ಬೆಳಗಾವಿ – ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕ, ವಾಯವ್ಯ ಪದವೀಧರ ಹಾಗೂ ಪಶ್ಚಿಮ ಶಿಕ್ಷಕ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆಗೆ ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ಸಕಲ ಸಿದ್ಧತೆಗಳಾಗಿದ್ದು, ಮತ ಎಣಿಕೆ ಇನ್ನೇನು ಆರಂಭವಾಗಲಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ. ಮತ ಎಣಿಕೆಗೆ ಉಸ್ತುವಾರಿಗಳಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಡಾ.ರವಿಶಂಕರ ಜೆ, ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಮುನೀಶ್ ಮೌಜ್ಗಿಲ್ ಹಾಗೂ ವಾಯವ್ಯ ಪದವೀಧರ ಕ್ಷೇತ್ರಕ್ಕೆ ರಾಜೇಂದ್ರ ಕುಮಾರ …
Read More »ಬೆಳಗಾವಿ ಬಳ್ಳಾರಿ ನಾಲೆಯ ಸೇತುವೆ ಕಾಮಗಾರಿಯು ಅತ್ಯಂತ ತ್ವರಿತವಾಗಿ ನಡೆಯುತ್ತಿದೆ.
ಬೆಳಗಾವಿಯ ಬಸವನಕುಡಚಿಯ ಹೊಲಗದ್ದೆಯಲ್ಲಿರುವ ಬಳ್ಳಾರಿ ನಾಲೆಯ ಸೇತುವೆ ಕಾಮಗಾರಿಯು ಅತ್ಯಂತ ತ್ವರಿತವಾಗಿ ನಡೆಯುತ್ತಿದೆ. ಪ್ರತಿ ವರ್ಷ ಮಳೆಯ ಆರ್ಭಟಕ್ಕೆ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ಪ್ಲಾಸ್ಟಿಕ್ ಬಾಟಲಿಗಳು ನಾಲಾದಲ್ಲಿ ಜಲಾವೃತವಾಗಿವೆ. ಇಂಜೆಕ್ಷನ್ ಸೂಜಿ ಗದ್ದೆಯಲ್ಲಿ ಹರಡಿ ರೈತರ ಕಾಲಿಗೆ ಚುಚ್ಚುತ್ತಿದೆ. ಗ್ರಾಮಸ್ಥರು ಕಳೆದ 20 ವರ್ಷಗಳಿಂದ ಹಲವು ಬಾರಿ ದೂರು ನೀಡಿದರೂ ಆಡಳಿತ ಗಮನಕ್ಕೆ ತಂದರೂ ಕೂಡ ಯಾವುದೇ ಕೆಲಸವಾಗಿಲ್ಲ. ಹೀಗಾಗಿ ಕುಡಚಿ ಗ್ರಾಮದಲ್ಲಿ ಶಾಸಕ ಅನಿಲ್ ಬೆನಕೆ …
Read More »ಎಪ್ರೀಲ್ ಅಂತ್ಯಕ್ಕೆ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ: ಶ್ರೀಮಂತ ಪಾಟೀಲ್
ಕಳೆದ ಅನೇಕ ವರ್ಷಗಳಿಂದ ಕಾಗವಾಡ ತಾಲೂಕಿನ ಸಾವಿರಾರು ರೈತರ ಜೀವನಾಡಿಯಾಗಿರುವ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆ ಬರುವ ಏಪ್ರಿಲ್ ತಿಂಗಳದ ಕೊನೆವರೆಗೆ ಚಾಲನೆಗೊಳ್ಳಲಿದೆ ಎಂದು ಮಾಜಿ ಸಚಿವರು ಹಾಗೂ ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಒಂದು ಕಾರ್ಯಕ್ರಮದಲ್ಲಿ ಇನ್ ನ್ಯೂಸ್ ವಾಹಿನಿಗೆ ಮಾಹಿತಿ ನೀಡುವಾಗ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ಬರಡ ಭೂಮಿಗೆ ನೀರು ಹರಿಸಲಾಗುವುದು ಎಂದು …
Read More »ಕರ್ನಾಟಕದ ಉಪಲೋಕಾಯುಕ್ತರಾಗಿರುವ , ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್
ಬೆಂಗಳೂರು : ಕರ್ನಾಟಕದ ಉಪಲೋಕಾಯುಕ್ತರಾಗಿರುವ , ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರು ಬುಧವಾರ ಬೆಳಗ್ಗೆ ನೂತನ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯ ಸರಕಾರ ಬಿ.ಎಸ್. ಪಾಟೀಲ್ ಅವರಿಗೆ ಪದೋನ್ನತಿ ನೀಡಿದ್ದು,ಸರಕಾರದ ಶಿಫಾರಸಿಗೆ ರಾಜ್ಯಪಾಲರಾದ ಗೆಹಲೋಟ್ ಅವರು ಸಹಿ ಹಾಕಿದ್ದಾರೆ. ಬುಧವಾರ ಬೆಳಗ್ಗೆ 9.45 ಕ್ಕೆ ರಾಜ ಭವನದಲ್ಲಿ 9 ನೇ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಾಯುಕ್ತರಾಗಿದ್ದ ಪಿ. ವಿಶ್ವನಾಥ್ ಶೆಟ್ಟಿ ನಿವೃತ್ತಿ ಘೋಷಿಸಿದ ಬಳಿಕ ಸ್ಥಾನ ತೆರವಾಗಿತ್ತು.
