Breaking News

ರಾಜ್ಯ

ಸದ್ದು ಗದ್ದಲವಿಲ್ಲದೇ ಮಜಲಬೆಟ್ಟು ಬೀಡುವಿನಲ್ಲಿ ನಟಿ ಶುಭಾ ಪೂಂಜಾ ವಿವಾಹ,

ಉಡುಪಿ:ಕನ್ನಡ ಚಿತ್ರರಂಗದ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಬುಧವಾರ(ಜನವರಿ 05) ಶಿರ್ವದ ನಿವಾಸದಲ್ಲಿ ಸುಮಂತ್ ಜತೆ ಹಸೆಮಣೆ ಏರಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ನಿವಾಸದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಿರುವುದಾಗಿ ಮೂಲಗಳು ತಿಳಿಸಿವೆ.   ಕಳೆದ ವರ್ಷವೇ ವಿವಾಹವಾಗುವ ವದಂತಿ ಇತ್ತು, ಆದರೆ ಲಾಕ್ ಡೌನ್ ನಿಂದಾಗಿ ವಿವಾಹ ಮುಂದೂಡಲಾಗಿತ್ತು. ಇಂದು ಸುಮಂತ್ ಮತ್ತು ಶುಭಾ ಪೂಂಜಾ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಿರ್ವದ ಮಜಲಬೆಟ್ಟು ಬೀಡುವಿನಲ್ಲಿರುವ …

Read More »

ಕೇವಲ 634 ರೂ.ಗೆ LPG ಗ್ಯಾಸ್​ ಸಿಲಿಂಡರ್ ಸಿಗುತ್ತೆ, ಎಲ್ಲಿ? ಹೇಗೆ ಅಂತೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸ ವರ್ಷ ಆರಂಭವಾದ ಬಳಿಕ ಸರ್ಕಾರ ಜನವರಿಯಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.     ATM ವಿತ್​ಡ್ರಾವಲ್ ಶುಲ್ಕ, ITR ಫೈಲಿಂಗ್, ಕ್ಯಾಶ್ ಹಿಂಪಡೆಯುವ ಶುಲ್ಕ, LPG ಗ್ಯಾಸ್​ ಸಿಲಿಂಡರ್​ ಬೆಲೆ ಪರಿಷ್ಕರಣೆ… ಹೀಗೆ ಮುಂತಾದ ವಿಷಯಗಳಲ್ಲಿ ಬದಲಾವಣೆ ಮಾಡಿದೆ, ಇದರ ಭಾಗವಾಗಿ ನಾವು ಈಗ ಹೇಳುತ್ತಿರುವುದು ಕಾಂಪೋಸಿಟ್​ ಸಿಲಿಂಡರ್ ಬಗ್ಗೆ. ಅವು ಸಾಮಾನ್ಯ​ ಸಿಲಿಂಡರ್​​ಗಳಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತವೆ.   ಗ್ಯಾಸ್ ಸಿಲಿಂಡರ್ ಸಬ್ಸಿಡಿ, ಎಲ್‌ಪಿಜಿ ಸಿಲಿಂಡರ್ …

Read More »

ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಮಕ್ಕಳಿಗೆ ಶರವೇಗದಲ್ಲಿ‌ ‌ಮುಟ್ಟಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದ ಶಾಸಕ ಸತೀಶ್‌ ಜಾರಕಿಹೊಳಿ

ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಮಕ್ಕಳಿಗೆ ಶರವೇಗದಲ್ಲಿ‌ ‌ಮುಟ್ಟಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ಇಲ್ಲಿನ ಶ್ರೀಗುರುಸಿದ್ಧ ಸ್ವಾಮಿಜೀ ಹುಸಿಕೊಳ್ಳಮಠ ಸಭಾ ಭವನದಲ್ಲಿ ನಡೆದ ಅರಿವಿನ ತಾಯಿಗೆ ನಮನ ಸಾವಿತ್ರಿಬಾಯಿ ಫುಲೆ ಜಯಂತೋತ್ಸವ ಮತ್ತು ಭೀಮಾ ಕೋರೆಗಾಂವ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿಟ್ಟ ಮಹಿಳೆ‌ಯಾದ ಸಾವಿತ್ರಿಬಾಯಿ ಫುಲೆ ಜನಿಸದೇ ಇದ್ದಿದ್ದರೆ ಮಹಿಳೆಯರು ಶಿಕ್ಷಣ ‌ಪಡೆಯಲು‌ ವಿಳಂಬವಾಗುತ್ತಿತ್ತು. ಅವರ ಹೋರಾಟದಿಂದ ಈಗ ಮಹಿಳೆಯರು ಎಲ್ಲ …

Read More »

