Breaking News

ರಾಜ್ಯ

ಇಳಕಲ್ ನಗರದಲ್ಲಿ ಗಾಂಜಾ ಘಾಟು

ಇಳಕಲ್ ನಗರದಲ್ಲಿ ಗಾಂಜಾ ಘಾಟು ಮಧ್ಯದ ಬೆಲೆ ಹೆಚ್ಚಾಗಿರುವುದರಿಂದ ಕಡಿಮೆ ಬೆಲೆಯಲ್ಲಿ ಗಾಂಜಾ ನಶೆ ಮೊರೆ ಹೋಗುತ್ತಿರುವ ಯುವಕರು 16 ರಿಂದ 25 ವಯಸ್ಸಿನ ಯುವಕರೇ ಹೆಚ್ಚಾಗಿ ಗಾಂಜಾ ಸೇವನೆ ಕಾಲೇಜು ವಿದ್ಯಾರ್ಥಿಗಳಿಗೆ ವಿತರಣೆಯಾಗುತ್ತಿದೆಯಾ ಗಾಂಜಾ ಮತ್ತು ಡ್ರಗ್ಸ್ ಪೊಲೀಸರಿಗೆ ಡ್ರಗ್ಸ್ ಪೆಡ್ಲರಗಳನ್ನೇ ಹುಡುಕುವುದೇ ಸವಾಲ್ ಗಾಂಜಾ ಮಾರುವವರ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದ ಭೀಮ್ ಆರ್ಮಿ ಸಂಘಟನೆಯವರು ಈ ಕುರಿತು ಒಂದು  ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಮಧ್ಯದ …

Read More »

ಸೋರುತ್ತಿದ್ದ ಸರ್ಕಾರಿ ಕಚೇರಿಗೆ ಅಲ್ಲಿನ ಸಿಬ್ಬಂದಿಯೇ ಲಕ್ಷಾಂತರ ರೂ. ವ್ಯಯಿಸಿ ಟಿನ್ ಶೀಟ್, ಟಾರ್ಪಲ್ ಶೀಟ್ ಹಾಕಿಸಿ ದುರಸ್ತಿ ಮಾಡಿಸಿದ್ದಾರೆ.

ಕಲಬುರಗಿ: ಮಳೆಯಿಂದ ಸೋರುತ್ತಿದ್ದ ಸರ್ಕಾರಿ ಕಚೇರಿಯನ್ನು ಸ್ವತಃ ಇಲಾಖೆಯ ಸಿಬ್ಬಂದಿಯೇ ತಮ್ಮ ಜೇಬಿನಿಂದ ಹಣ ಹಾಕಿ ದುರಸ್ತಿ ಕೈಗೊಂಡಿದ್ದು, ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕಲಬುರಗಿ ಜಿಲ್ಲಾ ಪಂಚಾಯತ್​ ಕಚೇರಿ ಆವರಣದಲ್ಲಿರುವ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಿಬ್ಬಂದಿಯೇ ಹಣ ಸಂಗ್ರಹಿಸಿ ದುರಸ್ತಿ ಮಾಡಿ ಗಮನ ಸೆಳೆದಿದ್ದಾರೆ. 6 ಲಕ್ಷ ರೂ. ಹಣ ಸಂಗ್ರಹಿಸಿ ರಿಪೇರಿ: ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮಳೆ ಬಂದರೆ ನೀರು ಸೋರಿಕೆಯಾಗಿ ಸಿಬ್ಬಂದಿಯು ಪರದಾಡುವಂತಹ ಸ್ಥಿತಿ …

Read More »

ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ : ಮಧು ಬಂಗಾರಪ್ಪ –

ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ : ಮಧು ಬಂಗಾರಪ್ಪ – ಲಕ್ಷ್ಮೀ ಹೆಬ್ಬಾಳಕರ್ ಚರ್ಚೆ* *ಬೆಂಗಳೂರು* : ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ ಗುರುವಾರ ಪೂರ್ವಭಾವಿ ಸಭೆ ನಡೆಸಿದರು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ …

Read More »

ಏರೋಸ್ಪೇಸ್ ಅನ್ಯ ರಾಜ್ಯದ ಪಾಲಾಗಬಾರದು, ಉತ್ತರ ಕರ್ನಾಟಕದಲ್ಲಿ‌ ಪಾರ್ಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅರವಿಂದ ಬೆಲ್ಲದ ಸಿಎಂಗೆ ಪತ್ರ