Read More »ವಟ ಸಾವಿತ್ರಿ ವ್ರತದ ಮಂಗಳಕರವಾದ ದಿನ ಪೂಜೆ ಸಲ್ಲಿಸಿದ ಶಶಿಕಲಾ ಜೊಲ್ಲೆ
ವಟ ಸಾವಿತ್ರಿ ವ್ರತದ ಮಂಗಳಕರವಾದ ದಿನವಾದ ಇಂದು ನಿಪ್ಪಾಣಿ ತಾಲೂಕಿನ ಭಿವಶಿ ಗ್ರಾಮದಲ್ಲಿ, ಸುಮಂಗಲಿಯರ ಜೊತೆಗೂಡಿ ಆಲದ ಮರಕ್ಕೆ ಶಾಸ್ತ್ರೋಕ್ತವಾಗಿ *ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಯವರು ಪೂಜೆ ಸಲ್ಲಿಸಿದರು.. ಇದೇ ಸಂಧರ್ಭದಲ್ಲಿ ಮಾತನಾಡಿ ಸಚಿವೆ ಜೊಲ್ಲೆ ಪತಿ-ಪತ್ನಿಯರ ನಡುವಿನ ಪವಿತ್ರ ಬಾಂಧವ್ಯದ ಶ್ರೇಷ್ಠತೆಯನ್ನು ಬಿಂಬಿಸುವ, ಸಂಸಾರದೊಂದಿಗೆ ಪಾರಮಾರ್ಥಿಕ ಚಿಂತನೆಯನ್ನು ಬೋಧಿಸುವ ವಿಶೇಷ ಆಚರಣೆ ಇದಾಗಿದೆ. ಹೀಗಾಗಿ ಪತಿಯ ಆಯುಷ್ಯ, ಆರೋಗ್ಯ ವೃದ್ಧಿಯಾಗಿ …
Read More »777 ಚಾರ್ಲಿ’ ಸಿನಿಮಾ ನೋಡಿ ಕಣ್ಣೀರಿಟ್ಟ ಸಿಎಂ
ಸಿಎಂ ಬಸವರಾಜ ಬೊಮ್ಮಾಯಿ ಸ್ವಭಾವತಃ ಮೃದು ವ್ಯಕ್ತಿತ್ವವುಳ್ಳ ಭಾವುಕ ಜೀವಿ. ಸಿನಿಮಾ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಬಗ್ಗೆ ಅಪಾರ ಪ್ರೀತಿ, ಗೌರವುಳ್ಳ ಸಿಎಂ ನಿನ್ನೆ ಒರಾಯಿನ್ ಮಾಲ್‌ನಲ್ಲಿ ‘777 ಚಾರ್ಲಿ’ ಸಿನಿಮಾ ವೀಕ್ಷಿಸಿದ್ದಾರೆ. ಪ್ರಾಣಿ ಪ್ರೇಮಿ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ, ಕೆಲವು ತಿಂಗಳ ಹಿಂದಷ್ಟೆ ತಮ್ಮ ಮುದ್ದಿನ ನಾಯಿಯನ್ನು ಕಳೆದುಕೊಂಡಿದ್ದರು. ತಮ್ಮ ಪ್ರೀತಿಯ ನಾಯಿ ತೀರಿಕೊಂಡ ದಿನ ಕುಟುಂಬ ಸದಸ್ಯನನ್ನು ಕಳೆದುಕೊಂಡಂತೆ ಕಣ್ಣೀರು ಹಾಕಿದ್ದ ಸಿಎಂ, ನಿನ್ನೆ …
Read More »ಹೊಸ ಕಾರ್ಮಿಕ ನೀತಿ ಬಂದ್ರೆ ವಾರಕ್ಕೆ 4 ದಿನ ಕೆಲಸ, ಉಳಿತಾಯ ಜಾಸ್ತಿ!
