Breaking News

ರಾಜ್ಯ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಕೊರಟಗೆರೆ : ನೋಟ್ಸ್ ಬುಕ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿ ಮನೆಗೆ ಹೋದ ಸ್ನೇಹಿತ ಕೂಲ್ ಡ್ರಿಂಕ್ಸ್ ನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ ಕೊಡಿಸಿ ಅತ್ಯಾಚಾರವೆಸಗಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೊರಟಗೆರೆ ಪಟ್ಟಣದ ಇಮ್ರಾನ್ ಪಾಷಾ ಮಗ ಅಸ್ಲಾಂ ಎಂಬ ಯುವಕ ಖಾಸಗಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ನೋಟ್ಸ್ ಕೊಡುವ ನೆಪದಲ್ಲಿ ಮನೆಗೆ ಹೋಗಿ ಕೂಲ್ ಡ್ರಿಂಕ್ಸ್ ನಲ್ಲಿ ಮತ್ತು ಬರುವ ಔಷಧಿಯನ್ನು ಬೆರೆಸಿ ಕುಡಿಸಿ …

Read More »

ಮೂರು ಜನರ ಜಿದ್ದಾ ಜಿದ್ದಿಯಿಂದ ಪ್ರಚಾರ ಮತದಾರ ಯಾರಿಗೆ ಗೆಲುವಿನ ಮೆಟ್ಟಿಲು ಹತ್ತಿಸುತ್ತಾನೆ,? complete details

ಬೆಳಗಾವಿ: ಬೆಳಗಾವಿ ವಿಧಾನ ಪರಿಷತ್ ಚುನಾವಣೆ ನಾಳೆ ತೀರ್ಪಿನ ದಿನ ಮೂರು ಅಭ್ಯರ್ಥಿ ಗಳ ಪ್ರಚಾರ ಫುಲ್ ಜೋರಾಗಿತ್ತು ಒಂದು ಕಡೆ ಪಕ್ಷೇತರ ಅಭ್ಯರ್ಥಿ ಹವಾ ಆದ್ರೆ ಇನ್ನೊಂದು ಕೊಡೆ ಎರಡು ಪಕ್ಷದ ನಾಯಕರ ಘಟಾನು ಘಟಿಗಳು ಬಂದ್ರು ಚುನಾವಣೆ ಯಾವ ಕಡೆ ಆಗುತ್ತೆ ಯಾವ ಪಕ್ಷದ ಪರ ಆಗುತ್ತೆ ಅನ್ನೋದೇ ಎಲ್ಲರಲ್ಲೂ ಗೊಂದಲ ಸ್ಸೃಷ್ಟಿಸಿದೆ. ಕೆಲವೊಂದು ಕಡೆ ಬಿಜೆಪಿಗೆ ಮತ ಕಡಿಮೆ ಬರಬಹುದು ಯಾಕಂದ್ರೆ ಸ್ವತ ಬಸವರಾಜ್ ಬೊಮ್ಮಾಯಿ …

Read More »

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : KSRTC ಯಲ್ಲಿ 4,600 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಸರ್ಕಾರದ ಅನುಮತಿ ಕೋರಿ ಮನವಿ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) 726 ತಾಂತ್ರಿಕ ಸಹಾಯಕ ಮತ್ತು 200 ಕರಾಸಾ ಪೇದೆ ಹುದ್ದೆಗಳು ಹಾಗೂ 3,745 ಚಾಲನಾ ಸಿಬ್ಬಂದಿ ಸೇರಿ 4,600 ಕ್ಕೂ ಹೆಚ್ಚು ಹುದ್ದೆಗಳ ನೇರ ನೇಮಕಾತಿಗೆ ಮರು ಚಾಲನೆ ನೀಡಲು ಸರ್ಕಾರದ ಅನುಮತಿ ಕೋರಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾಹಿತಿ ನೀಡಿದ್ದು, ಪ್ರುಸ್ತುತ ಕೋವಿಡ್ 19 ಕಾರಣ ಕೆಎಸ್‌ಆರ್ …

Read More »

