Breaking News

ರಾಜ್ಯ

ಐಪಿಎಸ್​ ಅಧಿಕಾರಿ ಚನ್ನಣ್ಣನವರ್ ನನ್ನಣ್ಣ ಎಂದು ಭಕ್ತರಿಂದ ಲಕ್ಷ ಲಕ್ಷ ಲಪಟಾಯಿಸಿ ಎಸ್ಕೇಪ್​ ಆದ ಅರ್ಚಕ!

ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ನನ್ನ ಅಣ್ಣ, ಬೇಕಿದ್ದರೆ ಈ ಫೋಟೋ ನೋಡಿ. ನಾನು ಪ್ರಭಾವಿ ವ್ಯಕ್ತಿ. ಆಶ್ರಯ ಯೋಜನೆ ಅಡಿ ಮನೆ ಬೇಕಿದ್ದರೆ ಇಷ್ಟು ಲಕ್ಷ ರೂಪಾಯಿ ಕೊಡಿ, ಅಣ್ಣನ ಇನ್​ಫ್ಲುಯೆನ್ಸ್​ ಬಳಸಿ ಮನೆ ಕೊಡಿಸುವೆ ಎಂದ ಅರ್ಚಕನೊಬ್ಬ ದೇವಾಲಯಕ್ಕೆ ಬರುವ ಭಕ್ತರಿಗೆ ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉತ್ತರಹಳ್ಳಿಯ ಅರ್ಚಕ ಮಹಾಬಲ ಅಲಿಯಾಸ್ ಮಂಜನಾಥ್ ವಂಚನೆ ಮಾಡಿದ ಆರೋಪಿ. ಉತ್ತರಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ …

Read More »

ಹಳಿ ಮೇಲೆ ಮುಂಡ, ಲಾರಿಯಲ್ಲಿ ರುಂಡ ಪತ್ತೆಯಾದ ಪ್ರಕರಣ: ಚಾಲಕ ಬಂಧನ

ಬೆಂಗಳೂರು: ರೈಲ್ವೆ ಹಳಿಯ ಮೇಲೆ ವೃದ್ಧೆಯ ಮೃತದೇಹ ಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ತನಿಖೆಯ ವೇಳೆ ವೃದ್ಧೆಯನ್ನು ಕೊಲೆ ಮಾಡಿ ಮೃತ ದೇಹವನ್ನು ರೈಲ್ವೆ ಟ್ರಾಕ್ ಮೇಲೆ ಹಾಕಿರುವುದು ಬೆಳಕಿಗೆ ಬಂದಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಬಾಲಚಂದ್ರನನ್ನು ಸದ್ಯ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಕೊಲೆ ಮಾಡಲು ಬಾಲಚಂದ್ರನಿಗೆ ಸಹಕರಿಸಿದ ಆರೋಪಿ ಲತಾ ಪರಾರಿಯಾಗಿದ್ದು, ಆಕೆಗಾಗಿ ಶೋಧಕಾರ್ಯ ನಡೆಯುತ್ತಿದೆ. ಮಂಡ್ಯದ ನಿಂಗಮ್ಮನನ್ನು ಬಾಲಚಂದ್ರ ಮತ್ತು …

Read More »