ಬಣ್ಣದ ಲೋಕಕ್ಕೆ ಜನಾರ್ದನ ರೆಡ್ಡಿ ಮಗ ಕಿರೀಟಿ ರೆಡ್ಡಿ ಪ್ರವೇಶ

ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎನ್ನುವ ಸುದ್ದಿ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಈ ಸುದ್ದಿ ಓಡಾಡುತ್ತಲೇ ಇದೆ. ಆದರೆ, ಯಾವ ವಿಚಾರವೂ ಅಧಿಕೃತ ಆಗಿರಲಿಲ್ಲ.ಚಿತ್ರರಂಗಕ್ಕೂ ರಾಜಕೀಯಕ್ಕೂ ಎಲ್ಲಿಲ್ಲದ ನಂಟು. ಚಿತ್ರರಂಗದ ಅನೇಕರು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಉದಾಹರಣೆ ಇದೆ. ಅದೇ ರೀತಿ, ಹಲವು ರಾಜಕಾರಣಿಗಳ ಮಕ್ಕಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗ ಮಾಜಿ ಸಚಿವ ಜನಾರ್ದನ ​ ರೆಡ್ಡಿ ಮಗ ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ …

Read More »

ರಾಜ್ಯಾದ್ಯಂತ 2 ವಾರಗಳ ಕಾಲ ವೀಕೆಂಡ್ ಲಾಕ್​ಡೌನ್..!

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್(Omicron Variant)ಹಾವಳಿ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಗಳ ಮೂಲಕ ಟಫ್ ರೂಲ್ಸ್ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ರಾಜ್ಯಾದ್ಯಂತ 2 ವಾರಗಳ ಕಾಲ ವೀಕೆಂಡ್ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಶುಕ್ರವಾರ(ಜ.6)ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಲಾಕ್ ಡೌನ್ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲ ಕಡೆ ಆಫ್​ಲೈನ್​ ತರಗತಿಗಳು ನಿಲ್ಲಲಿವೆ. …

Read More »

ಲಾಕ್ ಆಗುವುದು ಫಿಕ್ಸ್: ಲಾಕ್ ಡೌನ್ ಮಾಡುವಂತೆ ಸಿಎಂಗೆ ತಜ್ಞರ ಸಲಹೆ

ಬೆಂಗಳೂರು :ಬೆಂಗಳೂರು ನಗರದಲ್ಲಿ ನಿರೀಕ್ಷೆಗೂ ಮೀರಿ ಸೋಂಕು ಹೆಚ್ಚಾಗುತ್ತಿದ್ದು, ಸಿಲಿಕಾನ್ ಸಿಟಿ ಮಂದಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಮತ್ತೆ ಲಾಕ್ ಡೌನ್ ಹಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಒಂದು ವಾರದ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಪಾಸಿಟಿವಿಟಿ ದರ ಶೇ 0.57 ರಷ್ಟಿತ್ತು. ಆದರೆ ಇದೀಗ ನಗರದಲ್ಲಿ ಶೇ. 2.36 ರಷ್ಟಿದೆ. ಹೀಗಾಗಿ ಸೋಂಕು ನಿಯಂತ್ರಿಸಲು ಲಾಕ್ ಡೌನ್ ಮಾಡುವಂತೆ ತಜ್ಞರು …

Read More »

320 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗ್ತಿದೆ ಸಂಸ್ಕೃತ ವಿಶ್ವವಿದ್ಯಾನಿಲಯ

ಬೆಂಗಳೂರು: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನೂರು ಎಕರೆ ವಿಸ್ತಾರದಲ್ಲಿ ತಲೆ ಎತ್ತಲಿದೆ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸುತ್ತಾರೆ.   ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ ಈ ವಿವಿ ಕ್ಯಾಂಪಸ್ ಸ್ಥಾಪನೆಯಾಗಲಿದೆ. ವೇದ, ವಿಜ್ಞಾನ, ಗಣಿತ ಹಾಗೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಸ್ಕೃತ ಭಾಷೆಯ ಕೊಡುಗೆ ಅನನ್ಯ. ಇದರ ಕುರಿತು ಜಗತ್ತಿನ ವಿವಿಧ ಮೂಲೆಗಳಿಂದ ಅಧ್ಯಯನ ಮಾಡಲು ಭಾರತಕ್ಕೆ ಸಾವಿರಾರು ವಿದ್ಯಾರ್ಥಿಗಳು …

Read More »

