Breaking News

ರಾಜ್ಯ

ಎಣ್ಣೆ ಅಮಲಿನಲ್ಲಿ ಅಧಿಕಾರಿಗಳಿಗೆ ಆವಾಜ್ ಹಾಕಿದ ಯುವಕ

ಯಾದಗಿರಿ: ಎಣ್ಣೆ ಅಮಲಿನಲ್ಲಿ ಯುವಕನೋರ್ವ ಅಧಿಕಾರಿಗಳಿಗೆ ಆವಾಜ್ ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ನಿವಾಸಿ ಭೀಮರಡ್ಡಿ ಕುರಕುಂದಿ ಎಂಬ ಯುವಕ ಅಧಿಕಾರಿಗಳಿಗೆ ಆವಾಜ್ ಹಾಕಿದ್ದಾನೆ. ಯಾದಗಿರಿ ಜಿಲ್ಲೆಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಿದೆ. ಆದ್ರೆ ನೈಟ್ ಕರ್ಫ್ಯೂ ಉಲ್ಲಂಘಿಸಿ ಡಾಬಾ ತೆರೆದಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಡಾಬಾ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಮಾಡಿ ದಂಡ ವಿಧಿಸಲು ಮುಂದಾದ ವೇಳೆ ಯುವಕ ಮತ್ತು ಅಧಿಕಾರಿಗಳ ಜೊತೆ ಗಲಾಟೆಯಾಗಿದೆ. ಎಸಿ ಪ್ರಶಾಂತ್, ನಗರಸಭೆ …

Read More »

ಕರ್ತವ್ಯಲೋಪ ಹಿನ್ನೆಲೆ ಐವರು ಪೊಲೀಸರನ್ನ ಅಮಾನತುಗೊಳಿಸಿದ ಎಸ್ಪಿ

ವಿಜಯಪುರ: ಕರ್ತವ್ಯಲೋಪ ಹಿನ್ನೆಲೆ ಐವರು ಪೊಲೀಸರ ಮೇಲೆ ಖಡಕ್​ ಕ್ರಮ ತೆಗೆದುಕೊಂಡಿರುವ ಎಸ್ಪಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು ಜಿಲ್ಲೆಯಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದೆ. ಜಿಲ್ಲೆಯ ಎಸ್ಪಿ ಆನಂದ್ ಕುಮಾರ್ ಕರ್ತವ್ಯ ಲೋಪ ಎಸಗಿದ ಪೊಲೀಸರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಿದ್ದು, ಅಮಾನತು ಮಾಡಿದ್ದಾರೆ. ನಿಡಗುಂದಿ ಠಾಣೆಯ ಇಬ್ಬರು, ಬಸವನ ಬಾಗೇವಾಡಿಯ ಮೂವರು ಪೊಲೀಸ್​ ಅಧಿಕಾರಿಗಳನ್ನು ಅಮಾನತುಗೊಳಿಸಲು ಎಸ್ಪಿ ಆದೇಶ ನೀಡಿದ್ದಾರೆ. ನಿಡಗುಂದಿ ಠಾಣೆಯ ಎಸ್.ಸಿ. ರೆಡ್ಡಿ ಸಿಪಿಸಿ 496 …

Read More »

DGIGP & CM ಆದೇಶಕ್ಕೂ ಇಲ್ಲ ಕಿಮ್ಮತ್ತು? ಪೊಲೀಸರಿಂದಲೇ ಆದೇಶ ಉಲ್ಲಂಘಿಸಿ ಬರ್ತ್​​ಡೇ

ಹಾವೇರಿ: ಒಂದೆಡೆ ಮೂರನೇ ಕೊರೊನಾ ಅಲೆಯ ಭೀತಿ ಶುರುವಾಗಿದೆ.. ಈಗಾಗಲೇ ಕೊರೊನಾದಿಂದ ಬಳಲಿ ಬೆಂಡಾಗಿರುವ ರಾಜ್ಯದಲ್ಲಿ ಮತ್ತೆ ದೊಡ್ಡಮಟ್ಟದ ಅನಾಹುತ ಸೃಷ್ಟಿಯಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮಗಳನ್ನ ನಡೆಸದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಡಿಜಿಐಜಿಪಿ ಆದೇಶ ಹೊರಡಿಸಿದ್ದರು. ದುರಂತ ಅಂದ್ರೆ ಸಿಎಂ ತವರು ಕ್ಷೇತ್ರದಲ್ಲೇ ಸಿಎಂ ಆದೇಶಕ್ಕೆ ಕ್ಯಾರೆ ಎನ್ನುತ್ತಿಲ್ಲ.. ಪೊಲೀಸ್ ಇಲಾಖೆಯೇ ಡಿಜಿಐಜಿಪಿ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ನಿನ್ನೆಯಷ್ಟೇ ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ ನೀಡಿದ್ದರು.. …

Read More »