ಸಬ್‌ ಇನ್ಸ್‌ಪೆಕ್ಟರ್‌ ವಿರುದ್ದ ಅತ್ಯಾಚಾರ ಮೊಕದ್ದಮೆ

ಮೈಸೂರು: ರೌಡಿಶೀಟರ್ ಹಾಗೂ ಸ್ನೇಹಿತರೊಡನೆ ಹಾರಂಗಿ ಜಲಾಶಯದ ಗೆಸ್ಟ್ ಹೌಸ್‌ನಲ್ಲಿ ಪಾರ್ಟಿ ಮಾಡಿ ಅಮಾನತು ಶಿಕ್ಷೆಗೊಳಗಾಗಿದ್ದ ಸಬ್ ಇನ್ಸ್‌ಪೆಕ್ಟರ್ ಪಿ.ಲೋಕೇಶ್ ಮೇಲೆ ಇದೀಗ ಅತ್ಯಾಚಾರದ ಆರೋಪ ಎದುರಾಗಿದೆ. ಯುವತಿಯನ್ನು ಪರಿಚಯ ಮಾಡಿಕೊಂಡ ಲೋಕೇಶ್, ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ವಂಚಿಸಿರುವ ಸಂಬಂಧ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಗಾಯತ್ರಿಪುರಂ ನಿವಾಸಿಯಾದ ಯುವತಿ ಲೋಕೇಶ್ ವಿರುದ್ಧ ಜುಲೈ 16 ರಂದು ದೂರು ದಾಖಲಿಸಿದ್ದಾರೆ. ದೂರು ದಾಖಲಾದಾಗಿನಿಂದ ಲೋಕೇಶ್ ತಲೆಮರೆಸಿಕೊಂಡಿದ್ದಾರೆ …

Read More »

ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳಿಗೆ ಪರವಾನಗಿ ನೀಡದಂತೆ ಸುಪ್ರೀಂಕೋರ್ಟ್​ ಆದೇಶ

ನವದೆಹಲಿ: ದೇಶಾದ್ಯಂತ ಕುಡಿದು ವಾಹನ ಚಲಾಯಿಸಿ ಅಪಘಾತಗಳು ಹೆಚ್ಚಾಗುತ್ತಿರುವ ಕಾರಣ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಇನ್ಮುಂದೆ ಹೊಸದಾಗಿ ಮದ್ಯದಂಗಡಿ ಓಪನ್ ಮಾಡಿ ಮದ್ಯ ಮಾರಾಟ ಮಾಡಲು ಪರವಾನಿಗಿ ನೀಡದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಇದು ಅನ್ವಯವಾಗಲಿದೆ. ಹೆದ್ದಾರಿಗಳಿಂದ 500 ಮೀಟರ್​ ಅಂತರದೊಳಗೆ ಯಾವುದೇ ರೀತಿಯ ಮದ್ಯದಂಗಡಿಗಳು ಇರುವಂತಿಲ್ಲ ಎಂದಿದೆ. ಇದರ ಜತೆಗೆ 20 ಸಾವಿರಕ್ಕಿಂತಲೂ ಕಡಿಮೆ ಜನರು ವಾಸ ಮಾಡುವ ಸ್ಥಳಗಳಲ್ಲಿರುವ ಹೆದ್ದಾರಿ …

Read More »

ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ: ಹಾಲು ಕುಡಿದವರು ಯಾರ್ಯಾರು?

ಹರಸಾಹಸ ಪಟ್ಟು ಅಧಿಕಾರಕ್ಕೇರಿದ ಯಡಿಯೂರಪ್ಪನವರಿಗೆ ಅಧಿಕಾರಕ್ಕೆ ಬಂದ ದಿನದಿಂದ, ರಾಜೀನಾಮೆ ನೀಡಿದ ಜುಲೈ 26ರ ವರೆಗಿನ ಎರಡು ವರ್ಷದ ಅವಧಿ ತಂತಿಯ ಮೇಲಿನ ನಡಿಗೆಯೇ. ಅವರೇ ಹೇಳಿದಂತೆ ಪ್ರತೀದಿನ ಅಗ್ನಿಪರೀಕ್ಷೆ. ಯಡಿಯೂರಪ್ಪನವರನ್ನು ಆ ಸ್ಥಾನದಿಂದ ಕೆಳಗಿಳಿಸಬೇಕೆಂದು ದೆಹಲಿಯಲ್ಲಿ ನಡೆಯುತ್ತಿದ್ದ ಲಾಬಿ ಕೊನೆಗೂ ಕೈಗೂಡಿದೆ. ಯಡಿಯೂರಪ್ಪನವರ ವಿರೋಧಿ ಪಾಳಯದಲ್ಲಿ ಇರುವವರಿಗೆ ಇಂದು ಹೊಟ್ಟೆ ತುಂಬಾ ಹಾಲು ಕುಡಿದಷ್ಟು ಸಂಭ್ರಮವಾಗಿರಬಹುದು.   ಹಂಗಾಮೀ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ವಿದಾಯದ ಭಾಷಣದಲ್ಲಿ ಹೇಳಿದಂತೆ, ಆರಂಭ …

Read More »

ಒಂದು ವಾರದಿಂದ ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಸದ್ಯ ಶಾಂತವಾಗಿದ್ದು ಜನತೆ ಜನ ನಿಟ್ಟುಸಿರು ಬಿಡುವಂತಾಗಿದೆ.