ಅಕ್ರಮ ಬಯಲಿಗೆಳೆದ ವ್ಯಕ್ತಿಯ ಮೇಲೆ ಅಧ್ಯಕ್ಷ ಹಾಗೂ ಬೆಂಬಲಿತ ಸದಸ್ಯರು ಹಲ್ಲೆ

ಬೆಳಗಾವಿ :- ಗ್ರಾಮ ಪಂಚಾಯತಿ ಅಕ್ರಮ ಬಯಲಿಗೆಳೆದ ವ್ಯಕ್ತಿಯ ಮೇಲೆ ಅಧ್ಯಕ್ಷ ಹಾಗೂ ಬೆಂಬಲಿತ ಸದಸ್ಯರು ಹಲ್ಲೆ ನಡೆಸಿರುವ ಘಟನೆ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ನಡೆದಿದೆ. ಸಂಗಪ್ಪ ಗೂಡಗಾರ್ ಎಂಬ ವ್ಯಕ್ತಿಯ ಮೇಲೆ ಹೂಲಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿರೂಪಾಕ್ಷ ತೊರಗಲ್ ಹಾಗೂ ಆತನ ಬೆಂಬಲಿತ ಸದಸ್ಯರು ಹಲ್ಲೆ ನಡೆಸಿದ್ದಾರೆ. 2020-21ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಗ್ರಾ.ಪಂ ಅಧ್ಯಕ್ಷ ವಿರೂಪಾಕ್ಷ ತೊರಗಲ್, ಪಿಡಿಒ ಫಕ್ಕಿರವ್ವ ಹನಸಿ …

Read More »

ಹೊಸ ವರ್ಷಾರಂಭದಲ್ಲೇ ಸಿಹಿ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ ಅನುಶ್ರೀ

ಬೆಂಗಳೂರು: ಆಂಕರ್ ಅನುಶ್ರೀ ಕೇವಲ ಕಿರುತೆರೆ ಮಾತ್ರವಲ್ಲ, ಹಿರಿತೆರೆಯಲ್ಲೂ ಈಗಾಗಲೇ ಅಭಿನಯಿಸಿ ಸೈ ಎನಿಸಿಕೊಂಡವರು. ಇದೀಗ ಹೊಸ ವರ್ಷಾರಂಭದಲ್ಲೇ ಸಿಹಿ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಅನುಶ್ರೀ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಇದರ ಸ್ಪ್ರಿಪ್ಟ್ ಪೂಜೆ ನೆರವೇರಿದೆ. ಈ ಸಂತೋಷದ ವಿಚಾರ ಹಂಚಿಕೊಂಡಿರುವ ಅನುಶ್ರೀ ಸದ್ಯದಲ್ಲೇ ಚಿತ್ರದ ಟೈಟಲ್ ಘೋಷಣೆಯಾಗಲಿದೆ ಎಂದಿದ್ದಾರೆ. ಲೋಹಿತ್ ಎಚ್ ಪ್ರೊಡಕ್ಷನ್ಸ್ ಮತ್ತು ಎಸ್‌ಎಂಪಿ ಪ್ರೊಡಕ್ಷನ್ಸ್ ಅರ್ಪಿಸಿ ಪಾರ್ಥಿಬನ್ ನಿರ್ಮಿಸುತ್ತಿರುವ ಪ್ರಭಾಕರ್ ನಿರ್ದೇಶನದ ಹಾರರ್ ಕಥಾ ಹಂದರದ …

Read More »

ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಮಾಸ್ಟರ್‌ ಪ್ಲ್ಯಾನ್‌ : ನೋಡಲ್‌ ಅಧಿಕಾರಿಗಳಾಗಿ ʼIAS, IPS ಅಧಿಕಾರಿʼಗಳ ನೇಮಕ

ಬೆಂಗಳೂರು : ಬೆಂಗಳೂರಲ್ಲಿ ಅಧಿಕಾರಿಗಳ ಮೂಲಕ ಕೋವಿಡ್‌ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ನೋಡಲ್‌ ಅಧಿಕಾರಿಗಳಾಗಿ ಐಎಎಸ್‌, ಐಪಿಎಸ್‌ ಅಧಿಕಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿದೆ. ಅದ್ರಂತೆ, ಏರ್‌ಪೋರ್ಟ್‌ ಕೋವಿಡ್‌ ಉಸ್ತುವಾರಿಯನ್ನ ಸಿ.ಶಿಖಾ ಅವ್ರಿಗೆ ನೀಡಲಾಗಿದ್ದು, ಖಾಸಗಿ ವೈದ್ಯ ಸಂಸ್ಥೆಯಲ್ಲಿ ಹಾಸಿಗೆ ಮೀಸಲು ಉಸ್ತುವಾರಿಗಳನ್ನ ನೇಮಿಸಲಾಗಿದೆ. ಇನ್ನು ಬೆಂಗಳೂರು ಪೂರ್ವ ವಲಯಕ್ಕೆ-1ಕ್ಕೆ ಇಬ್ಬರನ್ನ ನೇಮಕಾತಿ ಮಾಡಲಾಗಿದ್ದು,ಕ್ಯಾ.ಮಣಿವಣ್ಣನ್‌ ಮತ್ತು ಅಲೋಕ್‌ ಕುಮಾರ್‌ ನೇಮಕ ಮಾಡಲಾಗಿದೆ. ಇನ್ನು ಬೆಂಗಳೂರು ಪೂರ್ವ ವಲಯ-2ಕ್ಕೆ ಇಬ್ಬರ …

Read More »