ಹೆದ್ದಾರಿ ದಾಟುತ್ತಿದೆ ದೈತ್ಯ ಅನಕೊಂಡ, ಉಸಿರು ಬಿಗಿ ಹಿಡಿದುಕೊಳ್ಳುವಂಥ ವಿಡಿಯೋ

ನವದೆಹಲಿ : ನೀವು ವಾಹನದಲ್ಲಿ ಕುಳಿತು ಆರಾಮವಾಗಿ, ಪ್ರಯಾಣಿಸುತ್ತಿರುವಾಗ ಎದುರಿಗೆ ಸುಮಾರು 25 ಅಡಿ ಉದ್ದದ ದೈತ್ಯ ಹಾವು (Snake video) ಬಂದರೆ? ಕೈ ಕಾಲು ನಡುಗಿ ಹೋಗುತ್ತದೆ. ಎದೆ ಜೋರಾಗಿ ಹೊಡೆದುಕೊಳ್ಳುತ್ತದೆ. ಏನು ಮಾಡಬೇಕು ಎನ್ನುವುದು ಕೂಡಾ ತೋಚುವುದಿಲ್ಲ. ಘಟನೆಯನ್ನು ನೆನೆಸಿದ ಮಾತ್ರಕ್ಕೆ ಭಯ ವರಿಸಿಕೊಳ್ಳುತ್ತದೆ. ಆದರೆ ಇಂಥಹ ಘಟನೆ ನಿಜವಾಗಿಯೂ ನಡೆದಿದೆ. ಹೌದು ಹೆದ್ದಾರಿಯಲ್ಲಿ ದೈತ್ಯ ಹಾವು ಹರಿದಾಡುವ ವಿಡಿಯೋವೊಂದು ವೈರಲ್ (Viral video) ಆಗುತ್ತಿದೆ. ಈ ವಿಡಿಯೋವನ್ನು …

Read More »

ಅಳಿಯನ ಮನೆ ಮುಂದೆ ನೇಣು ಹಾಕಿಕೊಂಡ ಮಾವ!

ಹಾಸನ, ಡಿಸೆಂಬರ್ 09; ಮಗಳ ತಿಂಗಳ ತಿಥಿ ಮಾಡಲು ಬಂದಿದ್ದ ಅಪ್ಪ ಅಳಿಯನ ಮನೆ ಬಾಗಿಲಿಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸನಜಿಲ್ಲೆಯ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಆತ್ಮಹತ್ಯೆ ಮಾಡಿಕೊಂಡವರು. ಅಕ್ಟೋಬರ್ 30ರಂದು ಸಾವನ್ನಪ್ಪಿದ್ದ ಮಗಳು ಹೇಮಶ್ರೀಯ ತಿಂಗಳ ತಿಥಿ ಕಾರ್ಯ ಮಾಡಲು …

Read More »

ರೈತರ ಗೆಲುವು;ಡಿಸೆಂಬರ್ 11ರಂದು ದೆಹಲಿಯಿಂದ ವಾಪಸ್

ಕಳೆದ 15 ತಿಂಗಳಿಂದ ನಡೆಯುತ್ತಿದ್ದ ರೈತರ ಸುದೀರ್ಘ ಪ್ರತಿಭಟನೆ ಅಂತ್ಯಗೊಂಡಿದ್ದು, ಡಿಸೆಂಬರ್ 11ರಂದು ರೈತರು ದೆಹಲಿಯಿಂದ ವಾಪಸ್ ಆಗಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ವಿವಾದಿತ ಕೃಷಿ ತಿದ್ದುಪದಿ ಕಾಯ್ದೆ ರದ್ದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಹೋರಾಟ ಸ್ಥಗಿತಗೊಳಿಸುತ್ತಿರುವುದಾಗಿ ಕಿಸಾನ್ ಮೋರ್ಚಾ ತಿಳಿಸಿದೆ. ಕಳೆದ ಒಂದು ವರ್ಷದಿಂದ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು. ನಮ್ಮ ಹೋರಾಟದ ಫಲವಾಗಿ ಕೇಂದ್ರ …

Read More »

ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ವಾರದ ಬಳಿಕ ನಿರ್ಧಾರ, ರಾಜ್ಯದ ಹಾಸ್ಟೇಲ್ ಗಳಿಗೆ ಹೊಸ ಮಾರ್ಗಸೂಚಿ ಜಾರಿ: ಬೊಮ್ಮಾಯಿ

ಬೆಂಗಳೂರು: ರಾಜ್ಯದ ಹಾಸ್ಟೇಲ್ ಗಳಿಗೆ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಹಾಸ್ಟೇಲ್ ಗಳಿಗೆ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಹಾಸ್ಟೇಲ್ ನಲ್ಲಿ ಮಕ್ಕಳು ಒಟ್ಟಿಗೆ ಊಟಕ್ಕೆ ಹೋಗುವಂತಿಲ್ಲ. ಅಂತರ ಪಾಲಿಸಿಕೊಂಡು ಹೋಗಬೇಕು. ಹಾಸ್ಟೇಲ್ ಸಿಬ್ಬಂದಿ ಗಳಿಗೆ 2 ಡೋಸ್ ಲಸಿಕೆ ಕಡ್ಡಾಯ ಎಂದು ತಿಳಿಸಿದರು. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧಾರವಾಗಿಲ್ಲ, ಇನ್ನೂ ಒಂದು ವಾರದ ಬೆಳವಣಿಗೆ ಅವಲೋಕಿಸಿ ಕರ್ಫ್ಯೂ …