ಬೆಳಗಾವಿ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಸದ್ಯ ಶಾಂತವಾಗಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ತಗ್ಗಿದ ಪರಿಣಾಮ ಜಿಲ್ಲೆಯ ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ನದಿ ನೀರಿನ ಮಟ್ಟದಲ್ಲಿ ಇಳಿಕೆ ಕಂಡಿದೆ. ಮುಳುಗಡೆ ಭೀತಿಯಲ್ಲಿದ್ದ ಗೋಕಾಕ, ಹುಕ್ಕೇರಿ, ರಾಮದುರ್ಗ ತಾಲೂಕಿನಲ್ಲಿ ಸದ್ಯ ಪ್ರವಾಹ ಆತಂಕ ದೂರವಾಗಿದೆ.   ಹಿಡಕಲ್, ನವೀಲುತೀರ್ಥ ಜಲಾಶಯದಲ್ಲೂ ನೀರಿನ ಒಳ ಹರಿವು ಕ್ಷೀಣಿಸಿದ್ದು, ಪ್ರವಾಹದಿಂದ ಬಂದ್ ಆಗಿದ್ದ ಸೇತುವೆಗಳು, ರಸ್ತೆಗಳು …

Read More »

ರಾಜೀನಾಮೆ ನೀಡ್ತಿದ್ದಂತೆ ಬಿಎಸ್​ವೈ ಭಾವಚಿತ್ರವಿದ್ದ ಕೋವಿಡ್ ಜಾಗೃತಿ ಬ್ಯಾನರ್ ತೆರವು

ದಾವಣಗೆರೆ: ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೆ ನಗರಸಭೆ ಮುಂದೆ ಹಾಕಲಾಗಿದ್ದ ಅವರ ಬ್ಯಾನರ್ ತೆರವು ಮಾಡಲಾಗಿದೆ. ಹರಿಹರ ನಗರಸಭೆ ಮುಂದೆ ನಿರ್ಗಮಿತ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರವುಳ್ಳ ಕೋವಿಡ್ ಜಾಗೃತಿ ಮೂಡಿಸುವ ಬ್ಯಾನರ್ ಹಾಕಲಾಗಿತ್ತು. ಇತ್ತ ಇಂದು ಯಡಿಯೂರಪ್ಪನವರು ರಾಜೀನಾಮೆ ಘೋಷಿಸುತ್ತಿದ್ದಂತೆ ನಗರ ಸಭೆ ಸಿಬ್ಬಂದಿ ಬ್ಯಾನರ​ನ್ನು ತೆರವು ಮಾಡಿದ್ದಾರೆ.

Read More »