ಹಳಿಯಾಳದಲ್ಲಿ ಫುಟ್ ಪಾತ್ ಮೇಲೆ ಇರುವ ಅಂಗಡಿಗಳ ತೆರವು ಕಾರ್ಯಾಚರಣೆ

ಹಳಿಯಾಳ: ಪಟ್ಟಣದ ಬಸ್ ನಿಲ್ದಾಣದ ಪ್ರದೇಶದಲ್ಲಿ ರಸ್ತೆಯುದ್ದಕ್ಕೂ ವ್ಯಾಪಾರಿಗಳು ತಮ್ಮ ಮಳಿಗೆಗಳ ಎದುರು ರಸ್ತೆ ಹಾಗೂ ಗಟಾರ ಅತಿಕ್ರಮಿಸಿ ನಿರ್ಮಿಸಿದ್ದ ಗುಡುಂಗಡಿಗಳ ತೆರವು ಕಾರ್ಯಾಚರಣೆ ಮಂಗಳವಾರ ಪೋಲಿಸ್ ಬಿಗಿ ಬಂದೋಬಸ್ತನಲ್ಲಿ ನಡೆಯಿತು. ಕೆಎಸ್ ಆರ್ ಟಿಸಿ ಕಂಪೌಂಡ್‍ಗೆ ತಾಗಿ ನಿರ್ಮಿಸಲಾದ ವ್ಯಾಪಾರ ಮಳಿಗೆಗಳನ್ನು ಪಡೆದ ವ್ಯಾಪಾರಸ್ಥರು ಎದುರಿನ ಚರಂಡಿ ಹಾಗೂ ಫುಟ್ ಪಾತ್ ಅತಿಕ್ರಮಿಸಿಕೊಂಡು ಗೂಡಂಗಡಿಗಳನ್ನು ಇಟ್ಟು ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿದ್ದ ಬಗ್ಗೆ ಬಂದ …

Read More »

ಸರ್ಕಾರಕ್ಕೆ ಬದ್ಧತೆ ಇದ್ರೆ ಮೇಕೆದಾಟು ಯೋಜನೆ ಜಾರಿಗೊಳಿಸಲಿ: ಸಿದ್ದರಾಮಯ್ಯ

ಮೈಸೂರು : ಬಿಜೆಪಿ ಸರ್ಕಾರಕ್ಕೆ ಬದ್ಧತೆ ಇದ್ದರೆ ತಕ್ಷಣ ಮೇಕೆದಾಟು ಆಣೆಕಟ್ಟು ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ಪತ್ರ ಬರೆಯುವುದನ್ನು ಬಿಟ್ಟು, ಕೇಂದ್ರ ಜಲ ನ್ಯಾಯಮಂಡಳಿ ಬಳಿ ಹೋಗಿ ಅನುಮತಿ ಪಡೆದು, ನಂತರ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು. ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ …

Read More »

ರಾಜಕೀಯದಲ್ಲಿ ವಯಸ್ಸು ಮುಖ್ಯವಲ್ಲ, ಆರೋಗ್ಯ, ಕೆಲಸ ಮಾಡುವ ಉತ್ಸಾಹ ಮಾತ್ರ ಮುಖ್ಯ : ಸಿದ್ದು

ಮೈಸೂರು : ರಾಜಕೀಯದಲ್ಲಿ ಮುಂದುವರೆಯಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ, ನಿಮ್ಮಲ್ಲಿ ಉತ್ತಮ ಆರೋಗ್ಯ, ಕೆಲಸ ಮಾಡುವ ಉತ್ಸಾಹ ಮಾತ್ರ ಮುಖ್ಯವಾಗಿರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜಕೀಯ ನಿವೃತ್ತಿಗೆ ವಯಸ್ಸು ಅಡ್ಡಿ ಬರುವುದಿಲ್ಲ, ನಿಮ್ಮಲ್ಲಿ ಉತ್ತಮ ಅರೋಗ್ಯ, ಜೊತೆಗೆ ಕೆಲಸ ಮಾಡುವ ಉತ್ಸಾಹ ಇದ್ದರೆ ಸಾಕು ಎಂದು ಹೇಳಿದರು, ನನಗೀಗ 75 ವರ್ಷವಾದರೂ ಚೆನ್ನಾಗಿದ್ದೇನೆ. ರಾಜಕೀಯದಲ್ಲಿ ಮುಂದುವರೆಯುವ ಆಸೆಯಿದೆ, ಹಾಗಾಗಿ ಮುಂದುವರೆದಿದ್ದೇನೆ. ನನಗೆ …

Read More »

ಈರುಳ್ಳಿಗೆ ಕಾಡುತ್ತಿರುವ ಕೊಳೆರೋಗದಿಂದ ಮಣ್ಣಲ್ಲಿ ಮಣ್ಣಾಗುತ್ತಿರುವ ರೈತನ ಕಣ್ಣೀರು..!