ಏರೋಸ್ಪೇಸ್ ಅನ್ಯ ರಾಜ್ಯದ ಪಾಲಾಗಬಾರದು, ಉತ್ತರ ಕರ್ನಾಟಕದಲ್ಲಿ‌ ಪಾರ್ಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅರವಿಂದ ಬೆಲ್ಲದ ಸಿಎಂಗೆ ಪತ್ರ ಧಾರವಾಡ- ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮೀಸಲಿಟ್ಟಿದ್ದ 1,777 ಎಕರೆ ಕೃಷಿ ಭೂಮಿಯ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟು ರೈತರಿಗೆ ನೆರವಾಗುವಂತೆ ತಾವು ಕೈಗೊಂಡ ನಿರ್ಧಾರ ಸ್ವಾಗತಾರ್ಹ. ಈ ಏರೋ ಸ್ಪೇಸ್ ಪಾರ್ಕ ನಿರ್ಮಾಣವನ್ನು ಉತ್ತರ ಕರ್ನಾಟಕದಲ್ಲಿ ಮಾಡಬೇಕು‌ ಎಂದು ವಿಪಕ್ಷ ಉಪನಾಯಕ ಅರವಿಂದ …

Read More »

ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಕಚೇರಿ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿಯ ಉದ್ಘಾಟನೆ

ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಕಚೇರಿ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿಯ ಉದ್ಘಾಟನೆಯನ್ನು ಇಂದು ನೆರವೇರಿಸಲಾಯಿತು. ಕರ್ನಾಟಕದ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ಸಾರಿಗೆ ಇಲಾಖೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಜಿಲ್ಲೆಯಲ್ಲಿ ಇನ್ನಷ್ಟು ಬಸ್‌ಗಳನ್ನು ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚು ಸೌಲಭ್ಯಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಉದ್ಘಾಟನೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವರಿಗೆ ಮನವರಿಕೆ ಮಾಡಲಾಯಿತು. ಈ …

Read More »

ರಾಜಕೀಯ ಪುರ್ನಜನ್ಮ ನೀಡಿದ ಬಾದಾಮಿಗೆ ಸಿದ್ಧರಾಮಯ್ಯ ಕೊಡುಗೆ ಶೂನ್ಯ; ನಿಖಿಲ್ ಕುಮಾರಸ್ವಾಮಿ ಬಾದಾಮಿಯಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ

ರಾಜಕೀಯ ಪುರ್ನಜನ್ಮ ನೀಡಿದ ಬಾದಾಮಿಗೆ ಸಿದ್ಧರಾಮಯ್ಯ ಕೊಡುಗೆ ಶೂನ್ಯ; ನಿಖಿಲ್ ಕುಮಾರಸ್ವಾಮಿ ಬಾದಾಮಿಯಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ರಾಜಕೀಯ ಪುರ್ನಜನ್ಮ ನೀಡಿದ ಬಾದಾಮಿ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ ಶೂನ್ಯ ಎಂದು ಜೆಡಿಎಸ್ ಯುವ ಘಟಕ ರಾಜ್ಯ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಟೀಕಿಸಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಗುರುವಾರ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ …

Read More »

ಸವಲತ್ತು ರಹಿತ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಮಾಜಿ ಮೇಯರ ವಿಜಯ ಮೋರೆ ಮನವಿ

ಸವಲತ್ತು ರಹಿತ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಮಾಜಿ ಮೇಯರ ವಿಜಯ ಮೋರೆ ಮನವಿ ಸಾರ್ವಜನಿಕರು ಪ್ರತಿನಿತ್ಯ ತಾವುಗಳು ಮನೆಗೆ ಕೊಂಡುಕೊಳ್ಳುವ ಪತ್ರಿಕೆಗಳನ್ನು ಹಾಳು ಮಾಡದೆ ಒಟ್ಟುಗೂಡಿಸಿ ಪ್ರತಿ ಎರಡು ತಿಂಗಳಿಗೊಮ್ಮೆ ರದ್ದಿಯನ್ನು ಶಾಂತಾಯಿ ವಿದ್ಯಾ ಆಧಾರದವರಿಗೆ ನೀಡಿದರೆ ಸೌಕರ್ಯ ವಂಚಿತ ಬಡ ವಿದ್ಯಾರ್ಥಿಗಳ ಅನುಕೂಲವಾಗುತ್ತದೆ ಎಂದು ಮಾಜಿ ಮೇಯರ ವಿಜಯ ಮೋರೆ ಹೇಳಿದರು ಸವಲತ್ತು ರಹಿತ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಶಾಂತಾಯಿ ವಿದ್ಯಾ ಆಧಾರ್ ತನ್ನ ಕಾರ್ಯವನ್ನು ಮುಂದುವರೆಸಿದೆ ಸಂಸ್ಥೆಯು …