ಮಹಿಳೆಯೊಂದಿಗೆ ಪೋನ್‌ ನಲ್ಲಿ ಅಶ್ಲೀಲ ಸಂಭಾಷಣೆ ; ಮಹಿಳೆಯರಿಂದ ಪಾಲಿಕೆ ನೌಕರನಿಗೆ ಗೂಸ

ಮೈಸೂರು: ಕಚೇರಿಗೆ ಕೆಲಸಕ್ಕಾಗಿ ಬಂದಿದ್ದ ಮಹಿಳೆಯೊಬ್ಬರ ಫೋನ್‌ ನಂಬರ್‌ ಪಡೆದು ಕಾಮಾಸಕ್ತಿಯಿಂದ ಮಹಿಳೆಯೊಂದಿಗೆ ಮೊಬೈಲ್‌ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದ ಪಾಲಿಕೆಯ ನೌಕರನೊಬ್ಬನು ಮಹಿಳೆಯರಿಂದಲೇ ಹೊಡೆತ ತಿಂದಿರುವ ಘಟನೆ ಶಾರದಾದೇವಿ ನಗರದ ಪಾಲಿಕೆಯ ವಲಯ ಕಚೇರಿಯಲ್ಲಿ ನಡೆದಿದೆ. ಈ ಸಂಬಂಧ ನೌಕರನ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಘಟನೆಯ ವೈರಲ್‌ ವಿಡಿಯೋಸರ್ಕಾರಿ ಸಿಬ್ಬಂದಿಯಾಗಿ ಸಾರ್ವಜನಿಕರ ಜೊತೆ ಸೌಜನ್ಯ ಮತ್ತು ಉತ್ತಮ ನಡತೆ ಮರೆತ ದ್ವಿತೀಯ ದರ್ಜೆ ಸಹಾಯಕ ವಿಷಕಂಠ ಮಹಿಳೆಯರ …

Read More »

ರಾಜ್ಯಪಾಲರ ಹುದ್ದೆ ಅಲಂಕರಿಸಲ್ಲ, ಪಕ್ಷ ಸಂಘಟನೆ ಮಾಡುತ್ತೇನೆ: ಬಿಎಸ್‌ವೈ

ಬೆಂಗಳೂರು: ರಾಜೀನಾಮೆ ನೀಡುವಂತೆ ದೆಹಲಿಯಿಂದ ನನಗೆ ಯಾವುದೇ ಒತ್ತಡ ಇಲ್ಲ ನಾನೇ ಸ್ವಯಂ ನಿರ್ಧಾರ ಮಾಡಿ ರಾಜೀನಾಮೆ ನೀಡಿದ್ದೇನೆ, ರಾಜ್ಯಪಾಲು ಹುದ್ದೆ ಸೇರಿ ಯಾವುದೇ ಸ್ಥಾನಮಾನ ಪಡೆಯದೇ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇನೆ ಎಂದು ಉಸ್ತುವಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ರಾಜಭವನದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಎರಡು ವರ್ಷ ತುಂಬಿದ ಈ ಸಂದರ್ಭದಲ್ಲಿ ರಾಜೀನಾಮೆ ಕೊಟ್ಟು ಬೇರೆಯವರಿಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಸಿಗಬೇಕು ಎಂದು ನಾನು ಸ್ವಯಂ ಪ್ರೇರಿತವಾಗಿ …

Read More »

ಕಣ್ಣೀರ ಹಿಂದಿನ ನೋವೇನು..?, ಆ ನೋವು ಕೊಟ್ಟವರಾರೆಂಬುದನ್ನು ಬಿಎಸ್‍ವೈ ಬಹಿರಂಗಪಡಿಸಲಿ: ಡಿಕೆಶಿ

ಬೆಂಗಳೂರು: ಇಂದು ರಾಜೀನಾಮೆ ವಿಚಾರ ಪ್ರಸ್ತಾಪಿಸಿ ಬಿ.ಎಸ್ ಯಡಿಯೂರಪ್ಪನವರು ಕಣ್ಣೀರಿಟ್ಟಿದ್ದು, ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರಾಗಿತ್ತು. ಇದರ ಹಿಂದಿನ ನೋವೇನು? ಆ ನೋವು ಕೊಟ್ಟವರಾರು? ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರ ರಾಜೀನಾಮೆ ಬಗ್ಗೆ ಸದಾಶಿವನಗರ ನಿವಾಸದಲ್ಲಿ ಪ್ರತಿಕ್ರಿಯಿಸಿದ ಶಿವಕುಮಾರ್, ಯಡಿಯೂರಪ್ಪ ಅವರ ರಾಜೀನಾಮೆ ಹಿಂದೆ ಸಂತೋಷ ಕಾಣುತ್ತಿಲ್ಲ. ಬದಲಿಗೆ …

Read More »