Read More »

:ವಿದೇಶಗಳಿಂದ ಬಂದಿರುವ 66 ಮಂದಿ ವಿದೇಶಿಯರಿಗೆ ಕ್ವಾರಂಟೈನ್

ದಾವಣಗೆರೆ:ದೇಶ-ವಿದೇಶಗಳಿಂದ ಜಿಲ್ಲಾಗೆ ಬಂದಿರುವ 66 ಮಂದಿ ಪೈಕಿ ಕೊರೊನಾ ವೈರಸ್ ಹೆಚ್ಚಾಗಿ ಕಾಣಿಸಿಕೊಂಡ ದೇಶಗಳಿಂದ 21 ಜನ ಬಂದಿದ್ದಾರೆ. ಅವರರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.ಜನ ಭಯಪಡುವ ಅಗತ್ಯ ಇಲ್ಲವೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬೆಣ್ಣೆ ನಗರಿ ಮಂದಿಗೆ ಹೇಳಿದ್ದಾರೆ.   ನಗರದಲ್ಲಿ ಮನೆ ಮನೆಗೆ ಲಸಿಕೆ ಅಭಿಯಾನ ಆರಂಭಿಸಿ ಮಾತನಾಡಿದ ಅವರು, 66 ಜನರು ಕೂಡ ಕೊರೊನಾ ನೆಗೆಟಿವ್ ವರದಿ ತಂದಿದ್ದಾರೆ. ಅವರೆಲ್ಲರ ಮೇಲೆ ನಿಗಾ ಇರಿಸಿದ್ದೇವೆ. 7 ದಿನಗಳ ಹೋಂ …

Read More »

ಲಸಿಕೆ ಪಡೆದುಕೊಳ್ಳದಿದ್ದರೂ ಸುಳ್ಳು ಸರ್ಟಿಫಿಕೇಟ್ ಕೊಡುತ್ತಿರುವ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳು:

ದೇಶದ ಜನರ ಸುರಕ್ಷೆ, ಕೋವಿಡ್ ತಡೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ದೇಶದ ಜನರಿಗೆ ಉಚಿತವಾಗಿ ಕೈಬಿಟ್ಟು ಲಸಿಕೆಯನ್ನು ಕೊಡುತ್ತಿದೆ.ಆದ್ರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೊರೊನಾ ಲಸಿಕೆಗಳನ್ನು ಕೊಡದೇ ಇದ್ದರೂ ಕೋವಿಡ್ ಪ್ರಮಾಣ ಪತ್ರಗಳನ್ನು ಕೊಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಕಳೆದ ಎರಡು ತಿಂಗಳಿನಿಂದ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡದ್ದಿದ್ದರೂ‌‌ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಚೆನ್ನಮ್ಮ ಕೊಳಚಿ ಎಂಬುವವರು ಮೊದಲ ಮತ್ತು ಎರಡನೇ ಡೋಸ್ …

Read More »

ಚುನಾವಣಾ ಪ್ರಕ್ರಿಯೆಗಳ ಮಧ್ಯೆಯೂ ವಿಧಾನಮಂಡಲದ ಚಳಿಗಾಲ ಅಧಿವೇಶನ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.

ಈ ಬಾರಿ ಕೋವಿಡ್ ಸೋಂಕು ಹರಡುವಿಕೆ ಭೀತಿ ಹಾಗೂ ಚುನಾವಣಾ ಪ್ರಕ್ರಿಯೆಗಳ ಮಧ್ಯೆಯೂ ವಿಧಾನಮಂಡಲದ ಚಳಿಗಾಲ ಅಧಿವೇಶನ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಸಮರ್ಪಕ ವಸತಿ, ಸಾರಿಗೆ ಹಾಗೂ ಊಟೋಪಾಹಾರ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ಜರುಗಿದ ಗಣ್ಯರು, ಉನ್ನತ ಅಧಿಕಾರಿಗಳು ಮತ್ತು ಹೋಟೆಲ್ ಗಳ ಸಂಪರ್ಕಾಧಿಕಾರಿಗಳ (ಲೈಸನ್ ಅಧಿಕಾರಿಗಳ) ಸಭೆಯ ಅಧ್ಯಕ್ಷತೆ ವಹಿಸಿ …

Read More »