Read More »

ಮಧ್ಯವರ್ಜನ ಶಿಬಿರಗಳಲ್ಲಿ ಪಾಲ್ಗೊಂಡು ಉತ್ತಮ ಜೀವನ ನಡೆಸಿ: ಮಲ್ಲಗೌಡ ಪಾಟೀಲ್

ಮಧ್ಯವರ್ಜನ ಶಿಬಿರಗಳಲ್ಲಿ ಪಾಲ್ಗೊಂಡು ಉತ್ತಮ ಜೀವನ ನಡೆಸಿ: ಮಲ್ಲಗೌಡ ಪಾಟೀಲ್ ಸಲಹೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1951ನೇ ಮಧ್ಯವರ್ಜನ ಶಿಬಿರ ಕಾರ್ಯಕ್ರಮ ಬೆಳಗಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ದಶಕಗಳಿಂದ ಮಧ್ಯವರ್ಜನ ಶಿಬಿರ ನಡೆಸಿ ಕುಡಿತದ ಚಟಕ್ಕೆ ಬಲಿಯಾದವರನ್ನು ಸರಿ ದಾರಿಗೆ ತರುತ್ತಿರುವುದು ಶ್ಲಾಘನೀಯ ಕೆಲಸ ಎಂದು ಕೆಪಿಸಿಸಿ ಸದಸ್ಯರಾದ ಮಲ್ಲಗೌಡ ಕಲ್ಲಗೌಡ ಪಾಟೀಲ್ ಅವರು ಹೇಳಿದರು. ತಾಲೂಕಿನ ಕಡೋಲಿ ವಲಯದಲ್ಲಿ ಛತ್ರಪತಿ ಶಿವಾಜಿ …

Read More »

ಪ್ಲಾಸ್ಟಿಕ್‌ ಕೈ ಚೀಲದ ಬದಲು ಕಾಂಪೋಸ್ಟಬಲ್ ಕ್ಯಾರಿ ಬ್ಯಾಗ್ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಸರ್ಕಾರದ ನಿರ್ಧಾರ

ಬೆಂಗಳೂರು: ಪ್ಲಾಸ್ಟಿಕ್‌ ಕೈ ಚೀಲಗಳ ಬದಲು ಕರಗುವ “ಕಾಂಪೋಸ್ಟಬಲ್ ಕ್ಯಾರಿ ಬ್ಯಾಗ್” ಗಳ ಉತ್ಪಾದನೆಗೆ ಆದ್ಯತೆ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಈ ವಿಷಯ ತಿಳಿಸಿದ್ದಾರೆ. ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಕುರಿತು ಅರಣ್ಯ ಇಲಾಖೆ ಹೊರಡಿಸಿರುವ ಅಧಿಸೂಚನೆಗಳಲ್ಲಿ “ಪ್ಲಾಸ್ಟಿಕ್ ಬ್ಯಾಗ್” ಎಂಬ ಪದದ ವ್ಯಾಖ್ಯಾನಕ್ಕೆ ತಿದ್ದುಪಡಿ ಮಾಡಲು …

Read More »

ಹೃದಯಾಘಾತಗಳಿಂದ ಹೆಚ್ಚು ಸಾವಾಗುತ್ತಿದೆ ಎಂಬುದು ಸುಳ್ಳು: ವೈದ್ಯಕೀಯ ಸಚಿವರ ಸ್ಪಷ್ಟನೆ

ಹಾವೇರಿ: ರಾಜ್ಯದಲ್ಲಿ ಹೃದಯಾಘಾತಗಳಿಂದ ಹೆಚ್ಚು ಸಾವುಗಳಾಗುತ್ತಿವೆ ಎಂಬ ತಪ್ಪು ಸಂದೇಶ ಹೋಗಿದೆ. ಹೃದಯಾಘಾತಗಳಿಂದ ಹೆಚ್ಚು ಸಾವಾಗುತ್ತಿದೆ ಎಂಬುದು ಸುಳ್ಳು ಎಂದು ವೈದ್ಯಕೀಯ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಹಾವೇರಿ ತಾಲೂಕಿನ ನಲೋಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಜಿಟಿಟಿಸಿ ತರಬೇತಿ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೃದಯಾಘಾತ ಪ್ರಕರಣಗಳ ಬಗ್ಗೆ ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ಎರಡು ದಿನಗಳ ಹಿಂದೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದೇವೆ. ಈ ಬಗ್ಗೆ …

Read More »