ಕಲಾದಗಿ: ಈರುಳ್ಳಿ ಬೆಳೆ ಕೊಳೆರೋಗಕ್ಕೆ ಹಳದಿ ಬಣ್ಣಕ್ಕೆ ಬಾಡಿ ಹೊಲದಲ್ಲಿಯೇ ಕೊಳೆಯುತ್ತಿರುವ ಬೆಳೆಯನ್ನು ರೈತ ನೇಗಿಲು ಹೊಡೆದು ಮಣ್ಣಲ್ಲಿ ಮುಚ್ಚುತ್ತಿದ್ದು ಈ ವೇಳೆ ಬೆಳೆಯೊಂದಿಗೆ ರೈತನ ಕಣ್ಣೀರದಾರೆಯೂ ಮಣ್ಣಲ್ಲಿ ಸೇರಿ ಮಣ್ಣಾಗುತ್ತಿದೆ..! ಹೌದು ಕಲಾದಗಿ ಹೊಬಳಿ ವ್ಯಾಪ್ತಿಯಲ್ಲಿ ರೈತರು ಹೆಚ್ಚಾಗಿ ಈರುಳ್ಳಿ ಬೆಳೆಯನ್ನು ಬೆಳೆದು ಕೃಷಿ ಜೀವನ ನಡೆಸುತ್ತಾರೆ, ಮೇ ತಿಂಗಳಕೊನೆ ವಾರ ಇಲ್ಲವೇ ಜೂನ್ ತಿಂಗಳ ಮೊದಲೆರಡು ವಾರದಲ್ಲಿ ಬಿತ್ತನೆ ಮಾಡಿ ಹುಲುಸು ಬೆಳೆಗೆ ಹಗಲು ರಾತ್ರಿ ಶ್ರಮ …

Read More »

ಮುಖ್ಯಮಂತ್ರಿ ಪದವಿ ಹೋದ ಮೇಲೆ ಸಿದ್ದರಾಮಯ್ಯ ಅವರಿಗೆ ನಿತ್ಯ ಕೆಟ್ಟ ಕನಸು ಬೀಳುತ್ತಿವೆ.: ಈಶ್ವರಪ್ಪ

 : ಮುಖ್ಯಮಂತ್ರಿ ಪದವಿ ಹೋದ ಮೇಲೆ ಸಿದ್ದರಾಮಯ್ಯ ಅವರಿಗೆ ನಿತ್ಯ ಕೆಟ್ಟ ಕನಸು ಬೀಳುತ್ತಿವೆ. ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂಬ ಕೆಟ್ಟ ಕನಸು ಬೀಳುತ್ತಿವೆ. ಆದರೆ ಈ ಕನಸು ನನಸಾಗಲು ಸಾಧ್ಯವೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದರು. ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸರಿಯಾಗಿ ಆಡಳಿತ ಮಾಡಿದ್ದರೆ ಮತ್ತೆ ಅಧಿಕಾರಕ್ಕೆ ಅವರೇ ಬರುತ್ತಿದ್ದರು. ಈಗ ಚುನಾವಣೆಗೆ ಎರಡು ವರ್ಷ ಮೊದಲೇ …

Read More »

ಡಿಕೆಶಿ-ಜಮೀರ್ ಅಹ್ಮದ್ ಗೆ ‘ಭಲೇ ಜೋಡಿ’ ಎಂದ ಬಿಜೆಪಿ: ಯಾಕೆ ಗೊತ್ತಾ..?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಗೆ ಭಲೇ ಜೋಡಿ ಅಂತಾ ಬಿಜೆಪಿ ವ್ಯಂಗ್ಯವಾಡಿದೆ. ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ನಡೆಸಿದ ಬಳಿಕ ಅವರನ್ನು ಭೇಟಿಯಾಗಿದ್ದ ಡಿಕೆಶಿ ಧೈರ್ಯ ತುಂಬಿದ್ದರು. ಶಾಸಕ ಜಮೀರ್ ಅಹ್ಮದ್ ಆಸ್ತಿ ಮೇಲೆ ಇಡಿ ದಾಳಿ ಯಾಕೆ ನಡೆದಿದೆ ಎಂದು ಚರ್ಚಿಸಿದ್ದೇನೆ. ಅವರಿಗೆ ಕೆಲವೊಂದು ಮಾರ್ಗದರ್ಶನ ನೀಡಿದ್ದೇನೆ ಅಂತಾ ಡಿಕೆಶಿ ಹೇಳಿದ್ದರು. ಈ ವಿಚಾರವಾಗಿ ಬುಧವಾರ …

Read More »

ಯೋಗೀಶ್ ಗೌಡ ಕೊಲೆ ಕೇಸ್​: ಧಾರವಾಡಕ್ಕೆ ಭೇಟಿ ನೀಡದಂತೆ ವಿನಯ್​ ಕುಲಕರ್ಣಿಗೆ ಸುಪ್ರೀಂನಿಂದ ಷರತ್ತುಬದ್ಧ ಜಾಮೀನು

ನವದೆಹಲಿ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಬುಧವಾರ (ಆಗಸ್ಟ್ 11) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದರೂ ಕುಲಕರ್ಣಿಗೆ ಸದ್ಯ ಜೈಲಿನಿಂದ ಬಿಡುಗಡೆ ಇಲ್ಲ ಎಂದು ವರದಿ ವಿವರಿಸಿದೆ. ಯೋಗಿಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಕಳೆದ 9 ತಿಂಗಳಿನಿಂದ ಜೈಲಿನಲ್ಲಿದ್ದು, ಜಾಮೀನು ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಭೇಟಿ ನೀಡದಂತೆ …

Read More »