ಬೆಂಗಳೂರು, ಜೂ. 14: ಪ್ರತಿ ದಿನ 12 ತಾಸು ಕೆಲಸ.. ನಾಲ್ಕು ದಿನಕ್ಕೆ ವಾರದ 48 ಗಂಟೆ ಕೆಲಸ ಮಾಡಿದ್ರೆ ಸಾಕು, ಉಳಿದ ಮೂರು ದಿನ ರಜೆ! ಹೊಸ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ. ಅಂದಹಾಗೆ ಜುಲೈ 1 ನೇ ತಾರೀಖಿನಿಂದ ಈ ಹೊಸ ಕಾರ್ಮಿಕ ನೀತಿ ಜಾರಿಗೆ ಬರಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ಹೊಸ ಕಾರ್ಮಿಕ ನೀತಿ ಜಾರಿಗೆ …
Read More »ಲಾಡ್ಜ್ ನಲ್ಲಿ ಕತ್ತು ಹಿಸುಕಿ ಪ್ರೇಯಸಿಯನ್ನು ಕೊಂದು ಪರಾರಿಯಾದ ಪ್ರಿಯಕರ
ಬೆಂಗಳೂರು: ಪ್ರೇಯಸಿಯನ್ನು ಪ್ರಿಯಕರನೇ ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಒಡಿಶಾ ಮೂಲದ ದೀಪ ಪದಮ್(32) ಕೊಲೆ ಯಾದ ಮಹಿಳೆ. ಕೃತ್ಯ ಎಸಗಿದ ಆರೋಪಿ ಅನ್ಮಲ್ ರತನ್ ಕಂದರ್‌ಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಆರೋಪಿ ಅನ್ಮಲ್ ರತನ್ ಕಂದರ್ ಕೆಲ ವರ್ಷಗಳ ಹಿಂದೆ ದೀಪಾಲಿ ಎಂಬಾಕೆಯನ್ನು ಒಡಿಶಾದಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಆರೋಪಿ ಬಾಟಾ ಶೋರೂಮ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ದಂಪತಿ ಬೆಂಗಳೂರಿನ …
Read More »ಆ ಗಂಡಿಗೆ ಉತ್ತರ ಕೊಡುತ್ತೇನೆ’ : ಮತ್ತೆ ರಾಮನಗರದಲ್ಲಿ “ಗಂಡಿನ ಗದ್ದಲ”
ಬೆಂಗಳೂರು: ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ ನಾರಾಯಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಮತ್ತೆ ವಾಗ್ವಾದ ತಾರಕಕ್ಕೆ ಏರಿದ್ದು “ಆ ಗಂಡಿಗೆ ಉತ್ತರ ಕೊಡುತ್ತೇನೆ” ಎಂದು ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿದ್ದ ಅಶ್ವತ್ಥನಾರಾಯಣ, ಡಿ.ಕೆ.ಶಿವಕುಮಾರ್ ಗೆ ಇಡಿ, ಐಟಿ ಅನುಭವ ಚೆನ್ನಾಗಿದೆ. ಅವರು ತಿಹಾರ್ ಕಡೆ ಪ್ರಯಾಣ ಬೆಳೆಸಬೇಕು ಎಂದು ವ್ಯಂಗ್ಯವಾಡಿದ್ದರು. ಇದರಿಂದ ಕೆರಳಿರುವ ಶಿವಕುಮಾರ್, ‘ಆ ಗಂಡಿಗೆ ಉತ್ತರ ನೀಡುತ್ತೇನೆ’ …
Read More »ನಕಲಿ ಎಸಿಬಿ ಅಧಿಕಾರಿಗಳನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸರಕಾರಿ ಅಧಿಕಾರಿಗಳಿಗೆ ಫೋನ್ ಮಾಡಿ ಅಕೌಂಟ್‍ಗೆ ಹಣ ಹಾಕುವಂತೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಎಸಿಬಿ ಅಧಿಕಾರಿಗಳನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಾವು ಎಸಿಬಿ ಅಧಿಕಾರಿಗಳೆಂದು ನಂಬಿಸಿ ಸರಕಾರಿ ಅಧಿಕಾರಿಗಳಿಂದ ಸುಲಿಗೆ ಮಾಡುತ್ತಿದ್ದ ಮೂವರು ಖದೀಮರನ್ನು ಬೆಳಗಾವಿಯ ಸಿಎಎನ್ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರ್‍ಪಡಿಸಿದ್ದಾರೆ. ಬಂಧಿತರನ್ನು ಚಿಕ್ಕೋಡಿಯ ಸದಲಗಾ ಮೂಲದ 56ವರ್ಷದ ಮುರಗೆಪ್ಪ ನಿಂಗಪ್ಪ ಪೂಜಾರ್, …
Read More »
Laxmi News 24×7