. ಔರಾದ ಪಟ್ಟಣದ ಹೊರವಲಯದಲ್ಲಿರುವ ಅಲೆಮಾರಿ ಜನಾಂಗದವರು ವಾಸಿಸುವ ಗುಡಿಸಲುಗಳಿಗೆ ಕೆಲವು ಸಂಘಟನೆಯ ಪದಾಧಿಕಾರಿಗಳು ಹೋಗಿ ತಮ್ಮ ವತಿಯಿಂದ ಉಚಿತವಾಗಿ ಆಹಾರಗಳನ್ನು ಹಂಚುವ ಸಂದರ್ಭದಲ್ಲಿ …
Read More »ಮಗಳು ವಮಿಕಾ ಹೆಸರಿನ ಅರ್ಥ ಹೇಳಿದ ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿಗೆ ಹೆಣ್ಣು ಜನಿಸಿದ ಎಂದು ತಿಳಿದಾಗ ಮಗುವಿಗೆ ಏನೆಂದು ಹೆಸರಿಡಬಹುದು ಎನ್ನುವ ದೊಡ್ಡ ಚರ್ಚೆಯೇ ನಡೆದಿತ್ತು. ಕುತೂಹಲದ ನಡುವೆ ಮಗಳಿಗೆ ‘ವಮಿಕಾ’ ಎಂದು ನಾಮಕರಣ ಮಾಡಿದ್ದರು ತಾರಾ ದಂಪತಿ. ವಮಿಕಾ ಎಂದು ಹೆಸರಿನ ಒಳ ಅರ್ಥವೇನು? ಯಾವ ಕಾರಣದಿಂದ ಮಗಳಿಗೆ ಅನುಷ್ಕಾ-ಕೊಹ್ಲಿ ದಂಪತಿ ಈ ಹೆಸರಿಟ್ಟರು ಎನ್ನುವುದು ಅಷ್ಟೇ ಚರ್ಚೆಯಾಗಿತ್ತು. ವಿರಾಟ್ ಹೆಸರಿನಿಂದ ‘ವ’, ಅನುಷ್ಕಾ ಹೆಸರಿನಿಂದ ‘ಕಾ’ ಒಳಗೊಂಡು ವಮಿಕಾ ಆಗಿದೆ …
Read More »ಹಾಲು ಸಾಗಿಸುವ ಗುತ್ತಿಗೆ ಪಡೆದಿರುವವರಿಂದಲೇ ಹಾಲಿಗೆ ನೀರು ಮಿಕ್ಸ್! ಮಂಡ್ಯದಲ್ಲಿ ಬೆಳಕಿಗೆ ಬಂತು ಭಾರೀ ಗೋಲ್ಮಾಲ್
ಮಂಡ್ಯ: ಹಾಲಿಗೆ ನೀರು ಮಿಶ್ರಣ ಮಾಡಿ ವಂಚಿಸುತ್ತಿದ್ದ ಜಾಲ ಪತ್ತೆಯಾಗಿದ್ದು ಜಿಲ್ಲಾದ್ಯಂತ ಸಂಚಲನ ಸೃಷ್ಟಿಸಿದೆ. ಹಾಲು ಸಾಗಿಸುವ ಗುತ್ತಿಗೆ ಪಡೆದಿರುವವರಿಂದಲೇ ನಿತ್ಯ ಸಾವಿರಾರು ಲೀಟರ್ ಹಾಲಿಗೆ ನೀರು ಮಿಶ್ರಣ ಮಾಡಿ ಸಾಗಿಸುತ್ತಿದ್ದ ಜಾಲವೊಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಸಿಕ್ಕಿಬಿದ್ದಿದೆ. ಶಿಥಿಲೀಕರಣ ಕೇಂದ್ರಗಳಿಂದ ಒಕ್ಕೂಟಕ್ಕೆ ಸಾಗಿಸುವ ಹಾಲಿಗೆ ನೀರು ಮಿಶ್ರಣ ಮಾಡಿ ವಂಚಿಸಲಾಗುತ್ತಿದ್ದು, ಹಾಲಿನ ಪರೀಕ್ಷೆ ಮುಗಿದ ಬಳಿಕ ನೀರು ಮಿಶ್ರಣವಾಗುತ್ತಿತ್ತು ಎಂದು ಹೇಳಲಾಗಿದೆ. ನೀರು ಮಿಶ್ರಿತ ಹಾಲು …
Read More »ಸೆಖೆಯಾಗ್ತಿದೆ ಎಂದು ಮನೆಯ ಹೊರಗೆ ಹೋದವ ಶವವಾಗಿ ಪತ್ತೆ! ಬೆಚ್ಚಿಬೀಳಿಸುತ್ತೆ ನಿನ್ನೆ ರಾತ್ರಿಯ ಘಟನೆ
ರಾಯಚೂರು: ಮದುವೆ ಮಾಡಿಕೊಳ್ಳಲೆಂದು ಆತ ಹೆಣ್ಣು ಹುಡುಕುತಿದ್ದ. ಎರಡು ದಿನದ ಹಿಂದೆ ಮಾರಮ್ಮ ದೇವಿಗೆ ಪೂಜೆಯನ್ನೂ ಮಾಡಿಸಿದ್ದ. ಯಾವುದೇ ಅಡ್ಡಿ-ಆತಂಕವಿಲ್ಲದೆ ಮಗನಿಗೆ ಒಳ್ಳೆಯ ಜೀವನ ಸಿಗಲೆಂದು ಆತನ ತಾಯಿಯೂ ದೇವರಲ್ಲಿ ಬೇಡಿಕೊಂಡಿದ್ದರು. ಆದರೆ, ನಿನ್ನೆ ರಾತ್ರಿ ಆ ಯುವಕ ದುರಂತ ಅಂತ್ಯಕಂಡಿದ್ದಾನೆ. ರಾಯಚೂರು ತಾಲೂಕಿನ ಮರ್ಚಡ್ ಗ್ರಾಮದ ತಾಯಪ್ಪ(26) ಮೃತ ದುರ್ದೈವಿ. ನಿನ್ನೆ ರಾತ್ರಿ ವಿದ್ಯುತ್ ಇಲ್ಲದ ಕಾರಣಕ್ಕೆ ಸೆಖೆಯೆಂದು ಮನೆಯ ಹೊರಗೆ ಮಲಗುವುದಾಗಿ ಹೋಗಿದ್ದ. ದೇವಸ್ಥಾನದ ಬಳಿ ಕೆಲ …
Read More »ಉದ್ಯೋಗ ಖಾತ್ರಿ ಯೋಜನೆಯಿಂದ ವಂಚಿತರಾದ ಆಶ್ರಯ ಮನೆಯ ಜನ; ಕೆಲಸವಿಲ್ಲದೆ ಗ್ರಾಮಸ್ಥರ ಪರದಾಟ
ಬೀದರ್: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಆದರೆ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಇನ್ನಿತರ ದಿನಗೂಲಿಕಾರರು ನಿತ್ಯ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ಸಾವಿರಾರು ಜನರಿಗೆ ಕೆಲಸ ಕೊಟ್ಟಿದೆ. ಆದರೆ ಬೀದರ್ ಜಿಲ್ಲೆಯ ಆಶ್ರಯ ಮನೆಯಲ್ಲಿ ವಾಸ ಮಾಡುವ ನೂರಾರು ಕುಟುಂಬಗಳು ಈ ಯೋಜನೆಯಿಂದ ದೂರ ಉಳಿದಿದ್ದು, ಕೆಲಸ ವಿಲ್ಲದೇ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. …
Read More »
Laxmi News 24×7